ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು 6 ರಿಂದ 7 ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು...
ತಮಿಳುನಾಡಿನಲ್ಲಿ ಮೊದಲಿನಿಂದಲೂ ಸಿನಿತಾರೆಯರ ಪಾಲಿಟಿಕ್ಸ್ ಸಕ್ಸಸ್ ಕಂಡಿದೆ. ಇದೀಗ 'ತಮಿಳಿಗ ವೆಟ್ರಿ ಕಳಗಂ' ಅನ್ನೋ ಪಕ್ಷವನ್ನ ಕಟ್ಟಿ ತಮಿಳು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸೋಕೆ ದಳಪತಿ ವಿಜಯ್ ಸಜ್ಜಾಗಿದ್ದಾರೆ. ಸದ್ಯ ವಿಜಯ್ ಪಕ್ಷದ ಮೊಟ್ಟ ರಾಲಿ ನಡೆದಿದ್ದು, ಅಲ್ಲಿ ಸೇರಿದ ಜನಸಾಗರ ನೋಡಿ ತಮಿಳುನಾಡು ರಾಜಕಾರಣಿಗಳು ಥಂಡಾ ಹೊಡೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ವಿಜಯ್ ಸುನಾಮಿ ಹೇಗಿರುತ್ತೆ ಅನ್ನೋದ್ರ ಟ್ರೈಲರ್ ನಂತಿದೆ ಈ ರಾಲಿ.
ತಮಿಳುನಾಡು ಪಾಲಿಟಿಕ್ಸ್ನಲ್ಲಿ ದಳಪತಿ ವಿಜಯ್ ಸುನಾಮಿ..!
ಹೌದು, ತಮಿಳುನಾಡು ರಾಜಕಾರಣದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ತಮಿಳಿಗ ವೆಟ್ರಿ ಕಳಗಂ ಅನ್ನೋ ಪಕ್ಷವನ್ನ ಕಟ್ಟಿ ಪಾಲಿಟಿಕ್ಸ್ ಅಖಾಡಕ್ಕೆ ಇಳಿದಿರೋ ದಳಪತಿ, ತಮಿಳಿನ ರಾಜಕೀಯ ಚಿತ್ರಣವನ್ನೇ ಬದಲಿಸೋ ಸೂಚನೆ ಕೊಡ್ತಾ ಇದ್ದಾರೆ. ಸದ್ಯ TVK ಪಕ್ಷದ ಮೊಟ್ಟ ಮೊದಲ ರಾಲಿ ನಡೆದಿದ್ದು ಅದಕ್ಕೆ ಜನಸಾಗರವೇ ಹರಿದು ಬಂದಿದೆ.
ಕನ್ನಡತಿ 'ಬಘೀರ' ಬ್ಯೂಟಿ ರುಕ್ಮಿಣಿ ವಸಂತ್ಗೆ ಜಾಕ್ಪಾಟ್: ಟಾಲಿವುಡ್ ಸ್ಟಾರ್‌ಗೆ ನಾಯಕಿ?
ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು 6 ರಿಂದ 7 ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು. ಈ ರಾಲಿಗೆ ಸೇರಿದ ಜನಸಾಗರದ ವಿಡಿಯೋ ಸಂಚಲನ ಮೂಡಿಸಿದ್ದು, ಇದನ್ನ ನೋಡಿದ ಜನ ಇದುವೇ ರಿಯಲ್ ಕೆಜಿಎಫ್.. ದಳಪತಿಯೇ ಅಸಲಿ ರಾಕಿಭಾಯ್ ಅಂತಾ ಇದ್ದಾರೆ.
ಜನಸಾಗರದೆದುರು ದಳಪತಿ ಪವರ್ ಫುಲ್ ಭಾಷಣ..; 'ವಿಜಯ' ಯಾತ್ರೆ ಕಂಡು ದ್ರಾವಿಡ ಪಕ್ಷಗಳಿಗೆ ನಡುಕ..!
ವಿಜಯ್ ಯಾಕೆ ಬೇರೆ ಪಕ್ಷಗಳ ಬಗ್ಗೆ , ಬೇರೆ ನಾಯಕರ ಬಗ್ಗೆ ಮಾತನಾಡೋದಿಲ್ಲ. ವಿಜಯ್ಗೆ ನಿಜಕ್ಕೂ ರಾಜಕೀಯ ನಾಯಕನಾಗೋ ತಾಕತ್ತಿದ್ಯಾ ಅಂತ ಅನೇಕರು ಪ್ರಶ್ನೆ ಮಾಡಿದ್ರು. ಆದ್ರೆ ಈ ರಾಲಿನಲ್ಲಿ ವಿಜಯ್ ಪವರ್ ಫುಲ್ ಸ್ಪೀಚ್ ನೀಡುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. 'ನಾನು ಯಾರನ್ನೂ ಟೀಕೆ ಮಾಡೋದಿಲ್ಲ, ಆದ್ರೆ ಜನರ ಸೇವೆಗಾಗಿ ನಾನು ನನ್ನ ಸಿನಿಮಾ ಕರೀಯರ್ ಬಿಟ್ಟು ಬಂದಿದ್ದೇನೆ. ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ. ನಿಮ್ಮನ್ನು ನಂಬಿ ಬಂದಿದ್ದೇನೆ' ಅಂತ ಎಮೋಷನಲ್ ಭಾಷಣ ಮಾಡಿದ್ದಾರೆ ವಿಜಯ್.
ಸೋಲು ನಿಮ್ಮನ್ನು ಕಾಡುತ್ತಿದ್ದರೆ ಒಮ್ಮೆ ಅಮಿತಾಭ್ ಬಚ್ಚನ್ ಹೇಳಿದ್ದು ಕೇಳಿ, ಉದ್ಧಾರ ಆಗ್ತೀರಾ!
ವಿಜಯ್ ಱಲಿಗೆ ಸಿಕ್ಕಿರೋ ಜನ ಬೆಂಬಲ ತಮಿಳು ರಾಜಕೀಯ ಪಕ್ಷಗಳಿಗೆ ನಡುಕ ಹುಟ್ಟಿಸಿರೋದು ಸುಳ್ಳಲ್ಲ. ಅದ್ರಲ್ಲೂ ಸ್ಟಾಲಿನ್ ನೇತೃತ್ವದ ಆಡಳಿತ ಪಕ್ಷ ಡಿಎಂಕೆ, ವಿಜಯ್ ಖದರ್ ಕಂಡು ಥಂಡಾ ಹೊಡೆದಿದೆ. ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ದವಾಗದೇ ಹೋದ್ರೆ ವಿಜಯ್ ಎದುರು ವಿಜಯ ಕಷ್ಟ ಅನ್ನೋದನ್ನ ಅರ್ಥಮಾಡಿಕೊಂಡಿದೆ.
ಮತ್ತೊಬ್ಬ ಸಿನಿತಾರೆಗೆ ಒಲಿಯುತ್ತಾ ತಮಿಳುನಾಡು ಸಿಎಂ ಪಟ್ಟ..? MGR, ಕರುಣಾನಿಧಿ, ಜಯಲಲಿತಾ ನಂತ್ರ 'ವಿಜಯ' ಪರ್ವ..? ಅಸಲಿಗೆ ತಮಿಳುನಾಡಿನಲ್ಲಿ ಮೊದಲಿಂದಲೂ ಸಿನಿತಾರೆಯರಿಗೆ ರಾಜಕೀಯದಲ್ಲಿ ಯಶಸ್ಸು ಸಿಕ್ಕಿದೆ. ತಮಿಳುನಾಡಿನ ಮುಖ್ಯಮಂತ್ರಿಗಳಾಗಿ ಮೆರೆದ MGR, ಕರುಣಾನಿಧಿ, ಜಯಲಲಿತಾ ಎಲ್ಲರೂ ಕೂಡ ಸಿನಿಮಾರಂಗದಿಂದಲೇ ರಾಜಕೀಯರಂಗಕ್ಕೆ ಬಂದವರು. ಮತ್ತೀಗ ವಿಜಯ್ ಕೂಡ ಇವರ ಹಾದಿಯಲ್ಲೇ ಸಾಗ್ತಿರುವಂತಿದೆ.
ವಿಜಯ್ಗೆ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಫ್ಯಾನ್ ಫಾಲೋವಿಂಗ್ ಇದೆ. ವಿಜಯ್ ಅದೆಂಥಾ ಸಿನಿಮಾ ಮಾಡಿದ್ರೂ ಮಿನಿಮಮ್ 200 ಕೋಟಿ ಬಾಕ್ಸ್ ಆಫೀಸ್ ಗಳಿಕೆ ಮಾಡುತ್ವೆ. ಅಂಥಾ ವಿಜಯ್ ಈಗ ರಾಜಕೀಯಕ್ಕೆ ಧುಮುಕಿದ್ದು ಪಾಲಿಟಿಕ್ಸ್ನಲ್ಲೂ ಸುನಾಮಿ ಎಬ್ಬಿಸೋ ಸೂಚನೆ ಸಿಕ್ತಾ ಇದೆ.
ಸದ್ಯ ವಿಜಯ್ ತಮ್ಮ ಸಿನಿಜೀವನದ ಕೊನೆಯ ಚಿತ್ರದಲ್ಲಿ ನಟಿಸ್ತಾ ಇದ್ದಾರೆ. ದಳಪತಿಯ ಈ 69ನೇ ಚಿತ್ರಕ್ಕೆ ನಮ್ಮ ಕೆವಿಎನ್ ಸಂಸ್ಥೆ ಬಂಡವಾಳ ಹೂಡ್ತಾ ಇದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲೂ ರಾಜಕೀಯ ಅಂಶಗಳು ಇರಲಿವೆ.
ಫ್ಲೋ..
2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು , ಇದರ ಮೇಲೆ ದಳಪತಿ ಕಣ್ಣಿಟ್ಟಿದ್ದಾರೆ. ಇಷ್ಟು ದಿನ ತಮಿಳುನಾಡಿನಲ್ಲಿ ಒಂದು ಬಾರಿ ಡಿಎಂಕೆ ಗೆದ್ರೆ, ಮತ್ತೊಮ್ಮೆ ಎಐಎಡಿಎಂಕೆ ಗೆಲ್ತಾ ಇತ್ತು. ಆದ್ರೆ ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಮಂಕಾಗಿದೆ. ಈ ಜಾಗವನ್ನ ದಳಪತಿಯ ಟಿವಿಕೆ ತುಂಬೋ ಸಾಧ್ಯತೆಯೇ ದಟ್ಟವಾಗಿದೆ.
ಸಾವಿನ ದೃಶ್ಯಕ್ಕೆ ಸಂಬಂಧಿಸಿದ ಅದೊಂದು ಪ್ರಾಕ್ಟೀಸ್ ಕನ್ನಡ ಚಿತ್ರರಂಗದಲ್ಲಿದೆ, ಏನದು?
ಒಟ್ಟಾರೆ ಒಂದೇ ಒಂದು ಱಲಿ ಮೂಲಕ ಸಂಚಲನ ಮೂಡಿಸಿರೋ ದಳಪತಿ ವಿಜಯ್, ಇಡೀ ತಮಿಳು ಪಾಲಿಟಿಕ್ಸ್ನ ದಿಕ್ಕನ್ನೇ ಬದಲಿಸೋ ಸೂಚನೆ ನೀಡಿದ್ದಾರೆ. ವಿಜಯ್ ಹವಾ ನೋಡ್ತಾ ಇದ್ರೆ ತಮಿಳುನಾಡಿಗೆ ದಳಪತಿಯೇ ಮುಂದಿನ ಅಧಿಪತಿ ಆದ್ರೂ ಅಚ್ಚರಿ ಪಡಬೇಕಿಲ್ಲ..!