ತಮನ್ನಾ ಭಾಟಿಯಾ ಐಟಂ ಸಾಂಗ್ ನಶಾ ಎಲ್ಲರ ಕಿಕ್ ಹೆಚ್ಚಿಸುತ್ತಿದೆ. ಆದರೆ ಈ ಡ್ಯಾನ್ಸ್ ಶೂಟಿಂಗ್ ವೇಳೆ ತಮನ್ನಾ ಸ್ಟೆಪ್ಸ್ ಮರೆತು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಮಿಲ್ಕಿ ಬ್ಯೂಟಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಮುಂಬೈ(ಏ.13) ತಮನ್ನಾ ಭಾಟಿಯಾ ಇದೀಗ ಮತ್ತೊಂದು ಐಟಂ ನಂಬರ್ ಮೂಲಕ ಆಗಮಿಸಿದ್ದಾರೆ. ನಶಾ ಹಾಡಿನ ಡ್ಯಾನ್ಸ್ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ರೇಡ್ 2 ಸಿನಿಮಾದ ಈ ಹಾಡು ನು ಕಾವಾಲಯ್ಯ, ಆಜ್ ಕಿ ರಾತ್ ಹಾಡನ್ನು ಮೀರಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಬೋಲ್ಡ್ ಅವತಾರ, ಅಷ್ಟೇ ಬೋಲ್ಡ್ ಸ್ಟೆಪ್ಸ್ ಈ ಹಾಡಿನ ಆಕರ್ಷಣೆ ಹೆಚ್ಚಿಸಿದೆ. ಹಾಡಿನ ಕೆಲ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಈ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಈ ಹಾಡಿನ ಶೂಟಿಂಗ್ ದೃಶ್ಯವೊಂದು ವೈರಲ್ ಆಗಿದೆ. ತಮನ್ನಾ ಭಾಟಿಯಾ ಸ್ಪೆಟ್ಸ್ ಮರೆತು ಪೇಚಿಗೆ ಸಿಲುಕಿದ್ದಾರೆ. ಕೆಲ ಸ್ಟೆಪ್‌ಗಳನ್ನು ಹಲವು ಬಾರಿ ರಿಪೀಟ್ ಮಾಡಬೇಕಾದ ಪರಿಸ್ಥಿತಿಗೆ ಸಿಲುಕಿದ ಘಟನೆ ನಡೆದಿದೆ.
ಅಜಯ್ ದೇವಗನ್, ರಿತೇಶ್ ದೇಶ್‌ಮುಖ್, ವಾನಿ ಕಪೂರ್ ಮುಖ್ಯಪಾತ್ರಿದಲ್ಲಿ ಕಾಣಿಸಿಕೊಂಡಿರುವ ರೇಡ್ 2 ಸಿನಿಮಾ ಮೇ 1ಕ್ಕೆ ಬಿಡುಗಡೆಾಗುತ್ತಿದೆ. ಈ ಸಿನಿಮಾದ ಅಂತಿಮ ಹಂತದ ಐಟಂ ಹಾಡಿನ ಶೂಟಿಂಗ್ ವೇಳೆ ನಡೆದ ಕೆಲ ಸ್ವಾರಸ್ಯಕರ ಘಟನೆಗಳ ವಿಡಯೋ ಇದೀಗ ಹೊರಬಿದ್ದಿದೆ. ಈ ವಿಡಿಯೋದಲ್ಲಿ ತಮನ್ನಾ ಭಾಟಿಯಾ ಹಾಡಿನ ಚಿತ್ರೀಕರಣಕ್ಕಾಗಿ ಶೂಟಿಂಗ್ ಸೆಟ್‌ಗೆ ಆಗಮಿಸುವ ದೃಶ್ಯವಿದೆ. ಇಲ್ಲಿಂದ ವಿಡಿಯೋ ಆರಂಭಗೊಳ್ಳುತ್ತಿದ್ದು, ಶೂಟಿಂಗ್ ಸೆಟ್‌ನಲ್ಲಿ ನಡೆದ ಘಟನೆಗಳನ್ನು ಸೆರೆ ಹಿಡಿಯಲಾಗಿದೆ.
ನು ಕಾವಾಲಯ್ಯ, ಆಜ್ ಕಿ ರಾತ್ ಮೀರಿಸುವ ನಟಿ ತಮ್ಮನ್ನ ಸೊಂಟ ಬಳುಕಿಸುವ ಹಾಡಿನ ದೃಶ್ಯ ಲೀಕ್
ಸ್ಟೆಪ್ಸ್ ಮರೆತೆ ತಮನ್ನಾ
ನಶಾ ಹಾಡಿನ ಶೂಟಿಂಗ್ ವೇಳೆ ಭಾರಿ ಪ್ರಾಕ್ಟೀಸ್ ಮಾಡಿದ ತಮನ್ನಾ ಭಾಟಿಯಾ, ಕ್ಯಾಮೆರಾ-ಲೈಟ್ಸ್- ಆ್ಯಕ್ಷನ್ ಎಂದ ತಕ್ಷಣ ಡ್ಯಾನ್ಸ್ ಆರಂಭಿಸಿದ್ದಾರ. ಆದರೆ ತಮನ್ನಾ ಕೆಲ ಸ್ಟೆಪ್ಸ್ ಮರೆತಿದ್ದಾರೆ. ಇತರ ಡ್ಯಾನ್ಸ್ ಪಟುಗಳು ಸಲೀಸಾಗಿ ಸ್ಟೆಪ್ಸ್ ಹಾಕಿದರೆ, ತಮನ್ನಾ ಮಾತ್ರ ಮರೆತಿದ್ದಾರೆ. ಒಂದು ಸ್ಟೆಪ್ಸ್ ಶೂಟ್ ಮಾಡಲು ಹಲವು ಬಾರಿ ತಮನ್ನ ಸೊಂಟ ಬಳುಕಿಸಬೇಕಾಯಿತು. ಒಮ್ಮೊಮ್ಮೆ ಹಿಡಿಶಾಪ ಹಾಕಿ ಸ್ಟೆಪ್ಸ್ ಹಾಕಿದ ದೃಶ್ಯಗಳು ಸೆರೆಯಾಗಿದೆ.
ಬೆಳಗ್ಗೆ 9.23ಕ್ಕೆ ಹಾಜರ್, ಪ್ಯಾಕ್ ಅಪ್ ಮಧ್ಯರಾತ್ರಿ 12 ಗಂಟೆ
ತಮನ್ನಾ ಭಾಟಿಯಾ ಹಾಡಿನ ಶೂಟಿಂಗ್‌ಗೆ ಬೆಳಗ್ಗೆ 9.23ಕ್ಕೆ ಶೂಟಿಂಗ್ ಸೆಟ್‌ಗೆ ಹಾಜರಾಗಿದ್ದಾರೆ. ಆದರೆ ಹಾಡಿನ ದೃಶ್ಯ ಶೂಟಿಂಗ್ ಮುಗಿಸಿ ಪ್ಯಾಕ್ ಮಾಡುವ ವೇಳೆಗೆ ಮಧ್ಯರಾತ್ರಿ 12ಗಂಟೆ ಕಳೆದಿದೆ. ಹಾಡಿನ ಶೂಟಿಂಗ್ ಆರಂಭವಾಗುತ್ತಿದ್ದಂತೆ ತಮನ್ನಾ ಸ್ಟೆಪ್ಸ್ ಮರೆತು ಕೆಲ ಹೊತ್ತು ಪ್ರಾಕ್ಟೀಸ್ ಮಾಡಬೇಕಾಯಿತು.ಪದೇ ಪದೇ ಮರೆತ ಕಾರಣ ಶೂಟಿಂಗ್ ಮತ್ತಷ್ಟು ವಿಳಂಬಗೊಂಡಿತ್ತು.
ಗಂಟೆ ಮಧ್ಯಾಹ್ನ 1 ಕಳೆದರೂ ತಮನ್ನಾ ಹಾಡಿನ ಶೂಟಿಂಗ್ ಮಾತ್ರ ಮುಗಿದಿರಲಿಲ್ಲ. ಈ ಹೊತ್ತಿಗೆ ಶೂಟಿಂಗ್ ಸ್ಪಾಟ್‌ನಲ್ಲಿದ್ದ ಬೆಕ್ಕು, ಬಸವಳಿದೂ ಸ್ಟೇಜ್‌ನಿಂದ ಇಳಿದು ದೂರ ಸಾಗಿತ್ತು. ಊಟದ ಬಳಿಕವೂ ತಮನ್ನಾ ಡ್ಯಾನ್ಸ್ ಚಿತ್ರೀಕರಣ ಮುಂದುವರಿದಿತ್ತು. ಬಳಿಕ ಕಾಫಿ ಬ್ರೇಕ್, ಮತ್ತೆ ಪ್ರಾಕ್ಟೀಸ್, ಶೂಟಿಂಗ್ ಹೀಗೆ ಸಾಗಿತ್ತು. ಇದರ ನಡುವೆ ಕೆಲವು ಸ್ಟೆಪ್ಸ್‌ಗಳನ್ನು ಕೊರಿಯೋಗ್ರಾಫರ್ ಒಕೆ ಎಂದರೂ ತಮನ್ನಾ ಎರೆಡೆರಡು ಬಾರಿ ಮಾಡಿದ್ದಾರೆ.
ಮ್ಯಾಗಿ ತಿನ್ನಿಸಿದ ಚಿತ್ರ ತಂಡ
ಶೂಟಿಂಗ್ ಮಾಡುತ್ತಾ ರಾತ್ರಿಯಾಗಿದೆ. ಹಸಿವಿನಿಂದ ಬಳಲಿದ ತಮನ್ನಾಗೆ ಚಿತ್ರತಂಡ ಮ್ಯಾಗಿ ನೀಡಿದೆ. ಈ ಕುರಿತ ತಮನ್ನಾ ಹೇಳಿಕೊಂಡಿದ್ದಾರೆ. ರಾತ್ರಿ 8.30ರ ಸುಮಾರಿಗೆ ತಮನ್ನಾ ಶೂಟಿಂಗ್ ಸೆಟ್‌ನಲ್ಲೇ ನಿದ್ದೆಗೆ ಜಾರಿದ್ದಾರೆ. ಆದರೆ 10 ಗಂಟೆ ಹೊತ್ತಿಗೆ ಮತ್ತೆ ಎದ್ದ ತಮನ್ನಾ ಡ್ಯಾನ್ಸ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. 11 ಗಂಟೆ ಹೊತ್ತಿಗೆ ಡ್ಯಾನ್ಸ್ ಶೂಟಿಂಗ್ ಮುಕ್ತಾಯಗೊಂಡಿದೆ. ಮಧ್ಯರಾತ್ರಿ 12.15ರ ಹೊತ್ತಿಗೆ ಪ್ಯಾಕ್ಅಪ್ ಮಾಡಲಾಗಿದೆ.
ಈ ಹಾಡಿನ ಶೂಟಿಂಗ್ ಸೇರಿದಂತೆ ಶೂಟಿಂಗ್ ಸೆಟ್‌ನಲ್ಲಿ ನಡೆದ ಘಟನೆ ಕುರಿತ ವಿಡಿಯೋವನ್ನು ತಮನ್ನಾ ಹಂಚಿಕೊಂಡಿದ್ದಾರೆ. ಹಲವರು ತಮನ್ನಾ ಪರಿಶ್ರಮ, ಶ್ರದ್ಧೆ, ರಾತ್ರಿಯಾದರೂ ಯವುದೇ ಆಯಾಸ, ಬೇಸರ ವ್ಯಕ್ತಪಡಿಸಿದ ಶೂಟಿಂಗ್‌ನಲ್ಲಿ ಪಾಲ್ಗೊಂಡ ರೀತಿಯನ್ನು ಶ್ಲಾಘಿಸಿದ್ದಾರೆ. ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಶೂಟಿಂಗ್ ಮಾಡಿದ ತಮನ್ನಾ ಹಾರ್ಡ್‌ವರ್ಕಿಂಗ್ ಗರ್ಲ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ತಮನ್ನಾ ವಿಜಯಶಾಲಿಯಾಗಲಿ ಎಂದು ಮಾರ್ಮಿಕವಾಗಿಯೂ ಕಮೆಂಟ್ ಮಾಡಿದ್ದಾರೆ.
ಬ್ರೇಕ್‌ಅಪ್ ಕೋಲಾಹಲ ಬಳಿಕ ಹೊಸ ಅವತಾರದಲ್ಲಿ ಕಾಣಿಸಿಕೊಂಡ ತಮನ್ನಾ