
ಬಹುಭಾಷಾ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ನಡೆಯುತ್ತಿರುವ ಕುಚ್ ಕುಚ್ ಸಿನಿ ಇಂಡಸ್ಟ್ರಿಯಲ್ಲಿ ಹೊಸ ವಿಷಯವೇನಲ್ಲ. ಅದರಲ್ಲಿಯೂ ಇವರ ಲವ್ ಸ್ಟೋರಿ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಗಳು ಯಾವಾಗಲೂ ನಡೆಯುತ್ತಿವೆ. ಆದರೆ ಇದುವರೆಗೂ ಇಬ್ಬರೂ ತುಟಿ ಪಿಟಿಕ್ ಎನ್ನಲಿಲ್ಲ. ಕೆಲ ದಿನಗಳ ಹಿಂದೆ ಈ ಜೋಡಿ ಪುಷ್ಪ 2 ಚಿತ್ರ ವೀಕ್ಷಿಸಿ ಬಂದ ಬಳಿಕ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಡೇಟಿಂಗ್ ಮಾಡುತ್ತಿರುವ ಬಗ್ಗೆ ಇನ್ನಷ್ಟು ಸ್ಪಷ್ಟನೆ ಸಿಕ್ಕಿತ್ತು. ಮಾತ್ರವಲ್ಲದೇ, ಇವರ ಮದುವೆ ಇನ್ನಾರು ತಿಂಗಳಿನಲ್ಲಿ ನಡೆಯಲಿದೆ ಎಂದು ಗುಲ್ಲೆದ್ದಿದೆ. ಅದಕ್ಕಾಗಿ ತಯಾರಿ ನಡೆಯುತ್ತಿದ್ದು, ಸೀಕ್ರೆಟ್ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿಯೂ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಈ ವರ್ಷವೇ ನಿಶ್ಚಿತಾರ್ಥ ನಡೆಯಲಿದೆ ಎಂದೆಲ್ಲಾ ಹೇಳಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತವಾಗಿಏನೂ ವಿಷಯ ಬಂದಿಲ್ಲವಷ್ಟೇ.
ಆದರೆ ಅದೇ ಇನ್ನೊಂದೆಡೆ, ವಿಜಯ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಸುದ್ದಿ ಕೂಡ ಸಕತ್ ಸದ್ದು ಮಾಡುತ್ತಿದೆ. ಈಚೆಗಷ್ಟೇ ಪತ್ರಿಕಾಗೋಷ್ಠಿ ಒಂದರಲ್ಲಿ ಸ್ಲಿಟ್ ಡ್ರೆಸ್ ಹಾಕಿಕೊಂಡು ಪೇಚಿಗೆ ಸಿಲುಕಿದ್ದ ಅನನ್ಯಾ ಅವರು ವಿಜಯ್ ಸೇವ್ ಮಾಡಿದ್ದರು. ಈ ಸ್ಲಿಟ್ ಡ್ರೆಸ್ನಲ್ಲಿ ಕೆಳಗಡೆ ತೊಡೆ ಕಾಣುತ್ತಿದ್ದರೆ, ಮೇಲುಗಡೆ ದೇಹ ಪ್ರದರ್ಶನವಾಗಿತ್ತು. ಆದರೆ ಈ ಡ್ರೆಸ್ ನಟಿಗೆ ಕನ್ಫರ್ಟ್ ಎನಿಸುತ್ತಿರಲಿಲ್ಲ. ಮೇಲೆ-ಕೆಳಗೆ ಎಲ್ಲಾ ಎಳೆದುಕೊಳ್ಳುತ್ತಲೇ ಇದ್ದರು, ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಕ್ಯಾಮೆರಾ ಕಣ್ಣು ತಮ್ಮ ಮೇಲೆ ಇರುತ್ತದೆ ಎಂದು ತಿಳಿದಿದ್ದರಿಂದಲೋ ಏನೋ, ಅದರ ಅರಿವೂ ಇಲ್ಲದೇ ನಟಿ ಬಟ್ಟೆ ಸರಿಪಡಿಸಿಕೊಳ್ಳುತ್ತಲೇ ಇದ್ದರು. ನಟ ವಿಜಯ ದೇವರಕೊಂಡ ನಟಿಯ ಪೇಚಾಟ ಗಮನಿಸುತ್ತಲೇ ಬಂದರು. ಕೂಡಲೇ ವಿಜಯ್ ಅವರು, ನಟಿಯ ಕಾಲನ್ನು ಅತ್ತ ಕಡೆಯಿಂದ ಇತ್ತ ಕಡೆ ತಿರುಗಿಸಿ ನಟಿಯ ಅಂಗ ಪ್ರದರ್ಶನ ಆಗದಂತೆ ತಕ್ಕಮಟ್ಟಿನ ಮುಜುಗರವನ್ನು ತಪ್ಪಿಸಿದರು. ಈ ಮೂಲಕ ನಟಿ ಸಕತ್ ಟ್ರೋಲ್ ಆಗುತ್ತಿದ್ದರೆ, ವಿಜಯ ದೇವರಕೊಂಡ ಅವರಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿತ್ತು.
ಫೋನ್‌ನಲ್ಲಿ ವಿಜಯ್ ದೇವರಕೊಂಡ ಮಾತು ಕೇಳ್ತಿದ್ದಂಗೇ ರಶ್ಮಿಕಾ ಹೊಟ್ಟೆಯಲ್ಲಿ ಹರಿದಾಡ್ತು ಚಿಟ್ಟೆ! ವಿಡಿಯೋ ವೈರಲ್
ಅತ್ತ ಅನನ್ಯಾ ಮತ್ತು ಹಾರ್ದಿಕ್ ಪಾಂಡ್ಯ ಸುದ್ದಿ ಸದ್ದು ಮಾಡ್ತಿದ್ರೆ ಇತ್ತ ದೇವರಕೊಂಡ ಮತ್ತು ಅನನ್ಯಾ ಜೋಡಿಯ ಕಿಸ್ ವಿಡಿಯೋ ಒಂದು ವೈರಲ್ ಆಗಿದೆ. ಅಷ್ಟಕ್ಕೂ ಈ ಜೋಡಿ 'ಲೈಗರ್' ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಬಾಲಿವುಡ್‌ನ ಹಾಟ್ ಕಪಲ್ ಎನಿಸಿಕೊಂಡಿದ್ದಾರೆ ನಟ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ. ಈ ಚಿತ್ರದ ಬಳಿಕ ಇಬ್ಬರ ನಡುವೆ ಕುಚ್ಕುಚ್ ನಡೆಯುತ್ತಿದೆ ಎಂದೇ ಹೇಳಲಾಗುತ್ತಿದೆ. ಅನನ್ಯಾ ಪಾಂಡೆ ಕಡೆಗೆ ವಿಜಯ್ ದೇವರಕೊಂಡ ಮನಸ್ಸು ವಾಲಿದೆ ಎನ್ನಲಾಗುತ್ತಿದೆ. ಮೇಲ್ನೋಟಕ್ಕೆ ಆಪ್ತವಾಗಿ ಕಾಣುವ ಈ ಜೋಡಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ ಅದೇ ಇನ್ನೊಂದೆಡೆ, ದೇವರಕೊಂಡ ಹೆಸರು ರಶ್ಮಿಕಾ ಜೊತೆಯೂ ಹರಿದಾಡುತ್ತಿದೆ. ಇವರಿಬ್ಬರೂ ದೂರ ಇದ್ದಾರೆ ಎಂದು ಹೇಳಲಾಗುತ್ತಿದ್ದರೂ ಮತ್ತೆ ಸದ್ದು ಮಾಡುತ್ತಿದೆ.
ಇದೀಗ ವೈರಲ್ ವಿಡಿಯೋದಲ್ಲಿ ಸಂದರ್ಶನವೊಂದರಲ್ಲಿ ವಿಜಯ ದೇವರಕೊಂಡ, ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ಅನನ್ಯಾ ಹಾಟ್ ಅವತಾರದಲ್ಲಿದ್ದಾರೆ. ವಿಜಯ ದೇವರಕೊಂಡೆ ಈ ಸಂದರ್ಭದಲ್ಲಿ ಕಿಸ್ ಮಾಡುವ ನಿವೇದನೆ ಮಾಡಿಕೊಂಡಿದ್ದಾರೆ. ಕುತೂಹಲದ ಸಂಗತಿ ಎಂದ್ರೆ ಕಿಸ್ ತಾನೇ ಕೊಡು ಎಂದಿದ್ದಾರೆ ಅನನ್ಯಾ. ಕೊನೆಗೆ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ ವಿಜಯ್. ಇದರ ವಿಡಿಯೋ ವೈರಲ್ ಆಗುತ್ತಲೇ ಇಬ್ಬರನ್ನೂ ಹೇಗೆ ಬ್ಯಾಲೆನ್ಸ್ ಮಾಡ್ತಿಯಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ ವಿಜಯ್ ಫ್ಯಾನ್ಸ್. ಅದೇ ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ನೋಡಿದ್ರೆ ನಿನ್ ಕಥೆ ಅಷ್ಟೇ ಎಂದು ಮತ್ತೆ ಕೆಲವರು ತಮಾಷೆ ಮಾಡುತ್ತಿದ್ದಾರೆ!
ಎಲ್ಲಾ ಕಾಣುವ ಬಟ್ಟೆ ತೊಟ್ಟು ಅನನ್ಯಾ ಪೇಚಾಟ: ಮಾನ ಮುಚ್ಚಲು ವಿಜಯ್ ದೇವರಕೊಂಡ ಮಾಡಿದ್ದೇನು? ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.