ಅಂಬಾನಿ ಮದುವೆ, ರಿಹಾನ್ನಾ 66 ಕೋಟಿ ರೂ, ಬಿಯೊನ್ಸ್ 33 ಕೋಟಿ, ಆರ್ಟಿಸ್ಟ್ ಚಾರ್ಜ್ ಇಷ್ಟೊಂದಾ?

By Chethan Kumar  |  First Published May 31, 2024, 4:29 PM IST

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಡ್ 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಅದ್ಧೂರಿಯಾಗಿ ಹಡಗಿನಲ್ಲಿ ನಡೆಯುತ್ತಿದೆ. ಹಲವು ಅಂತಾರಷ್ಟ್ರೀಯ ಸೆಲೆಬ್ರೆಟಿಗಳ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಈ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳಿಗೆ ಅಂಬಾನಿ ಎಷ್ಟು ಕೋಟಿ ನೀಡಬೇಕು? ಕಾರ್ಯಕ್ರಮಕ್ಕೆ ಅವರು ಮಾಡುವ ಚಾರ್ಜ್ ಎಷ್ಟು?
 


ಮುಂಬೈ(ಮೇ.31) ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ವಿಶ್ವದಲ್ಲೇ ಅತ್ಯಂತ ಅದ್ಧೂರಿ ಮದುವೆಯಲ್ಲೊಂದು. ಈಗಾಗಲೇ ಮೊದದಲ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಮುಗಿಸಿ ಇದೀಗ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯುತ್ತಿದೆ. ಫ್ರಾನ್ಸ್‌ನಲ್ಲಿ ಕ್ರೂಸ್ ಶಿಪ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ರೀತಿಯಲ್ಲೇ, 2ನೇ ಕಾರ್ಯಕ್ರಮದಲ್ಲೂ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು ಕಾರ್ಯಕ್ರಮ ನೀಡುತ್ತಿದ್ದಾರೆ. ಕಾರ್ಯಕ್ರಮ ನಡೆಸಿಕೊಡಲು ಇವರಿಗೆ ಅಂಬಾನಿ ಕುಟುಂಬ ನೀಡಿರುವ ಮೊತ್ತ ತಲೆ ತಿರುಗುವಂತಿದೆ.

ಮೊದಲ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಖ್ಯಾತ ಪಾಪ್ ಸಿಂಗರ್ ರಿಹಾನ್ನ ಸಂಗೀತ ಕಾರ್ಯಕ್ರಮ ಭಾರಿ ಮೋಡಿ ಮಾಡಿತ್ತು. ರಿಹಾನ್ನಾ ಒಂದು ಕಾರ್ಯಕ್ರಮಕ್ಕೆ ಗರಿಷ್ಠ 72 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ರಿಹಾನ್ನಾ 66 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ವರದಿಯಾಗಿದೆ.

Tap to resize

Latest Videos

74 ಕೋಟಿ ರೂ ರಿಹಾನ್ನಾ ಲೈವ್ ಶೋ ಬಳಿಕ ಶಕೀರಾಗೆ ಅಂಬಾನಿ ಆಹ್ವಾನ, ಕಾರ್ಯಕ್ರಮದ ಖರ್ಚೆಷ್ಟು?

2018ರಲ್ಲಿ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಅದ್ದೂರಿ ವಿವಾಹ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪರ್ಫಾರ್ಮರ್ ಬಿಯೊನ್ಸ್ ಕಾರ್ಯಕ್ರಮ ನೀಡಿದ್ದರು. ಒಂದು ಕಾರ್ಯಕ್ರಮಕ್ಕೆ ಬಿಯೋನ್ಸ್ 33 ಕೋಟಿ ರೂಪಾಯಿ ಬಿಲ್ ಮಾಡಿದ್ದರು. 

ಅಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಸಿಂಗರ್ ಕ್ರಿಸ್ ಮಾರ್ಟಿನ್ ಕಾರ್ಯಕ್ರಮ ನೀಡಿದ್ದರು. ಒಂದು ಕಾರ್ಯಕ್ರಮಕ್ಕೆ ಒಂದು ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬ 8 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇವರ ಮಂಗಲ ಪರ್ವ ಸೆರೆಮನಿ ಕಾರ್ಯಕ್ರಮದಲ್ಲಿ ಮರೂನ್ ಫೈವ್ ತಂಡ ಆ್ಯಡಮ್ ಲಿವೈನ್ ಹಾಡಿ ಕುಣಿದಿದ್ದರು. ಈ ಸಿಂಗರ್‌ಗೆ ಅಂಬಾನಿ 12 ಕೋಟಿ ರೂಪಾಯಿ ನೀಡಿದ್ದರು.

ಇದೀಗ ಫ್ರಾನ್ಸ್‌ನ ಹಡಗಿನಲ್ಲಿ ಜೂನ್ 1ರ ವರೆಗೆ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯುತ್ತಿದೆ. ಬಹುತೇಕ ಬಾಲಿವುಡ್ ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು, ದಿಗ್ಗಜರು, ಉದ್ಯಮಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. 800 ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 

ವಿಶೇಷ ಅಂದರೆ ಆಹ್ವಾನಿತ ಅತಿಥಿಗಳಿಗೆ ವಿಶೇಷ ಡ್ರೆಸ್ ಕೋಡ್ ನೀಡಲಾಗಿದೆ. ಸೆಲೆಬ್ರೆಟಿಗಳ ಸಂಖ್ಯೆ ಹೆಚ್ಚಿರುವ ಕಾರಣ ಭಾರಿ ಭದ್ರತೆ ಒದಗಿಸಲಾಗಿದೆ. ಇದಕ್ಕಾಗಿ 800 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಜುಲೈ 12 ರಂದು ಅನಂತ್ ರಾಧಿಕಾ ವಿವಾಹ ಮಹೋತ್ಸವ ನಡೆಯಲಿದೆ.

ಭಾವಿ ಸೊಸೆ ರಾಧಿಕಾಗೆ ದುಬೈನಲ್ಲಿ 640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆ ನೀಡಿದ ನೀತಾ ಅಂಬಾನಿ; ಇಲ್ಲಿವೆ ಫೋಟೋಸ್

click me!