ಬಾಯ್‌ಫ್ರೆಂಡ್ ಸಿದ್ಧಾರ್ಥ್ ಜೊತೆ ದುಬೈನಲ್ಲಿ ಹುಟ್ಟುಹಬ್ಬ ಸಂಭ್ರಮಿಸಿದ ನಟಿ ಕಿಯಾರಾ

By Shruiti G Krishna  |  First Published Aug 1, 2022, 11:48 AM IST

ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾನಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಜುಲೈ 31ರಂದು ಕಿಯಾರಾ ತನ್ನ ಜನ್ಮದಿನವನ್ನು ಆಚರಿಸಿಕೊಂಡರು. ಕಿಯಾರಾಗೆ  ಅಭಿಮಾನಿಗಳು ಮತ್ತು ಚಿತ್ರರಂದ ಗಣ್ಯರು ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ವಿಶೇಷ ಅಂದರೆ ಈ ಬಾರಿ ಕಿಯಾರಾ ತನ್ನ ಹುಟ್ಟುಹಬ್ಬವನ್ನು ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಆಚರಿಸಿಕೊಂಡಿದ್ದಾರೆ. 


ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾನಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಜುಲೈ 31ರಂದು ಕಿಯಾರಾ ತನ್ನ ಜನ್ಮದಿನವನ್ನು ಆಚರಿಸಿಕೊಂಡರು. ಕಿಯಾರಾಗೆ  ಅಭಿಮಾನಿಗಳು ಮತ್ತು ಚಿತ್ರರಂದ ಗಣ್ಯರು ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ವಿಶೇಷ ಅಂದರೆ ಈ ಬಾರಿ ಕಿಯಾರಾ ತನ್ನ ಹುಟ್ಟುಹಬ್ಬವನ್ನು ಬಾಯ್‌ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಆಚರಿಸಿಕೊಂಡಿದ್ದಾರೆ. ಅಂದಹಾಗೆ ಈ ಲವ್ ಬರ್ಡ್ಸ್ ಸದ್ಯ ವಿದೇಶದಲ್ಲಿದ್ದಾರೆ. ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಕಿಯಾರಾ ಸಿದ್ಧಾರ್ಥ್ ಜೊತೆ ದುಬೈಗೆ ಹಾರಿದ್ದಾರೆ. ಅಂದಹಾಗೆ ಸಿದ್ಧಾರ್ಥ್ ಮತ್ತು ಕಿಯಾರಾ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಮತ್ತೆ ಒಂದಾಗಿ ಹುಟ್ಟುಹಬ್ಬ ಆಚರಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. 

ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರು ದುಬೈ ಶಾಪಿಂಗ್ ಮಾಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಇಬ್ಬರು ಒಟ್ಟಿಗೆಕಾಣಿಸಿಕೊಂಡಿಲ್ಲ. ಆದರೆ ಒಂದೇ ಮಾಲ್‌ನಲ್ಲಿ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಸೆಲ್ಫಿಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಇಬ್ಬರು ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆಮಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Tap to resize

Latest Videos

ಪ್ರೇಯಸಿಗೆ ಪ್ರೀತಿಯ ಬರ್ಡತೇ ವಿಶ್ 

ಕಿಯಾರಾಗೆ ಸಿದ್ಧಾರ್ಥ್ ವಿಡಿಯೋ ಮೂಲಕ ಸ್ವೀಟ್ ವಿಶ್ ಮಾಡಿದ್ದರು. ಸಿದ್ಧಾರ್ಥ್ ಮಲ್ಹೋತ್ರಾ ಹಂಚಿಕೊಂಡಿರುವ ವಿಡಿಯೋ ಕಿಯಾರಾ ಅಡ್ವಾಣಿ ಜೊತೆಗೆ ಶೇರ್ಷಾ ಸಿನಿಮಾ ಪ್ರಚಾರ ಮಾಡುತ್ತಿರುವ ಸಮಯದ್ದಾಗಿದೆ. ಈ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕಿಯಾರಾ ಕಪ್ಪು ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. 

ಮತ್ತೆ ಒಂದಾದ Kiara Advani Siddharth Malhotra ಜೋಡಿ

ಸಿದ್ದಾರ್ಥ್ ಮತ್ತು ಕಿಯಾರಾ ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಎಲ್ಲಿಯೂ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿಲ್ಲ. ಹಾಗಂತ ಇಬ್ಬರ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಲವ್ ಬರ್ಡ್ಸ್  ಆಗಾಗ ವಿದೇಶಿ ಪ್ರಯಾಣ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಶೇರ್ಷಾ(Shershaah) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಅಭಿಮಾನಿಗಳು ಹಾರೈಸಿದ್ದರು. 

ಏರ್‌ಪೋರ್ಟ್‌ ಲುಕ್‌ನಲ್ಲಿ ಸಿದ್ಧಾರ್ಥ್- ಕಿಯಾರಾ, ಕ್ಯೂಟ್ ಕಪಲ್ಸ್ ಎಂದ ಫ್ಯಾನ್ಸ್!

ಬ್ರೇಕಪ್ ವದಂತಿ

ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರು ತಮ್ಮ ಪ್ರೀತಿ ವಿಚಾರವನ್ನು ಯಾವತ್ತು ಬಹಿರಂಗವಾಗಿ ಹೇಳಿಕೊಂಡವರಲ್ಲ, ಅಲ್ಲದೆ ನಿರಾಕರಿಸಿಯೂ ಇಲ್ಲ. ಶೇರ್ಷಾ ಸಿನಿಮಾ ಬಿಡುಗಡೆ ಬಳಿಕ ಈ ಜೋಡಿ ಮತ್ತಷ್ಟು ಫೇಮಸ್ ಆಗಿತ್ತು. ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇತ್ತೀಚಿಗೆ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೆ ಬಿಟ್ಟಿದ್ದಾರೆ, ಇ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರೂ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಇಬ್ಬರು ತಮ್ಮ ರಿಲೇಶನ್ ಶಿಪ್ ಕೊನೆಗೊಳಿಸಿದ್ದಾರೆ ಎನ್ನಲಾಗಿತ್ತು. ಆಗಲೂ ಈ ಸ್ಟಾರ್ ಜೋಡಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮತ್ತೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಒಟ್ಟಿಗೆ ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಇಬ್ಬರ ನಡುವೆ ಎಲ್ಲವೂ ಸರಿ ಎನ್ನುವುದು ಬಹಿರಂಗವಾಗಿದೆ. 

  

click me!