ಮೂರನೆಯ ವ್ಯಕ್ತಿ ಬಾಲಿವುಡ್‌ನ ಖ್ಯಾತ ನಿರ್ಮಾಪಕರಾದ ಬೋನಿ ಕಪೂರ್. ಅವರು ಶ್ರೀದೇವಿಯನ್ನು ಲವ್ ಮಾಡಿ ಮದುವೆ ಆಗುವ ಕಾರಣಕ್ಕಾಗಿಯೇ ಮಿಸ್ಟರ್ ಇಂಡಿಯಾ ಸಿನಿಮಾಗೆ ಶ್ರೀದೇವಿ ಅವರನ್ನು ಆಯ್ಕೆ ಮಾಡಿ ಸಿನಿಮಾ ನಿರ್ಮಾಣ..
ಈ ಮೂರು ಪುರುಷರು ನಟಿ ಶ್ರೀದೇವಿಯನ್ನು (Sridevi)ಬಯಸಿದ್ದರು. ಮೊದಲನೆಯದಾಗಿ ನಟಿ ಶ್ರೀದೇವಿ ಅವರು ಬಾಲಿವುಡ್‌ಗೆ ಬರೋದಕ್ಕಿಂತ ಮೊದಲು ನಟ ಜಿತೇಂದ್ರ ಅವರ ಅಭಿಮಾನಿ ಆಗಿದ್ದರು. ಆದರೆ, ಬಾಲಿವುಡ್‌ಗೆ ಬಂದು ಶ್ರೀದೇವಿ ಸೂಪರ್ ಸ್ಟಾರ್ ಆಗುತ್ತಿದ್ದಂತೆ, ಜೀತೇಂದ್ರ ಅವರು ನಟಿ ಶ್ರೀದೇವಿ ಅಭಿಮಾನಿ ಆಗಿ ಅವರ ಹಿಂದೆ ಸುತ್ತಾಡತೊಡಗಿದ. ಈ ವಿಷಯ ಅವರ ಮನೆಗೆ ಗೊತ್ತಾದಾಗ ಈ ಸಂಬಂಧಕ್ಕೆ ಎಳ್ಳುನೀರು ಬಿಡಬೇಕಾಯ್ತು.
ಇನ್ನು ಮಿಥುನ್ ಚಕ್ರವರ್ತಿ ಅವರು ಬಾಲಿವುಡ್‌ನಲ್ಲಿ ಆ ಕಾಲದಲ್ಲಿ ಸಾಕಷ್ಟು ಮಿಂಚುತ್ತಿದ್ದ ನಟ. ಡಾನ್ಸ್ ಹಾಗೂ ಅಭಿನಯ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದ ನಟ ಮಿಥುನ್ ಚಕ್ರವರ್ತಿ ಅವರು ನಟಿ ಶ್ರೀದೇವಿಯ ಸೌಂದರ್ಯಕ್ಕೆ ಮನಸೋತಿದ್ದರು. ನಟಿ ಶ್ರೀದೇವಿ ಅವರನ್ನು ಮದುವೆ ಆಗಲು ನಟ ಮಿಥುನ್ ಚಕ್ರವರ್ತಿ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ನಟಿ ಶ್ರೀದೇವಿ ಕೂಡ ಮಿಥುನ್ ಚಕ್ರವರ್ತಿ ಅವರಿಗೆ ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದರು ಎನ್ನಲಾಗಿದೆ.
ದಿವ್ಯಾ ಭಾರತಿಯಂತೆ ಆಡಿದ್ದೇಕೆ ಶ್ರೀದೇವಿ..? ಗಾಯತ್ರಿ ಮಂತ್ರ ಪಠಿಸಿದ ಬಳಿಕ ಏನಾಯ್ತು?
ಕೆಲವು ಸುದ್ದಿಮೂಲಗಳ ಪ್ರಕಾರ, ನಟಿ ಶ್ರೀದೇವಿ ಹಾಗೂ ನಟ ಮಿಥುನ್ ಚಕ್ರವರ್ತಿ ಇಬ್ಬರೂ ಖಾಸಗಿಯಾಗಿ ಮದುವೆಯನ್ನು ಕೂಡ ಮಾಡಿಕೊಂಡಿದ್ದರು. ಆದರೆ ಆ ಮದುವೆ ಬಾಳಲಿಲ್ಲ ಅಷ್ಟೇ. ಶ್ರೀದೇವಿ ಅವರನ್ನು ಮದುವೆಯಾದರೂ ಕೂಡ ನಟ ಮಿಥುನ್ ಚಕ್ರವರ್ತಿ ಬಾಳಲ್ಲಿ ಬೆಳಕು ಮೂಡಲೇ ಇಲ್ಲ. ಅವರಿಬ್ಬರ ನಡುವೆ ಸಾಮರಸ್ಯ ಮೂಡಲಿಲ್ಲ, ರಸಕ್ಕಿಂತ ವಿರಸವೇ ಹೆಚ್ಚಾಗಿ ಅವರಿಬ್ಬರೂ ಒಟ್ಟಿಗೇ ಬಾಳಲೇ ಇಲ್ಲ. 14
ಇನ್ನು ಮೂರನೆಯ ವ್ಯಕ್ತಿ ಬಾಲಿವುಡ್‌ನ ಖ್ಯಾತ ನಿರ್ಮಾಪಕರಾದ ಬೋನಿ ಕಪೂರ್. ಅವರು ಶ್ರೀದೇವಿಯನ್ನು ಲವ್ ಮಾಡಿ ಮದುವೆ ಆಗುವ ಕಾರಣಕ್ಕಾಗಿಯೇ ಮಿಸ್ಟರ್ ಇಂಡಿಯಾ ಸಿನಿಮಾಗೆ ಶ್ರೀದೇವಿ ಅವರನ್ನು ಆಯ್ಕೆ ಮಾಡಿ ಸಿನಿಮಾ ನಿರ್ಮಾಣ ಮಾಡಿದ್ದರು. ಕೊನೆಗೆ, ನಟಿ ಶ್ರೀದೇವಿಯನ್ನು ಮದುವೆ ಮಾಡಿಕೊಳ್ಳುವಲ್ಲಿ ಬೋನಿ ಕಪೂರ್ ಅವರು ಯಶಸ್ಸನ್ನೂ ಪಡೆದರು. ಪತ್ನಿಗೆ ಡಿವೋರ್ಸ್ ಕೊಟ್ಟು ನಟಿ ಶ್ರಈದೇವಿ ಅವರನ್ನು ಮದುವೆ ಮಾಡಿಕೊಂಡರು ಬೋನಿ ಕಪೂರ್. ಈ ಜೋಡಿಗೆ ಜಾಹ್ನವಿ ಕಪೂರ್ ಹಾಗು ಖುಷಿ ಕಪೂರ್ ಎಂಬ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಸುದೀಪ್ ಈ ಮಾತು ಹೇಳಿದ್ದು ಯಾರಿಗೆ ? ನಿಮ್ಗೆ ಯಾರ ಹೆಸ್ರು ನೆನಪಾಗುತ್ತೆ?
ಒಟ್ಟಿನಲ್ಲಿ, ನಟಿ ಶ್ರೀದೇವಿಯನ್ನು ಸಂಗಾತಿಯನ್ನಾಗಿ ಪಡೆಯಲು ಹಾತೊರದವರು ಒಬ್ಬರಲ್ಲ, ಇಬ್ಬರಲ್ಲ, ಸಾಕಷ್ಟು ಮಂದಿ ಇದ್ದಾರೆ. ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಸೇರಿದಂತೆ ಹಲವರು ಶ್ರೀದೇವಿಯನ್ನು ಪ್ರೀತಿಸಿ ಮದುವೆಯಾಗಲು ಗಾಳ ಹಾಕಿದ್ದಾರೆ. ಆದರೆ, ಕೊನೆಗೆ ಅವರು ಬಾಳ ಸಂಗಾತಿಯಾಗಿ ಸಿಕ್ಕಿದ್ದು ಮಾತ್ರ ಬೋನಿ ಕಪೂರ್ ಅವರಿಗೆ. ನಟಿ ಶ್ರೀದೇವಿ ಸಾಯುವವರೆಗೂ ಬೋನಿ ಕಪೂರ್ ಜೊತೆ ಸಂಸಾರ ಮಾಡಿದ್ದಾರೆ. ಅಮೋಘ ಅಭಿನಯ ಹಾಗೂ ತಮ್ಮ ಅಪರಿಮಿತ ಸೌಂದರ್ಯದಿಂದ ಇಡೀ ಜಗತ್ತು ಮರೆಯಲು ಅಸಾಧ್ಯ ಎನ್ನುವಂತೆ ಬದುಕಿ ಹೋಗಿದ್ದಾರೆ ನಟಿ ಶ್ರೀದೇವಿ!