ಮತ್ತೊಂದು ದಾಖಲೆ ಬರೆದ ಯಶ್ ಅಭಿನಯದ ರಾಮಾಯಣ ಸಿನಿಮಾ

Published : May 19, 2026, 11:36 AM IST
Ramayana

ಸಾರಾಂಶ

ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಬಗ್ಗೆ ಮತ್ತೊಂದು ಅಪ್ಡೇಟ್ ಬಂದಿದೆ. ರಾಮಾಯಣ ಸಿನಿಮಾ ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿದೆ. ದೊಡ್ಡ ತಂಡದ ಜೊತೆ ಸಿನಿಮಾ ನಿರ್ಮಾಣವಾಗ್ತಿದ್ದು, ವೀಕ್ಷಕರ ಕುತೂಹಲ ಡಬಲ್ ಆಗಿದೆ. 

ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಕನ್ನಡ ಸೂಪರ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಸಿನಿಮಾ ಸದ್ಯ ಸುದ್ದಿಯಲ್ಲಿದೆ. ಈ ಸಿನಿಮಾ ಬಗ್ಗೆ ದಿನಕ್ಕೊಂದು ಅಪ್ಡೇಟ್ ಬರ್ತಾನೇ ಇದೆ. ಈ ವರ್ಷ ಬಾಲಿವುಡ್ ನ ಬಹುನಿರೀಕ್ಷಿತ ಹಾಗೂ ದೊಡ್ಡ ಬಜೆಟ್ ಚಿತ್ರಗಳಲ್ಲಿ ರಾಮಾಯಣ ಒಂದಾಗಿದೆ. ರಾಮಾಯಣ ಸಿನಿಮಾ ವೀಕ್ಷಣೆಗೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದು, ಈಗ ರಾಮಾಯಣ ಸಿನಿಮಾ ಬಗ್ಗೆ ಮತ್ತೊಂದು ಅಚ್ಚರಿ ವಿಷ್ಯ ಹೊರ ಬಿದ್ದಿದೆ.

ರಾಮಾಯಣ ಸಿನಿಮಾಕ್ಕೆ ದೊಡ್ಡ ಟೀಂ

ರಾಮಾಯಣ ಸಿನಿಮಾ ಅಂತಿಂತ ಸಿನಿಮಾ ಅಲ್ಲ. ಇದೊಂದು ದೊಡ್ಡ ಪ್ರಾಜೆಕ್ಟ್. ಈಗ ಈ ಸಿನಿಮಾ ಇತಿಹಾಸ ಸೃಷ್ಟಿಸಿದೆ. ವಿಶಿಷ್ಟ ದಾಖಲೆಯೊಂದನ್ನು ಮಾಡಿದೆ. ಈ ಚಿತ್ರಕ್ಕಾಗಿ, ತಯಾರಕರು ಇದುವರೆಗಿನ ಅತಿದೊಡ್ಡ ತಂಡವನ್ನು ಒಟ್ಟುಗೂಡಿಸಿದ್ದಾರೆ. ಈ ಸಿನಿಮಾಕ್ಕೆ 10,000 ಕ್ಕೂ ಹೆಚ್ಚು ಜನರು ಕೆಲ್ಸ ಮಾಡ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಸಿಬ್ಬಂದಿಯನ್ನು ಹೊಂದಿರುವ ಮೊದಲ ಬಾಲಿವುಡ್ ಚಿತ್ರ ಇದಾಗಲಿದೆ. ಸಿನಿಮಾ ನಿರ್ಮಾಣ ಕೆಲ್ಸ, ವಿನ್ಯಾಸ, ಶೂಟಿಂಗ್, ಆಕ್ಷನ್, ವೇಷಭೂಷಣ, ಸೆಟ್ ಸೇರಿದಂತೆ ಎಲ್ಲ ವಿಭಾಗದಲ್ಲಿ ವೈವಿಧ್ಯಮಯ ಪ್ರತಿಭಾನ್ವಿತ ವ್ಯಕ್ತಿಗಳ ಗುಂಪು ಕೆಲ್ಸ ಮಾಡ್ತಿದೆ. ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ನಿರಂತರ ಕೆಲ್ಸ ನಡೆಯುತ್ತಿದೆ. ಪ್ರಮುಖ ವಿದೇಶಿ ತಂತ್ರಜ್ಞರು ಸಿನಿಮಾದಲ್ಲಿ ಕೆಲ್ಸ ಮಾಡ್ತಿದ್ದಾರೆ.

ನ್ಯಾಚುರಲ್ ಬ್ಯೂಟಿ ಕೀರ್ತಿ ಸುರೇಶ್‌ಗೆ 'ಸರ್ಜರಿ ಬಾಡಿ' ಎಂದು ಟೀಕೆ; ವಿಡಿಯೋ ತೋರಿಸಿ

ಈ ವರ್ಷ ಮೊದಲ ಭಾಗ ಬಿಡುಗಡೆ

ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಸಿನಿಮಾ ಮೂಡಿಬರ್ತಿದೆ. ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೊದಲ ಭಾಗ 2026 ರ ದೀಪಾವಳಿಯಲ್ಲಿ ಮತ್ತು ಎರಡನೇ ಭಾಗ 2027 ರ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ. ರಣಬೀರ್ ಕಪೂರ್ ಜೊತೆ ಸಾಯಿ ಪಲ್ಲವಿ, ಯಶ್, ರವಿ ದುಬೆ, ಸನ್ನಿ ಡಿಯೋಲ್, ಅರುಣ್ ಗೋವಿಲ್ ಸೇರಿದಂತೆ ಅನೇಕ ಅದ್ಭುತ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಮಿಂಚಲಿದ್ದು, ರಾವಣನ ಪಾತ್ರಕ್ಕೆ ಯಶ್ ಜೀವತುಂಬಲಿದ್ದಾರೆ. ಸನ್ನಿ ಪಾಜಿ ಈ ಚಿತ್ರದಲ್ಲಿ ರಾಮ ಭಕ್ತ ಹನುಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಣಬೀರ್ ತಮ್ಮ ಪಾತ್ರದ ಬಗ್ಗೆ ಹೇಳಿದರು

ಇತ್ತೀಚೆಗೆ, ನ್ಯೂಯಾರ್ಕ್ನಲ್ಲಿ 'ರಾಮ್' ಚಿತ್ರದ ಸ್ನೀಕ್ ಪೀಕ್ ಅನ್ನು ತೋರಿಸಲಾಯಿತು, ನಂತರ ರಣಬೀರ್ ಭಗವಾನ್ ರಾಮನಂತಹ ಪಾತ್ರವನ್ನು ನಿರ್ವಹಿಸುವುದು ತನಗೆ ಒಂದು ದೊಡ್ಡ ಸೌಭಾಗ್ಯ ಎಂದು ಹೇಳಿದರು. ಒಬ್ಬ ನಟನಾಗಿ, ಪ್ರಾಮಾಣಿಕತೆಯಿಂದ ತನ್ನ ಪಾತ್ರವನ್ನು ನಿರ್ವಹಿಸುವುದು ಮತ್ತು ಪ್ರೇಕ್ಷಕರಿಗೆ ಅದನ್ನು ಅದ್ಭುತವಾಗಿ ಪ್ರಸ್ತುತಪಡಿಸುವುದು ಅವನ ಜವಾಬ್ದಾರಿಯಾಗಿದೆ.

ನಾನು ಆಡಿಲ್ಲ, ಹೋರಾಡಿದ್ದೀನಿ.. ಪುಷ್ಪ 2, ಧುರಂಧರ್ 2 ದಾಖಲೆ ಮುರಿಯುತ್ತಾ ರಾಮ್ ಚರಣ್ ಪೆದ್ದಿ ಸಿನಿಮಾ?

ಸಿನಿಮಾ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?

ರಾಮಾಯಣ ಸಿನಿಮಾ ಬಗ್ಗೆ ರಣಬೀರ್ ಕಪೂರ್ ಕೆಲ ದಿನಗಳ ಹಿಂದೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಭಗವಂತ ರಾಮನಂತಹ ಪಾತ್ರವನ್ನು ನಿರ್ವಹಿಸುವುದು ತನಗೆ ಸಿಕ್ಕ ದೊಡ್ಡ ಸೌಭಾಗ್ಯ. ಒಬ್ಬ ನಟನಾಗಿ, ಪ್ರಾಮಾಣಿಕತೆಯಿಂದ ತನ್ನ ಪಾತ್ರವನ್ನು ನಿರ್ವಹಿಸುವುದು ಮತ್ತು ಅದನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ಪ್ರಸ್ತುತಪಡಿಸುವುದು ನನ್ನ ಜವಾಬ್ದಾರಿ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನ್ಯಾಚುರಲ್ ಬ್ಯೂಟಿ ಕೀರ್ತಿ ಸುರೇಶ್‌ಗೆ 'ಸರ್ಜರಿ ಬಾಡಿ' ಎಂದು ಟೀಕೆ; ವಿಡಿಯೋ ತೋರಿಸಿ ತಿರುಗೇಟು ಕೊಟ್ಟ ನಟಿ!
ನಾನು ಆಡಿಲ್ಲ, ಹೋರಾಡಿದ್ದೀನಿ.. ಪುಷ್ಪ 2, ಧುರಂಧರ್ 2 ದಾಖಲೆ ಮುರಿಯುತ್ತಾ ರಾಮ್ ಚರಣ್ ಪೆದ್ದಿ ಸಿನಿಮಾ?