Madhuri Dixit beauty secret: ಮಾಧುರಿಯ ಕಲೆರಹಿತ ತ್ವಚೆಯ ಸೀಕ್ರೆಟ್ ಇದು

By Suvarna News  |  First Published Dec 4, 2021, 9:09 PM IST

ನಟಿ ಮಾಧುರಿ ದೀಕ್ಷಿತ್‌ಗೆ(Madhuri dixit) 54 ವರ್ಷ. ನೋಡಿದರೆ ನಂಬ್ತೀರಾ ? ಹೌದು. ಫಿಟ್ನೆಸ್ ಜೊತೆ ತ್ವಚೆಯ ಸೌಂದರ್ಯವನ್ನೂ ಕಾಪಾಡಿಕೊಂಡಿರೋ ನಟಿ ಪ್ರತಿದಿನ ರಾತ್ರಿ ತಪ್ಪದೆ ಸೀಕ್ರೆಟ್ ಇಂಗ್ರೀಡಿಯೆಂಟ್ ಒಂದನ್ನು ಬಳಸುತ್ತಾರೆ. ಏನದು ? ಇಲ್ಲಿದೆ ಡಿಟೇಲ್ಸ್


ಬಾಲಿವುಡ್ ನಟಿ ಮಾಧುರಿ ದೀಕ್ಷಿತ್(Madhuri Dixit) ಇಂದಿಗೂ ಸಿನಿಪ್ರಿಯರ ಹಾಟ್ ಫೇವರೇಟ್. 54 ವರ್ಷದ ನಟಿ ಈಗಲೂ ಸುಂದರಿಯಾಗಿ ಕಾಣಿಸುತ್ತಾರೆ. ಮೇಕಪ್ ಇಲ್ಲದೆಯೂ ನಟಿ ಸೂಪರ್ ಕ್ಯೂಟ್. ನಟಿಗೆ ಇಷ್ಟು ವರ್ಷವಾಗಿದ್ದರೂ ಮುಖದಲ್ಲಿ ಒಂಚೂರು ಕಲೆಗಳೂ ಇಲ್ಲ. ಆದರೆ ಇಷ್ಟೊಂದು ಚಂದದ ತ್ಚಚೆಯನ್ನು ನಟಿ ಹೇಗೆ ಕಾಪಾಡಿಕೊಂಡರು ? ಇದರ ಹಿಂದಿನ ಸೀಕ್ರೆಟ್ ಏನು ? ಪ್ರತಿದಿನ ನಟಿ ಒಂದು ಸೀಕ್ರೆಟ್ ಇಂಗ್ರೇಡಿಯಂಟ್ ಬಳಸುತ್ತಾರೆ. ಇದು ನಟಿಯ ತ್ವಚೆಯನ್ನು ಕಾಪಾಡುತ್ತದೆ. ಏನದು ?

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಬಾಲಿವುಡ್‌ನ ಧಕ್ ಧಕ್ ಕ್ವೀನ್ ಎಂದೂ ಕರೆಯುತ್ತಾರೆ. ಕಳೆದ ನಾಲ್ಕು ದಶಕಗಳಲ್ಲಿ ಹಲವಾರು ಯಶಸ್ವಿ ಚಲನಚಿತ್ರಗಳ ಭಾಗವಾಗಿದ್ದಾರೆ ಮಾಧುರಿ. ಅವರು ತಮ್ಮ ಅದ್ಭುತ ನೃತ್ಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. 54ರ ಹರೆಯದಲ್ಲೂ ಮಾಧುರಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದಾರೆ. ಆಕೆಯ ಕಾಂತಿಯುತ ಚರ್ಮವು ಯುವ ಬಾಲಿವುಡ್ ನಟಿಯರಿಗೂ ಪ್ರೇರಣೆ. ಹಾಗಾದರೆ, ಮಾಧುರಿಯ ತ್ವಚೆಯನ್ನು ಇಷ್ಟೊಂದು ಸುಂದರವಾಗಿ ಕಾಪಾಡುವುದು ಏನುದು? ಇದರ ಹಿಂದಿನ ರಹಸ್ಯವೇನು ?

Tap to resize

Latest Videos

undefined

ಮೇಕಪ್ ಸೀಕ್ರೆಟ್ ರಿವೀಲ್ ಮಾಡಿದ ಮಾಧುರಿ ದೀಕ್ಷಿತ್: ನಟಿಯ ಎವರಿಡೇ ಮೇಕಪ್ ಟ್ರಿಕ್ ಇದು..!

ಮಾಧುರಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಳಷ್ಟು ಬ್ಯೂಟಿ ಟಿಪ್ಸ್‌ ಸಿಗುತ್ತದೆ. ಅವರ ಅಭಿಮಾನಿಗಳು ಮತ್ತು ಫಾಲೋವರ್ಸ್ ಈಗ ನಟಿಯಿಂದಲೇ ತ್ವಚೆ, ಕೂದಲಿನ ಆರೈಕೆ ಮತ್ತು ಇತರ ಆರೋಗ್ಯ ಸಲಹೆಗಳನ್ನು ಪಡೆಯಬಹುದು. ಅವಳು ಆಗಾಗ ತಮ್ಮ ಸೌಂದರ್ಯ ಮತ್ತು ತ್ವಚೆಯ ದಿನಚರಿಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ವೀಡಿಯೋ ಒಂದರಲ್ಲಿ ಮಾಧುರಿ ತನ್ನ ಕಲೆರಹಿತ ತ್ವಚೆಯ ರಹಸ್ಯವನ್ನೂ ಬಹಿರಂಗಪಡಿಸಿದ್ದಾರೆ. ದೋಷರಹಿತ ತ್ವಚೆ ಕಾಪಾಡಿಕೊಳ್ಳಲು ಸಹಾಯ ಮಾಡುವ ಒಂದು ಉತ್ಪನ್ನದ ಗುಟ್ಟನ್ನು ನಟಿ ಹೇಳಿದ್ದಾರೆ.

ತನ್ನ ತ್ವಚೆಯ ವೀಡಿಯೊದಲ್ಲಿ, ಮಾಧುರಿ ತನ್ನ ಅಭಿಮಾನಿಗಳೊಂದಿಗೆ ಹಲವಾರು ಸಲಹೆಗಳು ಮತ್ತು ತಂತ್ರಗಳನ್ನು ಹಂಚಿಕೊಂಡಿದ್ದಾರೆ. ಮೂರು-ಹಂತದ ಬೆಳಗಿನ ದಿನಚರಿಯಿಂದ ರಾತ್ರಿಯ ತನಕ, ಮಾಧುರಿ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ. ನಟಿ ಕನಿಷ್ಠ 8 ಗಂಟೆಗಳ  ಕಾಲ ನಿದ್ರಿಸುತ್ತಾರೆ.ಮಲಗುವ ಮುನ್ನ ತನ್ನ ಮೇಕ್ಅಪ್ ಅನ್ನು ತೆಗೆಯುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಮಾಧುರಿ ಪ್ರತಿ ರಾತ್ರಿ ವಿಟಮಿನ್ ಸಿ ಸೀರಮ್ ಅನ್ನು ಸಹ ಬಳಸುತ್ತಾರೆ.

ನಾನು ಫಾಲೋ ಮಾಡುವ ಪ್ರಮುಖ ವಿಷಯವೆಂದರೆ ವಿಟಮಿನ್ ಸಿ. ಆಂಟಿ-ಆಕ್ಸಿಡೆಂಟ್ ಸಮೃದ್ಧ ಸೀರಮ್ ನಿಮ್ಮ ಕಲೆಗಳನ್ನು ಮಸುಕಾಗಿಸುತ್ತದೆ. ನಿಮ್ಮ ಚರ್ಮಕ್ಕೆ ಹೆಚ್ಚಿನ ಹೊಳಪನ್ನು ನೀಡುತ್ತದೆ. ನಟಿಯ ರಾತ್ರಿಯ ದಿನಚರಿಯು ಸೌಮ್ಯವಾದ ಕ್ಲೆನ್ಸರ್, ಆಲ್ಕೋಹಾಲ್-ಮುಕ್ತ ಟೋನರ್ ಮತ್ತು ಮಾಯಿಶ್ಚರೈಸರ್ ಅನ್ನು ಸಹ ಒಳಗೊಂಡಿದೆ. ಬೆಳಗ್ಗೆ, ನಟಿ ಮೊದಲು ತನ್ನ ಮುಖವನ್ನು ಕ್ಲೆನ್ಸರ್‌ನಿಂದ ತೊಳೆಯುತ್ತಾರೆ. ನಂತರ ಹೈಡ್ರೇಟಿಂಗ್ ಮಾಯಿಶ್ಚರೈಸರ್, ಟೋನರ್ ಮತ್ತು ಕೆಲವು ಎಸ್‌ಪಿಎಫ್‌ ಬಳಸುತ್ತಾರೆ.

ಸೊಂಪುಗೂದಲಿನ ಸೀಕ್ರೆಟ್ ಹೇಳಿದ ನಟಿ ಮಾಧುರಿ ದೀಕ್ಷಿತ್

ಬಾಹ್ಯ ತ್ವಚೆಯ ದಿನಚರಿಯ ಹೊರತಾಗಿ, ಮಾಧುರಿ ತನ್ನ ದೇಹವನ್ನು ಕಾಳಜಿ ವಹಿಸುವುದರಲ್ಲಿ ಮತ್ತು ಪರಿಪೂರ್ಣ ಚರ್ಮಕ್ಕಾಗಿ ಆರೋಗ್ಯಕರ ಆಹಾರವನ್ನು ನಿರ್ವಹಿಸುವುದನ್ನು ಬಲವಾಗಿ ನಂಬುತ್ತಾರೆ. ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯುತ್ತೇನೆ, ವ್ಯಾಯಾಮ ಮಾಡುತ್ತೇನೆ. ಎಣ್ಣೆಯುಕ್ತ ಆಹಾರವನ್ನು ಅವಾಯ್ಡ್ ಮಾಡುತ್ತೇನೆ ಎಂದಿದ್ದಾರೆ. ಸಕ್ಕರೆಯಿಂದ ದೂರವಿರುವುದು ನಿಮ್ಮ ತ್ವಚೆಯ ಆರೈಕೆಯ ಪ್ರಮುಖ ವಿಧಾನಗಳಲ್ಲಿ ಒಂದಾಗಿದೆ ಎಂದು ನಟಿ ಹೇಳಿದ್ದಾರೆ. ಮೊಡವೆಗಳು ಮತ್ತು ಒಡೆಯುವಿಕೆಯ ಹಿಂದಿನ ಪ್ರಮುಖ ಕಾರಣವೆಂದರೆ ಸಕ್ಕರೆ ಎಂದು ಅವರು ಹೇಳಿದ್ದಾರೆ. ಸಂಪೂರ್ಣ ಹಣ್ಣುಗಳನ್ನು ತಿನ್ನುವುದು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಮೊಡವೆ ಮುಕ್ತ ಮತ್ತು ಮೃದುವಾದ ತ್ವಚೆ ಪಡೆಯಬಹುದುಎಂದು ಮಾಧುರಿ ಹೇಳಿದ್ದಾರೆ.

click me!