ಕನ್ನಡ ಕಲಿಯುತ್ತೇನೆ, ಡಿವೋರ್ಸ್ ರಗಳೆ ನಡುವೆ ಐಶ್ವರ್ಯಾ ಕಲಿಸಿದ ತುಳು ಮಾತನಾಡಿದ ಅಭಿಷೇಕ್ ವಿಡಿಯೋ ವೈರಲ್!

By Chethan Kumar  |  First Published Dec 9, 2024, 12:59 PM IST

ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ನಡುವಿನ ದಾಂಪತ್ಯ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದೆ. ಡಿವೋರ್ಸ್ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದರ ನಡುವೆ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಕಲಿಸಿದ ತುಳು ಮಾತನಾಡಿದ ಹಳೇ ವಿಡಿಯೋ ಒಂದು ವೈರಲ್ ಆಗಿದೆ. 
 


ಮುಂಬೈ(ಡಿ.09) ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ನಡುವಿನ ಸಂಬಂಧ ಹಳಸಿದೆ ಎಂದು ವರದಿಯಾಗಿದೆ. ಇದರ ನಡುವೆ ಇವರಿಬ್ಬರು ಸೆಲ್ಫಿ ಫೋಟೋ ಕೂಡ ವೈರಲ್ ಆಗಿದೆ. ಈ ಸೆಲೆಬ್ರೆಟಿ ದಂಪತಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಅನ್ನೋ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಇದರ ನಡುವೆ ಪತ್ನಿ ಐಶ್ವರ್ಯ ಕಲಿಸಿಕೊಟ್ಟ ತುಳುವಿನಲ್ಲಿ ಮಾತನಾಡಿದ ಅಭಿಷೇಕ್ ಬಚ್ಚನ್ ಹಳೆ ವೀಡಿಯೋ ಭಾರಿ ವೈರಲ್ ಆಗಿದೆ. ಐಶ್ವರ್ಯ ತುಳುವಿನ ಕೆಲ ಪದಗಳನ್ನು ಕಲಿಸಿದ್ದಾಳೆ. ಇಷ್ಟು ಮಾತ್ರ ಗೊತ್ತಿದೆ. ಹೆಚ್ಚು ಗೊತ್ತಿಲ್ಲ. ಆದರೆ ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ರಿಪೋರ್ಟರ್ ಕೆಲಸ ಕೊಟ್ಟರೆ ಕನ್ನಡವನ್ನೂ ಕಲಿಯತ್ತೇನೆ ಎಂದಿರುವ ಅಭಿಷೇಕ್ ಬಚ್ಚನ್ ಹಳೇ ವಿಡಿಯೋ ಮತ್ತೆ ಸದ್ದು ಮಾಡುತ್ತಿದೆ.

ಚಿತ್ರದ ಪ್ರಮೋಶನ್‌ಗೆ ಬೆಂಗಳೂರಿಗೆ ಆಗಮಿಸಿದ್ದ ಅಭಿಷೇಕ್ ಬಚ್ಚನ್ ಹಾಗೂ ಚಿತ್ರ ತಂಡ ಏಷ್ಯಾನೆಟ್ ಸುವರ್ಣನ್ಯೂಸ್‌ ಜೊತೆ ಮಾತುಕತೆಗೆ ಇಳಿದಿತ್ತು. ಈ ವೇಳೆ ನಿಮಗೆ ಕನ್ನಡ ಬರುತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್ ಬಚ್ಚನ್, ನನಗೆ ಕನ್ನಡ ಬರುವುದಿಲ್ಲ. ಆದರೆ ತುಳು ಸ್ವಲ್ಪ ಬರುತ್ತೆ ಎಂದಿದ್ದಾರೆ. ಬಳಿಕ ತುಳುವಿನಲ್ಲಿ ಎಂಚ ಉಲ್ಲಾರ್( ಹೇಗಿದ್ದೀರಿ?) ಸೌಖ್ಯ ಎಂದು ತಳುವಿನಲ್ಲಿ ಮಾತನಾಡಿದ್ದಾರೆ. ಇದು ಐಶ್ವರ್ಯ ರೈ ಕಲಿಸಿದ ತುಳು ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ತುಳುವಿನ ಕೆಲ ಪದಗಳು ಮಾತ್ರ ನನಗೆ ತಿಳಿದಿದೆ. ಹೆಚ್ಚು ಗೊತ್ತಿಲ್ಲ ಎಂದಿದ್ದಾರೆ.

Tap to resize

Latest Videos

ವಿಚ್ಛೇದನ ವದಂತಿ ಮಧ್ಯೆ ಐಶ್‌ ಸೆಲ್ಫಿ ವೈರಲ್‌, ಅತ್ತೆ ಜೊತೆ ಅಭಿಷೇಕ್‌ ಪೋಸ್

ಕನ್ನಡ ಕಲಿಯುವ ಕುರಿತು ಆಸಕ್ತಿ ಇದೆಯಾ ಅನ್ನೋ ಪ್ರಶ್ನೆಗೆ ಅಭಿಷೇಕ್ ಬಚ್ಚನ್ ನೀಡಿದ ಉತ್ತರ ಹಲವರ ಫೇವರಿಟ್ ಆಗಿದೆ. ನನಗೆ ನಿಮ್ಮ ಚಾನೆಲ್‌ನಲ್ಲಿ ರಿಪೋರ್ಟರ್ ಕೆಲಸ ಕೊಡಿ, ಕನ್ನಡವನ್ನೂ ಕಲಿಯುತ್ತೇನೆ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ಕನ್ನಡದಲ್ಲೇ ಚಿತ್ರ ಬಿಡುಗಡೆ ಕುರಿತು ಮಾತನಾಡಿದ್ದಾರೆ. 

ಐಶ್ವರ್ಯ ರೈ ಜೊತೆಗಿನ ಸಂಬಂಧ ಹಳಸಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿರುವ ನಡುವೆ ಇದೀಗ ಐಶ್ವರ್ಯ ರೈ ಕಲಿಸಿದ ತುಳು ಪದಗಳನ್ನು ಉಚ್ಚರಿಸಿದ ಈ ವಿಡಿಯೋವನ್ನು ಇದೀಗ ಹಲವರು ಹಂಚಿಕೊಳ್ಳುತ್ತಿದ್ದಾರೆ. ಮೂಲಕ ಸೆಲೆಬ್ರೆಟಿ ದಂಪತಿಗಳ ನಡುವಿನ ಬಾಂದವ್ಯ ಉತ್ತಮವಾಗಿದೆ ಅನ್ನೋ ಸಂದೇಶ ಸಾರುವ ಪ್ರಯತ್ನ ಮಾಡಿದ್ದಾರೆ. 

ಐಶ್ವರ್ಯ ರೈ ಹಾಗೂ ಅಭಿಷೇಕ್ ಸಂಬಂಧ ಹಳಸಿದೆ ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಶ್ವರ್ಯ ಪಾಲ್ಗೊಂಡಿದ್ದರು. ಈ ವೇಳೆ ಐಶ್ವರ್ಯ ರೈ ಬಚ್ಚನ್ ತಮ್ಮ ಹೆಸರಿನ ಬಚ್ಚನ್ ಸರ್ನೇಮ್ ತೆಗೆದು ಹಾಕಿದ್ದರು. ಇದು ವಿಚ್ಚೇದನಕ್ಕೆ ಭಾರಿ ಪುಷ್ಠಿ ನೀಡಿತ್ತು. ಮದುವೆ ಬಳಿಕ ಐಶ್ವರ್ಯ ರೈ ತನ್ಮ ಹೆಸರಿನ ಮುಂದೆ ಬಚ್ಚನ್ ಸರ್‌ನೇಮ್ ಸೇರಿಸಿಕೊಂಡಿದ್ದರು. ಬಳಿಕ ಎಲ್ಲಾ ಕಡೆ ಈ ಸರ್‌ನೇಮ್ ಬಳಸಿದ್ದರು. ಆದರೆ ದುಬೈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಐಶ್ವರ್ಯ ರೈ ಮಾತ್ರ ಬಳಸಿದ್ದು ಭಾರಿ ಕೋಲಾಹಲ ಸೃಷ್ಟಿಸಿತ್ತು.  ಆದರೆ ಈ ಘಟನೆ ಬಳಿಕ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಕುಟುಂಬ ಸಮೇತ ತೆಗೆದ ಸೆಲ್ಫಿ ಫೋಟೋ ಭಾರಿ ವೈರಲ್ ಆಗಿ ಟ್ರೋಲ್‌ಗೆ ಉತ್ತರ ನೀಡಿತ್ತು.

ಮದುವೆ ಕಾರ್ಯಕ್ರಮದಲ್ಲಿ ಬಾಲಿವುಡ್ ದಿಗ್ಗಜರ ದಂಡೆ ಪಾಲ್ಗೊಂಡಿತ್ತು. ಈ ವೇಳೆ ಐಶ್ವರ್ಯ, ಅಭಿಷೇಕ್ ದಂಪತಿಗಳು ಪುತ್ರಿ ಆರಾಧ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ವಿಚ್ಚೇಧನ ವದಂತಿಯನ್ನು ತಳ್ಳಿ ಹಾಕಿತ್ತು. ಈ ಕಾರ್ಯಕ್ರಮದಲ್ಲಿ ಐಶ್ವರ್ಯ ಹಾಗೂ ಆಭಿಷೇಕ್ ತೆಗೆದ ಫೋಟೋಗಳು ಟೀಕೆಗಳಿಗೆ ಉತ್ತರ ನೀಡಿತ್ತು.
 

click me!