ವಿಜಯ್ ಈಗ ರಾಜಕೀಯವಾಗಿ ಹೊಸ ಹೆಜ್ಜೆ ಇಟ್ಟಿರುವುದು ಗೊತ್ತೇ ಇದೆ. ಅವರು ತಮ್ಮ ಸಿನಿಮಾವೃತ್ತಿಯನ್ನು ಪಕ್ಕಕ್ಕಿಟ್ಟು ಈಗ ರಾಜಕೀಯವನ್ನೇ ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ಇತ್ತ ಯಶ್ ಅವರು ಇಡೀ ವಿಶ್ವವನ್ನೇ..
ತಮಿಳು ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರು ಈ ಸಂಕ್ರಾಂತಿಯನ್ನು ತುಂಬಾ 'ವಿಶೇಷ ' ಮಾಡಲಿದ್ದಾರೆ. ಕಾರಣ, ವಿಜಯ್ ನಟನೆಯ ಕಟ್ಟಕಡೆಯ ಸಿನಿಮಾ ಎನ್ನಲಾಗುತ್ತಿರುವ ಜನನಾಯಗನ್ (ಜನನಾಯಕ) ಚಿತ್ರದ ಬಿಡುಗಡೆಯನ್ನು ಈ ಸಂಕ್ರಾಂತಿಗೆ ಮಾಡಲು ನಿರ್ಧರಿಸಲಾಗಿದೆ. (JANANAYAGAN) ಇದು ಅತಿಂಥ ಸಿನಿಮಾವಲ್ಲ. ಭಾರೀ ಬಜೆಟ್ ಹಾಗೂ ಅದ್ದೂರಿ ಮೇಕಿಂಗ್ ಇರುವ ಜನನಾಯಗನ್ ಸಿನಿಮಾವನ್ನು ಕೆವಿಎನ್ (KVN) ಸಂಸ್ಥೆಯಡಿ ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ (Venkat K Narayan) ಅವರು ನಿರ್ಮಿಸುತ್ತಿದ್ದಾರೆ.
ದಳಪತಿ ವಿಜಯ್ ನಟನೆಯ 'ಜನನಾಯಗನ್ (ಜನನಾಯಕನ್) ಚಿತ್ರವನ್ನು ಹೆಚ್ ವಿನೋದ್ ಅವರು ನಿರ್ದೇಶಿಸುತ್ತಿದ್ದಾರೆ. ಕೆವಿಎನ್ ನಿರ್ಮಾಣ ಸಂಸ್ಥೆಯ 'ವೆಂಕಟ್ ಕೆ ನಾರಾಯಣ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಮನೆಮಾಡಿದೆ. ಕಾರಣ, ಈ ಚಿತ್ರವು ತಮಿಳು ಸ್ಟಾರ್ ನಟ ದಳಪತಿ ವಿಜಯ್ ಅವರ ಕಟ್ಟೆಕಡೆಯ ಚಿತ್ರವೆಂದೇ ಹೇಳಲಾಗಿದೆ. ಹೀಗಾಗಿ ಜನನಾಯಗನ್ ಚಿತ್ರದ ಕಥೆ-ಚಿತ್ರಕಥೆ ಹಾಗು ಸಂಬಾಷಣೆ ಎಲ್ಲವೂ ವಿಶೇಷ ಎನ್ನುವಂತಿದೆ ಎಂಬ ಮಾತು ಕೇಳಿಬರುತ್ತಿದೆ.
ದಳಪತಿ ವಿಜಯ್ ಅಬ್ಬರಕ್ಕೆ ವೇದಿಕೆ ಸಜ್ಜು; ಪೊಂಗಲ್‌ಗೆ KVN 'ಜನನಾಯಗನ್' ಹಾಜರಿ ಪಕ್ಕಾ..!
ವಿಜಯ್ ಈಗ ರಾಜಕೀಯವಾಗಿ ಹೊಸ ಹೆಜ್ಜೆ ಇಟ್ಟಿರುವುದು ಗೊತ್ತೇ ಇದೆ. ಅವರು ತಮ್ಮ ಸಿನಿಮಾವೃತ್ತಿಯನ್ನು ಪಕ್ಕಕ್ಕಿಟ್ಟು ಈಗ ರಾಜಕೀಯವನ್ನೇ ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ಕೊನೆಯ ಚಿತ್ರವನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಲಿರುವ ಆಶಯದಿಂದ ಈ ಚಿತ್ರಕ್ಕೆ ಜನನಾಯಗನ್ (ಜನನಾಯಕ) ಎಂದೇ ಹೆಸರಿಡಲಾಗಿದೆ. ಹೀಗಾಗಿ ವಿಜಯ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾನಟರ ಅಭಿಮಾನಿಗಳಲ್ಲಿ ಈ ಬಯಕೆ ಸಹಜ ತಾನೇ?
ಎಲ್ಲವನ್ನು ಅಳೆದೂ ತೂಗಿ ಜನನಾಯಗನ್ ಚಿತ್ರವನ್ನು ಮುಂದಿನ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಕಾರಣ, ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪೋಂಗಲ್ ಹಬ್ಬವನ್ನು ಅದ್ದೂರಿಯಾಗಿ, ಭಕ್ತಿಯಿಂದ ಆಚರಿಸಲಾಗುತ್ತದೆ. ಬರೋಬ್ಬರು ಮೂರು ದಿನಗಳ ಕಾಲ ಅತ್ಯಂತ ವಿಶೇಷವಾಗಿ ಈ ಪೋಂಗಲ್ ಹಬ್ಬವನ್ನು ತಮಿಳಿಗರು ಆಚರಿಸುತ್ತಾರೆ. ಈ ಕಾರಣಕ್ಕೆ ಅಂದೇ ಜನನಾಯಗನ್ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ನಿವೇದಿತಾ ಗೌಡ ರೀಲ್ಸ್ ಮಾಡ್ತಾರೆ, ಆದರೆ ಕಾಮೆಂಟ್ಸ್ ನೋಡಲ್ವಂತೆ? ಅಲ್ಲೇ ಇರೋದು ಮ್ಯಾಟರ್..
ಅಂದಹಾಗೆ, ಈ ಜನನಾಯಗನ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೋಡಿದ್ದು ಈ ಚಿತ್ರದ ಹಾಡಗಳು ಹಬ್ಬ ಎನ್ನಿಸುವಂತಿದೆ ಎಂಬ ಮಾತಿದೆ. ಈ ಪೋಂಗಲ್ ಹಬ್ಬ ಕೂಡ ಐತಿಹಾಸಿಕ ಮನ್ನಣೆ ಪಡೆದಿದೆ. ಜೊತೆಗೆ, ರಾಜನಂತೆ ಮೆರೆದ, ಮುಂದೆ ರಾಜ್ಯದ ರಾಜಕೀಯದಲ್ಲಿ 'ಕಿಂಗ್' ಆಗಲು ಹೊರಟಿರುವ ದಳಪತಿ ವಿಜಯ್ ಅವರಿಗೆ ಈ ಚಿತ್ರದ ಮೂಲಕ ದೊಡ್ಡದೊಂದು ಬ್ರೇಕ್ ದೊರೆಯಲಿದೆ ಎಂದೇ ನಂಬಲಾಗಿದೆ. ಒಟ್ಟಿನಲ್ಲಿ, ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rockinf Star Yash) ನಟನೆಯ 'ಟಾಕ್ಸಿಕ್' ಚಿತ್ರಕ್ಕಿಂತ ಮೊದಲು ಅದೇ ನಿರ್ಮಾಪಕರ (KVN) 'ಜನನಾಯಗನ್' ಚಿತ್ರ ತೆರೆಗೆ ಅಪ್ಪಳಿಸಲಿದೆ. ಯಶ್‌ಗಿಂತ ಮೊದಲು ವಿಜಯ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ.