ಹೆಂಡತಿಗೆ ಡಿವೋರ್ಸ್‌ ಕೊಟ್ಟು ಪಡೆದ 9 ಕೋಟಿಯನ್ನು ದಾನ ಮಾಡಿದ ನಟ ಜಾನಿ!

Published : Jun 15, 2023, 09:30 AM IST
ಹೆಂಡತಿಗೆ ಡಿವೋರ್ಸ್‌ ಕೊಟ್ಟು ಪಡೆದ 9 ಕೋಟಿಯನ್ನು ದಾನ ಮಾಡಿದ ನಟ ಜಾನಿ!

ಸಾರಾಂಶ

ಡಿವೋರ್ಸ್‌ನಿಂದ ಬಂದ ಹಣವನ್ನು ದಾನ ಮಾಡಿದ ನಟ ಜಾನಿ ಡಿಪ್. ನಟಿ ಹಂಬರ್ ಹರ್ಡ್‌ ಸಿಕ್ಕಿದ್ದು ಕಡಿಮೆನೇ...  

ಹಾಲಿವುಡ್ ನಟ ಜಾನಿ ಡಿಪ್ ಮತ್ತು ಆಂಬರ್ ಹರ್ಡ್‌ ಡಿವೋರ್ಸ್‌ ವಿಚಾರ ದೇಶದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಒಬ್ಬರ ಮೇಲ್ಲೊಬ್ಬರ ಕೇಸ್, ಮೂರ್ನಾಲ್ಕು ಟ್ರಯಲ್ ನಂತರ ಪರಿಹಾರಗಳನ್ನು ನೀಡಲು ಮುಂದಾದರು. ಪತ್ನಿ ಆಂಬರ್‌ ಹರ್ಡ್‌ ಜಾನಿ ಡಿಪ್‌ಗೆ 1 ಮಿಲಿಯನ್ ಹಣವನ್ನು ಕೊಟ್ಟಿದ್ದರು. ಅಂದ್ರೆ 8 ಕೋಟಿ 21 ಲಕ್ಷ 64 ಸಾವಿರ 900 ರೂಪಾಯಿ ಲೆಕ್ಕ. ಈ ಹಣಕ್ಕೆ ಮತ್ತಷ್ಟು ಹಣ ಸೇರಿಸಿದ ಜಾನಿ ಎರಡು ಮೂರು ಚಾರಿಟಿಗಳಿಗೆ ದಾನ ಮಾಡಿದ್ದಾರೆ. 

ಹೌದು! 200,00 ಡಾಲರ್‌ನ ಜಾನಿ ಡಿಪ್‌ ಚಾರಿಟಿಗೆ ದಾನ ಮಾಡಿದ್ದಾರೆ. ಅಂದ್ರೆ 1 ಕೋಟಿ 62 ಲಕ್ಷ 48 ಸಾವಿರ 220 ರೂಪಾಯಿ ಎಸ್ಕಟ್ರ ಸೇರಿಸಿ ಕೊಟ್ಟಿದ್ದಾರೆ. ಈ ಹಣ ಸೇರಿರುವ ಚಾರಿಟಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಮಕ್ಕಳು ಹಾಗೂ ಮನೆ ಇಲ್ಲದೆ ಬೀದಿಗೆ ಬಂದಿರುವ ಜನರ ಸಹಾಯಕ್ಕೆ ಬಳಕೆಯಾಗುತ್ತದೆ. CNN ರಿಪೋರ್ಟ್‌ ವರದಿ ಮಾಡಿರುವ ಪ್ರಕಾರ ಜಾನಿ ಆಯ್ಕೆ ಮಾಡಿಕೊಂಡಿರುವ 5 ಚಾರಿಟಿಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಮೇಕ್-ಎ-ಫಿಲ್ಮ್ ಫೌಂಡೇಶನ್, ದಿ ಪೇಂಟೆಡ್‌ ಟರ್ಟಲ್, ರೆಡ್‌ ಫೆದರ್, ಮರ್ಲಾನ್ ಬ್ರಾಂಡೊ ಅವರ ಟೆಟಿಯಾರೋ ಸೊಸೈಟಿ ಚಾರಿಟಿ ಹಾಗೂ ಅಮೆಜೋನಿಯಾ ಫಂಡ್ ಅಲೈಯನ್ಸ್. ಒಂದೊಂದು ಚಾರಿಟಿಗೂ 200,000 ಡಾಲರ್‌ ಹಣ ದಾನ ಮಾಡಿದ್ದಾರಂತೆ. 

Johnny Deep ಮಾನನಷ್ಟ ಮೊಕದ್ದಮೆ ಕೇಸ್‌; 10 ಲಕ್ಷ ಕೊಡಲು ಒಪ್ಪಿದ ಅಂಬರ್ ಹರ್ಡ್‌

2015ರಲ್ಲಿ ಲಾಸ್ ಏಂಜಲ್‌ನ ಮನೆಯಲ್ಲಿ ಜಾನಿ ಡಿಪ್‌ ಮತ್ತು ಅಂಬರ್ ಹರ್ಡ್‌ ಮದುವೆ ಮಾಡಿಕೊಂಡರು. ಹಲವು ವರ್ಷಗಳ ಕಾಲ ಪ್ರೀತಿಸಿ ನಡೆದ ಮದುವೆ ಇದಾಗಿತ್ತು. 2016 ಮೇ 23ರಂದು ಡಿವೋರ್ಸ್‌ ಪಡೆಯಲು ಅಂಬರ್ ಮುಂದಾದರು. ಮಧ್ಯಪಾನ ಹಾಗೂ ಡ್ರಗ್ಸ್‌ ಸೇವಿಸಿ ಜಾನಿ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅಂಬರ್ ಆರೋಪ ಮಾಡಿದ್ದರು.

ಜಾನಿ ಡೆಪ್ ವಿರುದ್ಧ ಅಂಬರ್ ಗಂಭೀರ ಆರೋಪ

ಇದೀಗ ವರ್ಜೀನಿಯಾದ ಕೌಂಟಿ ಕೋರ್ಟ್ ಹೌಸ್ ನಲ್ಲಿ ನಡೆದ ವಿಚಾರಣೆ ವೇಳೆ ಜಾನಿ ವಿರುದ್ಧ ಅಂಬರ್ ಲೈಂಗಿಕ ಆರೋಪ ಮಾಡಿದ್ದಾರೆ. ಹರ್ಡ್ ಪರ ವಕೀಲರು ಜಾವಿ ವಿರುದ್ಧ ಮಾಖಿಕ, ಮಾನಸಿಕ ಸೇರಿದಂತೆ ಹಲವು ರೀತಿಯ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. '2016ರಲ್ಲಿ ಆಸ್ಟ್ರೇಲಿಯಾದಲ್ಲಿದ್ದಾಗ ಡೆಪ್ ಮೂರು ದಿನಗಳು ಚೆನ್ನಾಗಿ ಕುಡಿದು ಅಂಬರ್ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದ, ಮಧ್ಯದ ಬಾಟಲಿಯನ್ನು ಗುಪ್ತಾಂಗಕ್ಕೆ ಹಾಕಿದ್ದ, ನೈಟ್ ಗೌನ್ ಹರಿದು ಹಾಕಿದ್ದ ಇನ್ನು ಭಯಾನಕವಾಗಿ ವರ್ತಿಸಿದ್ದ' ಎಂದು ಹೇಳಿದ್ದಾರೆ. ರೋಪಗಳನ್ನು ಜಾನಿ ಡೆಪ್ ಪರ ವಕೀಲರು ತಳ್ಳಿ ಹಾಕಿದ್ದಾರೆ. ಜಾನಿ ಡೆಪ್ ಒಬ್ಬ ಜಂಟಲ್ ಮೆನ್, ಅಂಬರ್ ಮಾಡಿರುವ ರೋಪಗಳನ್ನು ಯಾವತ್ತೂ ಮಾಡಿಲ್ಲ. ಅಂಬರ್ ಈ ಹಿಂದೆ ದೂರು ನೀಡಿದಾಗ, ವಿಚ್ಛೇದನದ ಅರ್ಜಿ ಹಾಕಿದಾಗ ಜಾನಿ ಡೆಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರಲಿಲ್ಲ. ಆದರೆ ಜಾನಿ ಮಾನನಷ್ಟ ಮೊಕದ್ದಮೆ ಹೂಡಿದ ಬಳಿಕ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ ಎಂದು ಜಾನಿ ವರ ವಕೀಲರು ವಾದ ಮಂಡಿಸಿದ್ದಾರೆ.

ಜಾನಿ ಡೆಪ್ ಸಹ ಅಂಬರ್ ವಿರುದ್ಧ ಆರೋಪ ಮಾಡಿದ್ದು, ಆಕೆಯದ್ದು ಆಕ್ರಮಣಕಾರಿ ಮನೋಭಾವ ಎಂದಿದ್ದಾರೆ. ಒಮ್ಮೆ ವೋಡ್ಕಾ ಬಾಟಲಿಯೊಂದನ್ನು ನನ್ನೆಡೆಗೆ ಎಸೆದಳು. ಅದು ನನ್ನ ಕೈಗೆ ಬಿದ್ದು ಒಡೆದು ಹೋಯಿತು. ಇದರಿಂದ ನನ್ನ ಬೆರಳಿನ ಮೇಲ್ಬಾಗ ಕತ್ತರಿಸಿ ಹೋಗಿತ್ತು ಎಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸಿದ ಜಾನಿ ಡಿಪ್‌ ಕೇಸ್‌ ಕೇಸ್ ಗೆದ್ದರೆ, ಅವರ ಮಾಜಿ ಪತ್ನಿ ಆಂಬರ್ ಹರ್ಡ್‌ ತಮ್ಮ ಪತಿ ವಿರುದ್ಧ ಸಲ್ಲಿಸಿದ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನೂ ಗೆದ್ದಿದ್ದಾರೆ.  ಕೇಸ್‌ ಗೆದ್ದು ಜಾನಿ 116 ಕೋಟಿ ರೂ. ಪರಿಹಾರ ಗಿಟ್ಟಿಸಿಕೊಂಡರೆ, ಆಂಬರ್‌ಗೆ ಕೇವಲ 15 ಕೋಟಿ ಪರಿಹಾರ ಸಿಕ್ಕಿದೆ. 

ನಟ ಜಾನಿ ಡೆಪ್‌ ಈ ಗೆಲುವನ್ನು ಸಂಭ್ರಮಿಸಲು ಇಂಗ್ಲೆಂಡ್‌ನ ಭಾರತೀಯ ರೆಸ್ಟೋರೆಂಟ್‌ ಒಂದರಲ್ಲಿ ಬರೋಬರಿ 48 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜಾನಿ ಡೆಪ್‌ ತನ್ನ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು. ಬರ್ಮಿಂಗ್ಹ್ಯಾಮ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ ಒಂದಕ್ಕೆ ತನ್ನ ಇಪ್ಪತ್ತು ಸ್ನೇಹಿತರೊಂದಿಗೆ ತೆರಳಿದ ಜಾನಿ ಡೆಪ್‌ ಅಲ್ಲಿ ಅವರಿಗೆ ಅದ್ದೂರಿ ಔತಣಕೂಟ ನೀಡಲು 62,000 ಡಾಲರ್ ಎಂದರೆ ಸುಮಾರು 48.16 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?