ಪುಷ್ಪಾ ಸಿನಿಮಾದ ಸಾಮಿ ಸಾಮಿ ಸಿಗ್ನೇಚರ್ ಸ್ಟೆಪ್‌ ರೀತಿ ಮತ್ತೊಂದು ಡ್ಯಾನ್ಸ್ ತೋರಿಸಿದ ರಶ್ಮಿಕಾ ಮಂದಣ್ಣ!

Published : Dec 24, 2023, 10:47 PM IST
ಪುಷ್ಪಾ ಸಿನಿಮಾದ ಸಾಮಿ ಸಾಮಿ ಸಿಗ್ನೇಚರ್ ಸ್ಟೆಪ್‌ ರೀತಿ ಮತ್ತೊಂದು ಡ್ಯಾನ್ಸ್ ತೋರಿಸಿದ ರಶ್ಮಿಕಾ ಮಂದಣ್ಣ!

ಸಾರಾಂಶ

ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡಿನ ಸಿಗ್ನೇಚರ್ ಸ್ಟೆಪ್‌ ರೀತಿಯಲ್ಲಿ ಮತ್ತೊಂದು ಸ್ಟೆಪ್‌ ಹಾಕಿದ ನಟಿ ರಶ್ಮಿಕಾ ಮಂದಣ್ಣ. ಇಲ್ಲಿ ಸೊಂಟಕ್ಕಿಂತ ಬೇರೇನೋ ಕುಣಿಸಿದ್ದಾಳೆ.

ಬೆಂಗಳೂರು: ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಅವರು ಕಾಲಿಟ್ಟಲ್ಲೆಲ್ಲಾ ಸಕ್ಸಸ್ ಕಾಣುತ್ತಿದ್ದಾರೆ. ಈಗ ಬಾಲಿವುಡ್‌ನಲ್ಲಿ ಅನಿಮಲ್ ಸಿನಿಮಾದ ಮೂಲಕ ಯಶಸ್ಸಿನ ಸವಾರಿ ಮಾಡುತ್ತಿರುವ ರಶ್ಮಿಕಾ ಮಂದಣ್ಣ, ತೆಲುಗಿನ ಪುಷ್ಪಾ ಸಿನಿಮಾದಲ್ಲಿ ಸೊಂಟ ಬಳುಕಿಸಿದ ರೀತಿಯಲ್ಲಿಯೇ ಮತ್ತೊಂದು ಡ್ಯಾನ್ಸ್‌ ಪ್ರದರ್ಶನ ಮಾಡಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಸಿನಿಮಾದಲ್ಲಷ್ಟೇ ಅಲ್ಲ, ಜಾಹೀರಾತುಗಳ ಮೂಲಕವೂ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಈ ಹಿಂದೆ ಪುಷ್ಪಾ ಸಿನಿಮಾದ ಓ ಸಾಮಿ.. ಈ ಸಾಮೀ ಹಾಡಿನಲ್ಲಿ ಸೊಂಟವನ್ನು ಬಳುಕಿಸಿ ಭರ್ಜರಿ ಸ್ಟೆಪ್‌ ಹಾಕಿದ್ದ ರಶ್ಮಿಕಾ ಮಂದಣ್ಣ ಈಗ ಮತ್ತೊಂದು ಸ್ಟೆಪ್‌ ಅನ್ನು ಹಾಕಿದ್ದಾರೆ. ಆದರೆ, ಈಗ ಯಾವುದೇ ಸಿನಿಮಾದಲ್ಲಿ ಹೆಜ್ಜೆ ಹಾಕದೇ ಜಾಹೀರಾತು ನೀಡುವ ವಿಡಿಯೋವೊಂದರಲ್ಲಿ ತಮ್ಮ ಡ್ಯಾನ್ಸ್‌ ಶೈಲಿಯನ್ನು ಪ್ರದರ್ಶನ ಮಾಡಿದ್ದಾರೆ.

ಅನಿಮಲ್ ಸಿನಿಮಾಗಿಂತ ಮೊದಲು 1.5 ಕೋಟಿ ರೂ.ಗೆ 36 ಎಕರೆ ಭೂಮಿ ಮಾರಿದ್ದ ಸಂದೀಪ್ ರೆಡ್ಡಿ ವಾಂಗಾ!

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗೊರುವ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಜನಸ್ಯಾ ಕ್ಲಾತಿಂಗ್‌ಗೆ ಜಾಹೀರಾತು ಮೂಲಕ ಪೋಸ್‌ ಕೊಟ್ಟಿರುವ ರಶ್ಮಿಕಾ ಅದರಲ್ಲಿ ತಮ್ಮ ಕಣ್ಣೋಟ ಹಾಗೂ ಕತ್ತನ್ನು ಕುಣಿಸುವ ಮೂಲಕ ತಮ್ಮ ಸ್ಟೈಲ್‌ ಅನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದ್ದಾರೆ. ಇಲ್ಲಿ ನೇರಳೆ ಬಣ್ಣದ ಸೀರೆ ಮುತ್ತಿನ ಸರ ಮತ್ತು ಓಲೆಯನ್ನು ಧರಿಸಿದ ರಶ್ಮಿಕಾ ತನಗೆ ಸೀರೆಯನ್ನು ತೊಡುವುದೆಂದರೆ ಭಾರೀ ಇಷ್ಟವೆಂದು ಹೇಳಿಕೊಂಡಿದ್ದಾರೆ. ಜೊತೆಗೆ, ವಿಡಿಯೋದಲ್ಲಿ ಕತ್ತು ಕುಣಿಸುವ ಮೂಲಕ ಪೋಸ್‌ ಕೊಟ್ಟಿದ್ದು, ಕೇವಲ ನಾಲ್ಕು ಗಂಟೆಗಳಲ್ಲಿ 5 ಲಕ್ಷಕ್ಕೂ ಅಧಿಕ ಜನರು ಲೈಕ್‌ ಮಾಡಿದ್ದಾರೆ.

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಜೋಡಿಯ 'ಅನಿಮಲ್' ಚಿತ್ರವು ಬಿಡುಗಡೆಯಾಗಿ ರೂ. 500 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಗೆಲುವು ದಾಖಲಿಸಿದೆ. ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ 'ಗೀತಾಂಜಲಿ' ಪಾತ್ರವು ಬಹಳಷ್ಟು ಮೆಚ್ಚುಗೆ ಗಳಿಸಿದೆ. ಗೀತಾಂಜಲಿ ಪಾತ್ರಕ್ಕೆ ನಟಿ ರಶ್ಮಿಕಾ ಹೇಳಿ ಮಾಡಿಸಿದಷ್ಟು ಹೊಂದಾಣಿಕೆ ಆಗಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಸ್ವತಃ ರಶ್ಮಿಕಾಗೆ ಕೂಡ ಗೀತಾಂಜಲಿ ಪಾತ್ರ ಮಾಡಿರುವ ಬಗ್ಗೆ ಹೆಮ್ಮೆಯಿದೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಬೆಂಗಳೂರು ಹನುಮ ಜಯಂತಿಯಲ್ಲಿ ಅನ್ನದಾನ ಮಾಡುತ್ತಿದ್ದವನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಕನ್ನಡತಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ ಎನಿಸಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಬೇಡಿಕೆಯ ಕಲಾವಿದೆಯಾಗಿ ಬೆಳೆದಿದ್ದಾರೆ. ರಶ್ಮಿಕಾ ಮಂದಣ್ಣಗೆ ಒಂದಕ್ಕಿಂತ ಮತ್ತೊಂದು ಉತ್ತಮವಾದ ಅವಕಾಶಗಳು ಸಿಗುತ್ತಿವೆ. ಅವರು ನಟಿಸಿದ ಎಲ್ಲ ಸಿನಿಮಾಗಳು ಗೆಲ್ಲುತ್ತಿವೆ. ಇದರಿಂದ ಅವರ ಖ್ಯಾತಿ ದಿನದಿನಕ್ಕೂ ಹೆಚ್ಚಾಗಿದೆ. ಇತ್ತೀಚೆಗೆ ತೆರೆಕಂಡ 'ಅನಿಮಲ್​' (Animal) ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?