ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್

Published : Dec 02, 2022, 11:46 AM IST
ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್

ಸಾರಾಂಶ

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ಮಾಪಕ ಕೆ.ಮುರಳೀಧರನ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಅವರು ತಮಿಳುನಾಡಿನ ಕುಂಭಕೋಣಂನಲ್ಲಿರುವ ತಮ್ಮ  ನಿವಾಸದಲ್ಲಿ ಇಂದು (ಡಿಸೆಂಬರ್2) ಬೆಳಗ್ಗೆ ನಿಧನರಾದರು

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ಮಾಪಕ ಕೆ.ಮುರಳೀಧರನ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಅವರು ತಮಿಳುನಾಡಿನ ಕುಂಭಕೋಣಂನಲ್ಲಿರುವ ತಮ್ಮ  ನಿವಾಸದಲ್ಲಿ ಇಂದು (ಡಿಸೆಂಬರ್2) ಬೆಳಗ್ಗೆ ನಿಧನರಾದರು. ಮುರಳೀಧರನ್ ಅವರು ತಮಿಳು ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದರು. ಕೆ.ಮುರಳೀಧರನ್ ಲಕ್ಷ್ಮಿ ಮೂವೀ ಮೇಕರ್ಸ್ ಎನ್ನುವ ಸಿನಿಮಾ ನಿರ್ಮಾಣ ಹುಟ್ಟುಹಾಕಿದ್ದರು. ಈ ಸಂಸ್ಥೆ ಮೂಲಕ ಅವರು ಅನ್ಬೇ ಶಿವಂ, ಪುದುಪೆಟ್ಟೈ ಮತ್ತು ಬಾಗಾವತಿಯಂತಹ ಹಲವಾರು ಸೂಪರ್ ಹಿಟ್‌ಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರಿಗಿದೆ. 

ಲಕ್ಷ್ಮಿ ಮೂವೀ ಮೇಕರ್ಸ್ ತಮಿಳು ಸಿನಿಮಾರಂಗದ ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಬ್ಯಾನರ್‌ನಲ್ಲಿ ಬಂದ ಅನೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ದೊಡ್ಡ ಕಲಾವಿದರ ಜೊತೆಯೂ ಅನೇಕ ಸಿನಿಮಾಗಳನ್ನು ಮಾಡಿದೆ. ಕೆ. ಮುರಳೀಧರನ್ ಅವರ ಲಕ್ಷ್ಮಿ ಮೂವೀ ಮೇಕರ್ಸ್, ಕಮಲ್ ಹಾಸನ್ ಜೊತೆ ಅನ್ಬೇ ಶಿವಂ, ವಿಜಯಕಾಂತ್  ಜೊತೆ ಉಳವತುರೈ, ಕಾರ್ತಿಕ್ ಜೊತೆ ಗೋಕುಲತಿಲ್ ಸೀತೈ ಮತ್ತು ಅಜಿತ್ ಜೊತೆ ಉನ್ನೈ ತೇಡಿ ಹಾಗೂ ವಿಜಯ್ ಜೊತೆ ಪ್ರಿಯಾಮುದನ್, ನಟ ಧನುಷ್ ಜೊತೆ ಪುದುಪೆಟ್ಟೈ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಸೂಪರ್ ಸ್ಟಾರ್ ಗಳ ಜೊತೆ ಮಾಡಿದ್ದಾರೆ. 

ಅಂದಹಾಗೆ ಕೆ ಮುರಳೀಧರನ್ ಕೊನೆಯದಾಗಿ ಸಕಲಕಲಾ ವಲ್ಲಭ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ಜಯಂ ರವಿ, ತ್ರಿಷಾ ಮತ್ತು ಅಂಜಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.   ಈ ಸಿನಿಮಾ 2015ರಲ್ಲಿ ಬಿಡುಗಡೆಯಾಯಿತು. ಬಳಿಕ ಮತ್ತೆ ಸಿನಿಮಾ ಮಾಡಿಲ್ಲ ಮುರಳೀಧರನ್. 

'ಪುಷ್ಪಕ ವಿಮಾನ' ಚಿತ್ರಕ್ಕೆ 35 ವರ್ಷದ ಸಂಭ್ರಮ; ಹೃದಯಸ್ಪರ್ಶಿ ಸಾಲು ಹಂಚಿಕೊಂಡ ಕಮಲ್ ಹಾಸನ್

ಕೆ.ಮುರಳೀಧರನ್ ನಿಧನಕ್ಕೆ ಕಮಲ್ ಹಾಸನ್ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಶೇರ್ ಮಾಡಿರುವ ಹಾಸನ್, ಹೃತ್ಪೂರ್ವ ಶ್ರದ್ಧಾಂಜಲಿ ಸಲ್ಲಿಸಿದರು.  'ಹಲವಾರು ಹಿಟ್‌ಗಳನ್ನು ನಿರ್ಮಿಸಿದ ಲಕ್ಷ್ಮಿ ಮೂವೀ ಮೇಕರ್ಸ್‌ನ ನಿರ್ಮಾಪಕ ಕೆ.ಮುರಳೀಧರನ್ ಇನ್ನಿಲ್ಲ. ಆತ್ಮೀಯ ಶಿವ ನಾನು ಆ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಹೇಳಿದರು. ಕಮಲ್ ಹಾಸನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Kantara ಸಿನಿಮಾ ವೀಕ್ಷಿಸಿದ ಕಮಲ್ ಹಾಸನ್; ರಿಷಬ್ ಶೆಟ್ಟಿ ಬಗ್ಗೆ ಹೇಳಿದ್ದೇನು?

ಕೆ ಮುರಳೀಧರನ್ ಅವರು ನಟ ಶರತ್‌ಕುಮಾರ್ ಅಭಿನಯದ ಅರಣ್ಮನೈ ಕವಲನ್ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡರು. ಆ ಸಿನಿಮಾ 1994ರಲ್ಲಿ ರಿಲೀಸ್ ಆಗಿತ್ತು. ಬಳಿಕ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡರು. ಅನೇಕ ಸ್ಟಾರ್ ಕಲಾವಿದರ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ದೊಡ್ಡ ಸಂಸ್ಥೆಯನ್ನು ಹುಟ್ಟುಹಾಕಿದರು ಕೆ. ಮುರಳೀಧರನ್ ಇನ್ನು ನೆನಪು ಮಾತ್ರ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?