Priyanka Chopra : ಗಂಡನ ಎದುರೇ ಮುಂದಿನ ಮದುವೆ ಗಂಡಿನ ಹೆಸರು ಬಾಯ್ಬಿಟ್ಟ ಪ್ರಿಯಾಂಕಾ!

By Suvarna News  |  First Published Nov 25, 2021, 1:08 AM IST

*  ಗಂಡನ ಹೆಸರು ಕೈಬಿಟ್ಟ ವದಂತಿಗಳ ನಡುವೆ ವೇದಿಕೆ ಹತ್ತಿದ ಪ್ರಿಯಾಂಕಾ
*  ಗಂಡನ ನಿಕ್ ರನ್ನು ಸರಿಯಾಗಿ ರೋಸ್ಟ್ ಮಾಡಿದ ಸುಂದರಿ
* ಸಿಂಗಲ್ ಆದರೆ ಯಾರನ್ನು ಮದುವೆ ಆಗ್ತಾರಂತೆ
* ಫುಲ್ ಎಪಿಸೋಡ್ ನೋಡಿ ಎಂದು ಕೇಳಿಕೊಂಡ ನಟಿ


ನ್ಯೂಯಾರ್ಕ್(ನ. 24)  ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಜೋನಾಸ್( Nick Jonas) ತಮ್ಮ ಇನ್ ಸ್ಟಾಗ್ರಾಂ (Social Media) ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದು ವದಂತಿ ಗೆ ಕಾರಣವಾಗಿತ್ತು. ಇಬ್ಬರು ಬೇರೆ ಬೇರೆಯಾಗುತ್ತಿದ್ದಾರೆ ಎಂದೆಲ್ಲ ಸುದ್ದಿ ಜೋರಾಗಿಯೇ ಓಡಾಡಿತ್ತು.

ಅದೆಲ್ಲ ಒತ್ತಟ್ಟಿಗೆ ಇರಲಿ ಎಂದು ಇದೀಗ ತಾರಾ ಜೋಡಿ ಅದರಲ್ಲೂ ಪ್ರಿಯಾಂಕಾ ಚೋಪ್ರಾ ಬಾಂಬ್ ಸಿಡಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಜೋನಸ್ ಸಹೋದರರ ಹೊಸ ಕಾರ್ಯಕ್ರಮ ಆರಂಭವಾಗಿದ್ದು ಪ್ರಿಯಾಂಕಾ ಸ್ಟೇಜ್ ಮೇಲೆ ಹತ್ತಿ ಗಂಡ ಮತ್ತು ಗಂಡನ ಸಹೋದರನನ್ನು ಸಖತ್ತಾಗಿ ರೋಸ್ಟ್  ಮಾಡಿದ್ದಾರೆ.

Tap to resize

Latest Videos

ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್‌ನಲ್ಲಿ ಹಾಡು, ನೃತ್ಯ, ಚೇಷ್ಟೆ ಎಲ್ಲವೂ ಇದ್ದೆ ಇರುತ್ತದೆ.  ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದರು. ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದ ಪ್ರಿಯಾಂಕಾ ಚೋಪ್ರಾ ತಮ್ಮ ಪತಿಯ ಕಾಲೆಳೆಯಲು ಶುರುಮಾಡಿದರು.  ಮಕ್ಕಳಿಲ್ಲದ ದಂಪತಿ ಸಹ ನಾವೇ.. ಅದಕ್ಕೇಕೆ ಚಿಂತೆ ಮಕ್ಕಳಾಗುತ್ತದೆ ಬಿಡಿ ಎಂದು ಹೇಳಿದರು! ಆಮೇಲೆ ಇದೆಲ್ಲಾ ತಮಾಷೆಗಾಗಿ ಎನ್ನುವ ಉತ್ತರ!

ಮಗಳ ಸಂಸಾರ ನೆಟ್ಟಗಿದೆ, ಪ್ರಿಯಾಂಕಾ ಅಮ್ಮನ ಸರ್ಟಿಫಿಕೇಟ್

ಪ್ರಿಯಾಂಕಾ ಬಂದು ಮಾತಾಡಿದ್ದು ಎಲ್ಲ ವದಂತಿಗಳಿಗೂ ಅಂತಿಮ ತೆರೆ ಎಳೆದಂತೆ ಇತ್ತು. ಆದರೆ ಗಂಡನ ರೋಸ್ಟ್ ಮಾಡಿದ್ದು ಅಷ್ಟೆ ಮಜವಾಗಿತ್ತು. ನಿಕ್ ಮತ್ತು ತನೆಗೆ ಇರುವ ಹತ್ತು ವರ್ಷದ ವಯಸ್ಸಿನ ಅಂತರದ ಬಗ್ಗೆಯೂ ಮಾತನಾಡಿದ ಪ್ರಿಯಾಂಕಾ ಅದೆರೆಲ್ಲೇನಿದೆ.. ಎಂದ್ರು. ಆದರೆ ನಾವು ಒಬ್ಬರಿಗೆ ಒಬ್ಬರು ಅನೇಕ ಸಂಗತಿಗಳನ್ನು ಕಲಿಸಿಕೊಡುತ್ತೇವೆ. ಟಿಕ್ ಟಾಕ್ ಮೂಲಕ ನನ್ನ ಪತಿಯನ್ನು ದೊಡ್ಡ ನಟನನ್ನಾಗಿ ಮಾಡಿದ್ದೇನೆ ಎಂದು ತಮಗೆ ತಾವೆ ಶಹಭಾಷ್ ಕೊಟ್ಟುಕೊಂಡರು.

ರೋಸ್ಟ್ ಆರಂಭದ ಸಾಲುಗಳನ್ನು ತಮ್ಮ ಇಸ್ಟಾದಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಮಿಸ್ ಮಾಡದೆ ನೋಡಿ ಎಂದು ಕೇಳಿಕೊಂಡಿದ್ದಾರೆ.  ಇದರ ಜತೆಗೆ ಇನ್ನೊಂದು ಮಹತ್ವದ ಸಂಗತಿಯನ್ನು ಹೇಳಿದ್ದಾರೆ.  ಗಂಡು ಹುಡುಕಿಕೊಂಡೂ ಎಲ್ಲಿಯೂ ಹೋಗುವುದಿಲ್ಲ. ನಿಕ್ ಸಹೋದರ ಕ್ರಿಸ್ ಹೆಮ್ಸ್‌ವರ್ತ್‌  ಸಿಂಗಲ್ ಆದರೆ ಅವರನ್ನೇ  ಮದುವೆ  ಮಾಡಿಕೊಳ್ಳುತ್ತೇನೆ ಎಂದು ಸಣ್ಣ ಶಾಕ್ ಸಹ ನೀಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Priyanka (@priyankachopra)

ಮಗಳ ಸಂಸಾರ ನೆಟ್ಟಗಿದೆ.. ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ (Madhu Chopra)ಸ್ಪಷ್ಟವಾಗಿ ತಿಳಿಸಿದ್ದರು.

ಡಿಸೆಂಬರ್ 1 ಕ್ಕೆ ಪ್ರಿಯಾಂಕಾ ಮತ್ತು ನಿಕ್ ಮದುವೆಯಾಗಿ ಮೂರು ವರ್ಷ. ನಿಕ್ ಮದುವೆಯಾದ ನಂತರ ಪ್ರಿಯಾಂಕಾ ಭಾರತವನ್ನು ಬಹುತೇಕ ತೊರೆದಿದ್ದರು. ವಿದೇಶಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಪತಿ ಜತೆ  ಹಾಲಿವುಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಉದಯಪುರದಲ್ಲಿನಲ್ಲಿ ಮೂರು ದಿನಗಳ ನೆಡೆದ ಅವರ ಮದುವೆಗೆ ಎಷ್ಟು ಖರ್ಚು ಮಾಡಲಾಗಿದೆ ಮತ್ತು ವಿವಾಹ ವೆಚ್ಚ ಎಷ್ಟಾಗಿತ್ತು ಎಂಬ ಅಚ್ಚರಿಗಳು ಕಾಡಿದ್ದವು.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್‌ ಉದಯಪುರದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿಗಳ ಪ್ರಕಾರ ವಿವಾಹವಾಗಿದ್ದರು. ಸಪ್ತಪದಿ ತುಳಿಯುವಾಗ ಪ್ರಿಯಾಂಕಾ ಕೆಂಪು ಲೆಹೆಂಗಾ ಧರಿಸಿದ್ದ ಪೋಟೋಗಳು ಇಂದಿಗೂ ಲೈಕ್ ಗಿಟ್ಟಿಸುತ್ತಿವೆ.

ಪ್ರಿಯಾಂಕಾ ಚೋಪ್ರಾ ಅವರ ಅಭಿಮಾನಿಗಳು ನಿಕ್ ಜೋನಾಸ್ ಅವರ ಅಫೇರ್ ಬೇರೆಡೆ ನಡೆಯುತ್ತಿದೆಯೇ ಎಂದು ಅನುಮಾನಿಸಲು ಪ್ರಾರಂಭಿಸಿದ್ದಾರೆ. ಅಂದಹಾಗೆ, ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್ ಅವರ ಮೊದಲ ಪ್ರೀತಿ ಅಲ್ಲ. ಪ್ರಿಯಾಂಕಾ ಅವರಿಗಿಂತ ಮುಂಚೆಯೇ ನಿಕ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದರು.

click me!