Allu Arjun: ಇನ್‌ಸ್ಟಾಗ್ರಾಮ್‌ನಲ್ಲಿ 20 ಮಿಲಿಯನ್ ಫಾಲೋವರ್ಸ್‌ ಹೊಂದಿದ ದಕ್ಷಿಣದ ಮೊದಲ ನಟ ಇವರೇ!

By Govindaraj S  |  First Published Mar 2, 2023, 8:22 PM IST

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಇದೀಗ ಹೊಸ ಸಾಧನೆಯೊಂದನ್ನು ಮಾಡಿದ್ದಾರೆ. ಅವರ ಹೆಸರಿನಲ್ಲಿ ಇದೀಗ ಇನ್ನೊಂದು ಹೊಸ ದಾಖಲೆ ಸೃಷ್ಟಿಯಾಗಿದ್ದು, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 20 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಪಡೆದು ಹೊಸ ದಾಖಲೆಯನ್ನು  ಸೃಷ್ಟಿಸಿದ್ದಾರೆ. 
 


ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಇದೀಗ ಹೊಸ ಸಾಧನೆಯೊಂದನ್ನು ಮಾಡಿದ್ದಾರೆ. ಅವರ ಹೆಸರಿನಲ್ಲಿ ಇದೀಗ ಇನ್ನೊಂದು ಹೊಸ ದಾಖಲೆ ಸೃಷ್ಟಿಯಾಗಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಬಹು ಬೇಡಿಕೆಯ ನಟ. ತೆಲುಗು ಚಿತ್ರರಂಗವಲ್ಲದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. 

ಪುಷ್ಪ ಚಿತ್ರದ ಭರ್ಜರಿ ಯಶಸ್ಸಿನ ನಂತರ ಅವರ ಕ್ರೇಜ್ ಇನ್ನಷ್ಟು ಹೆಚ್ಚಾಗಿದ್ದು, ಇದೀಗ ಪುಷ್ಪ2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 20 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಪಡೆದು ಹೊಸ ದಾಖಲೆಯನ್ನು  ಸೃಷ್ಟಿಸಿದ್ದಾರೆ. ಹಾಗೆಯೇ ಇಷ್ಟೊಂದು ಫಾಲೋವರ್ಸ್‌ಗಳನ್ನು ಹೊಂದಿರುವ ದಕ್ಷಿಣದ ಏಕೈಕ ನಟರಾಗಿದ್ದು ಇವರು ಈ ಸಾಧನೆ ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ. ವಿಶ್ವದಾದ್ಯಂತ ಅವರಿಗಿರುವ ಕೋಟ್ಯಾಂತರ ಅಭಿಮಾನಿಗಳ ಪ್ರೀತಿ ಇದಕ್ಕೆ ಸಾಕ್ಷಿಯಾಗಿದೆ.

Tap to resize

Latest Videos

ಫ್ಯಾಮಿಲಿ ಜೊತೆ ಜಂಗಲ್ ಸಫಾರಿ; ಅಲ್ಲು ಅರ್ಜುನ್ ಹಾಲಿಡೇ ಫೋಟೋಗಳು ವೈರಲ್‌!

ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ: ಸೌತ್ ಸ್ಟಾರ್ ಅಲ್ಲು ಅರ್ಜುನ್ ಈ ದಿನಗಳಲ್ಲಿ ತಮ್ಮ ಬಹು ನಿರೀಕ್ಷಿತ ಚಿತ್ರ ಪುಷ್ಪ: ದಿ ರೂಲ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಿರ್ದೇಶಕ ಸುಕುಮಾರ್ ನಿರ್ದೇಶನದ ಸೀಕ್ವೆಲ್ ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಈಗ ಏಪ್ರಿಲ್ 8 ರಂದು ಪುಷ್ಪ 2 ರ ಮೊದಲ ನೋಟವನ್ನು ನೋಡಬಹುದು ಎಂದು ವರದಿಗಳು ಹೇಳುತ್ತಿವೆ. ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಏಪ್ರಿಲ್ 8 ರಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಪುಷ್ಪಾ: ದಿ ರೂಲ್ ಸಿನಿಮಾದ ಫಸ್ಟ್ ಲುಕ್ ಅವರ ಹುಟ್ಟುಹಬ್ಬದಂದು ಬಹಿರಂಗಗೊಳ್ಳುವ ಸಾಧ್ಯತೆಯಿದೆ. 

ಏಪ್ರಿಲ್‌ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬ ಇರುವುದರಿಂದ ಅವರ ಅಭಿಮಾನಿಗಳು ಈ ದಿನಕ್ಕಾಗಿ  ಕಾತರದಿಂದ ಕಾಯುತ್ತಿದ್ದಾರೆ.  ಅವರ ಹುಟ್ಟುಹಬ್ಬದ ದಿನವೇ ಪುಷ್ಪಾ 2 ಚಿತ್ರದ ಝಲಕ್ ಬಿಡುಗಡೆಯಾದರೆ  ಅವರ ಅಭಿಮಾನಿಗಳಿಗೆ ಡಬಲ್ ಧಮಾಕಾ. ಪ್ರಸ್ತುತ ಶೂಟಿಂಗ್‌ ಶೆಡ್ಯೂಲ್‌ ಮುಗಿಸಿದ ನಂತರ  ಅಲ್ಲೂ ಅರ್ಜುನ್‌ ಅವರು  ತಮ್ಮ ಕುಟುಂಬದ ಜೊತೆ ರಜೆಗಾಗಿ ರಾಜಸ್ಥಾನಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಅಲ್ಲು ಅರ್ಜುನ್ ಅವರ ಚಿತ್ರ ಪುಷ್ಪ 2 ಅನ್ನು ತಯಾರಕರು ದೊಡ್ಡ ಮಟ್ಟದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಜೆಟ್ ಕೂಡ ಹೆಚ್ಚಾಗಿದ್ದು ಈಗ 450 ಕೋಟಿಗೆ ತಯಾರಾಗುತ್ತಿದೆ. 

ಅಲ್ಲು ಅರ್ಜುನ್ 'ಪುಷ್ಪ-2' ಆಫರ್ ರಿಜೆಕ್ಟ್ ವದಂತಿ; ಸಮಂತಾ ಟೀಂ ಸ್ಪಷ್ಟನೆ

ವರದಿಗಳನ್ನು ನಂಬುವುದಾದರೆ, ಅಲ್ಲು ಅರ್ಜುನ್ ಈಗ ತಮ್ಮ ಕುಟುಂಬದೊಂದಿಗೆ ರಜೆಯನ್ನು ಕಳೆದ ನಂತರ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಸಜ್ಜಾಗುತ್ತಿದ್ದಾರೆ. ಪುಷ್ಪಾ 2 ರ ತಯಾರಕರು ಅಲ್ಲು ಅವರ ಹುಟ್ಟುಹಬ್ಬದಂದು ಚಿತ್ರದ ಫರ್ಸ್ಟ್‌ ಲುಕ್‌ ಬಹಿರಂಗಪಡಿಸಲು ಸಜ್ಜಾಗುತ್ತಿದ್ದಾರೆ. ಪುಷ್ಪ 2 ಒಂದು ಸಾಹಸ ಡ್ರಾಮಾವಾಗಿದ್ದು, ಸುಕುಮಾರ್ ಬರೆದು ನಿರ್ದೇಶಿಸಿದ್ದಾರೆ, ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗ ಎಲ್ಲಿ ಕೊನೆಗೊಂಡಿತೋ ಅಲ್ಲಿಂದ 2ನೇ ಭಾಗ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

click me!