ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್

Published : Dec 02, 2022, 01:09 PM IST
ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್

ಸಾರಾಂಶ

ನಟಿ ಪೂನಂ ಕೌರ್ Fibromyalgia ಎನ್ನುವ  ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಪೂನಂ ಕೌರ್ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗಷ್ಟೆ ಟಾಲಿವುಡ್ ಸ್ಟಾರ್ ನಟಿ ಸಮಂತಾ Myositis ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು.  ಸಮಂತಾ ಅನಾರೋಗ್ಯದ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸಮಂತಾ ವಿದೇಶಕ್ಕೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಮಂತಾ ಆನಾರೋಗ್ಯದ ಬೆನ್ನಲ್ಲೇ ಮತ್ತೋರ್ವ ನಟಿ ಪೂನಂ ಕೌರ್ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಹೇಳಿದ್ದಾರೆ. ಪೂನಂ ಕೌರ್ Fibromyalgia ಎನ್ನುವ  ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಒಂದು ಕಾಲದ ಸ್ಟಾರ್ ನಟಿ ಪೂನಂ ಅನಾರೋಗ್ಯತದ ವಿಚಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. 

ಆಂಗ್ಲ ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಪೂನಂ ನವೆಂಬರ್ 12 ರಂದು ದೆಹಲಿಯಲ್ಲಿ ಬ್ರಹ್ಮಾಕುಮಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಬೆನ್ನುನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಿದ ನಂತರ, ನವೆಂಬರ್ 18 ರಲ್ಲಿ ಅವರಿಗೆ  Fibromyalgia ಇರುವುದು ಬೆಳಕಿಗೆ ಬಂದಿದೆ. ಪೂನಂ ಆಯುರ್ವೇದ ಚಿಕಿತ್ಸೆ ಮಾಡುತ್ತಿದ್ದಾರೆ ಎನ್ನುವ ಮಾತಿ ತಿಳಿದುಬಂದಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದು ಸದ್ಯ ಮುಂಬೈನ ತನ್ನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ.

Fibromyalgia ಬಗ್ಗೆ

ಅಂದಹಾಗೆ ಮೈಯೋಸಿಟಿಸ್‌ನಂತೆ Fibromyalgia ಕೂಡ ಸಂಪೂರ್ಣ ಗುಣಪಡಿಸಲಾಗದ ಕಾಯಿಲೆಯಾಗಿದೆ.  ಮೈಯೋಸಿಟಿಸ್ ಸ್ನಾಯುಗಳ ಚಲನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ಹಾಗೆಯೇ Fibromyalgia ಸ್ನಾಯುಗಳಲ್ಲಿನ ನೋವು ಹೆಚ್ಚಾಗುತ್ತದೆ ಮತ್ತು ಮೆಮೊರಿ ಮೇಲೂ ಪರಿಣಾಮ ಬೀರುತ್ತದೆ. ಪೂನಂ ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತದೆ ಆದರೆ ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕಾಗಿದ್ದು ಜೀವನಶೈಲಿಯನ್ನು ಬದಲಾಯಿಸಬೇಕಾಗಿದೆ. ಆದರೆ ಅದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ.

Samantha: ಅನಾರೋಗ್ಯದ ವದಂತಿ ವೈರಲ್: ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ಸ್ಯಾಮ್?

ಸದ್ಯ ಪೂನಂ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಯಾಮಗಳನ್ನು ಮಾಡುವಂತೆ ಸೂಚಿಸಲಾಗಿದೆ. ಇತ್ತೀಚಿಗಷ್ಟೆ ಪೂನಂ ಕೌರ್ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರು. ರಾಹುಲ್ ಗಾಂಧಿ ಜೊತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.  

ಅನಾರೋಗ್ಯದ ನಡುವೆಯೂ ಐವಿ ಡ್ರಿಪ್ಸ್ ಹಾಕೊಂಡೆ ವರ್ಕೌಟ್ ಮಾಡಿದ ಸಮಂತಾ; ವಿಡಿಯೋ ವೈರಲ್

ಪೂನಂ ಕೌರ್ ಅವರ ಸಿನಿಮಾ ಪಯಣದ ಬಗ್ಗೆ ಹೇಳುವುದಾದರೆ ಮಿಸ್ ಆಂಧ್ರಪ್ರದೇಶ ಕಿರೀಟವನ್ನು ಪಡೆದ ನಂತರ ಪೂನಂ 2006 ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಎಸ್‌ವಿ ಕೃಷ್ಣಾ ರೆಡ್ಡಿ ಅವರ ಮಾಯಾಜಲಂ ಚಿತ್ರದ ಮೂಲಕ ನಾಯಕಿಯಾಗಿ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಿದರು. ತೆಲುಗಿನಲ್ಲಿ ಸಕಸ್ಸ್ ಕಾಣುತ್ತಿದ್ದಂತೆ ಬಳಿಕ ತಮಿಳು ಸಿನಿಮಾರಂಗಕ್ಕೆ ಹಾರಿದರು ಪೂನಂ. ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. 2008ರಲ್ಲಿ ರಿಲೀಸ್ ಆದ ಬಂದು ಬಾಂಧವರು ಸಿನಿಮಾದಲ್ಲಿ ಪೂನಂ ನಟಿಸಿದ್ದಾರೆ. ಈ ಮೂಲಕ ಪೂನಂ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿದು. ಅದರೆ ಅದೇ ಅವರ ಕೊನೆಯ ಕನ್ನಡ ಸಿನಿಮಾ ಕೂಡ ಹೌದು. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆ ತೆರೆಹಂಚಿಕೊಂಡಿದ್ದರು ಪೂನಂ. ಸಿನಿಮಾ ಜೊತೆ ಪೂನಂ ಇತ್ತೀಚಿಗೆ ಟಿವಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದರು. ಸದ್ಯ ಯಾವುದೇ ಸಿನಿಮಾಗಳು ಪೂನಂ ಕೈಯಲ್ಲಿ ಇಲ್ಲ.    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!