ಈ ವಾರ ತೆರೆಗೆ ಬರುತ್ತಿರುವ ಚಿತ್ರಗಳ ಪೈಕಿ ‘ಅಂದವಾದ’ ಸಿನಿಮಾ ಕೂಡ ಒಂದು. ಹೊಸತನದ ಪ್ರೇಮ ಕತೆಯಿಂದ ಕೂಡಿದ ಈ ಚಿತ್ರವನ್ನು ಚಲ ನಿರ್ದೇಶಿಸಿದ್ದು, ಅನುಷಾ ರಂಗನಾಥ್ ಹಾಗೂ ಜೈ ಜೋಡಿ ಇಲ್ಲಿದೆ. ಸಿನಿಮಾ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಅನುಷಾ ರಂಗನಾಥ್ ಅವರು ಚಿತ್ರದ ಬಗ್ಗೆ ಮಾತನಾಡಿದ್ದಾರೆ.
1. ಇದು ನನ್ನ ಮೂರನೇ ಸಿನಿಮಾ. ‘ಸೋಡಾಬುಡ್ಡಿ’ ಹಾಗೂ ‘ಲೈಫ್ 360’ ಚಿತ್ರಗಳ ನಂತರ ‘ಅಂದವಾದ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ನನ್ನ ಈ ಹಿಂದಿನ ಚಿತ್ರಗಳು ಒಳ್ಳೆಯ ಹೆಸರು ಕೊಟ್ಟಿವೆ. ಅದೇ ಭರವಸೆ ‘ಅಂದವಾದ’ ಚಿತ್ರದ ಮೇಲೂ ಇದೆ.
2. ಅಂದವಾದ ಚಿತ್ರದಲ್ಲಿ ಜಾಸ್ತಿ ಮಾತನಾಡುವ, ಹೀರೋಗೆ ಪದೇ ಪದೇ ಸುಳ್ಳು ಹೇಳಿ ಅವನನ್ನು ನಂಬಿಸುವ ಹುಡುಗಿಯ ಪಾತ್ರವನ್ನು ನಾನು ಮಾಡಿದ್ದೇನೆ. ನನ್ನ ಪಾತ್ರ ಹೇಳೋದೆಲ್ಲ ಸುಳ್ಳು ಅಂತ ನಾಯಕನಿಗೆ ಗೊತ್ತಿದ್ದರೂ ಆತನ ಮಾತ್ರ ನನ್ನ ನಂಬುತ್ತಾನೆ. ಇದೇ ನನ್ನ ಪಾತ್ರಕ್ಕಿರುವ ವಿಶೇಷತೆಗಳಲ್ಲಿ ಒಂದು.
ರಾಜ್ ಮೊಮ್ಮಗನ ಜೊತೆ ’ಬಾಕ್ಸರ್’ ಹೊಡೆದ ಆಶಿಕಾ ರಂಗನಾಥ್ ಅಕ್ಕ!
3. ನಾನು ಯಾಕೆ ಈ ರೀತಿ ಸುಳ್ಳು ಹೇಳುತ್ತೇನೆ, ಅದಕ್ಕೆ ಕಾರಣ ಏನೆಂದು ತಿಳಿಯಲು ಸಿನಿಮಾ ಪೂರ್ತಿ ನೋಡಬೇಕು. ಇಲ್ಲೊಂದು ಮುದ್ದಾದ ಪ್ರೇಮ ಕತೆ ಇದೆ. ಈ ಕಾರಣಕ್ಕೆ ಚಿತ್ರಕ್ಕೆ ‘ಅಂದವಾದ’ ಎನ್ನುವ ಹೆಸರಿಡಲಾಗಿದೆ. ಸಿನಿಮಾ ಪೂರ್ತಿ ನಗಿಸುತ್ತಲೇ, ಕೊನೆಗೆ ನೋಡುಗರ ಕಣ್ಣು ತೇವಗೊಳಿಸುವ ಗಂಭೀರ ಕತೆ ಚಿತ್ರದಲ್ಲಿದೆ.
4. ಸುಂದರವಾದ ಹಸಿರಿನ ಹಿನ್ನೆಲೆಯ ಚಿತ್ರೀಕರಣದ ಜಾಗಗಳು ಕತೆಯ ನಿರೂಪಣೆಯ ಮಹತ್ವವನ್ನು ಸಾರುತ್ತವೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾ ನೋಡಿದ ಮೇಲೂ ಇದೇ ಪ್ರತಿಕ್ರಿಯೆ ಸಿಗುತ್ತದೆಂಬ ನಂಬಿಕೆ ಇದೆ.
5. ಈ ಚಿತ್ರಕ್ಕೆ ತುಂಬಾ ಒಳ್ಳೆಯ ತಂಡ ಕೆಲಸ ಮಾಡಿದೆ. ಡಿ ಆರ್ ಮಧು ಜಿ ರಾಜ್ ನಿರ್ಮಾಪಕರು. ವರ್ಮನ್ ಸಂಗೀತ, ಗುರು ಕಿರಣ್ ಹಿನ್ನೆಲೆ ಸಂಗೀತ, ಹರೀಶ್ ಎನ್ ಸೊಂಡೇಕೊಪ್ಪ ಕ್ಯಾಮೆರಾ ಹಿಡಿದಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಹೃದಯ ಶಿವ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಜೈ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ಇವರೊಂದಿಗೆ ತೆರೆ ಹಂಚಿಕೊಂಡಿದ್ದು ತುಂಬಾ ಖುಷಿ ಕೊಟ್ಟವಿಚಾರ.
ಬುದ್ಧಿವಂತ ವಸಿಷ್ಠ ಸಿಂಹ ಗೆಲ್ಲಬೇಕು: ಕಿಚ್ಚ ಸುದೀಪ್
6. ನಾನು ಚಿತ್ರರಂಗಕ್ಕೆ ಬಂದು ಮೂರು ವರ್ಷ ಆಗಿದ್ದು, ಮೂರು ಚಿತ್ರಗಳಲ್ಲಿ ನಟಿಸಿದ್ದೇನೆ. ಮೂರನೇ ಚಿತ್ರ ಬಿಡುಗಡೆಯಾಗುತ್ತಿತ್ತು, ನಾಲ್ಕನೇ ಸಿನಿಮಾ ವಿನಯ್ ರಾಜ್‌ಕುಮಾರ್ ಜತೆ ನಟಿಸುತ್ತಿರುವ ‘ಟೆನ್’ ಹೆಸರಿನ ಸಿನಿಮಾ.
‘ಟೆನ್’ ನನ್ನ ಕೆರಿಯರ್‌ನ ಮತ್ತೊಂದು ದೊಡ್ಡ ಸಿನಿಮಾ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಈ ಸಿನಿಮಾ ಬರುತ್ತಿದ್ದು, ಕ್ರೀಡೆಯನ್ನು ಆಧರಿಸಿದ ಆ್ಯಕ್ಷನ್ ಬೇಸ್ಡ್ ಸಬ್ಜೆಕ್ಟ್ ಇರುವ ಚಿತ್ರ. ಒಬ್ಬ ಬಾಕ್ಸರ್ ಜೀವನದಲ್ಲಿ ಸಂಭವಿಸುವ ಏರಿಳಿತಗಳು, ಈ ಬಾಕ್ಸರ್ ಜತೆಗೆ ಇರುವ ಹುಡುಗಿಯ ಜೀವನದಲ್ಲಿ ಉಂಟಾಗುವ ಪರಿಣಾಮಗಳೇನು ಎಂಬುದೇ ಈ ಚಿತ್ರದ ಕತೆ. ನಾನು ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.