
ಬಾಲಿವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅರ್ಬಾಜ್ ಖಾನ್ ಈಗ ಚಾಟ್ ಶೋ ಆರಂಭಿಸುವ ಮೂಲಕ ನಿರೂಪಕನಾಗಿಯೂ ಪರಿಚಯವಾಗುತ್ತಿದ್ದಾರೆ. ಮೊದಲ ಸಂಚಿಕೆಗೆ ಲೆಜೆಂಟ್ ಹೆಲೆನ್ ಮತ್ತು ತಂದೆ ಸಲೀಮ್ ಖಾನ್ ಆಗಮಿಸಿದರು.
ತಂದೆ ಜೊತೆ ಸಿನಿಮಾ ಜರ್ನಿ ಬಗ್ಗೆ ಚರ್ಚೆ ಮಾಡುವಾಗ ಸಹೋದರ ಸಲ್ಮಾನ್ ಖಾನ್ ಯಶಸ್ಸು ಮತ್ತು ಹಣ ಪಡೆದಿರುವಷ್ಟು ನಾನು ಮತ್ತು ಸೊಹೈಲ್ ಖಾನ್ ಮಾಡಿಲ್ಲ ಎಂದು ನಿಮಗೆ ಅನಿಸಿದ್ಯಾ ಎಂದು ಪ್ರಶ್ನೆ ಮಾಡಿದ್ದರು. ' ಏನಾಗುತ್ತೆ ಗೊತ್ತಾ ನೀವು ನಿಮ್ಮ ಬಗ್ಗೆ ಎಷ್ಟೇ ಒಳ್ಳೆಯದನ್ನು ಮಾತನಾಡಿ ಯೋಚಿಸಿದರೂ ಜನರು ಏನಾದರೊಂದನ್ನು ಹೇಳುತ್ತಲೇ ಇರುತ್ತಾರೆ. ನಾವು ಸತ್ಯ ಒಪ್ಪಿಕೊಂಡರೂ ಅಲ್ಲಿಗೆ ನಿಲ್ಲಿಸುವುದಿಲ್ಲ. ರಿಯಾಲಿಟಿ ಏನೆಂದರೆ ವೃತ್ತಿ ಜೀವನದಲ್ಲಿ ಕೆಲವರು ತುಂಬಾ ಯಶಸ್ಸು ಪಡೆಯುತ್ತಾರೆ ಕೆಲವರು ಪಡೆಯುವುದಿಲ್ಲ. ಈ ಕ್ಷೇತ್ರದಲ್ಲಿ ನಾನು ಯಶಸ್ಸು ಕಾಣದೇ ಇರಬಹುದು ಆದರೆ ಮತ್ತೊಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವೆ. ಜೀವನದಲ್ಲಿ ಕೆರಿಯರ್ ಒಂದೇ ಮುಖ್ಯವಾಗುವುದಿಲ್ಲ ಅದು ನಮ್ಮನ್ನು ಜಡ್ಜ್ ಮಾಡುವುದಿಲ್ಲ. ರೇಸ್‌ನಲ್ಲಿ ಒಬ್ಬರು ನಿಮಗಿಂತ ಮುಂದೆ ಇದ್ದರೆ ಅದನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ' ಎಂದು ಅರ್ಬಾಜ್ ಮಾತನಾಡಿದ್ದಾರೆ.
ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಸಲ್ಮಾನ್ ಖಾನ್ ಅಪ್ಪ!
ರವೀನಾ ಟಂಡನ್ ನಟಿಸುತ್ತಿರವು ಚಿತ್ರಕ್ಕೆ ಅರ್ಬಾಜ್ ಬಂಡವಾಳ ಹಾಕಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. 55 ವರ್ಷದ ಅರ್ಜಾ ವೈವಾಹಿಕ ಜೀವನನೂ ಸರಿ ಇಲ್ಲದ ಕಾರಣ ಜನರು ನನ್ನ ಬಗ್ಗೆ ಏನು ಮಾತನಾಡುತ್ತಾರೆಂದು ನನಗೆ ತಿಳಿದಿದೆ ಎಂದಿದ್ದಾರೆ. 'ಇಂದು ನೀವು ಯಾರನ್ನಾದರೂ ಸಲ್ಮಾನ್ ಖಾನ್ ಮತ್ತು ಅರ್ಬಾಜ್ ನಡುವೆ ಯಾರು ಯಶಸ್ವಿಯಾಗಿದ್ದಾರೆ ಎಂದು ಪ್ರಶ್ನೆ ಮಾಡಿದರೆ 100ರಲ್ಲಿ 100 ಜನ ಸಲ್ಮಾನ್ ಖಾನ್ ಹೆಸರು ಹೇಳುತ್ತಾರೆ. ಹೀಗಾಗಿ ನನಗೆ ಹೇಳೋಕೆ ನಾಚಿಕೆ ಯಾಕೆ, ಇಡೀ ಜಗತ್ತೇ ಹೇಳುತ್ತಿದೆ. ಜೀವನದಲ್ಲಿ ಮುಖ್ಯವಾಗಿದ್ದ ಅದೆಷ್ಟೋ ವಿಚಾರಗಳು ಈಗ ನನ್ನ ಲೈಫ್‌ನಲ್ಲಿ ಇಲ್ಲವೇ ಇಲ್ಲ. ನಾಳೆ ಸಂದರ್ಭ ಬೇರೆ ಇರಬಹುದು. ನಾಳೆ ನಾನು ಯಶಸ್ಸು ಕಂಡರೆ ಇಂದು ಮೊದಲನೇ ಸ್ಥಾನದಲ್ಲಿರುವವರನ್ನು ಮೀರಿಸಬಹುದ ಹೋಗಿರುವುದಾಗ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಪಬ್ಲಿಕ್ ಫೇಸ್ ಆಗಿರುವ ಕಾರಣ ಯಾವುದಕ್ಕೂ ಹೆದರಿಕೊಳ್ಳಬಾರದು ಧೈರ್ಯವಾಗಿ ಮುಖ ತೋರಿಸಬೇಕು. ನಾವಾಗಿ ನಾವೇ ಸತ್ಯ ಒಪ್ಪಿಕೊಂಡರೆ ಜನ ನಮ್ಮನ್ನು ಪ್ರೀತಿಸುತ್ತಾರೆ. ಜನರು ದಡ್ಡರಲ್ಲ' ಎಂದು ಅರ್ಬಾಜ್ ಹೇಳಿದ್ದಾರೆ.
ಮೊದಲು ಪ್ರಪೋಸ್ ಮಾಡಿದ್ದೇ ನಾನು; ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರ ಬಿಚ್ಚಿಟ್ಟ ಮಲೈಕಾ
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕಿರಿಕ್ ಮಾಡಿಕೊಳ್ಳಬಾರದು ಕಾಂಟ್ರವರ್ಸಿಗೆ ಸಿಲುಕಿಕೊಳ್ಳಬಾರದು ಎಂದು ಅನೇಕರು ಡಿಪ್ಲೋಮ್ಯಾಟಿಕ್ ಆಗಿ ಉತ್ತರ ಕೊಡುತ್ತಾರೆ ಆದರೆ ಯಾವುದಕ್ಕೂ ಕೇರ್ ಮಾಡದ ಖಾನ್ ಕುಟುಂಬ ಸದಾ ನೇರಾ ನೇರಾ. 'ಪ್ರತಿ ಸಲವೂ ತಂದೆ ಮತ್ತು ಸಹೋದರನ ಜೊತೆ ನನ್ನನ್ನು ಹೋಲಿಸಿದಾಗ ಎಲ್ಲರು ತಿಳಿದುಕೊಳ್ಳುತ್ತಾರೆ ಅವರೇ ಅತಿ ಹೆಚ್ಚು ಯಶಸ್ಸು ಪಡೆದಿರುವುದು. ನಿಜಕ್ಕೂ ನನಗೆ ಬೇಸರ ಅಗುವುದಿಲ್ಲ ಏಕೆಂದರೆ ಅವರು ನನ್ನ ತಂದೆ ಮತ್ತು ಸಹೋದರ ನಮ್ಮ ಮನೆಯವರು. ಒಂದು ಸಲ ನಮ್ಮ ಮನೆಗೆ ಬಂದವಿಲ್ಲದವರ ಜೊತೆ ಹೊಲಿಸಿದರೆ ಅದಕ್ಕೆ ಬ್ರೇಕ್ ಹಾಕಬೇಕು. ಈಗ ಹೊಸ ಕ್ರಿಕೆಟರ್ ಬಂದ್ರೆ ಸಚಿನ್ ಮತ್ತು ವಿರಾಟ್ ಜೊತೆ ಹೊಲಿಸುತ್ತಾರೆ. ಪ್ರಪಂಚ ಇರುವುದೇ ಹೀಗೆ' ಎಂದಿದ್ದಾರೆ ಅರ್ಬಾಜ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.