
ಖ್ಯಾತ ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಿನ್ನೆ ಮಾಡಿಕೊಂಡಿದ್ದ ಎಡವಟ್ಟೊಂದು ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಇದರ ಈವೆಂಟ್‌ನಲ್ಲಿ ಅಭಿಮಾನಿಗಳ ಜೊತೆ ವೇದಿಕೆ ಮೇಲೆ ಫೋಟೋ ತೆಗೆಸಿಕೊಳ್ಳುವ ಸಮಯದಲ್ಲಿ, ವೇದಿಕೆಯ ಮಧ್ಯ ಭಾಗದಲ್ಲಿ ಬರುವ ಸಲುವಾಗಿ ನಟಿ ಅಂಜಲಿ ಅವರ ಮೈಮುಟ್ಟಿ ತಳ್ಳಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಟನ ವಿರುದ್ಧ ಹಲವಾರು ಮಂದಿ ಕಿಡಿ ಕಾರಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ನಂದಮೂರಿ ಬಾಲಕೃಷ್ಣ ಅವರು ನಟಿಯನ್ನು ತಳ್ಳಿದ್ದು ಮಾತ್ರವಲ್ಲದೇ, ಈ ಕಾರ್ಯಕ್ರಮದಲ್ಲಿ ಬಾಲಯ್ಯ ಮದ್ಯ ಸೇವಿಸಿಕೊಂಡು ಬಂದಿದ್ದರು ಮತ್ತು ತಾವು ಕುಳಿತ ಜಾಗದಲ್ಲೇ ಪ್ಲಾಸ್ಟಿಕ್ ಬಾಟಲಿನಲ್ಲಿ ಮದ್ಯವನ್ನು ಇರಿಸಿಕೊಂಡಿದ್ದರು ಎಂಬುದನ್ನು ತೋರಿಸಲಾಗಿದೆ. ಇದರಿಂದಾಗಿ ಬಾಲಕೃಷ್ಣ ಅವರು ಕುಡಿದ ಅಮಲಿನಲ್ಲಿ ಈ ರೀತಿ ಮಾಡಿರುವುದಾಗಿ ಟೀಕೆ ವ್ಯಕ್ತವಾಗಿತ್ತು. ನಟಿಯರನ್ನು ತಳ್ಳಿದಾಗ ಆರಂಭದಲ್ಲಿ ನಟಿ ತುಂಬಾ ಶಾಕ್ ಆದಂತೆ ಕಂಡರೂ, ಅದನ್ನು ಸಾವರಿಸಿಕೊಂಡು ಜೋರಾಗಿ ನಕ್ಕರು. ಇದಾದ ಬಳಿಕ ಇನ್ನೊಂದು ವಿಡಿಯೋದಲ್ಲಿ ನಂದಮೂರಿ ಬಾಲಕೃಷ್ಣ ಅವರಿಗೆ ಹೈಫೈ ಮಾಡಿದ್ದನ್ನೂ ನೋಡಬಹುದು. ಅದೇನೇ ಇದ್ದರೂ ನಟಿಯನ್ನು ತಳ್ಳಿದ್ದು ಮಾತ್ರ ಅಭಿಮಾನಿಗಳಿಗೆ ಸರಿ ಕಾಣಿಸಲಿಲ್ಲ.
ಶೆರ್ಲಿನ್ ಅವತಾರ ನೋಡಿ ದೇವ್ರೇ ಎರಡೇ ಕಣ್ಣು ಯಾಕೆ ಕೊಟ್ಟೆ ಅಂತಿದ್ದಾರೆ ಪಡ್ಡೆ ಹೈಕಳು!
ಆದರೆ ಇವೆಲ್ಲದ್ದಕ್ಕೂ ನಟಿ ಅಂಜಲಿ ಈಗ ತೆರೆ ಎಳೆದಿದ್ದಾರೆ. ನಂದಮೂರಿ ಬಾಲಕೃಷ್ಣ ಅವರನ್ನು ಹೊಗಳುವ ಮೂಲಕ ನಿನ್ನೆ ನಡೆದಿರುವ ಘಟನೆಯ ಬಗ್ಗೆ ತಮಗೆ ಏನೂ ಆಗಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. "ತಮ್ಮ ಉಪಸ್ಥಿತಿ ಮೂಲಕ ನಮ್ಮ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಅನ್ನು ಹೆಚ್ಚು ರಂಗೇರಿಸಿದ್ದಕ್ಕಾಗಿ ನಂದಮೂರಿ ಬಾಲಕೃಷ್ಣ ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ" ಎಂದು ಅಂಜಲಿ ಅವರು ನಟನನ್ನು ಹೊಗಳಿದ್ದಾರೆ. ಘಟನೆ ಕುರಿತು ಪರೋಕ್ಷವಾಗಿ ಹೇಳಿದ ನಟಿ, "ನಂದಮೂರಿ ಬಾಲಕೃಷ್ಣ ಅವರು ಮತ್ತು ನಾನು ಯಾವಾಗಲೂ ಪರಸ್ಪರ ಗೌರವವನ್ನು ಉಳಿಸಿಕೊಂಡಿದ್ದೇವೆ. ಬಹಳ ಹಿಂದಿನಿಂದಲೂ ನಾವಿಬ್ಬರು ಪರಸ್ಪರ ಉತ್ತಮ ಸ್ನೇಹ, ಗೌರವವನ್ನು ಹಂಚಿಕೊಂಡಿದ್ದೇವೆ ಎಂದು ಹೇಳುವುದಕ್ಕೆ ನಾನು ಬಯಸುತ್ತೇನೆ. ಅವರೊಂದಿಗೆ ಮತ್ತೊಮ್ಮೆ ವೇದಿಕೆ ಹಂಚಿಕೊಂಡಿದ್ದು ನನಗೆ ಅದ್ಭುತ ಎನಿಸಿತ್ತು" ಎಂದಿದ್ದಾರೆ.
ಇದೇ ವೇಳೆ ಮದ್ಯದ ಬಾಟಲ್ ಇತ್ಯಾದಿಗಳ ಕುರಿತು ಸ್ಪಷ್ಟನೆ ನೀಡಿರುವ ಬಾಲಕೃಷ್ಣ ಆಪ್ತ ಮೂಲಗಳು, ಇವೆಲ್ಲಾ ಎಡಿಟೆಡ್ ವಿಡಿಯೋ. ನಟ ಬಾಲಕೃಷ್ಣ ಮದ್ಯ ಸೇವಿಸಿರಲಿಲ್ಲ, ಅಲ್ಲಿ ಯಾವುದೇ ಮದ್ಯದ ಬಾಟಲಿ ಇರಲಿಲ್ಲ. ಅಲ್ಲಿ ಬಾಟಲಿ ಇರುವಂತೆ ಗ್ರಾಫಿಕ್ಸ್ ಮಾಡಿ, ಸುಳ್ಳು ಪೋಸ್ಟ್ ಹರಿಬಿಟ್ಟಿದ್ದಾರೆ ಎಂದಿದೆ.
ಆರು ವರ್ಷಗಳ ಲಿವ್ ಇನ್ ಸಂಬಂಧಕ್ಕೆ ಬಿತ್ತು ಬ್ರೇಕ್? ಮಲೈಕಾ- ಅರ್ಜುನ್ ನಡುವೆ ಆಗಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.