Emmy Awards 2024: 14 ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಶೋಗನ್, ಇಲ್ಲಿದೆ ವಿಜೇತರ ಪಟ್ಟಿ

By Mahmad Rafik  |  First Published Sep 16, 2024, 10:44 AM IST

76 ನೇ ಪ್ರೈಮ್ ಟೈಮ್ ಎಮಿ ಅವಾರ್ಡ್ಸ್ 2024 ರ ವಿಜೇತರು ಪ್ರಕಟವಾಗಿದ್ದು, ಭಾನುವಾರ ಲಾಸ್ ಎಂಜಲೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಿ ಬೀರ್, ಶೋಗನ್ ಪ್ರಶಸ್ತಿಗಳನ್ನು ಬಾಚಿಕೊಂಡವು. ಕ್ರಿಯೇಟಿವ್ ಆರ್ಟ್ಸ್ ಎಮಿಯಲ್ಲಿ 14 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಶೋಗುನ್ ಇತಿಹಾಸ ನಿರ್ಮಿಸಿದೆ.


Emmy Awards Winners List 2024: 76 ನೇ ಪ್ರೈಮ್ ಟೈಮ್ ಎಮಿ  ಅವಾರ್ಡ್ಸ್ 2024 ಪ್ರಕಟವಾಗಿದ್ದು, ಅತ್ಯುತ್ತಮ ನಟ-ನಟಿಯಿಂದ ಹಿಡಿದು ಅತ್ಯುತ್ತಮ ಚಲನಚಿತ್ರದವರೆಗಿನ ಹೆಸರುಗಳನ್ನು ಪ್ರಕಟಿಸಲಾಗಿದೆ. ಭಾನುವಾರ ಲಾಸ್ ಎಂಜಲೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಿ ಬೀರ್, ಶೋಗನ್ ಪ್ರಶಸ್ತಿಗಳನ್ನು ಬಾಚಿಕೊಂಡವು. ಕಾಮಿಡಿ ಸಿರೀಸ್ ನಟನೆಗಾಗಿ ಜೆರೆಮಿ ಅಲೆನ್ ವೈಟ್  ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.  ಅನ್ನಾ ಸವಾಯಿಗೆ ಅತ್ಯುತ್ತಮ ನಟಿಯಾಗಿ ಪ್ರಶಸ್ತಿ ಸ್ವೀಕರಿಸಿದರು. ಕ್ರಿಯೇಟಿವ್ ಆರ್ಟ್ಸ್ ಎಮಿಗಳಲ್ಲಿ 14 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಷೋಗುನ್ ಇತಿಹಾಸ ನಿರ್ಮಿಸಿದೆ. ಇದೀಗ 76ನೇ ಪ್ರೈಮ್‌ಟೈಮ್ ಎಮಿ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.

ನಾಟಕ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟ: ದಿ ಮಾರ್ನಿಂಗ್ ಶೋಗಾಗಿ ಬಿಲ್ಲಿ ಕ್ರುಡಪ್
ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟ: ಎಬಾನ್ ಮಾಸ್- ದಿ ಬೇರ್‌ ನಟನೆಗಾಗಿ
ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ನಾಯಕ ನಟ: ದಿ ಬೇರ್‌ಗಾಗಿ ಜೆರೆಮಿ ಅಲೆನ್ ವೈಟ್
ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟಿ: ದಿ ಬೇರ್‌ಗಾಗಿ ಲಿಜಾ ಕೊಲೊನ್-ಜಯಾಸ್
ನಾಟಕ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟಿ: ದಿ ಕ್ರೌನ್‌ಗಾಗಿ ಎಲಿಜಬೆತ್ ಡೆಬಿಕಿ
ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ನಾಯಕ ನಟಿ: ಹ್ಯಾಕ್ಸ್‌ ನಟನೆಗಾಗಿ ಜೀನ್ ಸ್ಮಾರ್ಟ್
ಅತ್ಯುತ್ತಮ ರಿಯಾಲಿಟಿ ಸ್ಪರ್ಧೆ ಕಾರ್ಯಕ್ರಮ: ದಿ ಟ್ರೇಟರ್ಸ್
ಆಂಥಾಲಜಿ ಸರಣಿ ಅಥವಾ ಸಿನಿಮಾ ಅತ್ಯುತ್ತಮ ಪೋಷಕ ನಟಿ: ಜೆಸ್ಸಿಕಾ ಗನ್ನಿಂಗ್, ಬೇಬಿ ರಿಯಾಂಡರ್ ನಟನೆಗಾಗಿ  
ಅತ್ಯುತ್ತಮ ಸ್ಕ್ರಿಪ್ಟೆಡ್ ವೆರೈಟಿ ಸೀರೀಸ್: ಲಾಸ್ಟ್ ನೈಟ್ ಟುನೈಟ್ ವಿತ್ ಜಾನ್ ಆಲಿವರ್
ವೆರೈಟಿ ಸ್ಪೆಷಲ್‌ಗಾಗಿ ಅತ್ಯುತ್ತಮ ಬರವಣಿಗೆ: ಅಲೆಕ್ಸ್ ಎಡೆಲ್‌ಮನ್‌ಗಾಗಿ ಅಲೆಕ್ಸ್ ಎಡೆಲ್ಮನ್: ಜಸ್ಟ್ ಫಾರ್ ಅಸ್

Tap to resize

Latest Videos

undefined

ಆಂಥಾಲಜಿ ಸರಣಿ ಅಥವಾ ಚಲನಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶನ: ರಿಪ್ಲೆಗಾಗಿ ಸ್ಟೀವನ್ ಝೈಲಿಯನ್
ಹಾಸ್ಯ ಸರಣಿಗಾಗಿ ಅತ್ಯುತ್ತಮ ಬರವಣಿಗೆ: ಲೂಸಿಯಾ ಅನಿಯೆಲ್ಲೋ, ಪಾಲ್ ಡಬ್ಲ್ಯೂ ಡೌನ್ಸ್, ಹ್ಯಾಕ್ಸ್‌ಗಾಗಿ ಜೆನ್ ಸ್ಟಾಟ್ಸ್ಕಿ
ಅತ್ಯುತ್ತಮ ಚರ್ಚೆ ಸರಣಿ: ಡೈಲಿ ಶೋ
ಲಿಮಿಟೆಡ್ ಅಥವಾ ಆಂಥಾಲಜಿ ಸರಣಿ ಅಥವಾ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟ: ಫಾರ್ಗೋಗಾಗಿ ಲ್ಯಾಮ್ರ್ನೆ ಮೋರಿಸ್
ನಾಟಕ ಸರಣಿಗಾಗಿ ಅತ್ಯುತ್ತಮ ಬರವಣಿಗೆ: ಸ್ಲೋ ಹಾರ್ಸಸ್‌ಗಾಗಿ ವಿಲ್ ಸ್ಮಿತ್
ಲಿಮಿಟೆಡದ ಅಥವಾ ಆಂಥಾಲಜಿ ಸರಣಿ ಅಥವಾ ಚಲನಚಿತ್ರಕ್ಕಾಗಿ ಅತ್ಯುತ್ತಮ ಬರವಣಿಗೆ: ಬೇಬಿ ರಿಯಾಂಡರ್‌ಗಾಗಿ ರಿಚರ್ಡ್ ಗ್ಯಾಡ್
ಹಾಸ್ಯ ಸರಣಿಗಾಗಿ ಅತ್ಯುತ್ತಮ ನಿರ್ದೇಶನ: ಕ್ರಿಸ್ಟೋಫರ್ ಸ್ಟೋರ್ ದಿ ಬೇರ್‌ಗಾಗಿ

ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್‌ಗೆ ಬರಲಿಲ್ಲ ಜನರು...1083 ಕೋಟಿ ಲಾಸ್!

2024 ಗವರ್ನರ್ ಪ್ರಶಸ್ತಿ: ಗ್ರೆಗ್ ಬರ್ಲಾಂಟಿ
ನಾಟಕ ಸರಣಿಯ ಅತ್ಯುತ್ತಮ ನಿರ್ದೇಶನ: ಫ್ರೆಡೆರಿಕ್ ಇ.ಒ. ಶೋಗನ್‌ ನಿರ್ದೇಶನ
ಲಿಮಿಟೆಡ್ ಅಥವಾ ಆಂಥಾಲಜಿ ಸರಣಿ ಅಥವಾ ಚಲನಚಿತ್ರದಲ್ಲಿ ಅತ್ಯುತ್ತಮ ನಾಯಕ ನಟ: ಬೇಬಿ ರೈನ್ಡೀರ್‌ಗಾಗಿ ರಿಚರ್ಡ್ ಗ್ಯಾಡ್
ಲಿಮಿಟೆಡ್ ಅಥವಾ ಆಂಥಾಲಜಿ ಸರಣಿ ಅಥವಾ ಚಲನಚಿತ್ರದಲ್ಲಿ ಅತ್ಯುತ್ತಮ ನಾಯಕ ನಟಿ: ಜೋಡಿ ಫಾಸ್ಟರ್ ಫಾರ್ ಟ್ರೂ ಡಿಟೆಕ್ಟಿವ್: ನೈಟ್ ಕಂಟ್ರಿ
ಅತ್ಯುತ್ತಮ ಲಿಮಿಟೆಡ್ ಅಥವಾ ಆಂಥಾಲಜಿ ಸರಣಿ: ಬೇಬಿ ರೈನ್ಡೀರ್‌ಗಾಗಿ
ನಾಟಕ ಸರಣಿಯಲ್ಲಿ ಅತ್ಯುತ್ತಮ ನಾಯಕ ನಟ: ಶೋಗನ್‌ಗಾಗಿ ಹಿರೋಯುಕಿ ಸನಡಾ
ನಾಟಕ ಸರಣಿಯಲ್ಲಿ ಅತ್ಯುತ್ತಮ ನಾಯಕ ನಟಿ: ಶೋಗನ್‌ಗಾಗಿ ಅನ್ನಾ ಸವಾಯಿ
ಅತ್ಯುತ್ತಮ ನಾಟಕ ಸರಣಿ: ಶೋಗನ್
ಅತ್ಯುತ್ತಮ ಹಾಸ್ಯ ಸರಣಿ: ಹ್ಯಾಕ್ಸ್

20 ಕೋಟಿ ಗಳಿಸಲು ಸಹ ವಿಫಲವಾದ 200 ಕೋಟಿಯ ಚಿತ್ರ- ದೊಡ್ಡ ದೊಡ್ಡ ಸ್ಟಾರ್‌ಗಳಿದ್ರೂ ಹೀನಾಯ ಸೋಲು!

click me!