
ಬಾಲಿವುಡ್ ನಲ್ಲಿ ನಟ ರಣಬೀರ್ ಕಪೂರ್(Rabir Kapoor) ಮತ್ತು ಅಲಿಯಾ ಭಟ್(Alia Bhatt) ಮದುವೆ ಸಂಭ್ರಮ ಜೋರಾಗಿದೆ. ಏಪ್ರಿಲ್ 13ರಿಂದನೇ ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಆದರೆ ಈ ಬಗ್ಗೆ ರಣಬೀರ್ ಅಥವ ಅಲಿಯಾ ಎಲ್ಲೂ ಬಹಿರಂಗ ಪಡಿಸಿಲ್ಲ. ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದ್ದರೂ ಒಂದೇ ಒಂದು ಫೋಟೋಗಳನ್ನು ಎಲ್ಲೂ ಶೇರ್ ಮಾಡಿಲ್ಲ. ಮದುವೆಗೆ ಕೆಲವೇ ಕೆಲವು ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ತೀರ ಖಾಸಗಿಯಾಗಿ ನಡೆಯುತ್ತಿರುವ ಮದುವೆಗೆ ಕೇವಲ 28 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ. ಅಂದಹಾಗೆ 13ರಿಂದ ನಡೆಯುವ ಮದುವೆ ಸಮಾರಂಭದಲ್ಲಿ ಮದುವೆ ಮುಹೂರ್ತ ಇನ್ನು ಬಹಿರಂಗವಾಗಿಲ್ಲ.
ಒಂದೆಡೆ ರಣಬೀರ್-ಅಲಿಯಾ ಮದುವೆ ಸಂಭ್ರಮದ ನಡೆಯುತ್ತಿದ್ದರೆ ಮತ್ತೊಂದೆಡೆ ನಟಿ ದೀಪಿಕಾ ಪಡುಕೋಣೆ(Deepika Padukone) ಮುಂಬೈ ತೊರೆದಿದ್ದಾರೆ. ದೀಪಿಕಾ ಮುಂಬೈನಿಂದ ಹೊರಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೀಪಿಕಾ ಮುಂಬೈ ಏರ್ಪೋಟ್ ನಲ್ಲಿ ಪಾಪರಾಜಿ ಕಣ್ಣಿಗೆ ಸೆರೆಯಾಗಿದ್ದಾರೆ. ದೀಪಿಕಾ ಫೋಟೋ ಏರ್ಪೋಟ್ ನಲ್ಲಿ ನೋಡಿದ ನೆಟ್ಟಿಗರು ಮಾಜಿ ಪ್ರಿಯಕರನ ಮದುವೆ ಎನ್ನುವ ಕಾರಣಕ್ಕೆ ಮುಂಬೈ ತೊರೆಯುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
Ranbir Alia wedding: ನಟಿಯ ಮೆಹಂದಿ ಸಂಗೀತ್‌ನಲ್ಲಿ Pooja Bhatt Mahesh Bhatt
ದೀಪಿಕಾ ಮತ್ತು ರಣಬೀರ್ ಇಬ್ಬರು ಒಂದು ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಆದರೆ ವರ್ಷದ ಬಳಿಕ ಇಬ್ಬರು ಬೇರೆ ಬೇರೆ ಆಗುವ ಮೂಲಕ ಇಡೀ ಬಾಲಿವುಡ್ ಗೆ ಶಾಕ್ ನೀಡಿದರು. ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ದೀಪಿಕಾ, ರಣಬೀರ್ ತನಗೆ ಮೋಸ ಮಾಡಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಇಬ್ಬರು ದೂರ ದೂರ ಆಗಿದ್ದ ಜೋಡಿ ದೀಪಿಕಾ ಮದುವೆ ಬಳಿಕ ಮತ್ತೆ ಸ್ನೇಹಿತರಾದರು. ಇತ್ತೀಚಿಗೆ ದೀಪಿಕಾ ಮತ್ತು ರಣ್ವೀರ್ ದಂಪತಿ ರಣಬೀರ್ ಮತ್ತು ಅಲಿಯಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ವಿದೇಶಕ್ಕೆ ಪ್ರವಾಸ ಹೋಗುತ್ತಿದ್ದರು. ಇದೀಗ ರಣಬೀರ್ ಮತ್ತು ಅಲಿಯಾ ಇಬ್ಬರು ಮದುವೆಯಾಗುತ್ತಿದ್ದರೆ ಮುಂಬೈನಿಂದ ಹೊರಹೋಗುತ್ತಿರುವ ದೀಪಿಕಾ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
Ranbir Alia Wedding :ಮಗನ ಮೆಹಂದಿ ಸಮಾರಂಭದಲ್ಲಿ ಮಿಂಚಿದ Neetu singh
ರಣಬೀರ್ ಕಪೂರ್ ಹೊಸ ಜೀವನ ಕಟ್ಟಿಕೊಳ್ಳುತ್ತಿರುವುದು ದೀಪಿಕಾಗೆ ಇಷ್ಟವಿಲ್ಲ. ಹೊಟ್ಟೆ ಕಿಚ್ಚಿನಿಂದಾಗಿ ಅವರು ಮುಂಬೈ ಬಿಟ್ಟು ಹೋಗುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಣಬೀರ್ ಮತ್ತು ಅಲಿಯಾ ಮದುವೆ ವಿಚಾರವಾಗಿ ದೀಪಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ್. ಆದರೆ ರಣಬೀರ್ ಮತ್ತು ಅಲಿಯಾ ನಟನೆಯ ಬ್ರಹ್ಮಾಸ್ತ್ರ ಟೀಸರ್ ಗೆ ದೀಪಿಕಾ ಪ್ರತಿಕ್ರಿಯೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ಸಿನಿಮಾದ ಟೀಸರ್ ಅನ್ನು ಶೇರ್ ಮಾಡಿದ್ದರು. ಈ ಟೀಸರ್ ಗೆ ದೀಪಿಕಾ ಲೈಕ್ ಮಾಡಿದ್ದಾರೆ. ಅದು ಬಿಟ್ಟರೆ ದೀಪಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.