ಕೊನೆವರೆಗೂ ನಿನ್ನೇ ಪ್ರೀತಿಸುವೆ.. ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ನಟಿ

By Anusha Kb  |  First Published Sep 19, 2022, 8:08 AM IST

ತಮಿಳು ಚಿತ್ರರಂಗದ (Tamil Film Industry) ಮತ್ತೊಬ್ಬ ನಟಿ ಸಾವಿಗೆ ಶರಣಾಗುವ ಮೂಲಕ ತಮಿಳು ಚಿತ್ರರಂಗಕ್ಕೆ ಮತ್ತಷ್ಟು ಆಘಾತ ನೀಡಿದ್ದಾರೆ. ದೀಪಾ ಆಲಿಯಾಸ್ ಪೌಲಿನ್ ಜೆಸ್ಸಿಕಾ ಸಾವಿಗೆ ಶರಣಾದ ಯುವ ನಟಿ.


ಚೆನ್ನೈ: ಇತ್ತೀಚೆಗೆ ಸಿನಿಮಾ ರಂಗದಲ್ಲಿ ಆತ್ಮಹತ್ಯೆ ಮಾಡಿಕೊಂಡು ಜೀವ ಕೊನೆಗಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದಷ್ಟೇ ತಮಿಳು ಗೀತಾ ಸಾಹಿತ್ಯ ರಚನೆಕಾರ ಕಬಿಲಿಯನ್‌ ಅವರ ಪುತ್ರಿ ಥೂರಿಗೈ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಮಾಸುವ ಮೊದಲೇ ತಮಿಳು ಚಿತ್ರರಂಗದ (Tamil Film Industry) ಮತ್ತೊಬ್ಬ ನಟಿ ಸಾವಿಗೆ ಶರಣಾಗುವ ಮೂಲಕ ತಮಿಳು ಚಿತ್ರರಂಗಕ್ಕೆ ಮತ್ತಷ್ಟು ಆಘಾತ ನೀಡಿದ್ದಾರೆ. ದೀಪಾ ಆಲಿಯಾಸ್ ಪೌಲಿನ್ ಜೆಸ್ಸಿಕಾ ಸಾವಿಗೆ ಶರಣಾದ ಯುವ ನಟಿ.

29 ವರ್ಷದ ಜೆಸ್ಸಿಕಾ (Pauline Jessica) ಅವರ ಶವ ಭಾನುವಾರ ಅವರು ವಾಸವಿದ್ದ ಚೆನ್ನೈನ ವಿರುಂಬಾಕಂ ಬಳಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಇವರ ಸ್ನೇಹಿತರು ಅನೇಕ ಬಾರಿ ಫೋನ್ ಕರೆ ಮಾಡಿದರೂ ಇವರು ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆ ಬಳಿ ಬಂದು ನೋಡಿದಾಗ ದೀಪಾ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರೇಮ ವೈಫಲ್ಯವೇ (Love Failure) ಈ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.

Tap to resize

Latest Videos

ಕಿರುತೆರೆ ನಟಿ ಆತ್ಮಹತ್ಯೆ; ಡೆತ್ ನೋಟ್ ಓದಿ ಫೋಷಕರು ಶಾಕ್!

ಇತ್ತ ಸಾಯುವ ಮುನ್ನ ದೀಪಾ ಡೆತ್‌ನೋಟ್‌ (Death note) ಬರೆದಿದ್ದು, ನಾನು ಕೊನೆವರೆಗೂ ಆತನನ್ನೇ ಪ್ರೀತಿಸುವೆ ಎಂದು ವ್ಯಕ್ತಿಯ ಹೆಸರು ಉಲ್ಲೇಖಿಸದೇ ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ರಂಗದ ಗಣ್ಯರು ದೀಪಾ ಅಭಿಮಾನಿಗಳು ಸೇರಿದಂತೆ ಅನೇಕರು ಯುವ ನಟಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. 

 ಚಿತ್ರೋದ್ಯಮದಲ್ಲಿ ಇತ್ತಿಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಟ ನಟಿಯರ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ತಮಿಳು ಕಿರುತೆರೆಯ ಜನಪ್ರಿಯ ನಟ ಇಂದಿರಾ ಕುಮಾರ್ ನಿಗೂಢವಾಗಿ ಕೊನೆ ಉಸಿರೆಳೆದಿದ್ದರು. ಇದಕ್ಕೂ ಮೊದಲು ಡಿಸೆಂಬರ್​​​​ 2020 ರಲ್ಲಿ ತಮಿಳು ನಟಿ, ನಿರೂಪಕಿ ಚಿತ್ರಾ , ನಜರತ್‌ಪೇಟ್‌ನ  ಫೈವ್​​ಸ್ಟಾರ್ ಹೋಟೆಲ್‌ನಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದರು. ಚಿತ್ರಾ ಇನ್ನಿಲ್ಲ ಎಂದು ತಿಳಿದಾಗ ಅಭಿಮಾನಿಗಳು ಶಾಕ್ ಆಗಿದ್ದರು. ನಿರೂಪಕಿಯಾಗಿ ಬಣ್ಣದ ಲೋಕದಲ್ಲಿ ಕರಿಯರ್ ಆರಂಭಿಸಿದ್ದ ಚಿತ್ರಾ, ಸ್ಟಾರ್ ವಿಜಯ್​ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಂಡಿಯನ್ ಸ್ಟೋರ್ಸ್' ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದರು. 

ಬಣ್ಣದ ಲೋಕಕ್ಕೆ ಸಿಗದ ಎಂಟ್ರಿ, ಸುಸೈಡ್‌ಗೆ ಶರಣಾದ ಸುಂದರಿ

ಪ್ರಿಯಕರನಿಂದ ಮೋಸ ಹೋದ ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ 2020 ರಲ್ಲಿ ನಡೆದಿತ್ತು. ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‍ನಲ್ಲಿ  ನಟಿ ಚಂದನಾ (29) ಆತ್ಮಹತ್ಯೆ ಮಾಡಿಕೊಂಡಿದ್ದರು. ಮದುವೆಯಾಗೋದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡ ಪ್ರಿಯಕರ ಬಳಸಿಕೊಂಡಿದ್ದ ಎಂದು ವಿಡಿಯೋದಲ್ಲಿ ಅವರು ಆರೋಪ ಮಾಡಿದ್ದರು.ಚಂದನಾ ಹಾಗೂ ಆರೋಪಿ ಪ್ರಿಯಕರ ದಿನೇಶ್ 5 ವರ್ಷಗಳಿಂದ ಪ್ರೀತಿಸುತ್ತಿದ್ದರು.ಯುವತಿಯನ್ನು ಮದುವೆಯಾಗೊದಾಗಿ ನಂಬಿಸಿ 5 ಲಕ್ಷ  ರೂ. ಹಣವನ್ನು ಪ್ರಿಯಕರ ಪಡೆದುಕೊಂಡಿದ್ದ. ಆದರೆ ಕೊನೆಗೆ ಮದುವೆಯಾಗಲು ನಿರಾಕರಿಸಿ ಕೈಕೊಟ್ಟಿದ್ದ ಇದರಿಂದ ಚಂದನಾ ಸಾವಿಗೆ ಶರಣಾಗಿದ್ದರು.

click me!