ನಟ ಪ್ರಕಾಶ್ ರಾಜ್ ಅವರು ಸಿನಿಮಾಗಳಲ್ಲಿ ಒಂದೇ ಅಲ್ಲದೆ, ಕಾಂಟ್ರವರ್ಸಿ ಹೇಳಿಕೆ ಕೊಟ್ಟು ಸದ್ದು ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಕೆಲಸಗಳನ್ನು ಮಾಡೋದನ್ನು ಮರೆಯೋದಿಲ್ಲ. ಪ್ರಕಾಶ್ ರಾಜ್ ಸಹೋದರ ಪ್ರಸಾದ್ ರಾಜ್ ಕೂಡ ನಟ. ಇವರು ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.
- ಪ್ರಕಾಶ್ ರಾಜ್ ಅವರು ಆರಂಭದಲ್ಲಿ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಬೀದಿನಾಟಕಗಳನ್ನು ಮಾಡುತ್ತಿದ್ದ ಪ್ರಕಾಶ್ ರಾಜ್‌ಇಂದು ಕೋಟ್ಯಾಧೀಶ್ವರ. ಆರಂಭಗಳಲ್ಲಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಪ್ರಕಾಶ್ ರಾಜ್, ಆಮೇಲೆ ಸಿನಿಮಾದತ್ತ ಮುಖ ಮಾಡಿದರು.
- ಕನ್ನಡ, ತಮಿಳು, ಮರಾಠಿ, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಇವರು ವಿಲನ್‌ಆಗಿ ನಟಿಸಿದ್ದಾರೆ. ಇನ್ನು ಐದು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ಸಿನಿಮಾಕ್ಕೆ ನಿರ್ದೇಶನ ಕೂಡ ಮಾಡಿಕೊಂಡಿದ್ದಾಎಡ. ಸಿನಿಮಾಕ್ಕೋಸ್ಕರ ಅವರು ಪ್ರಕಾಶ್‌ರೈಯಿಂದ ಪ್ರಕಾಶ್‌ರಾಜ್‌ಎಂದು ಬದಲಾಯಿಸಿಕೊಂಡಿದ್ದಾರೆ.
- ತೆಲುಗು ಸಿನಿಮಾ ನಿರ್ಮಾಪಕರು ಆರು ಸಲ ಇವರನ್ನು ಬ್ಯಾನ್‌ಮಾಡಿದ್ದರು. ಕೆಟ್ಟ ವರ್ತನೆಯೇ ಕಾರಣ ಎನ್ನಲಾಗಿತ್ತು. "ನಾನು ನನ್ನ ನೀತಿ-ನಿಯಮ ಮೇಲೆ ಕೆಲಸ ಮಾಡುವೆ, ಬದುಕುವೆ" ಎಂದು ಪ್ರಕಾಶ್‌ಹೇಳಿದ್ದರು. ಇನ್ನು ಇದರ ವಿರುದ್ಧ ದೊಡ್ಡ ಹೀರೋಗಳು ತಿರುಗಿಬಿದ್ದಿದ್ದರು.
ಪ್ರಕಾಶ್ ರಾಜ್, ಪ್ರಣೀತಾ, ವಿಜಯ ದೇವರಕೊಂಡ ಸೇರಿದಂತೆ 25 ಸೆಲೆಬ್ರಿಟಿ ಮೇಲೆ ಎಫ್‌ಐಆರ್ ಹಾಕಿದ ಸರ್ಕಾರ!
- ಇಲ್ಲಿಯವರೆಗೂ ಪ್ರಕಾಶ್‌ರಾಜ್‌ಅವರು ಯಾವುದೇ ಮ್ಯಾನೇಜರ್‌ಇಟ್ಟುಕೊಂಡಿಲ್ಲ ಎನ್ನಲಾಗಿದೆ. ಸಂಭಾವನೆಯನ್ನು ಇವರೇ ಫಿಕ್ಸ್‌ಮಾಡ್ತಾರಂತೆ. ಸಿನಿಮಾ ಆಯ್ಕೆಯಿಂದ ಹಿಡಿದು, ಕಥೆ, ಸಂಭಾವನೆ ಬಗ್ಗೆ ನಾನೇ ಡಿಸೈಡ್‌ಮಾಡ್ತೀನಿ ಅಂತ ಪ್ರಕಾಶ್‌ರಾಜ್‌ಹೇಳಿದ್ದರು. ದುಡಿಮೆಯಲ್ಲಿ 20% ಟ್ರಸ್ಟ್‌ಗೆ ನೀಡುತ್ತಾರೆ.
- ಬೆಂಗಳೂರಿನಲ್ಲಿ ಜನಿಸಿದ ಪ್ರಕಾಶ್ ರಾಜ್ ಅವರಿಗೆ ಈಗ 60 ವರ್ಷ ವಯಸ್ಸಾಗಿದೆ. ಪ್ರಕಾಶ್ ರಾಜ್ ಅವರು 36 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಪ್ರಕಾಶ್ ರಾಜ್ ಅವೆಉ ಒಂದು ಸಿನಿಮಾದಲ್ಲಿ ನಟಿಸಲು 2.50 ಕೋಟಿ ರೂಪಾಯಿ ಪಡೆಯುತ್ತಾರೆ. ಡ್ಯುಯೆಟ್ ಮೂವೀಸ್ ಎಂಬ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, ಅಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಜಾಹೀರಾತು, ಕಾರ್ಯಕ್ರಮಗಳು ಸೇರಿ ಬೇರೆ ಮೂಲಗಳಿಂದಲೂ ಆದಾಯವಿದೆ.
ಸಿನಿಮಾಗಿಂತ ಪ್ರೇಕ್ಷಕರೇ ಪ್ಯಾನ್ ಇಂಡಿಯಾ ಆಗಿದ್ದಾರೆ: ಪ್ರಕಾಶ್ ರಾಜ್
- ಪ್ರಕಾಶ್ ರಾಜ್ ಬಳಿ 17 ಲಕ್ಷ ರೂಪಾಯಿಗಿಂತಳೂ ಹೆಚ್ಚು ಬೆಲೆಬಾಳುವ ಟೊಯೊಟಾ ಇನೋವಾ, 45 ಲಕ್ಷ ಬೆಲೆಯ BMW 520D ಕಾರ್ ಇದೆ. ಮರ್ಸಿಡಿಸ್ ಬೆಂಜ್, ISUZU V, ಬೊಲೆರೊ ಮ್ಯಾಕ್ಸಿ ಟ್ರಕ್, ಆಡಿ ಕ್ಯೂ 3 ಕಾರ್ ಇದೆ. ಅಷ್ಟೇ ಅಲ್ಲದೆ ಮುಂಬೈ, ಚೆನ್ನೈನಲ್ಲಿ ಮನೆಗಳಿವೆ. ಇನ್ನು ಫಾರ್ಮ್‌ಹೌಸ್ ಕೂಡ ಇದೆ.
- ನಟಿ ಲಲಿತಾ ಕುಮಾರಿ ಜೊತೆ ಪ್ರಕಾಶ್ ರಾಜ್ ಅವರು 1994ರಲ್ಲಿ ಮದುವೆಯಾಗಿದ್ದರು. ಇವರಿಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ ಇದ್ದನು. ಮಗ ದುರ್ಮರಣ ಹೊಂದಿದ್ದನು. ಅದಾದ ನಂತರ ಪತ್ನಿ ಜೊತೆ ಮನಸ್ತಾಪ ಬಂದು ಇವರಿಬ್ಬರು ದೂರ ಆದರು. 2009ರಲ್ಲಿ ಈ ಜೋಡಿ ಡಿವೋರ್ಸ್ ಪಡೆದಿತು.
- ಡಿವೋರ್ಸ್ ಆದ ಒಂದು ವರ್ಷದ ಬಳಿಕ ಪ್ರಕಾಶ್ ರಾಜ್ ಅವರು ತನಗಿಂತ 12 ವರ್ಷ ಚಿಕ್ಕವರಾದ ಕೊರಿಯೋಗ್ರಾಫರ್ ಪೋನಿ ವರ್ಮ ಅವರನ್ನು ಮದುವೆಯಾದರು. ಈ ಜೋಡಿ ಮದುವೆಯಾಗಿ ಐದು ವರ್ಷಗಳ ಬಳಿಕ ಗಂಡು ಮಗುವನ್ನು ಬರಮಾಡಿಕೊಂಡಿತು. ಮಗನಿಗೆ ವೇದಾಂತ್ ಎಂದು ಹೆಸರಿಟ್ಟಿದ್ದಾರೆ.
- ತೆಲಂಗಾಣದ ಒಂದು ಹಳ್ಳಿಯನ್ನು ದತ್ತು ಪಡೆದಿದ್ದಾರೆ.