ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಪರಿಹಾರದ ಮೊತ್ತದ ಭಾರಿ ಚರ್ಚೆ ಶುರುವಾಗಿದೆ. ಲೆಕ್ಕಾಚಾರದ ಪ್ರಕಾರ ಅಭಿ ಎಷ್ಟು ಪರಿಹಾರ ಕೊಡಬೇಕು?
ಸದ್ಯ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡುತ್ತಿದೆ.ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್ ಬಚ್ಚನ್ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ.
ಇದರ ನಡುವೆಯೇ ನಡೆದ ಹಲವಾರು ಘಟನೆಗಳು ಇವರಿಬ್ಬರೂ ವಿಚ್ಛೇದನದತ್ತ ಮುಖ ಮಾಡಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಇದರ ನಡುವೆಯೇ, ಒಂದು ವೇಳೆ ಇವರಿಬ್ಬರೂ ಡಿವೋರ್ಸ್ ಆದ್ರೆ ಅಭಿಷೇಕ್, ಐಶ್ವರ್ಯ ರೈಗೆ ಎಷ್ಟು ಪರಿಹಾರದ ಮೊತ್ತ ಕೊಡಬೇಕಾಗುತ್ತದೆ ಎನ್ನುವ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಹಾಗೆ ನೋಡುವುದಾದರೆ ಅಭಿಷೇಕ್ ಬಚ್ಚನ್ಗಿಂತ ನಟಿ ಐಶ್ವರ್ಯ ರೈ ಅವರ ಆಸ್ತಿಯೇ ಹೆಚ್ಚಿದೆ. ಐಶ್ವರ್ಯ ಅವರು ಹೆಸರಿಗೆ ತಕ್ಕಂತೆ ಐಶ್ವರ್ಯವಂತೆಯೇ. ಇದೇ ಕಾರಣಕ್ಕೆ ಒಂದು ವೇಳೆ ಡಿವೋರ್ಸ್ ಆದರೂ ಅವರು ತಮಗೆ ಪರಿಹಾರ ಬೇಡ ಎಂದು ಕೇಳುವ ಸಾಧ್ಯತೆ ಇದೆ. ಸಾಮಾನ್ಯ ಸ್ವಾಭಿಮಾನಿ ಮಹಿಳೆಯರು ವಿಚ್ಛೇದನ ಪಡೆದಾಗ ಪತಿಯಿಂದ ಪರಿಹಾರದ ಮೊತ್ತ ಪಡೆದುಕೊಳ್ಳಲು ಒಪ್ಪುವುದಿಲ್ಲ. ಆದರೆ ಎಲ್ಲರೂ ಹಾಗಲ್ಲವಲ್ಲ? ಈ ಹಿಂದೆ ಸೆಲೆಬ್ರಿಟಿಗಳ ನಡುವೆ ವಿಚ್ಛೇದನವಾದಾಗಲೆಲ್ಲವೂ ಪರಿಹಾರದ ಮೊತ್ತ ಪಡೆದುಕೊಂಡಿರುವುದನ್ನು ನೋಡಬಹುದು.
ಕಬಡ್ಡಿ ಪಂದ್ಯದಿಂದ ಶುರುವಾಗಿ ಮದುವೆ ಉಂಗುರ ತೆಗೆಯುವವರೆಗೆ: ಐಶ್-ಅಭಿ ಡಿವೋರ್ಸ್ ನಿಜವಾಯ್ತಾ?
ಹಾಗೊಂದು ವೇಳೆ ಪರಿಹಾರದ ಮೊತ್ತವನ್ನು ನೀಡಲೇಬೇಕಾದ ಸಾಧ್ಯತೆ ಎದುರಾದರೆ ಅಭಿಷೇಕ್ ಐಶ್ವರ್ಯ ರೈ ಅವರಿಗೆ ಎಷ್ಟು ಹಣ ನೀಡಬೇಕು ಎಂಬ ಬಗ್ಗೆ ಯಾರೋ ಪುಣ್ಯಾತ್ಮರು ಲೆಕ್ಕಾಚಾರ ಕೂಡ ಹಾಕಿದ್ದಾರೆ. ಐಶ್ವರ್ಯಾ ರೈ ಅವರ ಆಸ್ತಿ ಕುರಿತು ಹೇಳುವುದಾದರೆ, ಅವರ ಆಸ್ತಿ 750 ಕೋಟಿ ರೂಪಾಯಿಗೂ ಹೆಚ್ಚಿದೆ. ನಟಿ ಹಲವು ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಇವರು ಸಿನಿಮಾದಲ್ಲಿ ನಟಿಸಲು ಕನಿಷ್ಠ 12 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಕೇವಲ ಚಿತ್ರ ಮಾತ್ರವಲ್ಲದೇ ಜಾಹೀರಾತು, ಮಾಡೆಲಿಂಗ್ ಮುಂತಾದ ಮೂಲಗಳಿಂದಲೂ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಸಾಲದು ಎಂಬಂತೆ, ಐಶ್ವರ್ಯಾ ಅವರು ರಿಯಲ್ ಎಸ್ಟೇಟ್ ಮೇಲೆಯೂ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಇವರ ಹತ್ತಿರ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಗಳು ಇವೆ. 5 ಬಿಎಚ್ಕೆ ಅಪಾರ್ಟ್ಮೆಂಟ್ನ ಇದೆ. ದುಬೈನಲ್ಲಿಯೂ ಮನೆ ಇದೆ.
ಇನ್ನು ಅಭಿಷೇಕ್ ಅವರ ಆಸ್ತಿಯ ಕುರಿತು ಹೇಳುವುದಾದರೆ, ಇವರ ಒಟ್ಟೂ ಆಸ್ತಿ ಮೌಲ್ಯ 280 ಕೋಟಿ ರೂಪಾಯಿ ಎನ್ನಲಾಗಿದೆ. ಇವರು ತಿಂಗಳಿಗೆ 1.8 ಕೋಟಿ ರೂಪಾಯಿ ಗಳಿಸುತ್ತಾರೆ. ವಿಚ್ಛೇದನದ ನಿಯಮದ ಪ್ರಕಾರ, ಡಿವೋರ್ಸ್ ಆದರೆ ಪತಿ ಪತ್ನಿಗೆ ಶೇ.25 ಜೀವನಾಂಶ ನೀಡಬೇಕು. ಹೀಗೊಂದು ವೇಳೆ ಆದರೆ ಅಭಿಷೇಕ್ ಅವರು ಪ್ರತಿ ತಿಂಗಳು ಐಶ್ವರ್ಯಾ ರೈಗೆ 45 ಲಕ್ಷ ರೂಪಾಯಿ ಜೀವನಾಂಶ ನೀಡಬೇಕಾಗುತ್ತದೆ. 45 ಲಕ್ಷ ರೂಪಾಯಿ ಪ್ರತಿ ತಿಂಗಳು ಎಂದರೆ ಸಾಮಾನ್ಯ ಜನರು ಬೆವರುವುದು ಖಂಡಿತ. ಆದರೆ ಐಶ್ವರ್ಯ ರೈ ಅವರಂಥ ನಟಿಯರಿಗೆ ಇದೇನು ದೊಡ್ಡ ಮೊತ್ತವೇ ಅಲ್ಲ. ಆದರೆ ಅಭಿಷೇಕ್ ಅವರಿಗೆ ಈ ಮೊತ್ತ ತುಸು ಹೆಚ್ಚೆಂದು ಎನಿಸಲೂ ಬಹುದು. ಆದ್ದರಿಂದ ಇವರಿಬ್ಬರ ಡಿವೋರ್ಸ್ ಸುದ್ದಿ ದಿನೇ ದಿನೇ ಬಿ-ಟೌನ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಲೇ ಇದೆ.
ಅಭಿಷೇಕ್ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್ ವೈರಲ್!