ಒಂದಿಷ್ಟು ಲಿಮಿಟ್ಸ್‌ನಲ್ಲಿ ಗ್ಲಾಮರ್ ಪಾತ್ರ ಮಾಡ್ತೀನಿ; ಅಣ್ಣಾವ್ರ ಮೊಮ್ಮಗಳು ಧನ್ಯಾ ಹೇಳಿಕೆ ವೈರಲ್

By Kannadaprabha News  |  First Published Sep 8, 2023, 10:03 AM IST

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಪ್ರತೊ ಸಿನಿಮಾ ಒಪ್ಪಿಕೊಳ್ಳಿವ ಮೊದಲು ತಾತ ಡಾ.ರಾಜ್‌ ಅವರನ್ನು ನೆನಪಿಸಿಕೊಳ್ಳುತ್ತೇನೆ ಅವರಿದ್ದರೆ ಈ ಸಿನಿಮಾ ಬಗ್ಗೆ ಏನು ಹೇಳುತ್ತಿದ್ದರು ಅಂತ ಯೋಚಿಸಿ ನಿರ್ಧಾರಕ್ಕೆ ಬರುತ್ತೇನೆ' ಅನ್ನುವ ಧನ್ಯಾ 'ಕಾಲಪತ್ತರ್' ಸಿನಿಮಾ ಕಾರ್ಯಕ್ರಮದಲ್ಲಿ ಸಿಕ್ಕಾಗ ನಡೆದ ಮಾತುಕತೆ...


ಪ್ರಿಯಾ ಕೆರ್ವಾಶೆ

ಒಂದು ಸಿನಿಮಾ ರಿಲೀಸ್‌ ಆಗಿದ್ದೇ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿ ಬಿಟ್ಟಿರಿ?

Tap to resize

Latest Videos

undefined

ಹೌದು. ಹಾಗಂತ ನಾನು ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಂಡಿಲ್ಲ.

ಆಯ್ಕೆಯ ಮಾನದಂಡಗಳೇನಿರುತ್ತವೆ?

ಕಥೆ, ಸ್ಕ್ರಿಪ್ಟ್‌ ಓದುತ್ತೀನಿ. ಇಷ್ಟ ಆದರೆ ಅಮ್ಮ, ಅಣ್ಣ, ಕುಟುಂಬದವರ ಜೊತೆ ಚರ್ಚಿಸುತ್ತೀನಿ. ಅವರೆಲ್ಲರ ಅಭಿಪ್ರಾಯ ತಗೊಂಡು ಒಂದು ನಿರ್ಧಾರಕ್ಕೆ ಬರುತ್ತೀನಿ.

ಆದರೂ ನಾಯಕಿ ಪ್ರತಿಭೆಗೆ ತಕ್ಕಂಥ ಪಾತ್ರಗಳು ತೀರಾ ಕಡಿಮೆ ಅನ್ನೋ ಮಾತಿದೆ?

ಕಮರ್ಷಿಯಲ್‌ ಸಿನಿಮಾಗಳಲ್ಲಿ ಸ್ಟಾರ್‌ಗಳೇ ಪ್ರಧಾನವಾಗಿದ್ದಾಗ ಹೀಗಾಗುತ್ತದೆ. ಆದರೆ ನನಗೆ ಈವರೆಗೆ ಅಂಥಾ ಸಿನಿಮಾಗಳು ಬಂದಿಲ್ಲವಲ್ಲ.

ಕೊಕೇನ್‌ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು; 'ಪೌಡರ್'ಗೆ ಸಾಥ್‌ ಕೊಟ್ಟ ರಾಜ್‌ಕುಮಾರ್ ಮೊಮ್ಮಗಳು ಧನ್ಯಾ!

ಗ್ಲಾಮರ್‌ ಪಾತ್ರಗಳಿಗೆ ರೆಡಿ ಇದ್ದೀರ?

ನಟಿ ಅಂದಮೇಲೆ ಪ್ರಯೋಗಶೀಲತೆಗೆ ರೆಡಿ ಇರಬೇಕು. ನನ್ನದೇ ಒಂದಿಷ್ಟು ಲಿಮಿಟ್ಸ್‌ನಲ್ಲಿ ಗ್ಲಾಮರ್‌ ಪಾತ್ರ ಮಾಡಲು ತಕರಾರಿಲ್ಲ. ಆದರೆ ನಮ್ಮ ಕುಟುಂಬದ ಗೌರವಕ್ಕೆ ಕುಂದು ತರುವಂಥಾ ಪಾತ್ರಗಳಾದರೆ ಒಪ್ಪೋದಿಲ್ಲ.

ನಿಮ್ಮ ಕುಟುಂಬದ್ದೇ ನಿರ್ಮಾಣ ಸಂಸ್ಥೆ ಇದೆ, ಆ ಬ್ಯಾನರ್‌ನಲ್ಲಿ ಸಿನಿಮಾ ಮಾಡಲ್ವಾ?

ಆ ಥರ ಮಾತುಕತೆ ಇನ್ನೂ ನಡೆದಿಲ್ಲ. ಅಲ್ಲೂ ಕೆಲವು ಟೆಕ್ನಿಕಲ್ ಇಶ್ಯೂ ಇದೆ. ಶಿವರಾಜ್‌ಕುಮಾರ್‌ ಅವರ ಚಿತ್ರಕ್ಕೆ ನಾನು ನಾಯಕಿ ಆಗೋದು ಕಷ್ಟ.

ಅಶ್ವಿನಿ ಮೇಡಂ ಬ್ಯಾನರ್‌?

ಅವರಿಗೆ ನನ್ನ ನಟನೆ ಇಷ್ಟ ಆಗಿ ಅವರು ಆ ಬಗ್ಗೆ ಕೇಳಿದರೆ ಖಂಡಿತಾ ಮಾಡ್ತೀನಿ. ಈ ನಿರ್ಮಾಣ ಸಂಸ್ಥೆಯಿಂದ ಇತ್ತೀಚೆಗೆ ರಿಲೀಸ್ ಆಗಿರೋ ‘ಆಚಾರ್ಯ ಆ್ಯಂಡ್‌ ಕೋ’ ಸಿನಿಮಾ ನೋಡಿದ್ದೀನಿ. ಬಹಳ ಇಷ್ಟ ಆಗಿದೆ.

ರವಿಚಂದ್ರನ್ ಚಿತ್ರದ ಪಬ್‌ ಹಾಡಿಗೆ ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ಹೆಜ್ಜೆ: ನೆಟ್ಟಿಗರು ಫುಲ್ ಕನ್ಫ್ಯೂಸ್

ನಟನೆ ಬಿಟ್ಟು ನಿರ್ದೇಶನ, ನಿರ್ಮಾಣ ಇತ್ಯಾದಿಗಳತ್ತ ಆಸಕ್ತಿ ಇಲ್ವಾ?

ಸದ್ಯಕ್ಕೆ ನಟನೆಯಲ್ಲಿ ಬ್ಯುಸಿ ಇದ್ದೀನಿ. ಬಿಡುವಿಲ್ಲದೇ ಕೆಲಸ ಮಾಡುತ್ತಲೇ ಇರಬೇಕು ಅನ್ನೋದು ನನ್ನ ಆಸೆ. ಸಿನಿಮಾ, ಆ್ಯಡ್ ಶೂಟ್‌ ಅಂತ ಯಾವಾಗ್ಲೂ ಬ್ಯುಸಿ ಆಗಿರ್ತೀನಿ. ಈ ನಡುವೆ ಬೇರೆ ವಿಚಾರಗಳತ್ತ ಗಮನ ಹರಿಸಿಲ್ಲ. ನಿರ್ದೇಶನದ ಆಸಕ್ತಿ ಇದೆ. ಆದರೆ ಅದಕ್ಕಿನ್ನೂ ಬಹಳ ದೂರ ಇದೆ. ಅದು ಬಿಟ್ಟರೆ ಕವಿತೆ ಬರೆಯೋದು ಇಷ್ಟ. ಈಗಾಗಲೇ ಒಂದಿಷ್ಟು ಕವಿತೆ ಬರೆದಿದ್ದೀನಿ. ಕೆಲವೊಂದನ್ನು ಹಾಡಿಯೂ ಇದ್ದೀನಿ.

click me!