ಸೌಂದರ್ಯ ಹಾಗೂ ಅಭಿನಯ ಎರಡರಲ್ಲೂ ತಮ್ಮದೇ ಆದ ವೈಶಿಷ್ಟ್ಯ ಹೊಂದಿರುವ ರಾಧಿಕಾ ರಂಗಿ ತರಂಗ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು. ನಂತರ ಎಲ್ಲಿಯೋ ಮರೆಯಾಗಿದ್ದ ಈ ನಟಿ ಇದೀಗ ಹೊಸ ಲುಕ್ ಹಾಗೂ ಹೊಸ ರೀತಿಯ ಪಾತ್ರದ ಮೂಲಕ ಮತ್ತೆ ಮರಳುತ್ತಿದ್ದಾರೆ.
ರಾಧಿಕಾ ನಾರಾಯಣ್ ಎಂದು ಹೆಸರು ಬದಲಾಯಿಸಿಕೊಂಡಿರುವ ರಾಧಿಕಾ ಚೇತನ್ ಅವರಿಗೆ ‘ಮುಂದಿನ ನಿಲ್ದಾಣ’ ಸಿನಿಮಾ ಚಿತ್ರರಂಗಕ್ಕೆ ಮರು ಎಂಟ್ರಿಯಂತೆ. ಈ ಚಿತ್ರದ ಕುರಿತು ರಾಧಿಕಾ ಅವರಿಗೆ ದೊಡ್ಡ ಭರವಸೆ ಇದೆ. ಈಗಾಗಲೇ ಪೋಸ್ಟರ್, ಟೀಸರ್, ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆಯುತ್ತಿದ್ದು, ಸದ್ಯದಲ್ಲೇ ಟ್ರೇಲರ್ ರಿಲೀಸ್ ಆಗಲಿದೆ. ‘ಚೂರಿಕಟ್ಟೆ’ ಚಿತ್ರದ ಪ್ರವೀಣ್ ತೇಜ್ ಈ ಚಿತ್ರದಲ್ಲಿ ನಾಯಕ. ಸಿನಿಮಾ ಬಗ್ಗೆ ರಾಧಿಕಾ ನಾರಾಯಣ್ ಹಂಚಿಕೊಂಡ ವಿವರಗಳಿಷ್ಟು.
undefined
- ನಿರ್ದೇಶಕ ವಿನಯ್ ಭಾರದ್ವಜ್ ಅವರು ಒಂದು ಯೂತ್‌ಫುಲ್ ಪ್ರಯಾಣದ ಕತೆಯನ್ನು ಹೇಳಿದ್ದಾರೆ. ಒಂಟಿ ಪಯಣದಲ್ಲಿ ತೊಡಗುವ, ಟ್ರಕ್ಕಿಂಗ್‌ಗೆ ಹೊರಡುವ, ನಿಂತಲ್ಲಿ ನಿಲ್ಲದೆ ಜಗತ್ತು ಸುತ್ತಾಡಬೇಕು, ಪ್ರಕೃತಿ ಜತೆ ಸ್ನೇಹ ಬೆಳೆಸಬೇಕು ಎಂದು ಹಂಬಲಿಸುವ ಪ್ರತಿಯೊಬ್ಬರ ಮನಸ್ಸಿಗೂ ಮುಟ್ಟುವ ಕತೆ ಈ ಚಿತ್ರದಲ್ಲಿದೆ.
- ಮುಂದಿನ ನಿಲ್ದಾಣ ಸಿನಿಮಾ ನನಗೆ ಹಲವು ಕಾರಣಗಳಿಗಾಗಿ ಮಹತ್ವದ್ದು. ಈ ಚಿತ್ರದಿಂದ ನನ್ನ ಹೆಸರು ಬದಲಾಯಿಸಿಕೊಂಡೆ. ಹೊಸ ರೀತಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೀನಿ. ತುಂಬಾ ಗ್ಯಾಪ್ ನಂತರ ದೊಡ್ಡ ಮಟ್ಟದ ಭರವಸೆಯೊಂದಿಗೆ ಚಿತ್ರರಂಗಕ್ಕೆ ಹಿಂತಿರುಗುವಂತೆ ಮಾಡುತ್ತಿರುವ ಸಿನಿಮಾ ಇದು.
- ಇದೊಂದು ಹೊಸ ಅಲೆಯ ಚಿತ್ರ. ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಲೊಕೇಶನ್, ಕಲೆ, ಬಣ್ಣ, ದೃಶ್ಯ, ವಸ್ತ್ರವಿನ್ಯಾಸ ಈ ಎಲ್ಲದರಲ್ಲಿಯೂ ಹೊಸತನವನ್ನು ಹಿಡಿದಿಟ್ಟುಕೊಂಡು ಚಿತ್ರದ ಪ್ರತಿ ಪಾತ್ರವನ್ನು ವಿಶೇಷವಾಗಿ ತೆರೆ ಮೇಲೆ ಬಿಂಬಿಸಲಾಗಿದೆ.
ರಮೇಶ್ ಅರವಿಂದ್ ಚಿತ್ರಕ್ಕೆ ಇಬ್ಬರು ನಾಯಕಿಯರು
- ಈಗಷ್ಟೆಪಿಆರ್‌ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ನನ್ನ ಪಾತ್ರದ ಸುತ್ತ ಸಾಗುವ, ಸಂಚಿತ್ ಹೆಗಡೆ ಹಾಡಿರುವ ‘ಲೈಫ್ ಈಸ್ ಬ್ಯೂಟಿಫುಲ…’ ಹಾಡು ನೋಡಿದಾಗ ನನ್ನ ಪಾತ್ರಕ್ಕೆ ಯಾವ ಮಟ್ಟಕ್ಕೆ ಹೊಸತನ ಇದೆ ಎಂಬುದು ಗೊತ್ತಾಗುತ್ತದೆ. ಕೇಳುವುದಕ್ಕೆ ಹಾಗೂ ನೋಡುವುದಕ್ಕೂ ತುಂಬಾ ಚೆಂದ ಅನಿಸಿರುವ ಈ ಹಾಡು ಬೆಲ್ಜಿಯಂ ಹಾಗೂ ನೆದರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣಗೊಂಡಿದೆ.
- ನಾನು ಈ ಹಾಡಿನಲ್ಲಿ ಕುಂಚ ಕಲಾವಿದೆಯಾಗಿ ಕಾಣಿಸಿಕೊಂಡಿದ್ದೇನೆ. ತುಂಬಾ ಮೋಹಕ ಹಾಗೂ ಕಲಾತ್ಮಕವಾಗಿ ನನ್ನ ಪಾತ್ರ ಮೂಡಿಬಂದಿದೆ. ಮೀರಾ ಎಂಬುದು ನನ್ನ ಪಾತ್ರದ ಹೆಸರು. ಬೆಲ್ಜಿಯಂ ಹಾಗೂ ನೆದರ್‌ಲ್ಯಾಂಡ್‌ನಲ್ಲಿ ನಡೆದ ಚಿತ್ರೀಕರಣವು ನನ್ನ ಜೀವನದ ಮರೆಯಲಾರದ ಕ್ಷಣಗಳಲ್ಲಿ ಒಂದು.