ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ ನಟ ಮಿಥುನ್ ಚಕ್ರವರ್ತಿ; ಶಾಕಿಂಗ್ ನ್ಯೂಸ್?

By Vaishnavi ChandrashekarFirst Published Jun 15, 2023, 11:12 AM IST
Highlights

ಸಿನಿ ಜರ್ನಿ ಆರಂಭಿಸಿದಾಗ ಮಲಗುವುದಕ್ಕೆ ಮನೆ ಕೂಡ ಇರಲಿಲ್ಲ. ನಟ ಮಿಥುನ್ ರೋಚಕ ಸಿನಿ ಜರ್ನಿ. 

80-90ರ ದಶಕದಲ್ಲಿ ಹಿಸ್ಟರ್ ಕ್ರಿಯೇಟ್ ಮಾಡಿದ ಸ್ಟಾರ್ ನಟ ಮಿಥುನ ಚಕ್ರವರ್ತಿ 71ರ ವಸಂತಕ್ಕೆ ಕಾಲಿಟ್ಟಿದ್ದಾರೆ.  350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮಿಥುನ್ ಸಿನಿ ಜರ್ನಿ ಆರಂಭಿಸಿದಾಗ ಮಲಗುವುದಕ್ಕೆ ಒಂದು ಮನೆ ಕೂಡ ಇರಲಿಲ್ಲವಂತೆ. ಗಾಡ್‌ ಫಾದರ್ ಇಲ್ಲದೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟ ಹೇಗೆ ಕೋಟಿ ಸಂಪಾದನೆ ಮಾಡಿದ್ದು? ಹೇಗೆ ಬಹು ಭಾಷೆಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದು ಎಂದು ರಿವೀಲ್ ಹಂಚಿಕೊಂಡಿದ್ದಾರೆ. 

1976ರಲ್ಲಿ ಆರ್ಟ್‌ ಹೌಸ್ ಡ್ರಾಮಾ Mrigayaa ಮೂಲಕ ಸಿನಿಮಾ ಜರ್ನಿ ಆರಂಭಿಸಿದರು, ಮೊದಲ ಚಿತ್ರಕ್ಕೆ ನ್ಯಾಷನಲ್ ಫಿಲ್ಮ್ ಅವಾರ್ಡ್‌ ಬೆಸ್ಟ್‌ ನಟ ಪ್ರಶಸ್ತಿ ಪಡೆದುಕೊಂಡರು. ಸಾವಿಯಟ್‌ ಯುನಿಯನ್ ಸಮಯದಲ್ಲಿ ಸಿನಿಮಾ ಕಮರ್ಷಿಯಲ್ ಸಕ್ಸಸ್ ಕಂಡು 100 ಕೋಟಿ ಕಲೆಕ್ಷನ್ ಮಾಡಿದ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಗೆ ಪಾತ್ರವಾಗಿತ್ತು. ಚಿತ್ರಕ್ಕೆ ಕಾಲಿಡುವ ಮುನ್ನ ಮಿಥುನ್ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದರಂತೆ. 

Latest Videos

3 ಮದುವೆಯಾಗಿದ್ದ Mithun Chakraborty, ಶ್ರೀದೇವಿಯಿಂದ ದೂರವಾಗಿದ್ದೇಕೆ?

' ನನ್ನ ಸಿನಿಮಾ ಜರ್ನಿ ಆರಂಭದ ಬಗ್ಗೆ ಹೆಚ್ಚಿಗೆ ಮಾತನಾಡಲು ಇಷ್ಟ ಪಡುವುದಿಲ್ಲ ಏಕೆಂದರೆ ಅದು ಅನೇಕರ ಮನಸ್ಥಿತಿ ಮತ್ತು ಧೈರ್ಯ ಗೆಡಿಸುವ ಕೆಲಸ ಮಾಡುತ್ತದೆ. ಎಲ್ಲರೂ ಕಷ್ಟಗಳನ್ನು ನೋಡುತ್ತಾರೆ ಆದರೆ ನನ್ನ ಕಷ್ಟು ತುಂಬಾ ಹೆಚ್ಚಿತ್ತು. ನಿಜ ಹೇಳಬೇಕು ಅಂದ್ರೆ ನಾನು ಫುಟ್‌ಪಾತ್‌ನಿಂದ ಬಂದ ವ್ಯಕ್ತಿ ಎನ್ನಬಹುದು. ಮುಂಬೈ ಸಿಟಿ ಹುಡುಗನಾಗಿ ನಾನು ಅದೆಷ್ಟೋ ದಿನಗಳ ಐವ್ ಗಾರ್ಡ್‌ನಲ್ಲಿ ಮಲಗಿರುವೆ ಇನ್ನು ಕೆಲವೊಮ್ಮೆ ಯಾರದ್ದೋ ಹಾಸ್ಟಲ್‌ ಮನೆ ಮುಂದೆ ಮಲಗಿರುವೆ. ನನ್ನ ಸ್ನೇಹಿತನೊಬ್ಬ ಮಾಟುಂಗಾ ಜಿಮ್ಖಾನಾನಲ್ಲಿ ಮೆಂಬರ್‌ಶಿಪ್‌ ಪಡೆದುಕೊಂಡು ಹೀಗಾಗಿ ಅಲ್ಲಿನ ಬಾತ್‌ರೂಮ್ ಬಳಸಲು ನನಗೆ ಅವಕಾಶ ಸಿಕ್ಕಿದೆ. ಬೆಳ್ಳಂಬೆಳಗ್ಗೆ ಅಲ್ಲಿ ಹೋಗಿ ಸ್ನಾನ ಮಾಡಿಕೊಂಡು ಬ್ರಶ್ ಮಾಡಿ ಮುಂದಿನ ಕೆಲಸ ನೋಡಿಕೊಳ್ಳುವೆ. ಹೇಗಿತ್ತು ಜೀವನ ಅಂದ್ರೆ ಮುಂದಿನ ಊಟ ಎಲ್ಲಿ ಮಾಡುತ್ತಿದ್ರೆ ಅಂದು ರಾತ್ರಿ ನಿದ್ರೆ ಎಲ್ಲಿ ಮಾಡುತ್ತಿದ್ದೆ ಅನ್ನೋ ಐಡಿಯಾ ಕೂಡ ನನಗೆ ಇರಲಿಲ್ಲ' ಎಂದು 2011ರಲ್ಲಿ ETC ಸಂದರ್ಶನದಲ್ಲಿ ಮಾತನಾಡಿದ್ದರು. 

'ಜೀವನದಲ್ಲಿ ಕಷ್ಟ ಪಡುತ್ತಿರುವವರಿಗೆ ಧೈರ್ಯ ಕೊಡುವ ಕೆಲಸ ಮಾಡುವೆ ಅವರ ಮನಸ್ಥಿತಿ ಮುಖ್ಯವಾಗುತ್ತದೆ. ಕೆಲವೊಮ್ಮೆ ನಾನು ಏನೂ ಮಾಡಲು ಆಗದು ಜೀವನವೇ ಸಾಕು ಎನಿಸುತ್ತಿತ್ತು. ಎಷ್ಟರ ಮಟ್ಟಕ್ಕೆ ಸೋತಿದ್ದೆ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳು ಮನಸ್ಸು ಕೂಡ ಮಾಡಿದ್ದೆ. ಆತ್ಮಹತ್ಯೆ ಯೋಚನೆ ಮಾಡಿದ್ದಕ್ಕೆ ಸಾಕಷ್ಟು ಕಾರಣಗಳಿದೆ. ನನಗಿದ್ದ ರಾಜಕೀಯ ಬ್ಯಾಗ್ರೌಂಡ್‌ನಿಂದ ನಾನು ನಮ್ಮ ಊರಿಗೆ ಹೋಗಲು ಆಗುತ್ತಿರಲಿಲ್ಲ ಹಾಗಂತ ಸುಮ್ಮನೆ ಕೂರುವುದು ಕಷ್ಟ ಆಗಿತ್ತು. ದಯವಿಟ್ಟು ಆತ್ಮಹತ್ಯೆ ಒಂದೇ ಜೀವನಕ್ಕೆ ದಾರಿ ಎಂದುಕೊಳ್ಳಬೇಡಿ ಹೋರಟ ಮಾಡಿದರೆ ಜಯ ಸಿಕ್ಕೇ ಸಿಗುತ್ತದೆ. ಸೋಲು ಅಂದರೆ ಏನೆಂದು ನನಗೆ ಗೊತ್ತಿರಲಿಲ್ಲ ಸ್ಕೂಲ್‌ನಲ್ಲಿ ನಾನು ಕ್ರೀಡೆಯಲ್ಲೂ ಸೋಲುತ್ತಿರಲಿಲ್ಲ' ಎಂದು ಮಿಥುನ್ ಹೇಳಿದ್ದರು. 

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸೊಸೆ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ!

2022ರಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಓಟಿಟಿ ಲೋಕಕ್ಕೆ ಕಾಲಿಟ್ಟರು. ದಿ ಕಾಶ್ಮೀರಿ ಫೈಲ್ಸ್‌ ಮೂಲಕ ಮತ್ತೊಮ್ಮೆ ದೊಡ್ಡ ಯಶಸ್ಸು ಕಂಡರು. 

click me!