ದಿ ಕಪಿಲ್ ಶರ್ಮಾ ಶೋಗೆ ಜೊತೆಯಾಗಿ ಬಂದ ಜೂ. ಎನ್‌ಟಿಆರ್, ಜಾನ್ವಿ, ಸೈಫ್‌ ಅಲಿ ಖಾನ್

By Suvarna News  |  First Published Sep 10, 2024, 11:11 AM IST

ಸೈಫ್ ಅಲಿಖಾನ್, ಜೂನಿಯರ್ ಎನ್‌ಟಿಆರ್ ಹಾಗೂ ಬಾಲಿವುಡ್ ನಟಿ ಜಾನ್ವಿಕಪೂರ್ ಜೊತೆಯಾಗಿ ನಟಿಸುತ್ತಿರುವ ತೆಲುಗಿನ ಮೊದಲ ಸಿನಿಮಾ 'ದೇವರ' ಈ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂವರು ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದು ಇದಕ್ಕಾಗಿ ದಿ ಗ್ರೇಟ್ ಇಂಡಿಯನ್‌  ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು. 


ಸೈಫ್ ಅಲಿಖಾನ್, ಜೂನಿಯರ್ ಎನ್‌ಟಿಆರ್ ಹಾಗೂ ಬಾಲಿವುಡ್ ನಟಿ ಜಾನ್ವಿಕಪೂರ್ ಜೊತೆಯಾಗಿ ನಟಿಸುತ್ತಿರುವ ತೆಲುಗಿನ ಮೊದಲ ಸಿನಿಮಾ 'ದೇವರ' ಈ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂವರು ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದು ಇದಕ್ಕಾಗಿ ದಿ ಗ್ರೇಟ್ ಇಂಡಿಯನ್‌  ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು. ಸೆಪ್ಟೆಂಬರ್ 27ರಂದು ಥಿಯೇಟರ್‌ಗಳಲ್ಲಿ ದೇವರ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಶೂಟಿಂಗ್ ಸಂಪೂರ್ಣವಾಗಿ ಮುಗಿದ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಪ್ರಮೋಷನ್‌ನಲ್ಲಿ ತೊಡಗಿಸಿಕೊಂಡಿದ್ದು, ಇದರ ಭಾಗವಾಗಿ ಈ ಮೂವರು ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು. 

ಕಪಿಲ್ ಶರ್ಮಾ ಶೋಗೆ ಆಗಮಿಸುವ ಮುನ್ನ ಇವರನ್ನು ಪಪಾರಾಜಿ ಕ್ಯಾಮರಾಗಳು ಸೆರೆ ಹಿಡಿದಿದ್ದು, ಮೂವರು ಸ್ಟೈಲಿಶ್ ಆಗಿ ಈ ಶೋದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ದೇವರ ಸಿನಿಮಾವನ್ನು  ಕಪಿಲ್ ಶರ್ಮಾ ಶೋದಲ್ಲಿ ಇವರು ಪ್ರಮೋಟ್ ಮಾಡಲಿದ್ದಾರೆ. ಜಾನ್ವಿ ನೀಲಿ ಬಣ್ಣದ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರೆ ಸೈಫ್ ಅಲಿಖಾನ್ ಬಿಳಿ ಶೂಟ್ ಧರಿಸಿದ್ದರು, ಆದರೆ ಜೂನಿಯರ್ ಎನ್‌ಟಿಆರ್ ಮಾತ್ರ ಕ್ಯಾಶುವಲ್ ಡ್ರೆಸ್‌ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿಖಾನ್ ಆಗಮನದ ವೇಳೆ ಪಪಾರಾಜಿಗಳು ನವಾಬ್ ಸಾಬ್ ನವಾಬ್ ಸಾಬ್‌ ಎಂದು ಕರೆಯಲು ಶುರು ಮಾಡಿದ್ದಾರೆ. ಈ ವೇಳೆ ಸೈಫ್, ಯಾರಾದ್ರೂ ಸೈಫ್ ಅಲಿಖಾನ್ ಎಂದು ಕರೆಯಿರಿ ಎಂದು ಹೇಳಿ ಅಲ್ಲಿದ್ದವರನ್ನು ನಗಿಸಿದ್ದಾರೆ. 

Tap to resize

Latest Videos

undefined

ಜೂನಿಯರ್ ಎನ್‌ಟಿಆರ್ ಎದೆಗೊರಗಿದ ಜಾನ್ವಿ ಕಪೂರ್: 'ದೇವರ' ಸಿನಿಮಾದ ಪೋಸ್ಟರ್ ಸಖತ್ ವೈರಲ್

ದೇವರ ಸಿನಿಮಾ ಬಗ್ಗೆ ಒಂದಿಷ್ಟು
ಈ ಸಿನಿಮಾವನ್ನು ಕೊರಟಾಲ ರವಿ ಅವರು ನಿರ್ದೇಶಿಸುತ್ತಿದ್ದಾರೆ. ಇದರ ಎರಡು ಪೋಸ್ಟರ್‌ಗಳು ಹಾಗೂ ಹಾಡು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಇದರಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಕೆಮಿಸ್ಟ್ರಿಗೆ ನೋಡುಗರು ಫಿದಾ ಆಗಿದ್ದಾರೆ. ದೇವರ: ಭಾಗ 1 ತೆಲುಗಿನ ಪ್ಯಾನ್ ಇಂಡಿಯನ್ ಸಿನಿಮಾಗಾಲಿದ್ದು, ಬಾಕ್ಸಾಫಿಸ್‌ನಲ್ಲಿ ಒಳ್ಳೆಯ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಇದು ಜಾನ್ವಿ ಕಪೂರ್ ಅವರ ಮೊದಲ ತೆಲುಗು ಸಿನಿಮಾ ಆಗಿರುವ ಕಾರಣ ಇದು ಅಭಿಮಾನಿಗಳಲ್ಲಿ ತೀವ್ರ ಕುತೂಹಲವನ್ನು ಹೆಚ್ಚಿಸಿದೆ. ಈ ಮೂಲಕ ನಟಿ ಜಾನ್ವಿ ಕಪೂರ್ ಅವರ ಬಹು ದಿನಗಳ ಕನಸು ನನಸಾಗಲಿದೆ. ಅಮ್ಮ ಶ್ರೀದೇವಿಯ ಸಾವಿನ ನಂತರ ಜಾನ್ವಿ ಕಪೂರ್ ದಕ್ಷಿಣದ ಸಿನಿಮಾಗಳಲ್ಲಿ ನಟಿಸಬೇಕು ಎಂದು ಆಸೆ ಪಟ್ಟಿದ್ದರು. ಜಾನ್ವಿ ಕಪೂರ್ ತಾಯಿ ಶ್ರೀದೇವಿ ಕೂಡ ಮೂಲತ ದಕ್ಷಿಣ ಭಾರತೀಯರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

 

ಜ್ಯೂ.ಎನ್‌ಟಿಆರ್ ಐಷಾರಾಮಿ ಕಾರಿನ ನಂಬರ್ ಪ್ಲೇಟ್‌ನಲ್ಲಿದೆ ಕುಟುಂಬ ರಹಸ್ಯ!

ಕಪಿಲ್ ಶರ್ಮಾ ಶೋ ಬಗ್ಗೆ

ದಿ ಗ್ರೇಢ್ ಇಂಡಿಯನ್ ಕಪಿಲ್ ಶೋ ಹೆಸರಿನಲ್ಲಿ ಕಪಿಲ್ ಶರ್ಮಾ ಮತ್ತೆ ಈ ಶೋ ಆರಂಭಿಸಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಈ ಕಾಮಿಡಿ ಶೋ ಮತ್ತೆ ಬರಲಿದೆ. ಸದ್ಯ ಇದರ ಎಪಿಸೋಡ್‌ಗಳ ಶೂಟಿಂಗ್ ನಡೆಯುತ್ತಿದೆ. ಆಗಸ್ಟ್ 13ರಿಂದ ಈ ಶೋದ ಶೂಟಿಂಗ್ ಶುರುವಾಗಿದ್ದು, ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಜೊತೆ ಅರ್ಚನಾ ಪುರಣ್ ಸಿಂಗ್, ಸುನಿಲ್ ಗ್ರೋವರ್, ಕೃಷ್ಣ ಅಭಿಷೇಕ್, ಕಿಕು ಶಾರದಾ ಮತ್ತು ರಾಜೀವ್ ಠಾಕೂರ್ ಇದ್ದಾರೆ. ಕಳೆದ ಬಾರಿ ಈ ಶೋದಲ್ಲಿ ಅಮೀರ್ ಖಾನ್,  ರಣಬೀರ್ ಕಪೂರ್ ಮತ್ತು ಅಂತರಾಷ್ಟ್ರೀಯ ಸಂಗೀತಗಾರ ಎಡ್ ಶೀರನ್ ಅವರಂತಹ ತಾರೆಯರು ಕಾಣಿಸಿಕೊಂಡಿದ್ದರು. ಮೊದಲ ಸೀಸನ್ ಒಟ್ಟು 12 ಎಪಿಸೋಡ್‌ಗಳಲ್ಲಿ ಪ್ರಸಾರವಾಗಿತ್ತು. 

 

 

click me!