ಕತ್ತಲೆ ಕೂಪದಲ್ಲಿ ಇದ್ದೀರಾ ಅಂದ್ರೆ ಕೊನೆಯಲ್ಲಿ ನಿಮಗೆ ಬೆಳಕು ಕಾಣುವುದು ನಿಶ್ಚಿತ; ನಟಿ ಸಮಂತಾ!

By Shriram Bhat  |  First Published Aug 25, 2024, 1:51 PM IST

ಇತ್ತೀಚೆಗೆ ಸಕ್ಸಸ್ ಪದದ ಅರ್ಥ ಬದಲಾಗಿದೆ. ಹೆಲ್ತ್‌ ಇಂಪಾರ್ಟೆಂಟ್, ಫ್ಯಾಮಿಲಿ ಮುಖ್ಯ, ಫ್ಯಾಮಿಲಿಗೆ ಕೊಡುವ ಟೈಮ್ ಮುಖ್ಯ. ಸಂತೋಷ ಮುಖ್ಯ, ಈ ಕ್ಷಣದಲ್ಲಿ ಬದುಕುವುದು ತುಂಬಾ ಮುಖ್ಯ.. ಹೀಗೆ ಹತ್ತು ಹಲವು ಸಂಗತಿಗಳಲ್ಲಿ..


ಭಾರತ ಚಿತ್ರರಂಗದ ಖ್ಯಾತ ನಟಿ ಸಮಂತಾ (Samantha Ruth Prabhu) ಗೊತ್ತಿಲ್ಲ ಅನ್ನುವವರ ಸಂಖ್ಯೆ ಕಡಿಮೆ ಎನ್ನಬಹುದು. ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಮೂಲಕ ಜಗದ್ವಿಖ್ಯಾತಿ ಗಳಿಸಿರುವ ನಟಿ ಸಮಂತಾ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಮಯೋಸೈಟಿಸ್ ಖಾಯಿಲೆಯಿಂದ ಹಂತಹಂತವಾಗಿ ಚೇತರಿಕೆ ಕಾಣುತ್ತಿರುವ ನಟಿ ಸಮಂತಾ ಅವರು ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಆಕ್ವಿವ್ ಆಗಿರುತ್ತಾರೆ. 

ಹಲವು ಸಂದರ್ಶನಗಳಲ್ಲಿ ನಟಿ ಸಮಂತಾ ಭಾಗಿಯಾಗುತ್ತಾರೆ. ಆದರೆ, ಸಮಂತಾ ಮಾತನಾಡಿರುವ ಹಲವು ಸಂದರ್ಶನಗಳ ಕ್ಲಿಪ್ಪಿಂಗ್ಸ್‌ ಇಂಟರ್ನೆಟ್‌ಗಳಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಹೀಗೆ ವೈರಲ್ ಆಗುತ್ತಿರುವ ವೀಡಿಯೋ ಒಂದರಲ್ಲಿ ನಟಿ ಸಮಂತಾ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 

Tap to resize

Latest Videos

undefined

ನನ್ನ ಹೆಂಡತಿಯೇ ಹೀರೋಯಿನ್, ಸ್ವಲ್ಪ ಕಷ್ಟ ಆಗೋಯ್ತು: ಹೀಗಂದ್ರು 'ಧ್ರುವತಾರೆ' ಹೀರೋ ಪ್ರತೀಕ್‌..!

'ಯಾರೇ ಆಗಲಿ ತಮ್ಮ ಆರೋಗ್ಯ ಅಥವಾ ವೈಯಕ್ತಿಕ ಬದುಕಿನಲ್ಲಿ ಕತ್ತಲೆ ಕವಿದಿರುವುದನ್ನು ಅನುಭವಿಸುತ್ತಿದ್ದರೆ ಅಂಥವರು ಖಂಡಿತವಾಗಿಯೂ ಧೃತಿಗೆಡಬೇಕಿಲ್ಲ. ನನ್ನ ಅನುಭವದಲ್ಲಿ ಹೇಳಬೇಕು ಎಂದರೆ, ನಿಮ್ಮ ಜೀವನದಲ್ಲಿ ಕಷ್ಟಗಳು ಸಾಲುಸಾಲಾಗಿ ಬಂದಿವೆ ಎಂದರೆ ಮುಂದೆ ಖಂಡಿತವಾಗಿಯೂ ನಿಮಗೆ ಜೀವನದಲ್ಲಿ ಯಶಸ್ಸಿನ ಬೆಳಕು ಗೋಚರಿಸುತ್ತದೆ, ನಿಮ್ಮ ಅನಾರೋಗ್ಯ ಸರಿಹೋಗುತ್ತದೆ ಎಂದೇ ಹೇಳಬೇಕು. ನನಗೆ ಅದರ ಅನುಭವ ಆಗಿದೆ' ಎಂದಿದ್ದಾರೆ ನಟಿ ಸಮಂತಾ.

ನನ್ನಪ್ರಕಾರ, ಇತ್ತೀಚೆಗೆ ಸಕ್ಸಸ್ ಪದದ ಅರ್ಥ ಬದಲಾಗಿದೆ. ಹೆಲ್ತ್‌ ಇಂಪಾರ್ಟೆಂಟ್, ಫ್ಯಾಮಿಲಿ ಮುಖ್ಯ, ಫ್ಯಾಮಿಲಿಗೆ ಕೊಡುವ ಟೈಮ್ ಮುಖ್ಯ. ಸಂತೋಷ ಮುಖ್ಯ, ಈ ಕ್ಷಣದಲ್ಲಿ ಬದುಕುವುದು ತುಂಬಾ ಮುಖ್ಯ.. ಹೀಗೆ ಹತ್ತು ಹಲವು ಸಂಗತಿಗಳಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆ ಆಗಿದೆ. ಈ ಬೆಳವಣಿಗೆ ತುಂಬಾ ಮುಖ್ಯ ಕೂಡ' ಎಂದಿದ್ದಾರೆ ನಟಿ ಸಮಂತಾ.

ಎಲ್ಲಾ ದುರಭ್ಯಾಸಗಳಿಂದ ದೂರವಿದ್ದರೂ ಕನ್ನಡ ಖಳನಟ ಸುಧೀರ್ ಸತ್ತಿದ್ದು ಹೇಗೆ?

ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಮಿಂಚಿರುವ ನಟಿ ಸಮಂತಾ, ಬಾಲಿವುಡ್‌ ಸಿನಿರಂಗದಲ್ಲಿ ಕೂಡ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಎಸ್‌ ಎಸ್‌ ರಾಜಮೌಳಿ ನಿರ್ದೇಶನದ 'ಈಗ' ಚಿತ್ರವೂ ಸೇರಿದಂತೆ, ಸಮಂತಾ ಅಭಿನಯದ ಹಲವು ಸಿನಿಮಾಗಳು ಬಾಲಿವುಡ್‌ನಲ್ಲೂ ಡಬ್ ಆಗಿವೆ. ಹೀಗಾಗಿ ನಟಿ ಸಮಂತಾ ಅವರು ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತದಲ್ಲಿ ಕೂಡ ಸಖತ್ ಫೇಮಸ್!. ಕನ್ನಡಿಗರಿಗೂ ಕೂಡ ನಟಿ ಸಮಂತಾ ಅಪರಿಚಿತರೇನೂ ಅಲ್ಲ. 

ತೆಲುಗು ಹಾಗು ತಮಿಳು ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿರುವ ನಟಿ ಸಮಂತಾ ಅವರು ಬಹಳಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಕೂಡ ಪಡೆದಿದ್ದಾರೆ. ನಟಿ ಸಮಂತಾ ಅವರು ತೆಲುಗು ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ದಾಂಪತ್ಯದಲ್ಲಿ ಅದೇನು ಆಯಿತೋ ಗೊತ್ತಿಲ್ಲ, ಡಿವೋರ್ಸ್ ಆಗಿದೆ. ಈಗ ನಾಗ ಚೈತನ್ಯ ಅವರು ಮತ್ತೊಬ್ಬರು ನಟಿ ಶೋಭಿತಾ ಅವರೊಂದಿಗೆ ಎಂಜೇಗ್‌ಮೆಂಟ್ ಮಾಡಿಕೊಂಡಿದ್ದಾರೆ. 

ಇದೇನು ಅನುಶ್ರೀ.. ಪ್ರೇಮ ಪುರಾಣ ಹೇಳೋಕೆ ಇಷ್ಟೊಂದು ಬಿಲ್ಡಪ್ಪು..? ನಿಮ್ದೆನಾ ಅಂತಿದಾರೆ!

ಬಹಳಷ್ಟು ಜನರಿಗೆ ಗೊತ್ತಿರುವಂತೆ ನಟಿ ಸಮಂತಾ ಅವರು ಕಳೆದ ಎರಡು ವರ್ಷಗಳಿಂದ ಮಯೋಸೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈಗ ಅದರಿಂದ ಸಾಕಷ್ಟು ಚೇತರಿಸಿಕೊಂಡಿದ್ದಾರೆ ಕೂಡ ಎನ್ನಲಾಗಿದೆ. ಇನ್ನೂ ಕಂಪ್ಲೀಟ್ ಕ್ಯೂರ್ ಆಗಿಲ್ಲ ಎನ್ನಲಾಗುತ್ತಿದ್ದು, ಟ್ರೀಟ್‌ಮೆಂಟ್ ಮುಂದುವರೆದಿದೆಯಂತೆ. ಮಯೋಸೈಟಿಸ್ ಖಾಯಿಲೆ ಗುಣವಾದ ಬಳಿಕ ನಟಿ ಸಮಂತಾ ಮತ್ತೆ ತಮ್ಮ ಕೆರಿಯರ್ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ಯಾವುದೋ ಒಂದು ವಿಷಯಕ್ಕೆ ನಟಿ ಸಮಂತಾ ಅವರು ಆಗಾಗ ಸುದ್ದಿಯಾಗುವುದಂತೂ ಸುಳ್ಳಲ್ಲ!


click me!