
ಕತ್ರೀನಾ ಕೈಫ್(Katrina Kaif) ಹಾಗೂ ವಿಕ್ಕಿ ಕೌಶಲ್ ಮದುವೆಗೆ ಸಂಬಂಧಿಸಿ ದಿನಕ್ಕೊಂದು ಸುದ್ದಿ ಹೊರಬೀಳುತ್ತಲೇ ಇದೆ. ಬಾಲಿವುಡ್ ಸೆಲೆಬ್ರಿಟಿ ಜೋಡಿಯ ಅದ್ಧೂರಿ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದು ಈಗಾಗಲೇ ಮದುವೆಗೆ ಬರುವ ಅತಿಥಿಗಳ ಕುರಿತು ಚರ್ಚೆಯಾಗುತ್ತಲೇ ಇದೆ. ಇತ್ತ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ತನಗೆ ಆಹ್ವಾನ ಬಂದಿಲ್ಲ ಎಂದಿದ್ದಾರೆ. ಹಾಗಾದರೆ ನಟಿಯ ಮದುವೆಗೆ ಯಾರೂ ಬರ್ತಿಲ್ವಾ ? ಯಾರಿಗೆಲ್ಲ ಆಹ್ವಾನವಿತ್ತು ?
ವರದಿಗಳ ಪ್ರಕಾರ, ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅಧಿಕಾರಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಕತ್ರಿನಾ-ವಿಕ್ಕಿ ಅವರ ರಾಜಸ್ಥಾನ ವಿವಾಹದ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ. ಅತಿಥಿಗಳು COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಮತ್ತು ಎರಡು ಬಾರಿ ಲಸಿಕೆ ಹಾಕಿದ ಅತಿಥಿಗಳು ಮಾತ್ರ ಸೆಲೆಬ್ರಿಟಿಗಳ ಮದುವೆಯಲ್ಲಿ ಭಾಗವಹಿಸಲಿದ್ದಾರೆ.
Katrina Kaif Family- 7 ಜನ ಒಡಹುಟ್ಟಿದವರ ದೊಡ್ಡ ಕುಟುಂಬ ಇವರದ್ದು!
ಈ ಮಾಹಿತಿಯನ್ನು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ರಾಜೇಂದ್ರ ಕಿಶನ್ ಅವರು ಹಂಚಿಕೊಂಡಿದ್ದಾರೆ, ಅಲ್ಲಿ ಮದುವೆಯ ಸ್ಥಳ ಫೋರ್ಟ್ ಬರ್ವಾರಾ ಇದೆ. ಆಯೋಜಕರು ನೀಡಿದ ಮಾಹಿತಿಯಂತೆ 120 ಅತಿಥಿಗಳನ್ನು ಮದುವೆಗೆ ಆಹ್ವಾನಿಸಲಾಗಿದ್ದು, ಡಿಸೆಂಬರ್ 7 ರಿಂದ ಡಿಸೆಂಬರ್ 10 ರ ನಡುವೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿಸಿ ತಿಳಿಸಿದ್ದಾರೆ.
ವಾಹನಗಳಿಗೆ ಇವೆಂಟ್ ಸ್ಟಿಕ್ಕರ್
ಎಲ್ಲಾ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸಂಘಟಕರಿಗೆ ತಿಳಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ. ಅಲ್ಲದೆ, ಲಸಿಕೆ ಹಾಕದವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯಿಲ್ಲದೆ ಅನುಮತಿಸಲಾಗುವುದಿಲ್ಲ. ರಾಜಸ್ಥಾನ: ಚೌತ್ ಕಾ ಬರ್ವಾಡ ಪಟ್ಟಣದಲ್ಲಿ ನಟರಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿವಾಹದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಲು ಸವಾಯಿ ಮಾಧೋಪುರ್ ಜಿಲ್ಲಾಡಳಿತದ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿದ್ದರು. ಜನಸಂದಣಿ ನಿಯಂತ್ರಣ, ಸುಗಮ ಸಂಚಾರ, ಕಾನೂನು ಸುವ್ಯವಸ್ಥೆ ಮತ್ತು ವಿಐಪಿ ಸಂಚಾರಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಶುಕ್ರವಾರ ಆಡಳಿತ, ಪೊಲೀಸ್ ಮತ್ತು ಅರಣ್ಯ, ಹೋಟೆಲ್ ಮತ್ತು ಇವೆಂಟ್ ಮ್ಯಾನೇಜರ್‌ಗಳ ಸಭೆ ಕರೆದಿದ್ದರು. ಈವೆಂಟ್‌ಗೆ ಸಂಬಂಧಿಸಿದ ಎಲ್ಲಾ ವಾಹನಗಳ ಮೇಲೆ ಈವೆಂಟ್-ಸಂಬಂಧಿತ ಸ್ಟಿಕ್ಕರ್‌ಗಳನ್ನು ಹಾಕಲಾಗುತ್ತದೆ.
45 ಹೊಟೇಲ್ಸ್ ಬುಕ್:
ಲವ್ ಬರ್ಡ್ಸ್ ಕತ್ರಿನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್(Vicku Kaushal) ಅವರ ವಿವಾಹವು ಕಳೆದ ಹಲವಾರು ವಾರಗಳಿಂದ ಚರ್ಚೆಯಾಗುತ್ತಿದೆ. ಸ್ಟಾರ್ ಜೋಡಿ ತಮ್ಮ ವಿಶೇಷ ದಿನದ ಬಗ್ಗೆ ತುಂಬಾ ಸೈಲೆಂಟ್ ಆಗಿದ್ದರೂ ಅವರ ಮದುವೆಯ(Wedding) ವಿವರಗಳು ಪ್ರತಿದಿನ ಸುದ್ದಿ ಮಾಡುತ್ತಿವೆ. ಇದೀಗ ಪ್ರಮುಖ ದಿನಪತ್ರಿಕೆಯ ಇತ್ತೀಚಿನ ವರದಿಯ ಪ್ರಕಾರ ರಾಜಸ್ಥಾನದಲ್ಲಿ ಡಿಸೆಂಬರ್‌ನಲ್ಲಿ ಕತ್ರಿನಾ ಮತ್ತು ವಿಕ್ಕಿಯ ವಿವಾಹಕ್ಕಾಗಿ 45 ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಹೌದು. ರಾಜಸ್ಥಾನದಲ್ಲಿ(Rajasthan) ನಡೆಯುವ ರಾಯಲ್ ಮದುವೆಗೆ ಎಲ್ಲ ಸಿದ್ಧತೆಗಳು ನಡೆದಿವೆ.
ಸ್ಟಾರ್ ಜೋಡಿಯ ವಿವಾಹಕ್ಕಾಗಿ 40 ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸ್ ರೆಸಾರ್ಟ್, ಬರ್ವಾರದಲ್ಲಿ ಸೋವೈ ಮಾಧೋಪುರದಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ. ರಣಥಂಬೋರ್‌ನಲ್ಲಿ(Ranathambor) ಸುಮಾರು 45 ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಡಿಸೆಂಬರ್ 7 ರಿಂದ ಇಲ್ಲಿಗೆ ಬಹಳಷ್ಟು ಸ್ಟಾರ್‌ಗಳು ಆಗಮಿಸಲಿದ್ದಾರೆ. ಸಲ್ಮಾನ್ ಖಾನ್ ಕೂಡ ಡಿಸೆಂಬರ್ 9 ರಂದು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಅವರು ಬರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.