ಬಾಲಿವುಡ್ ನಟಿ ಇಶಾ ಡಿಯೋಲ್ ತಮ್ಮ ಮನೆಯಲ್ಲಿದ್ದ ಕೆಲ ರೂಲ್ಸ್ ಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅಜ್ಜಿಯ ಚುರುಕು ಕಣ್ಣು, ಪಿರಿಯಡ್ಸ್ ನಿರ್ಬಂಧ ಸೇರಿದಂತೆ ಅನೇಕ ವಿಷ್ಯಗಳನ್ನು ಬಗ್ಗೆ ಅವರು ಮಾತನಾಡಿದ್ದಾರೆ. ಸಾಂಪ್ರದಾಯಿ ಸಿದ್ಧಾಂತವಾದ್ರೂ ಎಲ್ಲವನ್ನೂ ಪಾಲಿಸ್ತಿದ್ದೆ ಎಂದಿದ್ದಾರೆ ಇಶಾ.
ಬಾಲಿವುಡ್ ನಟಿ ಇಶಾ ಡಿಯೋಲ್ (Bollywood actress Isha Deol), ಸಿನಿಮಾದಿಂದ ದೂರವಿದ್ರೂ, ವೈಯಕ್ತಿಕ ವಿಷ್ಯಕ್ಕೆ ಚರ್ಚೆಯಲ್ಲಿರ್ತಾರೆ. ಈಗ ತಮ್ಮ ಮನೆಯಲ್ಲಿ ಜಾರಿಯಲ್ಲಿದ್ದ ಪಿರಿಯಡ್ಸ್ ರೂಲ್ಸ್ (Period Rules) ಬಗ್ಗೆ ಇಶಾ ಬಾಯ್ಬಿಟ್ಟಿದ್ದಾರೆ. ಸೆಲೆಬ್ರಿಟಿಗಳ ಮನೆಯಲ್ಲಿ ಪಿರಿಯಡ್ಸ್ ನಿರ್ಬಂಧಕ್ಕೆ ಜಾಗವೆಲ್ಲಿದೆ ಅಂತ ನಾವು ಆಲೋಚನೆ ಮಾಡ್ತೇವೆ. ನಟನೆ, ಕೆಲಸ ಅಂತಾ ಸದಾ ಬ್ಯೂಸಿ ಇರುವ ಕಲಾವಿದರು, ಸಂಪ್ರದಾಯ, ಪದ್ಧತಿಯನ್ನು ಪಾಲಿಸೋದು ಕಷ್ಟ ಅಂದ್ಕೊಳ್ತೇವೆ. ಮುಟ್ಟಿನ ದಿನಗಳ ಕಟ್ಟುನಿಟ್ಟಾದ ನಿಯಮ ಈಗಿಲ್ಲವಾದ್ರೂ, ಹಿಂದೆ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ಈ ರೂಲ್ಸ್ ಫಾಲೋ ಮಾಡ್ತಿದ್ದರು. ಅದಕ್ಕೆ ಬಾಲಿವುಡ್ ಡ್ರೀಮ್ ಗರ್ಲ್ ಹೇಮಾ ಮಾಲಿನಿ (Bollywood Dream Girl Hema Malini) ಹಾಗೂ ನಟ ಧರ್ಮೇಂದ್ರ (Actor Dharmendra) ಮನೆ ಕೂಡ ಸಾಕ್ಷಿ. ಇವರಿಬ್ಬರ ಮುದ್ದಿನ ಮಗಳು ಇಶಾ ಡಿಯೋಲ್ ಪಿರಿಯಡ್ಸ್ ಸಮಯದಲ್ಲಿ ತಾವು ಏನೆಲ್ಲ ನಿಯಮ ಪಾಲನೆ ಮಾಡ್ತಾ ಇದ್ವಿ ಎಂಬುದನ್ನು ಹೇಳಿದ್ದಾರೆ.
ಹೇಮಾ ಮಾಲಿನಿ ಮನೆಯಲ್ಲಿತ್ತು ಪಿರಿಯಡ್ಸ್ ನಿರ್ಬಂಧ : ಹೇಮಾ ಮಾಲಿನಿ, ಅಜ್ಜಿ ಜಯಾ ಚಕ್ರವರ್ತಿ (Jaya Chakraborty) ಸೇರಿದಂತೆ ಪ್ರಭಾವಿ ಮಹಿಳೆಯರ ಪಾಲನೆಯಲ್ಲಿ ಬೆಳೆದವರು ಇಶಾ ಡಿಯೋಲ್. ಆದ್ರೆ ಇಶಾ ಡಿಯೋಲ್ ದೊಡ್ಡವರಾಗ್ತಿದ್ದ ಸಮಯದಲ್ಲಿ ಮನೆಯಲ್ಲಿ ಪಿರಿಯಡ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡ್ತಿರಲಿಲ್ಲ. ಪಿರಿಯಡ್ಸ್ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಇರಲಿಲ್ಲ. ಇದು ಸಂಪ್ರದಾಯವಾದಿ ಸಿದ್ಧಾಂತವಾಗಿದ್ರೂ ನಾನಿದನ್ನು ಪಾಲಿಸ್ತಾ ಇದ್ದೆ ಎಂದು ಇಶಾ ಡಿಯೋಲ್ ಹೇಳಿದ್ದಾರೆ.
ಅಗತ್ಯಕ್ಕಿಂತ ಹೆಚ್ಚಿರುವ ಹಣ ವೇಸ್ಟ್, ಲೈಫ್ ಸೆಟಲ್ ಅರ್ಥ ಹೇಳಿದ ಕನ್ನಡತಿ ರಂಜನಿ ರಾಘವನ್
ಪಿರಿಯಡ್ಸ್ ಸಮಯದಲ್ಲಿ ದೇವಸ್ಥಾನಕ್ಕೆ ನಾನು ಹೋಗ್ತಾ ಇರಲಿಲ್ಲ. ಮುಟ್ಟು ಮುಗಿದ ಮೇಲೆ ತಲೆ ಸ್ನಾನ ಮಾಡಿ ನಂತ್ರ ಪೂಜೆ ಮಾಡಬೇಕಾಗಿತ್ತು. ನಾವು ವಾಸಿಸುವ ಮನೆಯ ಪದ್ಧತಿ ಏನಿದೆಯೋ ಅದನ್ನು ಪಾಲಿಸೋದು ತಪ್ಪಲ್ಲ ಎಂದಿದ್ದಾರೆ ಇಶಾ ಡಿಯೋಲ್.
ಅಜ್ಜಿ ಸಿಸಿಟಿವಿ ಇದ್ದಂತೆ ಎಂದ ಇಶಾ ಡಿಯೋಲ್ : ಇಶಾ ಡಿಯೋಲ್ ಅಜ್ಜಿ, ಕಟ್ಟುನಿಟ್ಟಾಗಿದ್ದರು. ಮನೆಯಲ್ಲಿ ಕೆಲವೊಂದು ನಿಯಮ ಮಾಡಿದ್ದರು. ಮನೆಯಿಂದ ಹೊರಗೆ ಹೋಗುವಾಗ ಶಾರ್ಟ್ ಸ್ಕರ್ಟ್ ಧರಿಸುವಂತಿರಲಿಲ್ಲ. ಇಶಾ ಡಿಯೋಲ್ ಅಜ್ಜಿ, ಸಿಸಿಟಿವಿಯಂತೆ ಕೆಲಸ ಮಾಡ್ತಿದ್ದರು. ಹಾಗಾಗಿಯೇ ಇಶಾ ಫ್ರೆಂಡ್ಸ್ ಕೂಡ ಫ್ರೆಂಡ್ಸ್ ಶಾರ್ಟ್ ಸ್ಕರ್ಟ್ ಧರಿಸಿ ಮನೆಗೆ ಬರ್ತಾ ಇರಲಿಲ್ಲ. ಟಿವಿ ಹಾಲ್ ನಲ್ಲಿ ಕುಳಿತು ಎಲ್ಲವನ್ನು ಅಜ್ಜಿ ಗಮನಿಸ್ತಾ ಇದ್ರು. ಸ್ನೇಹಿತೆಯರು ಶಾರ್ಟ್ಸ್ ಸ್ಕರ್ಟ್ ಮುಚ್ಚುವಂತೆ ವ್ಯವಸ್ಥೆ ಮಾಡ್ಕೊಂಡು ಬರ್ತಿದ್ದರು. ನನ್ನ ರೂಮ್ ಗೆ ಬಂದ್ಮೇಲೆ ಅದನ್ನು ಬಿಚ್ಚುತ್ತಿದ್ದರು ಎಂದು ಇಶಾ ಡಿಯೋಲ್ ಹೇಳಿದ್ದಾರೆ.
ಅಜ್ಜಿ ನಿಯಮದಲ್ಲಿ ತಡರಾತ್ರಿ ಮಲಗೋದನ್ನು ನಿಷೇಧಿಸಲಾಗಿತ್ತು. ಯಾರೂ ತಡರಾತ್ರಿಯವರೆಗೆ ಎಚ್ಚರವಾಗಿರುವಂತಿರಲಿಲ್ಲ. ಲೈಂಗಿಕ ಶಿಕ್ಷಣದ ಬಗ್ಗೆಯೂ ಮಾತನಾಡಿದ ಇಶಾ, ಶಾಲೆಯಲ್ಲಿ ಈ ಬಗ್ಗೆ ಸರಿಯಾದ ಶಿಕ್ಷಣ ಸಿಕ್ಕಿತ್ತು ಎನ್ನುತ್ತಾರೆ. ಸರಿಯಾದ ಸಮಯದಲ್ಲಿ, ಇದ್ರ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಕ್ಕಿತ್ತು ಎಂದಿದ್ದಾರೆ ಇಶಾ ಡಿಯೋಲ್. ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಮುಖ್ಯ. ಆದ್ರೆ ಕೆಲ ಪಾಲಕರು ಇದನ್ನು ತಪ್ಪು, ಮುಜುಗರದ ಸಂಗತಿ ಎಂದು ಭಾವಿಸ್ತಾರೆ ಎನ್ನುತ್ತಾರೆ ಇಶಾ ಡಿಯೋಲ್.
ನಟಿ ಹೇಮಾ ಡ್ರಗ್ಸ್ ಸೇವನೆ ಖಚಿತ: ಮತ್ತೊಮ್ಮೆ ಸುಳ್ಳು ವಿಡಿಯೋ ಹರಿಬಿಟ್ಟ ರೇವ್ ಪಾರ್ಟಿ ರಾಣಿ!
ಇಶಾ ಡಿಯೋಲ್ ಕೊನೆಯದಾಗಿ ಹಂಟರ್: ಟೂಟೇಗಾ ನಹಿ ತೊಡೆಗಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸುನಿಲ್ ಶೆಟ್ಟಿ, ಬರ್ಖಾ ಬಿಶ್ತ್ ಮತ್ತು ರಾಹುಲ್ ದೇವ್ ನಟಿಸಿದ್ದರು. ಇದಾದ್ಮೇಲೆ ಇಶಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇಶಾ 2012 ರಲ್ಲಿ ಉದ್ಯಮಿ ಭರತ್ ತಖ್ತಾನಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಶಾ ಮತ್ತು ಭರತ್ ಮದುವೆಯಾಗಿ 12 ವರ್ಷಗಳ ನಂತರ ಬೇರೆಯಾಗಿದ್ದಾರೆ. 2024ರಲ್ಲಿ ಜೋಡಿ ವಿಚ್ಛೇದನಪಡೆದಿದೆ.