ನೋವನ್ನು ಬಿಡುವುದು ಕಷ್ಟ, ಕಳೆದವಾರ ಕಿರುತೆರೆಗೆ ಬಂದೆ ಈ ವಾರ ಚಿತ್ರಮಂದಿರಕ್ಕೆ ಬಂದೆ: ವಿಜಯ್ ರಾಘವೇಂದ್ರ

By Kannadaprabha News  |  First Published Sep 8, 2023, 10:20 AM IST

ವಿಜಯ ರಾಘವೇಂದ್ರ ನಟನೆಯ, ಸುಹಾಸ್‌ ಕೃಷ್ಣ ನಿರ್ದೇಶನದ, ಸಂದೀಪ್ ಎಚ್‌.ಕೆ ನಿರ್ಮಾಣದ ‘ಕದ್ದ ಚಿತ್ರ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯ್ ರಾಘವೇಂದ್ರ ಸಂದರ್ಶನ.


ರಾಜೇಶ್ ಶೆಟ್ಟಿ

ಕಂಟೆಂಟ್ ಆಧರಿತ ಸಿನಿಮಾಗಳಲ್ಲೇ ನಟಿಸುತ್ತಿದ್ದೀರಿ...

Latest Videos

undefined

ನನ್ನ ಅದೃಷ್ಟ. ನಾನು ಅಂಥಾ ಪಾತ್ರಗಳನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಅಂಥಾ ಪಾತ್ರಗಳು, ಕತೆಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಅಷ್ಟರಮಟ್ಟಿಗೆ ನಾನು ಅದೃಷ್ಟವಂತ.

ಈ ಪಾತ್ರ ಮಾಡಲು ಮೊದಲು ಹಿಂದರಿದಿದ್ರಿ ಅಂತ ಹೇಳಿಕೆ ಕೊಟ್ಟಿದ್ರಿ. ಯಾಕೆ?

ಇದು ನಾನು ಈ ಮೊದಲು ಮಾಡಿದಂತಹ ಸಿನಿಮಾ ಅಲ್ಲ. ಇದು ಬರಹಗಾರನ ಕತೆ. ಆ ಪಾತ್ರದಲ್ಲಿ ಅರೋಗನ್ಸ್‌ ಇದೆ, ಅಗ್ರೆಷನ್‌ ಇದೆ. ನಾನು ನನ್ನ ಜೀವನದಲ್ಲಿ ಅರೋಗನ್ಸ್‌ ಅನ್ನು ಮುಂದೆ ಯಾವತ್ತೂ ತಂದನಲ್ಲ. ಹಾಗಾಗಿ ಹಿಂಜರಿದೆ. ನನಗೆ ಏನೇ ಗೊಂದಲವಾದರೂ ನಾನು ಮನೆಯಲ್ಲಿ ಬಂದು ಹೇಳುತ್ತಿದ್ದೆ. ಅದೇ ಥರ ಈ ಸಿನಿಮಾದಲ್ಲೂ ಮಾಡಿದೆ. ಆದರೆ ಮನೆಯಲ್ಲಿ ಪ್ರತೀ ಸಲ ಕಂಫರ್ಟ್‌ ಜೋನ್‌ನಲ್ಲಿಯೇ ಯಾಕಿರಬೇಕು, ಬೇರೆ ಥರದ ಪಾತ್ರ ಮಾಡಬೇಕು ಎಂದು ಪ್ರೋತ್ಸಾಹಿಸಿದರು. ನಾನು ಒಪ್ಪಿಕೊಂಡೆ. ಆಮೇಲೆ ಒಪ್ಪಿಕೊಂಡಿದ್ದೇ ಸರಿ ಇತ್ತು ಅನ್ನಿಸಿತು. ಪತ್ನಿ ಸ್ಪಂದನಾ ಈ ಪಾತ್ರವನ್ನು ತುಂಬಾ ಮೆಚ್ಚಿಕೊಂಡಿದ್ದಳು. ಕಾಸ್ಟ್ಯೂಮ್‌ ಅನ್ನೂ ಇಷ್ಟ ಪಟ್ಟಿದ್ದಳು. ಅವಳಿಗೆ ಈ ಪಾತ್ರದಲ್ಲಿ ನನ್ನನ್ನು ನೋಡುವುದು ಇಷ್ಟವಿತ್ತು.

ರಾಘು ಸ್ಪಂದನಾ ಪ್ರೀತಿಗೆ ಕಣ್ಣು ಬಿದ್ದಿದೆ: ಸಾವಿನ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ವಿಶಾಲ್ ಹೆಗ್ಡೆ

ಏನಿದು ಸಿನಿಮಾ?

ಬರಹಗಾರನ ಜೀವನ ಕತೆಯ ಸಿನಿಮಾ. ಅದನ್ನು ಕ್ರೈಮ್ ಥ್ರಿಲ್ಲರ್‌ ಮಾದರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಕಡೆಗೊಂದು ಅಚ್ಚರಿಯನ್ನೂ ಇಟ್ಟಿದ್ದಾರೆ. ನಾನು ಈ ಪಾತ್ರವಾಗುವುದಕ್ಕೂ ಕೊಂಚ ಮಾನಸಿಕವಾಗಿ ತಯಾರಿ ಮಾಡಬೇಕಿತ್ತು. ಬರಹಗಾರನೇ ಆಗಬೇಕಿತ್ತು. ಆ ಪಾತ್ರ ಆಗಿದ್ದೇನೆ ಎಂಬ ನಂಬಿಕೆ ಇದೆ.

ಯಾಕೆ ಈ ಸಿನಿಮಾ ವಿಶೇಷ?

ನಾನು ಇದುವರೆಗೆ ಕಾಣಿಸಿಕೊ‍ಳ್ಳದ ಪಾತ್ರದಲ್ಲಿ ನಟಿಸಿದ್ದೇನೆ. ಸಿನಿಮಾಟೋಗ್ರಫಿ ಅದ್ಭುತವಾಗಿದೆ. ಒಂದೂ ಮುಕ್ಕಾಲು ಗಂಟೆ ಬರಹಗಾರನ ಜೀವನದಲ್ಲಿ ಮುಳುಗಿಹೋಗಬಹುದು. ಸಿನಿಮಾ ಬಂದ ಮೇಲೆ ಒಂಥರಾ ನಿರಾಳತೆ ಅನುಭವಿಸಬಹುದು. ಪ್ರೇಕ್ಷಕರು ಬಂದು ಈ ಸಿನಿಮಾ ಕೈ ಹಿಡಿಯಬೇಕು.

ಸೈಲೆಂಟಾಗಿ ಡೈರಿ ಬರೆದಿಟ್ಟ ಸ್ಪಂದನಾ; ಗುಟ್ಟು ಬಿಚ್ಚಿಟ್ಟ ಸೋದರಮಾವ

ವೈಯಕ್ತಿಕ ಜೀವನದ ನೋವನ್ನು ಹಿಂದೆ ಬಿಟ್ಟು ಸಿನಿಮಾಗಾಗಿ ಮುಂದೆ ಬಂದಿದ್ದೀರಿ. ಎಷ್ಟು ಕಷ್ಟ?

ನೋವನ್ನು ಬಿಡುವುದು ಕಷ್ಟ. ನೋವಿನ ಜೊತೆಯೇ ಮುಂದೆ ಸಾಗಬೇಕು. ನೋವಿನ ಜೊತೆಯೇ ಬದುಕಬೇಕು. ನೆನಪನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಡೆಯಬೇಕು. ನನಗೆ ಪ್ರೀತಿ ಸಿಕ್ಕಿದ್ದು ಸಿನಿಮಾದಲ್ಲಿ. ಗೆಲುವು ಸಿಕ್ಕಿದ್ದು ಸಿನಿಮಾದಲ್ಲಿ. ಧೈರ್ಯ, ಶಕ್ತಿ ಕೂಡ ಇಲ್ಲೇ ಸಿಗಬೇಕು. ಕಿರುತೆರೆಗೆ ಕಳೆದವಾರ ಮರಳಿದೆ. ಈ ವಾರ ಚಿತ್ರಮಂದಿರಕ್ಕೆ ಬಂದಿದ್ದೇನೆ. ಎಂದಿನಂತೆ ಅಪ್ಪಿಕೊಳ್ಳಿ.

click me!