ದೀಪಾವಳಿ ಹೊತ್ತಿಗೆ ದರ್ಶನ್ ಜಾಮೀನು ಮೇಲೆ ಜೈಲಿಂದ ಹೊರಬಂದಿದ್ದಾರೆ. ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ದೇವರಿಗೆ ವಿಶೇಷ ನಮನ ಸಲ್ಲಿಸಿದ್ದಾರೆ. ಮಹಾ ಕಾರಣಿಕದ ಆ ದೇವತೆ ಯಾರು?
ಎಷ್ಟೋ ಸಮಯದ ಬಳಿಕ ಕೊನೆಗೂ ದರ್ಶನ್‌ಗೆ ಜಾಮೀನು ಮಂಜೂರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌ಗೆ ಬೆನ್ನುಹುರಿ ಸಮಸ್ಯೆಯ ನೆವದಲ್ಲಿ ಜಾಮೀನು ಸಿಕ್ಕಿದೆ. ತನ್ನ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಇದೀಗ ಕರ್ನಾಟಕ ಹೈಕೋರ್ಟ್ ಆರು ವಾರಗಳ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಸರಿಸುಮಾರು ನಾಲ್ಕೂವರೆ ತಿಂಗಳ ಬಳಿಕ ದರ್ಶನ್ ತಾತ್ಕಾಲಿಕವಾಗಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಆದರೆ ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಒಬ್ಬ ಮಹಾನ್ ದೇವತೆಗೆ ನಮನ ಸಲ್ಲಿಸಿದ್ದಾರೆ. ಮಹಾಕಾರಣಿಕದ ಆ ದೇವಿಯ ದೇವಸ್ಥಾನಕ್ಕೆ ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ವಿಸಿಟ್ ಮಾಡಿದ್ದರು. ಇದೀಗ ಆ ದೇವತೆಯ ದೇವಸ್ಥಾನದ ಫೋಟೋವನ್ನು ತನ್ನ ಸೋಷಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ಹಾಕಿಕೊಂಡು 'ಥ್ಯಾಂಕ್‌ಫುಲ್, ಗ್ರೇಟ್ ಫುಲ್, ಬ್ಲೆಸ್ಡ್ ಅಂತ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಆ ದೇವತೆ ಯಾರು, ದರ್ಶನ್ ರಿಲೀಸ್ ಆದ ಕೂಡಲೇ ವಿಜಯಲಕ್ಷ್ಮೀ ಆ ದೇವಸ್ಥಾನದ ಫೋಟೋ ಶೇರ್ ಮಾಡಲು ಏನು ಕಾರಣ? ಈ ದೇವತೆಯ ಶಕ್ತಿ ಎಂಥಾದ್ದು ಎಂಬ ಬಗ್ಗೆ ವಿವರಗಳು ಇಲ್ಲಿವೆ.
ಆಯೋಧ್ಯೆ ಮಂಗಗಳ ಆಹಾರಕ್ಕೆ ದುಬಾರಿ ಮೊತ್ತ ದೇಣಿಗೆ ನೀಡಿದ ನಟ ಅಕ್ಷಯ್ ಕುಮಾರ್!
ವಿಜಯಲಕ್ಷ್ಮೀ ಇತ್ತೀಚೆಗೆ ಈ ದೇವಾಲಯಕ್ಕೆ ವಿಸಿಟ್ ಮಾಡಿದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಇದು ಬಹಳ ಕಾರಣಿಕದ ಕಾಮಾಕ್ಯ ದೇವಾಲಯ. ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಿದು. ಇದು ಭುವನೇಶ್ವರಿ, ಬಗಲಾಮುಖಿ , ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡು ಮಹಾಶಕ್ತಿ ಪೀಠ. ಇದು ತಾಂತ್ರಿಕ ಚಟಿವಟಿಕೆಗಳಿಗೂ ಇದು ಹೆಸರುವಾಸಿ. ತಂತ್ರವಿದ್ಯೆಯ ಸಾಧಕರು ಈ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಏಕೆಂದರೆ ಭುವನೇಶ್ವರಿ, ಬಗಲಾಮುಖಿ, ಚಿನ್ನಮಸ್ತ, ಮಹಾತ್ರಿಪುರ ಸುಂದರಿ, ತಾರಾ ದೇವಿಯರು ತಾಂತ್ರಿಕ ವಿದ್ಯೆಗಳಲ್ಲಿ ಬರುವ ಮಹಾಶಕ್ತಿಯರು. ಈ ಎಲ್ಲ ದೇವಿಯರ ಮಹಾಶಕ್ತಿ ರೂಪವಾಗಿ ಕಾಮಾಕ್ಯದ ಈ ಶಕ್ತಿಪೀಠದ ದೇವಿಯ ಸ್ವರೂಪವಿದೆ ಎಂದು ಭಕ್ತರು ನಂಬುತ್ತಾರೆ.
ಇದರ ಜೊತೆಗೆ ಮಾಟ ಮಂತ್ರಗಳನ್ನು ತೊಡೆದು ಹಾಕಲು, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಸಾಕಷ್ಟು ಮಂದಿ ಈ ದೇವಸ್ಥಾನಕ್ಕೆ ಬರುತ್ತಾರೆ. ಶತ ಶತಮಾನಗಳಷ್ಟು ಹಿಂದಿನ ಇತಿಹಾಸ ಹೊಂದಿರುವ ಈ ದೇವ ಸನ್ನಿಧಿ ತನ್ನ ಸೊಬಗು ಮತ್ತು ಐತಿಹಾಸಿಕ ಮಹತ್ವ ಮತ್ತು ವಿಶೇಷತೆಯಿಂದಲೇ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯವನ್ನು 51 ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜನಪ್ರಿಯ ಐತಿಹ್ಯಗಳ ಪ್ರಕಾರ, 'ಮಾತೆ ಸತಿ'ಯ ದೇಹದ 51 ತುಣುಕುಗಳು ಎಲ್ಲೆಲ್ಲಿ ಬಿದ್ದವೋ, ಆ ಸ್ಥಳಗಳನ್ನು ಶಕ್ತಿಪೀಠಗಳೆಂದು ಪರಿಗಣಿಸಲಾಗುತ್ತದೆ. ಅದೇ ಶಕ್ತಿಪೀಠಗಳ ಸಾಲಿನಲ್ಲಿ ಕಾಮಾಕ್ಯ ದೇವಸ್ಥಾನ ಕೂಡಾ ಸೇರುತ್ತದೆ.
ಕನ್ನಡತಿಯ ಅಮ್ಮಮ್ಮ ಈಗ ಅಮೃತಧಾರೆಯ ಗೌತಮ್ ದಿವಾನ್ ತಾಯಿ ಭಾಗ್ಯ ದಿವಾನ್ !
ಇಲ್ಲಿ ಮಾತಾ ಸತಿಯ ಯೋನಿಯು ಬಿದ್ದಿದೆ ಎಂಬ ನಂಬಿಕೆ ಇದ್ದು, ಅದಕ್ಕಾಗಿಯೇ ಇಲ್ಲಿ ಸತಿಯ ಯೋನಿ ರೂಪವನ್ನು ಪೂಜಿಸಲಾಗುತ್ತದೆ. ಈ ದೇವಾಲಯವನ್ನು 8ನೇ-9ನೇ ಶತಮಾನದಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಬಳಿಕ ಇಲ್ಲಿ ಸಾಕಷ್ಟು ಹೊಸ ಸೇರ್ಪಡೆಗಳು, ಪುನರ್ನಿಮಾಣ ಕಾರ್ಯಗಳೂ ಆಗಾಗ ನಡೆದ ಉಲ್ಲೇಖ ಕೂಡಾ ಸಿಗುತ್ತದೆ. ಅಂತಿಮವಾಗಿ ನೀಲಾಚಲ ಎಂಬ ವಾಸ್ತುಶೈಲಿಯನ್ನು ಇಲ್ಲಿ ಅಳವಡಿಸಿರುವುದು ಕಾಣಿಸುತ್ತದೆ.
ದರ್ಶನ್ ಜೈಲು ಸೇರಿದಾಗ ವಿಜಯಲಕ್ಷ್ಮೀ ಈ ದೇವಾಲಯಕ್ಕೆ ಭೇಟಿ ನೀಡಿದ್ದರು. ಪತಿಯ ಬಿಡುಗಡೆಗೆ ಪ್ರಾರ್ಥಿಸಿದ್ದರು. ಕೊನೆಗೂ ದರ್ಶನ್ ಜೈಲಿನಿಂದ ಹೊರಬಿದ್ದಿರುವ ಕಾರಣ ವಿಜಯಲಕ್ಷ್ಮೀ ಇದಕ್ಕೆ ದೇವಿಯ ಆಶೀರ್ವಾದವೇ ಕಾರಣ ಎಂದು ದೇವಿಯನ್ನು ಈ ಸಂದರ್ಭದಲ್ಲಿ ಸ್ಮರಸಿಕೊಂಡಿದ್ದಾರೆ.