
ಪ್ರಿಯಾ ಕೆರ್ವಾಶೆ
ಯಾರು ಈ ಲೈನ್‌ಮ್ಯಾನ್?
ಹಳ್ಳಿಗಳಲ್ಲಿ ಕರೆಂಟ್ ರಿಪೇರಿ ಮಾಡ್ತಿರುತ್ತಾರಲ್ಲಾ ಆ ಲೈನ್‌ಮ್ಯಾನೇ. ಈಗ ನಮ್ಮೆಲ್ಲರ ಬದುಕಿಂದ ಕಣ್ಮರೆಯಾಗುತ್ತಿರುವ ಮಾನವೀಯತೆಯೇ ಸಿನಿಮಾದ ಕೇಂದ್ರ. ಹಳ್ಳಿಯ ಲೈನ್‌ಮ್ಯಾನ್ ಒಬ್ಬ ಮನುಷ್ಯ ಸಂಬಂಧವನ್ನು ಹೇಗೆ ಬೆಸೆಯುತ್ತಾನೆ ಅನ್ನೋದು ಕಥೆ. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲೂ ಸಿನಿಮಾ ಮಾಡಿದ್ದೀವಿ.
ಯಾವ ಜಾನರಾದಲ್ಲಿ ಬರುತ್ತೆ?
ಕೆಲವು ವರ್ಷಗಳ ಹಿಂದೆ ‘ತಿಥಿ’ ಅಂತ ಒಂದು ಸಿನಿಮಾ ಬಂತು. ಇದು ಸ್ವಲ್ಪ ಮಟ್ಟಿಗೆ ಆ ಮಾದರಿಯ ಸಿನಿಮಾ. ಇದನ್ನು ಒಂದು ಜಾನರಾದೊಳಗೆ ಫಿಟ್ ಮಾಡೋದು ಕಷ್ಟ. ಸನ್ನಿವೇಶಗಳು ನಮ್ಮೊಳಗೆ ನಗು ಉಕ್ಕಿಸುತ್ತವೆ. ಇನ್ನೊಮ್ಮೆ ಪಾತ್ರಗಳು ನಗುತ್ತಲೇ ಮನಸ್ಸು ಭಾರ ಮಾಡುತ್ತವೆ. ನನಗೆ ರಾಜ್‌ಕುಮಾರ್ ಹಿರಾನಿ ಸಿನಿಮಾಗಳೆಂದರೆ ಇಷ್ಟ. ಆತ ನಗಿಸುತ್ತ ನಗಿಸುತ್ತಾ ಕೊನೆಯಲ್ಲಿ ಕಣ್ಣೊದ್ದೆ ಮಾಡಿ ಕಳಿಸುತ್ತಾರಲ್ಲ ಅಂಥಾ ಫೀಲ್ ಸಿನಿಮಾ ಕೊಡಬೇಕು ಅಂತ ಭಾವಿಸುವವನು ನಾನು.
ನಟಿ ತಾನ್ಯಾಗೆ ಮೀನಿನಂತ ತುಟಿ; ಪ್ಲಾಸ್ಟಿಕ್ ಸರ್ಜರಿ ಎಂದ ಜನರಿಗೆ ಖಡಕ್ ಉತ್ತರ
ತೆಲುಗಿನ ಹೀರೋ ತ್ರಿಗುಣ್ ಇದ್ದಾರೆ?
ನಮ್ಮಲ್ಲೇ ಒಂದಿಷ್ಟು ಹೀರೋಗಳಿಗೆ ಕಥೆ ಹೇಳಿದೆ. ಈ ಸಿನಿಮಾದಲ್ಲಿ ಹೀರೋ, ಹೀರೋಯಿನ್ ಅಂತಿಲ್ಲ. ಎಲ್ಲ ಪಾತ್ರಗಳಿಗೂ ಪ್ರಾಧಾನ್ಯತೆ ಇದೆ. ಹೀರೋ ಅಂದಾಗ ಅವರಿಷ್ಟ ಪಟ್ಟರೂ ಪಡದೇ ಇದ್ದರೂ ಒಂದು ಇಮೇಜ್ ಅಂತಿರುತ್ತಲ್ಲಾ, ಅದನ್ನ ಮೀರಿ ಸಿನಿಮಾ ಮಾಡೋದು ಕಷ್ಟ. ತೆಲುಗು ಹುಡುಗ ತ್ರಿಗುಣ್‌ಗೆ ಇದನ್ನೂ ಸೇರಿಸಿ ಎರಡು ಮೂರು ಕಥೆ ಹೇಳಿದ್ದೆ. ಆದರೆ ಅವರು ಇದೇ ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟರು. ಕನ್ನಡದಲ್ಲೂ ನಟಿಸೋದಕ್ಕೆ ಆಸಕ್ತಿ ತೋರಿಸಿದರು.
ಚಾಲೆಂಜ್ ಅನಿಸಿದ್ದು?
ಸಿನಿಮಾ ಮಾಡೋ ಪ್ರಾಸೆಸ್ ಚಾಲೆಂಜ್ ಅಲ್ಲ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಚಾಲೆಂಜ್. ನಾನು ಲೂಸಿಯಾ ಸಿನಿಮಾ ಟೀಮ್‌ನಲ್ಲಿದ್ದವನು. ಆ ಸಿನಿಮಾ ಸಕ್ಸಸ್ ಆಯ್ತು, ಇದರಲ್ಲಿ ಕೆಲಸ ಮಾಡಿದ ಹಲವು ಮಂದಿ ಹೊಸ ಬದುಕು ಕಂಡುಕೊಂಡರು. ಹೀಗೆ ಸಿನಿಮಾದ ಸಕ್ಸಸ್ ಅನ್ನೋದು ಬಹಳ ಮುಖ್ಯ ಆಗುತ್ತೆ.
ನಂಗೆ ನೀವು ಇಷ್ಟ, ಮದ್ವೆ ಮಾಡ್ಕೊಳ್ಳೋಣ; ರುಕ್ಮಿಣಿಗೆ ಪ್ರಪೋಸ್ ಮಾಡಿದ ಗಣೇಶ್!
ಸಿನಿಮಾ ಕೆಲಸ ಎಲ್ಲೀವರೆಗೆ ಬಂತು?
ಕೆಲಸಗಳೆಲ್ಲ ಕಂಪ್ಲೀಟ್ ಆಗಿದೆ. ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದೆ. ಎಲ್ಲ ಅಂದುಕೊಂಡ ಹಾಗೆ ಆದರೆ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.