ಸೀರೆ ತೊಡುವ ಭರದಲ್ಲಿ ಒಳಗಿಂದೆಲ್ಲಾ ಮರೆತುಬಿಟ್ರಾ ಉರ್ಫಿ? ವಿಡಿಯೋ ನೋಡಿ ಕಣ್ಮುಚ್ಚಿದ ನೆಟ್ಟಿಗರು!

By Suchethana D  |  First Published Aug 25, 2024, 1:10 PM IST

ಇಂಥ ಸೀರೆ ತೊಡುವ ಬದ್ಲು ಹುಟ್ಟುಡುಗೆಯಲ್ಲೇ ಬನ್ನಿಯಮ್ಮಾ ಪ್ಲೀಸ್​ ಎಂದು ಉರ್ಫಿಗೆ ನೆಟ್ಟಿಗರು ಹೇಳ್ತಿರೋದು ಯಾಕೆ? 
 


 ಮೈಮೇಲೆ ಬಟ್ಟೆಗಿಂತಲೂ ಹೆಚ್ಚಾಗಿ ಬೇರೆ ಬೇರೆ ವಸ್ತುಗಳನ್ನೇ ಹಾಕಿಕೊಳ್ಳುವ ಉರ್ಫಿ ಜಾವೇದ್​, ಈಗ ಸೀರೆ ತೊಟ್ಟ ವಿಡಿಯೋ ಒಂದು ವೈರಲ್​ ಆಗ್ತಿದೆ. ಉರ್ಫಿ ಸೀರೆ ತೊಡೋದಾ? ಸಾಧ್ಯನೇ ಇಲ್ಲ ಎಂದು ಹಲವರು ಹೇಳಬಹುದು. ಆದರೆ ನಿಜಕ್ಕೂ ಉರ್ಫಿ ಸೀರೆ ತೊಟ್ಟಿದ್ದಾರೆ. ಹಾಗಂತ ಮಾಮೂಲಿ ರೀತಿ ಅವರ ಬಟ್ಟೆ ಹಾಕಲು ಸಾಧ್ಯನೆ? ಸಾಧ್ಯವೇ ಇಲ್ಲ ಬಿಡಿ. ಹೆಸರಿಗೆ ಇವರು ತೊಟ್ಟಿರೋದು ಸೀರೆ. ಆದರೆ ಸೀರೆ ಎಲ್ಲಿದೆ ಅಂತ ಹುಡುಕಬೇಕು ಅಷ್ಟೇ. ನಿಜ. ಸೀರೆ ತೊಟ್ಟಿರೋ ರೀತಿ ನೋಡಿದ ನೆಟ್ಟಿಗರು ಉಫ್​ ಉರ್ಫಿ ಎಂದಿದ್ದಾರೆ. ಇದಕ್ಕೆ ಕಾರಣ, ಸೀರೆ ತೊಡುವ ಭರದಲ್ಲಿ ಒಳಗಿನ ಎಲ್ಲಾ ಉಡುಪುಗಳನ್ನು ಉರ್ಫಿ ಹಾಕೋದನ್ನು ಮರೆತುಬಿಟ್ರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ!

ಅಷ್ಟಕ್ಕೂ ಉರ್ಫಿಯೇನು ಮರೆತು ಹೀಗೆ ಮಾಡಿದ್ದಲ್ಲ ಎನ್ನುವುದು ಗೊತ್ತಿರೋದೇ ಬಿಡಿ. ಆದರೆ ಸೀರೆಯ ಮರ್ಯಾದೆ ತೆಗೆದುಬಿಟ್ಯಲ್ಲಮ್ಮಾ ಎಂದು ನೆಟ್ಟಿಗರು ಕಿಡಿ ಕಾರ್ತಿದ್ದಾರೆ. ಹಿಂದೊಮ್ಮೆ ಉರ್ಫಿಗೆ, ನೀವು ಇನ್ನೂ ಹಾಕಿಕೊಳ್ಳದೇ  ಇರುವ ಡ್ರೆಸ್​ ಯಾವುದು ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ಆಕೆ,  ಅಂಥದ್ದೊಂದು ವಸ್ತು ಯಾವುದಾದ್ರೂ ಇದೆಯೇ ಎಂದು ಪ್ರಶ್ನಿಸಿದ್ದರು. ಅಷ್ಟರ ಮಟ್ಟಿಗೆ ಅವರು ಇದ್ದ ಬಿದ್ದ ಎಲ್ಲಾ ವಸ್ತುಗಳಿಂದಲೂ ಉಡುಗೆ-ತೊಡುಗೆ ಮಾಡಿಕೊಂಡಾಗಿದೆ. ಕೆಲ ದಿನಗಳ ಹಿಂದೆ,  ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು.  ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು,  ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು.  ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್​ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದಂತೂ ನೋಡಿ  ಉರ್ಫಿ ಜಾವೇದ್​ ಫ್ಯಾನ್ಸ್​ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎಂದಿದ್ದರು.

Tap to resize

Latest Videos

ಫ್ಲ್ಯಾಟ್ ಚೆಸ್ಟ್​ ಎನ್ನುವುದನ್ನು ಹೀಗೆ ಬಿಂಬಿಸೋದಾ ಉರ್ಫಿ? ಎದೆಯ ಮೇಲೆಯೇ ಡಿಜಿಟಲ್​ ಬೋರ್ಡ್​!

ಆದರೆ ಈಗ ಸೀರೆಯ ವಿಡಿಯೋ ನೋಡಿ ಮಾತ್ರ ತಲೆ ತಲೆ ಚಚ್ಚಿಕೊಳ್ತಿದ್ದಾರೆ ಉರ್ಫಿ ಫ್ಯಾನ್ಸ್​.  ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಕೆಲ ದಿನಗಳ ಹಿಂದೆ ಖುದ್ದು ನಶೆ ಏರಿಸಿಕೊಂಡು ತೂರಾಡುತ್ತಾ ಬಂದಿದ್ದರು. ನಟಿ ತೂರಾಡುತ್ತಾ ಬಂದಾಗ ಅವರನ್ನು ಕೆಲವರು ಹಿಡಿದುಕೊಂಡಿದ್ದರು. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ, ಇದೇ  ನಶೆಯಲ್ಲಿ ನಟಿ ಕಾರನ್ನೇರಿ ಕುಳಿತಿದ್ದರು. ಅಲ್ಲಿ ಒಂದಿಷ್ಟು ಜನರು ಮುತ್ತಿಗೆ ಹಾಕಿದ್ದರು. ಅವರಿಗೆ  ಕೊಡುವ ಸಲುವಾಗಿ ನಟಿ ಕೈಯಲ್ಲಿ ದುಡ್ಡು ಹಿಡಿದುಕೊಂಡದ್ದೇ ಇದಕ್ಕೆಲ್ಲಾ ಕಾರಣವಾಗಿದೆ.  ಅಲ್ಲಿ ಮುತ್ತಿಗೆ ಹಾಕಿದ ಮಕ್ಕಳು ಸೇರಿದಂತೆ ದೊಡ್ಡವರು ಕೂಡ  ಉರ್ಫಿಯ ಮೈಯೆಲ್ಲಾ ಮುಟ್ಟಿದ್ದಾರೆ. ಮೂಗಿಗೆ ಏಟು ಕೂಡ ಬಿದ್ದದೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ಓಡಿಸುವಲ್ಲಿ ಸುಸ್ತಾಗಿ ಹೋಗಿದ್ದರು. ಈಗ ನೋಡಿದ್ರೆ ಇವರ ಸೀರೆ ನೋಡಿದ್ರೆ ಜನರೇ ತಲೆ ತಿರುಗಿ ಬೀಳೋ ಹಾಗಿದೆ. 


ಕೆಲ ದಿನಗಳ ಹಿಂದೆ ನಟಿ ಕಾಗೆ ಡ್ರೆಸ್​ ಧರಿಸಿ ಪಾಪರಾಜಿಗಳಿಗೆ ಪೋಸ್​ ಕೊಟ್ಟಿದ್ದರು. ಬೇಗ ಹಾರಿಹೋಗಿ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದರು. ಮತ್ತೆ ಕೆಲವರು ಬಿಳಿ ಕಾಗೆ ಎಂದು ಹೇಳಿದರೆ, ಇನ್ನು ಕೆಲವರು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುತ್ತದೆ ನಿಮ್ಮನ್ನು ನೋಡಿ ಎಂದು ನಟಿಯ ಕಾಲೆಳೆದಿದ್ದರು. ಇನ್ನು ಕೆಲವರು ನಿಜವಾಗಿಯೂ ಕಾಗೆಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡವು ಎಂದು ಬರೆದಿದ್ದರು. ಮತ್ತೆ ಕೆಲವರು ಕಾಗೆಗಳ ಸತ್ತಿರೋ ಫೋಟೋಗಳನ್ನೂ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ನಟಿಯನ್ನು ಎಷ್ಟು ಸಾಧ್ಯವೋ ಅಷ್ಟು ಟ್ರೋಲ್​  ಮಾಡಲಾಗುತ್ತಿದೆ. ಆದರೆ ಇದಕ್ಕೆ ಉರ್ಫಿ ಮಾತ್ರ ಗಪ್​ಚುಪ್​. ಈಕೆಯನ್ನು ನೋಡಿದವರು ಮಾತ್ರ ಉಫ್​ ಅಂತಿದ್ದಾರೆ ಅಷ್ಟೇ. 

ಉರ್ಫಿ ಜಾವೇದ್​ ನೋಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ತಂತೆ ಕಾಗೆ! ಏನಪ್ಪಾ ಈ ವಿಷ್ಯ?

click me!