ಕೂದಲಿಲ್ಲದವರ ಹೊಟ್ಟೆ ಉರಿಸುತ್ತಿರುವ ಸಿಲ್ಕಿ ಹೇರ್ ಸಿಂಹ: ವಿಡಿಯೋ ಸಖತ್ ವೈರಲ್

By Anusha Kb  |  First Published Dec 30, 2022, 9:58 PM IST

ಸಿಂಹವೊಂದರ ರೇಷ್ಮೆಯಂತಹ ಕೇಸರಿ ಎಲ್ಲರ ಮನ ಸೆಳೆಯುತ್ತಿದೆ. ಸಿಂಹ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.


ದಟ್ಟವಾದ ರೇಷಿಮೆಯಂತಹ ಕೂದಲನ್ನು ಹೊಂದಿರಬೇಕು, ಬೀಸುವ ಗಾಳಿಗೆ ಕೂದಲು ತೆಂಗಿನ ಗರಿಗಳಂತೆ ತೊನೆದಾಡುತ್ತಾ ಎಲ್ಲರ ಸೆಳೆಯಬೇಕು ಎಂಬುದು ಬಹುತೇಕರ ಆಸೆ. ಆದರೇನು ಶಿವಾ ಎಲ್ಲರಿಗೂ ಆ ಭಾಗ್ಯವಿಲ್ಲ. ರೇಷ್ಮೆ ಕೂದಲಿಲ್ಲದಿದ್ದರೂ ಪರವಾಗಿಲ್ಲ ತಲೆಯಲ್ಲಿ ಕನಿಷ್ಠ ಪಕ್ಷ ಯಾವುದೋ ಒಂದು ಕೂದಲಿದ್ದರೆ ಸಾಕು ಎಂಬುದು ಇಂಬುದು ಇಂದಿನ ಬಹುತೇಕ ಕೂದಲೂದುರುವ ಸಮಸ್ಯೆಯಿಂದ ಬಾಧಿಸುತ್ತಿರುವವರ ಮನದಾಳ. ಇತ್ತೀಚೆಗೆ ತುಂಬಾ ಜನ ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೋವಿಡ್ ನಂತರ ಅನೇಕರು ತಲೆಕೂದಲನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಸಿಂಹವೊಂದರ ರೇಷ್ಮೆಯಂತಹ ಕೇಸರಿ ಎಲ್ಲರ ಮನ ಸೆಳೆಯುತ್ತಿದೆ. ಸಿಂಹ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

@Gabriele_Corno ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, 7 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಕೀನ್ಯಾದ ಮಸಾಯ್ ಮಾರಾ ರಾಷ್ಟ್ರೀಯ ಸಂರಕ್ಷಿತ ಉದ್ಯಾನವನದ ವಿಡಿಯೋ ಇದು ಎಂದು ವಿಡಿಯೋ ಪೋಸ್ಟ ಮಾಡಿ ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಸಿಂಹವೊಂದು ಇಳಿಜಾರಿನ ಮೇಜಿನ ಮೇಲೆ ಆರಾಮವಾಗಿ ಕುಳಿತಂತೆ ಕಾಣಿಸುತ್ತಿದೆ. ಬೀಸುವ ಗಾಳಿಗೆ ಸಿಂಹ (Lion) ರೇಷ್ಮೆಯಂತಹ ಉದ್ದನೆಯ ಕೂದಲು (Silky long hair) ಅತ್ತಿತ್ತ ತೊನೆದಾಡುತ್ತಿವೆ. 16 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಸಿಂಹ ಒಮ್ಮೆ ಅತ್ತ ಮತ್ತೊಮ್ಮೆ ಇತ್ತ ನೋಡುತ್ತ ಸಖತ್ ಆಗಿ ಫೋಸ್ ಕೊಡುತ್ತಿದ್ದು, ಇದು ರೇಷಿಮೆಯಂತಹ ನುಣುಪಾದ ಕೂದಲಿರುವ ಹುಡುಗಿಯೊಬ್ಬಳು ತನ್ನ ಕೇಶರಾಶಿಯನ್ನು ಗಾಳಿಗೆ ತೇಲಿಬಿಟ್ಟು ಪೋಸ್ ಕೊಟ್ಟಂತೆ ಕಾಣಿಸುತ್ತಿದ್ದು, ಕೂದಲಿಲ್ಲದವರೆಲ್ಲ ಹೊಟ್ಟೆ ಉರಿದುಕೊಳ್ಳುವಂತೆ ಮಾಡುತ್ತಿದೆ.

Tap to resize

Latest Videos

undefined

ಆನೆ ಹಾಗೂ ಘೆಂಡಾಮೃಗದ ಘೋರ ಕಾಳಗ : ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾ (South Africa) ಕಂಡದ ಕೀನ್ಯಾ ದೇಶದ ವಿಡಿಯೋ ಇದಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social Media) ಸಾಕಷ್ಟು ವೈರಲ್ ಆಗುತ್ತಿದೆ. ಗಂಡು ಸಿಂಹ ಇದಾಗಿದ್ದು, ಬಿಸಿಲಿಗೆ ಮೈಯೊಡ್ಡಿ ಸಿಂಹ ಚಳಿ ಕಾಯಿಸುವಂತೆ ಕಾಣುತ್ತಿದ್ದು, ಅದರ ಕೆಂಚು ಹಾಗೂ ಬಂಗಾರದ ಬಣ್ಣ ಮಿಶ್ರಿತ ಕೇಸರಿ ಹಾಗೆಯೇ ಗಾಳಿಗೆ ಹಾರಾಡುತ್ತಿದೆ. 

ಈ ವಿಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು ದಯವಿಟ್ಟು ನಿಮ್ಮ ಕೂದಲಿನ ಆರೈಕೆಯ ವಿಧಾನಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ ಎಂದು ಕಾಮೆಂಟ್ ಮಾಡಿದ್ದಾರೆ. ನನಗೆ ಈ ಸಿಂಹದ ಕೂದಲಿನ ಮೇಲೆ ಮಲಗಬೇಕೆನಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರಬುದ್ಧ ಸಿಂಹಕ್ಕಿಂತ ವಿಸ್ಮಯಕಾರಿ ಪ್ರಾಣಿ ಮತ್ತೊಂದಿಲ್ಲ, ಕಾಡಿನ ರಾಜನನ್ನು ಗಮನಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಸಿಂಹ ದುಬಾರಿ ಹೇರ್ ಕಂಡೀಷನರ್‌ಗೆ ಜಾಹೀರಾತು ನೀಡುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ಹೆಮ್ಮೆಯಿಂದ ಈ ಸಿಂಹ ಫೋಸ್ ಕೊಡ್ತೀರೋದೇಕೆ. ಇವನನ್ನು ನೋಡಿದರೆ ವೆರಿಫೈಡ್ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವಂತೆ ಕಾಣಿಸುತ್ತಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಬೈಕರ್ಸ್‌ಗೆ ಧುತ್ತನೇ ಎದುರಾದ ಹುಲಿರಾಯ... ವೈರಲ್ ವಿಡಿಯೋ

ಬೆಕ್ಕಿನ ಜಾತಿಯ ಕುಟುಂಬಕ್ಕೆ ಸೇರುವ ಸಿಂಹಗಳು ನಿಜಾವಾಗಿ ಸಾಮಾಜಿಕ ಸದಸ್ಯರಾಗಿದ್ದು, ಅವರು ಪ್ರೈಡ್ ಎಂದು ಕರೆಯಲ್ಪಡುವ ಗುಂಪಿನಲ್ಲಿ ವಾಸ ಮಾಡುತ್ತವೆ. ಈ ಪ್ರೈಡ್ ಸಾಮಾನ್ಯವಾಗಿ 10 ರಿಂದ 15 ಸಿಂಹಗಳನ್ನು ಹೊಂದಿರುತ್ತದೆ. ವಯಸ್ಕ ಹೆಣ್ಣು ಹಾಗೂ ಗಂಡು ಸಿಂಹಗಳು ಮರಿ ಸಿಂಹಗಳು ಈ ಪ್ರೈಡ್‌ನಲ್ಲಿರುತ್ತವೆ.  ಕೆಲ ದಿನಗಳ ಹಿಂದೆ ವಯಸ್ಸಾದ ಸಿಂಹವೊಂದರ ಮೇಲೆ ಕಾಡುಕೋಣಗಳ ಹಿಂಡು ಪ್ರತಾಪ ತೋರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಯಸ್ಸಾದ ಸಿಂಹವೊಂದು ಅದರಷ್ಟಕ್ಕೆ ಮಲಗಿಕೊಂಡಿರುವಲ್ಲಿಗೆ ಬಂದ ಕಾಡುಕೋಣಗಳ ಗುಂಪು ಅದರ ಮೇಲೆ ಹಲ್ಲೆಗೆ ಮುಂದಾಗುತ್ತವೆ. ಕೊಂಬಿನಲ್ಲಿ ತಿವಿದು ಅದನ್ನು ಮೇಲಕ್ಕೆಸೆದು ಬಿಡುತ್ತವೆ. ಈ ವೇಳೆ ಅಶಕ್ತಗೊಂಡಿದ್ದ ಸಿಂಹ ಈ ಕಾಡುಕೋಣಗಳ ಗುಂಪಿನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತದೆ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 

The king in Masai Mara National Reserve, Kenya pic.twitter.com/OSR7rswdxw

— Gabriele Corno (@Gabriele_Corno)

ಜಿರಾಫೆಯ ಬೇಟೆಯಾಡಲು ಯತ್ನಿಸಿದ ಸಿಂಹ... ಆಮೇಲೇನಾಯ್ತು ನೋಡಿ

click me!