Aishwarya Rai Car Accident: ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯಾ ರೈ ಕಾರು ಅಪಘಾತದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಬಸ್ ಅವರ ಕಾರಿಗೆ ಡಿಕ್ಕಿ ಹೊಡೆಯುವುದು ಕಾಣಿಸುತ್ತದೆ.
ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರು ಅಪಘಾತಕ್ಕೀಡಾಗಿದೆ. ಇದನ್ನು ನಾವು ಹೇಳುತ್ತಿಲ್ಲ, ಬದಲಿಗೆ ಪಾಪರಾಜಿ ಪುಟವೊಂದು ವಿಡಿಯೋ ಹಂಚಿಕೊಂಡು ಈ ಬಗ್ಗೆ ಹೇಳಿಕೊಂಡಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ವೈರಲ್ ವಿಡಿಯೋ ನೋಡಿದ ಜನರು ಈ ಅಪಘಾತವನ್ನು ಗೇಲಿ ಮಾಡುತ್ತಿದ್ದಾರೆ. ವಾಸ್ತವವಾಗಿ, ವಿರೇಂದ್ರ ಚಾವ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಐಶ್ವರ್ಯಾ ರೈ ಅವರ ಐಷಾರಾಮಿ ಕಾರು ಕಾಣಿಸಿಕೊಂಡಿದೆ ಮತ್ತು ಅದರ ಹಿಂದೆ ಬಸ್ ಕಾಣುತ್ತಿದೆ. ವೀಡಿಯೊದ ಶೀರ್ಷಿಕೆಯಲ್ಲಿ, ಅವರು "ನಿರೀಕ್ಷಿತವಲ್ಲದ ಅಪಘಾತ. ಬಸ್ಸೊಂದು ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ" ಎಂದು ಬರೆದಿದ್ದಾರೆ.
ಇನ್ನು ಅಪಘಾತಕ್ಕೊಳಗಾದ ಕಾರ್ ನಲ್ಲಿ ಐಶ್ವರ್ಯಾ ರೈ ಇದ್ರಾ ಅಥವಾ ಇಲ್ಲವಾ ಎಂಬುದರ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಕೆಲ ವರದಿಗಳ ಪ್ರಕಾರ, ಚಾಲಕ ಮಾತ್ರ ಕಾರ್‌ನಲ್ಲಿದ್ದ ಎಂದು ಹೇಳಲಾಗುತ್ತಿದೆ.
ಐಶ್ವರ್ಯಾ ರೈ ಕಾರು ಅಪಘಾತದ ವಿಡಿಯೋ ವೈರಲ್
ವೀಡಿಯೊದಲ್ಲಿ, ಪೊಲೀಸರು ಸ್ಥಳಕ್ಕೆ ಬಂದು ಬಸ್ಸನ್ನು ತಡೆದಿದ್ದಾರೆ ಮತ್ತು ಐಶ್ವರ್ಯಾ ಅವರ ಕಾರನ್ನು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ. ಸ್ಥಳದಲ್ಲಿ ಜನರ ಗುಂಪನ್ನು ಸಹ ಕಾಣಬಹುದು. ಈ ವಿಡಿಯೊದಲ್ಲಿ, ಅಪಘಾತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂಟರ್ನೆಟ್ ಬಳಕೆದಾರರು ವಿಡಿಯೊವನ್ನು ನೋಡಿ ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಶ್ರೀದೇವಿಯ ನೆಕ್ಲೇಸ್ ಆಕೆ ಸತ್ತ ಕೆಲವೇ ದಿನಗಳಲ್ಲಿ ಐಶ್ವರ್ಯ ಕೊರಳಿಗೆ ಹೇಗೆ ಬಂತು?
ಐಶ್ವರ್ಯಾ ರೈ ಕಾರು ಅಪಘಾತದ ಬಗ್ಗೆ ಬಂದ ಕಾಮೆಂಟ್
ಅಪಘಾತದ ವಿಡಿಯೋ ನೋಡಿದ ನಂತರ ಓರ್ವ ಇಂಟರ್ನೆಟ್ ಬಳಕೆದಾರ ಕಾಮೆಂಟ್ ಬಾಕ್ಸ್ ನಲ್ಲಿ, "ಬಸ್ ಚಾಲಕನಿಗೆ ಏನೂ ಆಗಿಲ್ಲ ತಾನೆ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, "ಈ ಮಧ್ಯೆ ಜಯಾ- ಹೊಡೆಯಲು ಇದೇನಾ ಜಾಗ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ, "ಬಸ್ ಡ್ಯಾಮೇಜ್ ಆಗಿದೆ, ಕಾರಿಗೆ ಏನೂ ಆಗಿಲ್ಲ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, "ಕಾರಿಗೆ ಒಂದು ಗೀರು ಕೂಡ ಆಗಿಲ್ಲ, ಇದರಲ್ಲಿ ಇಷ್ಟೊಂದು ಗಲಾಟೆ ಮಾಡ್ತಿದ್ದಾರೆ, ಪ್ರತಿದಿನ ಎಷ್ಟು ಡಿಕ್ಕಿ ಹೊಡೆಯುತ್ತವೆ, ಅವುಗಳನ್ನು ನಿಭಾಯಿಸಿ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, "ಇದು ಜಯಾ ಬಚ್ಚನ್ ಅವರ ಕಾರಾಗಿದ್ದರೆ ಹೇಳುತ್ತಿದ್ದರು" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, "ಬಸ್ಸಿನಲ್ಲಿ ಎಲ್ಲರೂ ಚೆನ್ನಾಗಿದ್ದಾರಾ" ಎಂದು ಬರೆದಿದ್ದಾರೆ.
ಐಶ್ವರ್ಯಾ ರೈ ಕೊನೆಯ ಬಾರಿಗೆ 2023 ರಲ್ಲಿ ತಮಿಳಿನ 'ಪೊನ್ನಿಯಿನ್ ಸೆಲ್ವನ್ 2' ಚಿತ್ರದಲ್ಲಿ ಕಾಣಿಸಿಕೊಂಡರು. ಅಂದಿನಿಂದ ಅವರು ಬೇರೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಕೆಲವು ಸಮಯದ ಹಿಂದೆ ಐಶ್ವರ್ಯಾ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಪುತ್ರ ಕೋನಾರ್ಕ್ ಗೋವಾರಿಕರ್ ಅವರ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಅವರೊಂದಿಗೆ ಪತಿ ಅಭಿಷೇಕ್ ಬಚ್ಚನ್ ಕೂಡ ಇದ್ದರು. ಇಬ್ಬರೂ ಒಟ್ಟಿಗೆ ಇರುವುದನ್ನು ನೋಡಿದ ಜನರು ಅವರ ವಿಚ್ಛೇದನದ ಬಗ್ಗೆ ಬರುತ್ತಿರುವ ಸುದ್ದಿ ಕೇವಲ ವದಂತಿ ಎಂದು ನಿರಾಳರಾಗಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ-ಅಭಿಷೇಕ್ ಮದುವೆಗೆ ಕರೆಯಲಿಲ್ಲ ಅಂತ ಮುನಿಸಿಕೊಂಡ ಸ್ಟಾರ್ ಹೀರೋ: ಬಂದ ಸ್ವೀಟ್ಸ್ ವಾಪಸ್ ಕಳಿಸಿದ್ಯಾಕೆ?