ಕುಣಿಯುತ್ತಲೇ ನೋರಾ ಫತೇಹಿಗೆ ದೆವ್ವ ಮೆಟ್ಟಿಕೊಳ್ತಾ? ನಟಿಯ ವಿಡಿಯೋ ನೋಡಿ ಫ್ಯಾನ್ಸ್‌ ಸುಸ್ತು!

Published : Dec 08, 2024, 09:55 PM ISTUpdated : Dec 09, 2024, 09:53 AM IST
ಕುಣಿಯುತ್ತಲೇ ನೋರಾ ಫತೇಹಿಗೆ ದೆವ್ವ ಮೆಟ್ಟಿಕೊಳ್ತಾ? ನಟಿಯ ವಿಡಿಯೋ ನೋಡಿ ಫ್ಯಾನ್ಸ್‌ ಸುಸ್ತು!

ಸಾರಾಂಶ

ಕುಣಿಯುತ್ತಲೇ ನೋರಾ ಫತೇಹಿಗೆ ದೆವ್ವ ಮೆಟ್ಟಿಕೊಳ್ತಾ? ನಟಿಯ ವಿಡಿಯೋ ನೋಡಿ ಏನೆಲ್ಲಾ ಹೇಳಿದ್ರು ನೋಡಿ ಕಮೆಂಟಿಗರು!  

 ಬಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಫೇಮಸ್​ ಆಗಿರುವ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್​ನೆಸ್​ನಿಂದಲೇ ಫೇಮಸ್​ ಆಗಿದ್ದಾರೆ ಈಕೆ.  ಅಷ್ಟಕ್ಕೂ ನೋರಾ ಫತೇಹಿ ಐಟಂ ಗರ್ಲ್​ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ.  ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್​ ಮಾಡಿದರೆ ಕಣ್​ ಕಣ್​ ಬಿಟ್ಟು ನೋಡಬೇಕು ಹಾಗಿರುತ್ತದೆ!

ಇದೀಗ ನಟಿ ಕೆಂಪು ಬಣ್ಣದ ಬಟ್ಟೆಯಲ್ಲಿ ವೇದಿಕೆಯ ಮೇಲೆ ಕಿಚ್ಚು ಹೊತ್ತಿಸಿರುವ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಆದರೆ ಇದು ಸಕತ್‌ ಟ್ರೋಲ್‌ ಆಗುತ್ತಿದೆ. ಇದಕ್ಕೆ ಕಾರಣ, ನಟಿ ಮೈಮೇಲೆ ದೆವ್ವ ಬಂದವರ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಹಲವರು ಕಮೆಂಟ್‌ನಲ್ಲಿ ತಿಳಿಸಿದ್ದಾರೆ. ನಮ್ಮ ಕಡೆಗಳಲ್ಲಿ ಮೈಮೇಲೆ   ದೆವ್ವ ಬಂದಾಗ ಹೀಗೆಯೇ ಆಡುತ್ತಾರೆ ಎಂದು ಕೆಲವರು ಹೇಳಿದರೆ, ಇದಕ್ಕೆ ಡಾನ್ಸ್‌ ಎನ್ನುತ್ತಾರೆ, ಇದೆಂಥ ಹುಚ್ಚು ಎಂದುಮತ್ತೆ ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಸೇವಿಸಿದ್ದು ಸ್ವಲ್ಪ ಹೆಚ್ಚಾಗಿರಬೇಕು ಎಂದರೆ ಮತ್ತೆ ಕೆಲವರು ಇದು ಸಾಮಾನ್ಯದ ಬ್ರಾಂಡ್‌ ಅಲ್ಲ, ದುಬಾರಿದೇ ಸೇವನೆ ಮಾಡಿರಬೇಕು ಎಂದು ಮತ್ತಿಷ್ಟು ಮಂದಿ ನಟಿಗೆ ಕಾಲೆಳೆಯುತ್ತಿದ್ದಾರೆ. 

ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್‌ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್‌ ಶಾಕ್‌
 

ಅಂದಹಾಗೆ, ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ನೋರಾ,  ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.  ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್‌ ಸಿಕ್ಕಿತ್ತು. ಕನ್ನಡ ಕೆಡಿ ಸಿನಿಮಾದಲ್ಲಿಯೂ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುಗಳ ನಡುವೆಯೇ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಜೊತೆ ನಟಿಯ ಹೆಸರು ಥಳಕು ಹಾಕಿಕೊಂಡಿದೆ. ಆರ್ಯನ್​ಗಿಂತ ಐದು ವರ್ಷ ದೊಡ್ಡವಳಾಗಿರುವ ನೋರಾ, ಆರ್ಯನ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಫೋಟೋಗಳು ವೈರಲ್​ ಆಗಿವೆ. 

   ‘ಬಾಹುಬಲಿ: ದಿ ಬಿಗಿನಿಂಗ್’, ‘ಕಿಕ್ 2’ ನಂತಹ ಸೂಪರ್​ಹಿಟ್​ ಚಿತ್ರಗಳನ್ನು ನೀಡಿ, ಇದೀಗ ದೊಡ್ಡ ಸ್ಟಾರ್​ ಎನಿಸಿಕೊಂಡಿರುವ ನೋರಾ, ಈ ನಟಿ ‘ಬಿಗ್ ಬಾಸ್ 9’ ಮತ್ತು ‘ಝಲಕ್ ದಿಖ್ಲಾ ಜಾ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದರು. ‘ಸತ್ಯಮೇವ ಜಯತೆ’ ಚಿತ್ರದ ‘ದಿಲ್ಬರ್’ ಹಾಡಿನಲ್ಲಿ ತಮ್ಮ ಅದ್ಭುತ ನೃತ್ಯದಿಂದ ಮನ ಗೆದ್ದರು. ಮೊದಲೇ ಹೇಳಿದಂತೆ ಬಾರ್​ ಗರ್ಲ್​ ಆಗಿದ್ದವರು. ಬಾಲಿವುಡ್​ನಲ್ಲಿ ಬಣ್ಣ ಹಚ್ಚಲು ಭಾರತಕ್ಕೆ ಬಂದಿದ್ದ ನಟಿ, ಬರುವಾಗ ತಂದದ್ದು ಕೇವಲ 5 ಸಾವಿರ ರೂಪಾಯಿಗಳು ಮಾತ್ರ. ಇದೀಗ ಅವರ ಒಟ್ಟೂ ಆಸ್ತಿ 50 ಕೋಟಿಗೂ ಅಧಿಕ ಎನ್ನಲಾಗುತ್ತದೆ. 

ಚಿಪ್ಸ್‌ ಖರೀದಿಸ್ತಿದ್ದಾಕೆ ರೈಲು ಬಂತೆಂದು ಓಡಿದಳು! ಮುಂದಾದದ್ದು ದುರಂತ- ಶಾಕಿಂಗ್‌ ವಿಡಿಯೋ ವೈರಲ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!
ANR Biopic: ಅಕ್ಕಿನೇನಿ ಬಯೋಪಿಕ್ ಯಾವಾಗ? ನಾಗಾರ್ಜುನ-ನಾಗಚೈತನ್ಯರಲ್ಲಿ ಯಾರು ಹೀರೋ?