ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಇರ್ಲೇಬೇಕು, ಗಂಡ ಸರಿಯಾಗಿಲ್ಲ ಅಂದ್ರೆ ಬಿಟ್ಟು ಬಾ: ನಟಿ ಜ್ಯೋತಿಕಾ ತಾಯಿ ಖಡಕ್ ಮಾತು

By Vaishnavi Chandrashekar  |  First Published Dec 9, 2024, 10:02 AM IST

ಜೀವನ ಕಟ್ಟಿಕೊಳ್ಳುವ ಹಾದಿಯಲ್ಲಿ ಸಲಹೆ ಕೊಟ್ಟ ತಾಯಿ ಮತ್ತು ಅತ್ತೆ ಬಗ್ಗೆ ಮಾತನಾಡಿದ ನಟಿ ಜ್ಯೋತಿಕಾ. ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ವೈರಲ್...


ಸೌತ್ ಸಿನಿಮಾರಂಗದಲ್ಲಿ ಬೋಲ್ಡ್‌ ಆಂಡ್ ಬ್ಯೂಟಿಫುಲ್ ನಟಿ ಜ್ಯೋತಿಕಾ ಈ ಹಿಂದೆ ಐಎಫ್‌ಎಮ್‌ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಮುಖ್ಯವಾದ ಮಹಿಳೆಯರ ಬಗ್ಗೆ ಮಾತನಾಡಿದ್ದರು. ಈ ವೇಳೆ ತಮ್ಮ ತಾಯಿ ಕೊಟ್ಟ ಸಲಹೆ, ಅತ್ತೆ ತಿದ್ದಿ ತೀಡಿದ ಹಾಗೆ ಹಾಗೂ ಮಗಳು ಕಲಿಸಿಕೊಡುತ್ತಿರುವ ಹೊಸ ಟೆಕ್ನಾಲಜಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಅಲ್ಲದೆ ತಮ್ಮ ಪ್ರತಿ ಹೆಜ್ಜೆಯಲ್ಲೂ ಸಪೋರ್ಟ್ ಆಗಿರುವ ಸ್ನೇಹಿತೆಯರು ಮತ್ತು ಮಹಿಳಾ ಅಭಿಮಾನಿಗಳಿಗೆ ವಂದನೆ ಹೇಳಿದ್ದರು. ಈಗ ಮಾತುಕತೆಯಲ್ಲಿ ಜ್ಯೋತಿಕಾ ಅತ್ತೆ ಮತ್ತು ಅಮ್ಮ ಕೊಟ್ಟ ಸಲಹೆ ಸಖತ್ ವೈರಲ್ ಆಗುತ್ತಿದೆ.

ಜ್ಯೋತಿಕಾ ತಾಯಿ:

Tap to resize

Latest Videos

'17 ವರ್ಷಕ್ಕೆ ನನ್ನ ಜರ್ನಿ ಶುರುವಾಗಿದ್ದು ಹೀಗಾಗಿ ನನ್ನ ಜೀವನದಲ್ಲಿ ತುಂಬಾ ಮುಖ್ಯವಾದ ವ್ಯಕ್ತಿಗಳು ಇದ್ದಾರೆ. ಮೊದಲು ನನ್ನ ತಾಯಿ, ಜೋ ನೀನು ಗಟ್ಟಿಯಾಗಿ ನಿಲ್ಲಬೇಕು ಪ್ರಪಂಚವನ್ನು ಎದುರಿಸಬೇಕು ಎಂದು. ಜೋ ನಿನ್ನ ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಇರಬೇಕು ಏಕೆಂದರೆ ನೀನು ದಾಂಪತ್ಯದಲ್ಲಿ ಸರಿಯಾಗಿರುವ ವ್ಯಕ್ತಿ ಸಿಕ್ಕಿಲ್ಲ ಖುಷಿಯಾಗಿ ಇಲ್ಲ ಅಂದ್ರೆ ತಲೆ ಎತ್ತಿ ಹೊರ ನಡೆಯಲು ಧೈರ್ಯ ಇರಬೇಕು ಅಂದರು ಅಮ್ಮ. ಸೆಲ್ಫ್‌ ರೆಸ್ಪೆಕ್ಟ್‌ ಮತ್ತು ಸೆಲ್ಫ್‌ ವರ್ಥ್‌ ಹೇಳಿಕೊಟ್ಟಿದ್ದು ಅಮ್ಮ. ಮಗ ಮಗಳಿಗೆ ಯಾವುದೇ ಬೇಧಭಾವ ಇಲ್ಲದೆ ಬೆಳೆಸಿದ್ದಾರೆ.

ಜ್ಯೋತಿಕಾ ಅತ್ತೆ:

27ನೇ ವಯಸ್ಸಿಗೆ ಮದುವೆ ಮಾಡಿಕೊಂಡೆ ಆಗ ನನ್ನ ತಾಯಿ ಬೆಳೆಸಿದ ಗುಣಕ್ಕೆ ವಿರುದ್ಧವಾಗಿರುವ ವ್ಯಕ್ತಿಯನ್ನು ಭೇಟಿ ಮಾಡಿದೆ ಆಕೆ ನನ್ನಗೆ ಶಾಸ್ತ್ರ ಸಂಪ್ರದಾಯ ಮತ್ತು ಕುಟುಂಬ ಮೌಲ್ಯತೆಯನ್ನು ಹೇಳಿಕೊಟ್ಟರು. ಅವರೇ ನನ್ನ ಅತ್ತೆ. ಅತ್ತೆಯನ್ನು ನಾನು ರಾಣಿ ಎಂದು ಕರೆಯುತ್ತೀನಿ ಏಕೆಂದರೆ ಆಕೆ ಕೈಯಲ್ಲಿ ಮಾತ್ರ ಈ ಪ್ರಪಂಚಕ್ಕೆ ಈ ಸೊಸೈಟಿಗೆ ಒಳ್ಳೆಯ ಯುವರಾಜನನ್ನು ನೀಡಲು ಸಾಧ್ಯ. ನಾನು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಸೂರ್ಯ ನನಗೆ ಸಪೋರ್ಟ್ ಆಗಿ ನಿಲ್ಲುತ್ತಾರೆ ಇದಕ್ಕೆ ಅತ್ತೆ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತೀನಿ.

ಮಗಳು:

ಪ್ರತಿ ದಿನವನ್ನು ಖುಷಿಯಿಂದ ಆರಂಭಿಸಲು ನನ್ನ ಮಗಳು ಕಾರಣ. ಮುಂದೆ 10-15 ವರ್ಷಗಳ ನಂತರ ಆಕೆ ಕೂಡ ಈ ವೇದಿಕೆಯ ಮೇಲೆ ನಿಂತು ಅವಾರ್ಡ್ ಕಲೆಕ್ಟ್ ಮಾಡುವಂತೆ ನಾನು ಮಾಡುತ್ತೀನಿ ಎಂದು ಜ್ಯೋತಿಕಾ ಹೇಳಿದ್ದರು. ಅಲ್ಲಿಗೆ ಮಗಳನ್ನು ನಟಿ ಮಾಡಬೇಕು ಎಂದ ಆಸೆಯನ್ನು ವ್ಯಕ್ತ ಪಡಿಸಿದ್ದಂತೆ ಇತ್ತು. 

click me!