ಶಾರುಖ್ ಖಾನ್‌ಗೆ ಬಲವಂತವಾಗಿ ತಬ್ಬಿ ಮುತ್ತಿಕ್ಕಿದ ಲೇಡಿ ಫ್ಯಾನ್: ಜೈಲಿಗೆ ಹಾಕಿ ಎಂದ ನೆಟ್ಟಿಗರು

Published : Jun 14, 2023, 09:32 PM ISTUpdated : Jun 16, 2023, 03:30 PM IST
ಶಾರುಖ್ ಖಾನ್‌ಗೆ ಬಲವಂತವಾಗಿ ತಬ್ಬಿ ಮುತ್ತಿಕ್ಕಿದ ಲೇಡಿ ಫ್ಯಾನ್: ಜೈಲಿಗೆ ಹಾಕಿ ಎಂದ ನೆಟ್ಟಿಗರು

ಸಾರಾಂಶ

ಬಾಲಿವುಡ್ ಕಿಂಗ್‌ ಶಾರುಖ್‌ ಖಾನ್‌ನನ್ನು ಮಹಿಳಾ ಅಭಿಮಾನಿಯೊಬ್ಬರು ತಬ್ಬಿಕೊಂಡು ಬಲವಂತವಾಗಿ ಮುತ್ತಿಕ್ಕಿದ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆ ಆಕ್ರೋಶಕ್ಕೂ ಕಾರಣವಾಗಿದೆ. 

ದುಬೈ: ಸಿನಿಮಾ ನಟರ ಜೊತೆ ಅಭಿಮಾನಿಗಳು ಅತಿರೇಕದಿಂದ ವರ್ತಿಸಿ ಅವರನ್ನು ಮುಜುಗರಕ್ಕೀಡು ಮಾಡುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಅದೇ ರೀತಿ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಕಿಂಗ್‌ ಶಾರುಖ್‌ ಖಾನ್‌ನನ್ನು ಮಹಿಳಾ ಅಭಿಮಾನಿಯೊಬ್ಬರು ತಬ್ಬಿಕೊಂಡು ಬಲವಂತವಾಗಿ ಮುತ್ತಿಕ್ಕಿದ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆ ಆಕ್ರೋಶಕ್ಕೂ ಕಾರಣವಾಗಿದೆ. 

ಬಾಲಿವುಡ್ ತಾರೆಗಳಿಗೆ ವಿಚಿತ್ರ ಅಭಿಮಾನಿಗಳನ್ನು ಎದುರಿಸುವುದು ಹೊಸ ವಿಚಾರವಲ್ಲ ಅದರಲ್ಲೂ ಶಾರುಖ್ ಖಾನ್ ಅವರಂತಹ ವಿಶ್ವದ ಅತ್ಯಂತ ಜನಪ್ರಿಯ ಚಲನಚಿತ್ರ ತಾರೆಗಳಿಗೆ ವಿಲಕ್ಷಣವಾದ ಅಭಿಮಾನಿಗಳನ್ನು ಎದುರಿಸುವುದು ಬಹುತೇಕ ಮೂಮೂಲಿ ದಿನಚರಿ ಎಂಬಂತಾಗಿರುತ್ತದೆ.  ಅಭಿಮಾನಿಗಳ ಇಂತಹ ವರ್ತನೆಗಳು ನಟರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತವೆ. ಅದರೂ ಏನು ಮಾಡಲಾಗದೇ ಸುಮ್ಮನಾಗಿಬಿಡುತ್ತಾರೆ.  ಕೆಲ ಅಭಿಮಾನಿಗಳು ನಟರಿಗೂ ವೈಯಕ್ತಿಕ ಬದುಕಿದೆ ಎಂಬ ಬಗ್ಗೆ ಯೋಚನೆಯೇ ಮಾಡುವುದಿಲ್ಲ.

ದಿನಕ್ಕೆ 100 ಸಿಗರೇಟ್​- ಕ್ಯಾನ್ಸರ್​ ಹೊಗೆಯಿಂದ ಸುತ್ತುವರಿದಿದ್ದೇನೆ: ಶಾರುಖ್​ ಖಾನ್​!

ಅದೇ ರೀತಿ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿರುವ ವೀಡಿಯೋವೊಂದು ವೈರಲ್ ಆಗಿದ್ದು, ಶಾರುಖ್ ತಮ್ಮ ಬಾಡಿಗಾರ್ಡ್‌ಗಳ ಜೊತೆ ಸ್ಟೇಜ್‌ಗೆ ಬರುತ್ತಿದ್ದರೆ ಅಲ್ಲಿ ಮೊದಲಿಗೆ ಒಬ್ಬರು ವ್ಯಕ್ತಿ ಅವರಿಗೆ ಕೈ ಕುಲುಕುತ್ತಾರೆ. ಇದಾದ ಕ್ಷಣದಲ್ಲೇ ಮಹಿಳೆಯೊಬ್ಬರು ಶಾರುಖ್ ಇದ್ದ ಸ್ಟೇಜ್‌ಗೆ ಏರಿ ಅವರನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಕ್ಕುತ್ತಾರೆ. ನಂತರ ಆಕೆ ನಗುತ್ತಾ ಖುಷಿಯಿಂದ ಮುಂದೆ ಹೋಗುವುದನ್ನು ಕಾಣಬಹುದಾಗಿದೆ. ಈ ವೇಳೆ ಶಾರುಖ್‌ ಖಾನ್ ಸುಮ್ಮನಾಗಿದ್ದರೂ ಅವರ ಅಭಿಮಾನಿಗಳು ಮಾತ್ರ ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದ್ದಾರೆ.  ಇದು ಸರಿಯಲ್ಲ, ಒಂದು ವೇಳೆ ಇದು ಉಲ್ಟಾ ಆಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಏನೇ ಆಗಲಿ ಇದು ತಪ್ಪು ತಪ್ಪೇ, ಇಲ್ಲಿ ಲಿಂಗದ ಬಗ್ಗೆ ಚರ್ಚೆ ಬೇಡ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಉಲ್ಟಾ ಆಗಿದ್ದರೂ ಸರಿ ಯಾರೂ ಕೂಡ  ರೀತಿ ಒಪ್ಪಿಗೆ ಇಲ್ಲದೇ ಮತ್ತೊಬ್ಬರ ವೈಯಕ್ತಿಕ ಸ್ವಾತಂತ್ರ್ಯವನ್ನು ಹಾಳು ಮಾಡುವಂತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆಕೆಯನ್ನು ಜೈಲಿಗೆ ಹಾಕಿ ಎಂದು ಆಗ್ರಹಿಸಿದ್ದಾರೆ. 

ಅಬ್ಬಬ್ಬಾ! ಪಠಾಣ್​ ಚಿತ್ರದಲ್ಲಿಯೂ ಇಷ್ಟೊಂದು ತಪ್ಪಾ? ಐದು ಮೇಜರ್​ ಮಿಸ್ಟೆಕ್ಸ್ ಇವು

ಇನ್ನು ಶಾರುಖ್‌ ಖಾನ್  ಬಗ್ಗೆ ಹೇಳುವುದಾದರೆ ಶಾರುಖ್ ಖಾನ್‌ ಇತ್ತೀಚಿನ ಸಿನಿಮಾ ಪಠಾನ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ಹೊಸ ಸಿನಿಮಾ ವಿಷಯದ ಬಗ್ಗೆ ಹೇಳುವುದಾದರೆ, ಶಾರುಖ್ ಖಾನ್ ಅಟ್ಲೀ ಅವರ ಜವಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾದಲ್ಲಿ ಅವರು ವಿಜಯ್ ಸೇತುಪತಿ, ನಯನತಾರಾ ಮತ್ತು ಸನ್ಯಾ ಮಲ್ಹೋತ್ರಾ (Sanya Malhotra) ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ರಾಜ್‌ಕುಮಾರ್ ಹಿರಾನಿಯವರ ಡಂಕಿ ಸಿನಿಮಾದಲ್ಲೂ ತಾಪ್ಸಿ ಪನ್ನು ಜೊತೆ ನಟಿಸಲಿದ್ದಾರೆ. ಈ ಸಿನಿಮಾ ಡಿಸೆಂಬರ್‌ನಲ್ಲಿ ತೆರೆ ಕಾಣುವ ನಿರೀಕ್ಷೆ ಇದೆ. 

ಮತ್ತೊಂದೆಡೆ ಶಾರುಖ್ (Shah Rukh Khan) ಪುತ್ರಿ ಸುಹಾನಾ ಖಾನ್ (Suhana Khan) ಶೀಘ್ರದಲ್ಲೇ ಜೋಯಾ ಅಖ್ತರ್ (Zoya Akhtar) ಅವರ ದಿ ಆರ್ಚೀಸ್ (The Archies) ಮೂಲಕ ನಟಿಯಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಮತ್ತೊಂದೆಡೆ ಶಾರುಖ್  ಹಿರಿಯ ಮಗ, ಆರ್ಯನ್ ಖಾನ್ ಈ ವರ್ಷ ತಮ್ಮ ಬಟ್ಟೆ ಬ್ರಾಂಡ್ D'YAVOL X ಅನ್ನು ಇತ್ತೀಚೆಗೆ ಪ್ರಾರಂಭಿಸಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?