ಚಿರಂಜೀವಿ 'ಆಚಾರ್ಯ' ಸಿನಿಮಾದಿಂದ ಕಾಜಲ್ ಪಾತ್ರ ಕಿತ್ತೆಸೆದ ಚಿತ್ರತಂಡ; ಕಾರಣವೇನು?

Published : Apr 14, 2022, 02:33 PM IST
ಚಿರಂಜೀವಿ 'ಆಚಾರ್ಯ' ಸಿನಿಮಾದಿಂದ ಕಾಜಲ್ ಪಾತ್ರ ಕಿತ್ತೆಸೆದ ಚಿತ್ರತಂಡ; ಕಾರಣವೇನು?

ಸಾರಾಂಶ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಅಭಿನಯದ ಆಚಾರ್ಯ ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಅಗರ್ವಾಲ್(Kajal Aggarwal) ಕಾಣಿಸಿಕೊಂಡಿದ್ದು ಅವರ ಪಾತ್ರಕ್ಕೆ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. 

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಅಭಿನಯದ ಆಚಾರ್ಯ ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಚಿತ್ರದ ಬಗ್ಗೆ ಹೊಸ ಸುದ್ದಿ ಹಬ್ಬಿದೆ. ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಅಗರ್ವಾಲ್(Kajal Aggarwal) ಕಾಣಿಸಿಕೊಂಡಿದ್ದಾರೆ. ಆದರೀಗ ಸಿನಿಮಾದಿಂದ ಕಾಜಲ್ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಚಿತ್ರತಂಡದ ಜೊತೆ ನಟಿ ಕಾಜಲ್(Acharya) ಮುನಿಸಿಕೊಂಡ ಕಾರಣ ಸಿನಿಮಾದಿಂದ ಅವರ ಪಾತ್ರವನ್ನೇ ತೆಗೆದು ಹಾಕಲಾಗಿದೆ ಎನ್ನಲಾಗಿದೆ.

ಆಚಾರ್ಯ ಸಿನಿಮಾಗೆ ನಾಯಕಿ ಆಯ್ಕೆ ವಿಚಾರದಲ್ಲಿ ಸಿನಿಮಾತಂಡ ಹೆಚ್ಚು ತಲೆಕೆಡಿಸಿಕೊಂಡಿತ್ತು. ಸುದೀರ್ಘ ಹುಡುಕಾಟದ ಬಳಿಕ ಸಿನಿಮಾತಂಡ ಕಾಜಲ್ ಅವರನ್ನು ನಾಯಕಿಯಾಗಿ ಆಯ್ಕೆಯಾಗಿದ್ದರು. ಇದೀಗ ಕಾಜಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಆಗುತ್ತಿದ್ದಂತೆ ಕಾಜಲ್ ಅನೇಕ ಸಿನಿಮಾಗಳಿಂದ ಹೊರನಡೆದಿದ್ದಾರೆ. ಆಚಾರ್ಯ ಸಿನಿಮಾದ ಟ್ರೈಲರ್ ಇತ್ತೀಚಿಗಷ್ಟೆ ಹೊರಬಿದ್ದಿದೆ. ಆದರೆ ನಟಿ ಕಾಜಲ್ ಚಿತ್ರದ ಟ್ರೇಲರ್ ನಲ್ಲಿ ಕಾಣಿಸಿಕೊಂಡಿಲ್ಲ. ಇದು ಚಿತ್ರದಿಂದ ಕಾಜಲ್ ಪಾತ್ರವನ್ನು ತೆಗೆದುಹಾಕಲಾಗಿದೆ ಎನ್ನುವ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದಂತೆ ಆಗಿದೆ.

ಅಲ್ಲದೆ ಕಾಜಲ್ ಕೂಡ ಸಿನಿಮಾ ಪ್ರಚಾರದಿಂದ ತುಂಬಾ ದೂರ ಉಳಿದಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಟ್ರೈಲರ್ ಅನ್ನು ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಾಜಲ್ ತನ್ನದೆ ಸಿನಿಮಾದ ಟ್ರೈಲರ್ ಹಂಚಿಕೊಳ್ಳದೆ ಇರುವುದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಹಾಗಾಗಿ ಕಾಜಲ್ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಎನ್ನುವ ಮಾತು ಟಾಲಿವುಡ್ ನಲ್ಲಿ ಗುಲ್ಲಾಗಿದೆ.

Kajal Aggarwal Pregnant: ಪ್ರೆಗ್ನೆನ್ಸಿ ವೇಳೆ ಕಾಜಲ್ ಫುಲ್ ವರ್ಕ್‌ಔಟ್!

ಆಚಾರ್ಯ ಸಿನಿಮಾದಲ್ಲಿ ಕಾಜಲ್ ಪಾತ್ರದ ಚಿತ್ರೀಕರಣ ಕೂಡ ಸಂಪೂರ್ಣವಾಗಿಲ್ಲವಂತೆ. ಚಿತ್ರೀಕರಣ ಬಾಕಿ ಇರುವಾಗಲೇ ಗರ್ಭಿಣಿಯಾದ ಕಾರಣ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗಿಲ್ಲ. ಇದು ಸಿನಿಮಾತಂಡದ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹಾಗಾಗಿ ಸಿನಿಮಾತಂಡ ಕಾಜಲ್ ಪಾತ್ರವನ್ನು ತೆಗೆದುಹೊಕಿದೆ ಎನ್ನಲಾಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಚಿರಂಜೀವಿ ಜೊತೆ ಇಂಟ್ರಡಕ್ಷನ್ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಭಾಗಕ್ಕೆ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಾಜಲ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಆಚಾರ್ಯ ಸಿನಿಮಾದ ಬಗ್ಗೆ ಕಾಜಲ್ ಯಾವುದೇ ಪೋಸ್ಟರ್ ಅನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಲ್ಲ. ಸಿನಿಮಾದಿಂದ ಕಾಜಲ್ ಪಾತ್ರವನ್ನು ಕಿತ್ತೆಸೆದ ಕಾರಣಕ್ಕೆ ಚಿತ್ರದ ಬಗ್ಗೆ ಯಾವುದೇ ಪೋಸ್ಟರ್ ಶೇರ್ ಮಾಡಿಲ್ಲ ಎಂದು ಟಾಲಿವುಡ್ ನಲ್ಲಿ ಕೇಳಿಬರುತ್ತಿರುವ ಮಾತು. ಇನ್ನು ಸಿನಿಮಾದಲ್ಲಿ ನಟ ರಾಮ್ ಚರಣ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆರ್ ಆರ್ ಆರ್ ಸಿನಿಮಾದ ಸೂಪರ್ ಸಕ್ಸಸ್ ನಲ್ಲಿರುವ ರಾಮ್ ಚರಣ್ ಇದೀಗ ಆಚಾರ್ಯ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಸಿಂಗಮ್‌ನ ಕಾಜಲ್ Baby Shower ಫೋಟೋ ವೈರಲ್‌!

ಇನ್ನು ನಟಿ ಕಾಜಲ್ ಸದ್ಯ ಮೊದಲ ಮಗುವಿನ ನಿರೀಕ್ಷೆಯ ಸಂತಸದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಾಜಲ್ ಪ್ರೆಗ್ನೆನ್ಸಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಿಜಕ್ಕೂ ಸಿನಿಮಾತಂಡದ ಜೊತೆ ಮುನಿಸಿಕೊಂಡಿದ್ದಾರಾ, ಚಿತ್ರದಲ್ಲಿ ಕಾಜಲ್ ಪಾತ್ರಕ್ಕೆ ಕತ್ತರಿ ಹಾಕಲಾಗಿದೆಯಾ ಎನ್ನುವ ಸುದ್ದಿಗೆ ಸಿನಿಮಾತಂಡವೇ ಉತ್ತರಿಸಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?