ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಆರಾಧ್ಯ-ಐಶ್ವರ್ಯಾ ಜೊತೆ ಕೂತ ಈ ನಟ ಯಾರು?

By Anusha Kb  |  First Published Sep 16, 2024, 1:13 PM IST

ಬಾಲಿವುಡ್ ನಟಿ ಐಶ್ವರ್ಯಾ ರೈ ಕೂಡ ಈ ಸಮಾರಂಭದಲ್ಲಿ ಮಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅವಾರ್ಡ್‌ ಫಂಕ್ಷನ್‌ಗೆ ಹೋಗುವ ಮೊದಲು ಅಮ್ಮ ಮಗಳು ಇಬ್ಬರು ರೆಡ್‌ಕಾರ್ಪೆಟ್ ಮಲೆ ನಡೆದಾಡಿದ್ದು, ಫೋಟೋಗಳಿಗೆ ಪೋಸ್ ನೀಡಿದ್ದಾರೆ.


ದುಬೈನಲ್ಲಿ ಸೈಮಾ 2024ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಬಾಲಿವುಡ್ ಸೇರಿದಂತೆ ಭಾರತದ ಎಲ್ಲಾ ಭಾಷೆಯ ಸಿನಿಮಾ ತಾರೆಯರು ಈ ಸೈಮಾ ಅವಾರ್ಡ್‌ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಹಾಗೆಯೇ ಬಾಲಿವುಡ್ ನಟಿ ಐಶ್ವರ್ಯಾ ರೈ ಕೂಡ ಈ ಸಮಾರಂಭದಲ್ಲಿ ಮಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅವಾರ್ಡ್‌ ಫಂಕ್ಷನ್‌ಗೆ ಹೋಗುವ ಮೊದಲು ಅಮ್ಮ ಮಗಳು ಇಬ್ಬರು ರೆಡ್‌ಕಾರ್ಪೆಟ್ ಮಲೆ ನಡೆದಾಡಿದ್ದು, ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಮಗಳಿಗೆ ಕಿಸ್ ಮಾಡಿ ಆಕೆಯ ಕೈ ಹಿಡಿದು  ಐಶ್ ಫೋಸ್ ನೀಡಿದ್ದು ಎಲ್ಲರ ಗಮನ ಸೆಳೆದಿದೆ.

ಈ ಸಮಾರಂಭದಲ್ಲಿ ಐಶ್ವರ್ಯಾ ರೈ  ಅವರು ತಮ್ಮ 'ಪೊನ್ನಿಯಿನ್ ಸೆಲ್ವನ್‌-2' ಸಿನಿಮಾದ ನಟನೆಗಾಗಿ ವಿಮರ್ಶಕರ ವಿಭಾಗದಲ್ಲಿ ಲೀಡಿಂಗ್‌ ರೋಲ್‌ನಲ್ಲಿ ಅತ್ಯುತ್ತಮ  ನಟಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.  ಅಮ್ಮ ಸ್ಟೇಜ್‌ಗೆ ಏರಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ. ಮಗಳು ಆರಾಧ್ಯ ಕೆಳಗೆ ನಿಂತು ಸಾಮಾನ್ಯರಂತೆ ಅಮ್ಮ ಪ್ರಶಸ್ತಿ ಸ್ವೀಕರಿಸುತ್ತಿರುವ ಸುಂದರ ಕ್ಷಣವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಅಮ್ಮ ಮಗಳ ಈ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಅಲ್ಲದೇ ಇದೇ ಕಾರ್ಯಕ್ರಮದಲ್ಲಿ ಐಶ್ವರ್ಯಾ ಹಾಗೂ ಆರಾಧ್ಯ ತಮಿಳು ನಟ ಚೀಯನ್ ವಿಕ್ರಂ ಅವರನ್ನು ಭೇಟಿ ಮಾಡಿದ್ದು, ಅವರೊಡನೆ ಕೆಲ ಕಾಲ ಹರಟಿದ್ದಾರೆ. ಚೀಯಾನ್ ವಿಕ್ರಂ ಅವರು ಕೂಡ ಪೊನ್ನಿಯಿನ್ ಸೆಲ್ವಂ 2ನಲ್ಲಿ ಅಭಿನಯಿಸಿದ್ದು, ಅವರಿಗೆ ಉತ್ತಮ ನಟ ಪ್ರಶಸ್ತಿ ಸಿಕ್ಕಿದೆ.  ಈ ಸ್ಟಾರ್‌ ನಟ ನಟಿ ಜೊತೆಗೆ ಕುಳಿತು ನಗುತ್ತಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. 

Tap to resize

Latest Videos

ಇದನ್ನೂ ಓದಿ: 10 ಕೋಟಿ ಪಡೆದು ಪಾಕಿಸ್ತಾನದಲ್ಲಿ ಡಾನ್ಸ್‌: ಐಶ್ವರ್ಯಾ ರೈಯನ್ನು ಸುತ್ತಿಕೊಂಡಿದ್ದ ಆ ವಿವಾದ ನಿಜವೇ?

Aishwarya Rai & Vikram at SIIMA awards tonight
byu/skyfullofstars19 inBollyBlindsNGossip

 

ಅನೇಕರು ಮಗಳು ಆರಾಧ್ಯಳನ್ನು ತಾಯಿ ಬೆಳೆಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇತರ ಸ್ಟಾರ್‌ ಕಿಡ್‌ಗಳಂತೆ ಅರೆಬರೆ ಬಟ್ಟೆ ಧರಿಸದೇ ಮೈತುಂಬಾ ಬಟ್ಟೆ ಧರಿಸಿರುವ ಆರಾಧ್ಯ ಗುಣದಲ್ಲಿ ಅಮ್ಮ ಐಶ್ವರ್ಯಾಳನ್ನ ಮೀರಿಸುವಂತಿದ್ದಾಳೆ. ಸೈಮಾ ಅವಾರ್ಡ್‌ನಲ್ಲಿ ಐಶ್ವರ್ಯಾ ರೈ ಕಪ್ಪು ಹಾಗೂ ಗೋಲ್ಡನ್ ಬಣ್ಣದ ಸಂಯೋಜನೆಯ ಚೂಡಿಧಾರ್ ಧರಿಸಿದ್ದರೆ, ಇತ್ತ ಮಗಳು ಆರಾಧ್ಯ ಕೂಡ ಬೆಳ್ಳಿ ಹಾಗೂ ಕಪ್ಪು ಬಣ್ಣದ ಫಳ ಪಳ ಮಿಂಚುವ ಟ್ರೆಡಿಷನಲ್ ಟಾಪ್& ಪ್ಯಾಂಟ್ ಧರಿಸಿದ್ದಾರೆ. ಕಾರ್ಯಕ್ರಮಕ್ಕೂ ಮೊದಲು ಪಾಪಾರಾಜಿಗಳ ಕ್ಯಾಮಾರಾಗೆ ಫೋಸ್ ನೀಡಿದ ಅಮ್ಮ ಮಗಳು ಬಳಿಕ, ಪರಸ್ಪರ ಮುತ್ತಿಕ್ಕುವ ಮೂಲಕ ಮುಂದೆ ಸಾಗಿದ್ದಾರೆ. 

 
 
 
 
 
 
 
 
 
 
 
 
 
 
 

A post shared by SIIMA (@siimawards)

 

ಆದರೆ ಜನರಿಗೆ ಮಾತ್ರ ಐಶ್ವರ್ಯಾ ರೈ ಅವರ ಒಂದೇ ಹೇರ್‌ ಸ್ಟೈಲ್ ನೋಡಿ ಬೋರಾಗಿದ್ದು, ಹೇರ್ ಸ್ಟೈಲ್ ಬದಲಿಸುವಂತೆ ಕರೆ ನೀಡಿದ್ದಾರೆ. ಆಕೆ ತುಂಬಾ ಸುಂದರ ನಟಿ ಆದರೆ ಆಕೆಯ ಹೇರ್ ಸ್ಟೈಲಿಸ್ಟ್‌ ಅನ್ನು ಕಿತ್ತೊಗೆಯಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಇದಕ್ಕೂ ಮೊದಲು ಮಗಳು ಆರಾಧ್ಯಳ ಹೇರ್‌ಸ್ಟೈಲ್ ಕೂಡ ಸಖತ್ ಟ್ರೋಲ್ ಆಗಿತ್ತು. ಆಕೆಯ ಹಣೆ ಕಾಣದಂತೆ ಹೇರ್ ಸ್ಟೈಲನ್ನು ನಿರಂತರವಾಗಿ ನೋಡಿದ ಅಭಿಮಾನಿಗಳು ಆಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಂಡಾಗಲೆಲ್ಲಾ ಆಕೆಯ ಹೇರ್‌ಸ್ಟೈಲ್ ಬದಲಿಸುವಂತೆ ಕಾಮೆಂಟ್ ಮಾಡುತ್ತಿದ್ದರು. ಹಾಗೆಯೇ ಹಲವು ವರ್ಷಗಳ ನಂತರ ಆರಾಧ್ಯಾ ಹೇರ್‌ ಸ್ಟೈಲ್ ಬದಲಾಗಿದ್ದು, ಇದನ್ನು ನೋಡಿದ ಕೆಲವರು ಇನ್ನಾದರೂ ನಾನು ನೆಮ್ಮದಿಯಾಗಿ ಸಾಯುವೆ ಎಂದು ಫನಿ ಫನಿಯಾಗಿ ಕಾಮೆಂಟ್ ಮಾಡಿದ್ದರು. ಆದರೆ ಈಗ ಅಮ್ಮ ಐಶ್ವರ್ಯಾ ರೈ ಅವರ ಹೇರ್ ಸ್ಟೈಲ್ ಟ್ರೋಲ್‌ಗೆ ಒಳಗಾಗಿದೆ. 

ಇದನ್ನೂ ಓದಿ: ಐಶ್ವರ್ಯಾ ರೈಯಂತೆ ಮಗಳಿಗಾಗಿ ದಾದಿ ನೇಮಿಸದೇ ತಾವೇ ನೋಡ್ಕೋತಾರಂತೆ ದೀಪಿಕಾ ಪಡುಕೋಣೆ

 

click me!