ಲಾಲ್ ಸಿಂಗ್ ಚಡ್ಡಾ, ಆಮೀರ್ ಖಾನ್ ಬಹಿಷ್ಕರಿಸಿ ಟ್ರೆಂಡ್‌ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಬೇಸರ

By Shruiti G Krishna  |  First Published Aug 1, 2022, 5:52 PM IST

ಬಾಲಿವುಡ್ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರಾರಂಭ ಮಾಡಿದಾಗನಿಂದಲೂ Boycott ಲಾಲ್ ಸಿಂಗ್ ಚಡ್ಡಾ, Boycottಆಮೀರ್ ಖಾನ್ ಪದ ಟ್ರೆಂಡ್ ನಲ್ಲಿದೆ. ಟ್ವಿಟ್ಟರ್ ನಲ್ಲಿ ಇದು ಆಗಾಗ ಟ್ರೆಂಡ್ ಆಗುತ್ತಲೆ ಇರುತ್ತದೆ. ನೆಟ್ಟಿಗರು ಅಮೀರ್ ಖಾನ್ ಅವರನ್ನು ಬಹಿಷ್ಕರಿಸಬೇಕು,  ಅವರ ಸಿನಿಮಾ ಬಹಿಷ್ಕಿರಿಸಬೇಕು ಎನ್ನುವುದರ ಬಗ್ಗೆ ಬೇಸರ ಹೊರಹಾಕಿದ್ದಾರೆ. 


ಬಾಲಿವುಡ್ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರಾರಂಭ ಮಾಡಿದಾಗನಿಂದಲೂ Boycott ಲಾಲ್ ಸಿಂಗ್ ಚಡ್ಡಾ, Boycottಆಮೀರ್ ಖಾನ್ ಪದ ಟ್ರೆಂಡ್ ನಲ್ಲಿದೆ. ಟ್ವಿಟ್ಟರ್ ನಲ್ಲಿ ಇದು ಆಗಾಗ ಟ್ರೆಂಡ್ ಆಗುತ್ತಲೆ ಇರುತ್ತದೆ. ನೆಟ್ಟಿಗರು ಅಮೀರ್ ಖಾನ್ ಅವರನ್ನು ಬಹಿಷ್ಕರಿಸಬೇಕು,  ಅವರ ಸಿನಿಮಾ ಬಹಿಷ್ಕಿರಿಸಬೇಕು ಎನ್ನುವುದರ ಬಗ್ಗೆ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಮೀರ್ ಖಾನ್, 'Boycott ಬಾಲಿವುಡ್, Boycott ಅಮೀರ್ ಖಾನ್, Boycott ಲಾಲ್ ಸಿಂಗ್ ಚಡ್ಡಾ ಎನ್ನುವುದು ತುಂಬಾ ಬೇಸರವಾಗುತ್ತದೆ. ಏಕೆಂದರೆ ಬಹಳಷ್ಟು ಜನರು ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ನಂಬಿದ್ದಾರೆ ಹಾಗಾಗಿ ಅವರು ತಮ್ಮ ಹೃದಯದಿಂದ ಇದನ್ನು ಹೇಳುತ್ತಿದ್ದಾರೆ. ಅವರು ತಮ್ಮ ಹೃದಯದಲ್ಲಿ ಅದನ್ನೇ ನಂಬಿದ್ದಾರೆ. ಆದರೆ ಇದು ಶುದ್ದ ಸುಳ್ಳು' ಎಂದು ಆಮೀರ್ ಖಾನ್ ಬೇಸರ ಹೊರಹಾಕಿದರು. 

ಇನ್ನು ಮಾತು ಮುಂದುವರೆಸಿದ ಆಮೀರ್ ಖಾನ್ ಈ ದೇಶವನ್ನು ನಾನು ಕೂಡ ತುಂಬಾ ಇಷ್ಟಪಡುತ್ತೇನೆ ಎಂದು ಹೇಳಿದರು. 'ನಾನು ದೇಶವನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ನಾನು ಅದು. ಕೆಲವರು ಹಾಗೆ ಭಾವಿಸಿರುವುದು ದುರದೃಷ್ಟಕರ' ಎಂದು ಹೇಳಿದರು. 'ಅದು ಹಾಗಲ್ಲ ಎಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ ಆದ್ದರಿಂದ ದಯವಿಟ್ಟು ನನ್ನ ಚಲನಚಿತ್ರಗಳನ್ನು ಬಹಿಷ್ಕರಿಸಬೇಡಿ, ದಯವಿಟ್ಟು ನನ್ನ ಚಲನಚಿತ್ರಗಳನ್ನು ನೋಡಿ' ಎಂದು ಆಮೀರ್ ಖಾನ್ ಮನವಿ ಮಾಡಿದರು. 

#BoycottLaalSinghChaddha; ಆಮೀರ್ ಸಿನಿಮಾ ಬಹಿಷ್ಕಾರಕ್ಕೆ ನೆಟ್ಟಿಗರು ಒತ್ತಾಯಿಸುತ್ತಿರುವುದೇಕೆ?

Tap to resize

Latest Videos

ಅಂದಹಾಗೆ ಅಮೀರ್ ಖಾನ್ ಅವರ 2015ರ ಸಂದರ್ಶನದ ಬಳಿಕ ಬಹಿಷ್ಕಾರ ಮಾಡುವಂತೆ ಮಾತುಗಳು ಕೇಳಿಬರುತ್ತಿವೆ. ಆಮೀರ್ ಸಿನಿಮಾ ರಿಲೀಸ್ ಸಮಯದಲ್ಲಿ ಟ್ರೆಂಟ್ ಆಗುವುದು ಕಾಮನ್ ಆಗಿದೆ.  ಸಂದರ್ಶನದಲ್ಲಿ ಆಮೀರ್ ಖಾನ್ ಮಾಜಿ ಪತ್ನಿ, ನಿರ್ಮಾಪಕಿ ಪತ್ನಿ ಕಿರಣ್ ರಾವ್ ಇಬ್ಬರು ಭಾರತದಲ್ಲಿ  ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಹಾಗಾಗಿ ದೇಶಗ ತೊರೆಯಲು ನಿರ್ಧರಿಸಿರುವುದಾಗಿ ಹೇಳಿದ್ದರು. ಆಮೀರ್ ಖಾನ್ ಅವರ ಈ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಆಮೀರ್ ಸಿನಿಮಾ ಇನ್ಮುಂದೆ ಬಹಿಷ್ಕರಿಸಬೇಕು, ಬಾಲಿವುಡ್ ಅವರನ್ನು ಬಹಿಷ್ಕರಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು. 

ಸದ್ಯ ಆಮೀರ್ ಖಾನ್ ಅನೇಕ ವರ್ಷಗಳ ಬಳಿಕ ಲಾಲ್ ಸಿಂಗ್ ಚಡ್ಡಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಚ್ಚುಕೊಂಡಿದ್ದಾರೆ. ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ನ  ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ.  ಹಾಲಿವುಡ್ ನಲ್ಲಿ ಟಾಮ್ ಹ್ಯಾಂಕ್ಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ಆಮೀರ್ ಖಾನ್ ಮಿಂಚಿದ್ದಾರೆ. ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವನ್ನು ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಕರೀನಾ ಈ ಮೊದಲು ಆಮೀರ್ ಖಾನ್ ಜೊತೆ 3 ಈಡಿಯಟ್ಸ್ ನಟಿಸಿದ್ದರು.  

'ಲಾಲ್ ಸಿಂಗ್ ಚಡ್ಡಾ' ವೀಕ್ಷಿಸಿದ ರಾಜಮೌಳಿ, ಚಿರಂಜೀವಿ, ನಾಗಾರ್ಜುನ; ಸ್ಟಾರ್‌ಗಳ ಪ್ರತಿಕ್ರಿಯೆಗೆ ಆಮೀರ್ ಕಣ್ಣೀರು

ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಾಗಚೈತನ್ಯ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆಮೀರ್ ಖಾನ್ ಜೊತೆ ಸೈನಿಕನ ಪಾತ್ರದಲ್ಲಿ ನಾಗ್ ಕಾಣಿಸಿಕೊಂಡಿದ್ದಾರೆ. ಈ ಮೊಲಕ ಮೊದಲ ಬಾರಿಗೆ ನಾಗಚೈತನ್ಯ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ಈ ಬಹುನಿರೀಕ್ಷೆಯ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗುತ್ತಿದೆ.   

click me!