BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

By Kannadaprabha NewsFirst Published Oct 26, 2019, 10:33 AM IST
Highlights

ಬಿಗ್ ಬಾಸ್ ಮನೆಗೆ ಹೋಗಿ ಒಂದು ವಾರಗಳ ಕಾಲ ಮನೆಯಲ್ಲಿದ್ದು ಹೊರ ಬಂದ ಬಳಿಕ ಅಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹೇಗಿತ್ತು ಬಿಗ್ ಬಾಸ್ ಮನೆ? ಹೊರಗೆ ತೋರಿಸಿದಂತೆ ಒಳಗೂ ಹಾಗೆ ಇದೆಯಾ? 

 ದೇಶಾದ್ರಿ ಹೊಸ್ಮನೆ 

ಬಿಗ್‌ ಬಾಸ್‌ ಮನೆಗೆ ಹಾಗೆ ಹೋಗಿ ಹೀಗೆ ಬಂದವರ ನಡುವೆ, ಒಂದೇ ವಾರ ಒಳಗಿದ್ದರೂ ಎಲ್ಲರ ಮನದಲ್ಲಿ ಮನೆ ಮಾಡಿದ ರವಿ ಬೆಳಗೆರೆ, ಆ ಮನೆಯೊಳಗಿನ ಗುಟ್ಟನ್ನಿಲ್ಲಿ ಬಿಚ್ಚಿಟ್ಟಿದ್ದಾರೆ.

ನೀವೇ ಒಂದು ಬಿಗ್‌ಬಾಸ್‌, ಆದ್ರೂ ಈ ಬಿಗ್‌ಬಾಸ್‌ ಮನೆಗೆ ಯಾಕೆ ಹೋದ್ರಿ?

ನಾನು ಮತ್ತು ಪರಂ ಹಳೇ ಸ್ನೇಹಿತರು. 1992 ರಲ್ಲಿ ಒಂದಿವಸ ಪರಂ ಅವರ ತಂದೆ ಜತೆಗೆ ಕೈ ಹಿಡ್ಕೊಂಡು ನನ್ನ ಆಫೀಸ್‌ಗೆ ಬಂದಿದ್ರು. ನಾನಾಗ ಕರ್ಮವೀರ ಪತ್ರಿಕೆಯಲ್ಲಿದ್ದೆ. ಕ್ಯೂಟ್‌ ಹುಡುಗ. ಏನ್‌ ಮರಿ, ಏನ್‌ ಮಾಡ್ತೀಯಾ ಅಂತ ಕೇಳಿದ್ದೆ. ಆಗ ಆತ ; ಸರ್‌, ಕಾರ್ಟೂನ್‌ ಬರಿತೀನಿ.. ಅಂದ. ಅದ್ರಿಂದ ಹೊಟ್ಟೆತುಂಬೋಲ್ಲೋ ಮಾರಾಯಾ, ಬೇರೆ ಏನಾದ್ರು ಮಾಡು ಅಂತ ಹೇಳಿದ್ದೆ. ಇವತ್ತು ಆ ಹುಡುಗ ಆ ಮಟ್ಟಕ್ಕೆ ಬೆಳೆದಿರೋದು ಖುಷಿ. ಆತ ಬಂದು ನೀವು ಬರಬೇಕು ಅಂದಾಗ ಇಲ್ಲ ಎನ್ನಲಾಗಲಿಲ್ಲ.

ಬಿಗ್ ಬಾಸ್ ಸ್ಟೈಲ್ ವಾಲಿ; ರಿಯಲ್ ಲೈಫ್ ನಲ್ಲಿ ಯಾಕಿಂಗೆ?

ಬಿಗ್‌ಬಾಸ್‌ ಮನೆಯ ಮೊದಲ ದಿನದ ಅನುಭವ ಹೇಗಿತ್ತು?

ಹೋದ ದಿವಸವೇ ಐ ಆ್ಯಮ್‌ ಫೆಲ್ಟ್‌ ವೆರಿ ಕಂಫರ್ಟೆಬಲ್‌. ಅದೇನು ನಂಗೆ ಹೊಸ ಮನೆ, ಇನ್ನೇನೋ ಅಂತ ಅನಿಸಿದ್ದಿಲ್ಲ. ಎಲ್ಲರ ಜತೆಗೆ ಹೊಂದಿಕೊಂಡಿದ್ದೆ. ಫಸ್ಟ್‌ ಡೇ ನಾನಲ್ಲಿಗೆ ಹೋದಾಗ ಅಲ್ಲಿದ್ದಿದ್ದು ಕುರಿ, ಜತೆಗೆ ಪ್ರಿಯಾಂಕಾ. ಆಮೇಲೆ ಉಳಿದವರೆಲ್ಲ ಬಂದ್ರು. ಒಂದೇ ಒಂದು ಸಮಸ್ಯೆ ಅಂದ್ರೆ ನ್ಯೂಸ್‌ ಪೇಪರ್‌. ಕನ್ನಡ ಪ್ರಭಕ್ಕೂ ನಂಗೂ ಅದೇ ನಂಟು.

ನಿಮ್ಮ ಎಂಟ್ರಿ ಮೂಲಕ ಬಿಗ್‌ಬಾಸ್‌ ಮನೆಯಲ್ಲಿ ಒಂದಷ್ಟುಸಾಹಿತ್ಯದ ವಾತಾವರಣ ಕ್ರಿಯೇಟ್‌ ಆಯ್ತು ಅಂತೆನಿಸುತ್ತೆ..

ನಾನು ಸಿನಿಮಾ ನೋಡಲ್ಲ, ಟಿವಿ ನೋಡಲ್ಲ. ನಾನು ಕಟ್ಟಕಡೆಯಾದಾಗಿ ನೋಡಿದ ಸಿನಿಮಾ ‘ಟೈಟಾನಿಕ್‌’. ಒಂದು ಕಾಲದಲ್ಲಿ ನನಗೆ ನನ್ನ ಜೀವಕ್ಕೆ ಅಪಾಯ ಇತ್ತು. ಮೂರು ಗಂಟೆ ಥೇಟರಲ್ಲಿ ಇರ್ತೀನಿ ಅಂತ ಗೊತ್ತಾದ್ರೆ ಅಟ್ಯಾಕ್‌ ಮಾಡೋರಿಗೆ ಸುಲಭ ಆಗೋದು.

ಅದಕ್ಕೇ ನಾನು ಚಿತ್ರಮಂದಿರಕ್ಕೇ ಹೋಗ್ತಿರಲಿಲ್ಲ. ಹೀಗಾಗಿ ನನ್ನ ಏಕೈಕ ಮಾಧ್ಯಮ ಓದು. ಸಾಹಿತ್ಯದ ಬದುಕು. ಹೀಗಾಗಿ ಅಲ್ಲೂ ಅದೇ ಮಾಡಿದೆ. ಗಾಸಿಪ್‌-ಗಿಸಿಪ್‌ ಬದಲಿಗೆ ಅಲ್ಲಿದ್ದವರು ಸಿನಿಮಾ , ಸಾಹಿತ್ಯ, ನಾಟಕ ಅಂತ ನನ್‌ ಜತೆಗೆ ಮಾತನಾಡುತ್ತಿದ್ದರು.ಅದು ನಂಗೆ ಖುಷಿ ಕೂಡ ಎನಿಸಿತು.

BB7: ಅಮ್ಮ ತೀರಿ ಹೋದಾಗಲೂ ಕೊನೆಗೂ ಮುಖ ನೋಡಲಾಗದ ನತದೃಷ್ಟ ಇವರು!

ಹಾಗಾದ್ರೆ, ನೀವು ಇಷ್ಟುಬೇಗ ಅಲ್ಲಿಂದ ಯಾಕೆ ಬಂದ್ರಿ?

ನಂಗೊಂದಿಷ್ಟುಸೋಷಲ್‌ ರೆಸ್ಪಾಸಿಬಿಲಿಟಿ ಇವೆ. ಪತ್ರಿಕೆ ಮಾಡ್ಬೇಕು. ಬರಿಬೇಕು. ನಾನೊಂದು ದೊಡ್ಡ ಪುಸ್ತಕ ಬರಿತೀದಿನಿ. ಅದು ಗೌರಿ ಲಂಕೇಶ್‌ ಹತ್ಯೆ ಕುರಿತು. ಗೌರಿ ಲಂಕೇಶ್‌ ಹತ್ಯೆ ಕುರಿತು ಕೋರ್ಟ್‌ ಒಂದು ಮಾತು ಹೇಳಿತು. ಪ್ರಕರಣದ ಚಾಚ್‌ರ್‍ಶೀಟ್‌ ಯಾರಿಗೂ ಕೋಡ್ಬೇಡಿ ಅಂತ. ನಾನು ಹೇಗೋ ಅದನ್ನ ಕಲೆಕ್ಟ್ ಮಾಡ್ಕೊಂಡಿದ್ದೇನೆ. ಅದರ ಡಿಟೈಲ್ಸ್‌ ನನ್‌ ಬಳಿಯಿದೆ. ಅದೆಲ್ಲ ಇಟ್ಕೊಂಡು ದೊಡ್ಡ ಪುಸ್ತಕ ಬರೀತಿದ್ದೇನೆ. ಅದರಿಂದ ಬಂದ ದುಡ್ಡನ್ನು ಉತ್ತರ ಕರ್ನಾಟಕದ ಸಂತ್ರಸ್ಥರಿಗೆ ಕೋಡ್ಬೇಕು ಅನ್ಕೊಂಡಿದ್ದೇನೆ. ಇವೆಲ್ಲ ಕೆಲಸ ಇದ್ವು, ಹಾಗಾಗಿ ಬಂದೆ. ಹೋಗೋವಾಗಲೇ ಒಂದೇ ವಾರ ಇರೋದು ಅಂದಿದ್ದೆ.

ಸಂಭಾವನೆ ಎಷ್ಟುಬಂತು?

ಇಲ್ಲ, ನನಗೆ ಸಂಭಾವನೆ ಕೊಡ್ಲಿಲ್ಲ, ನಾನು ಕೂಡ ಕೇಳಿಲ್ಲ. ಯಾಕಂದ್ರೆ ಪರಂ ನನ್ನ ಒಳ್ಳೆಯ ಸ್ನೇಹಿತ. ಜತೆಗೆ ಕಲರ್ಸ್‌ ಅನ್ನೋದು ಪಾಪ್ಯುಲರ್‌ ವಾಹಿನಿ. ಆ ಮೂಲಕ ಕರ್ನಾಟಕದ ಜನತೆಗೆ ನನ್ನ ಇನ್ನೊಂದು ಮುಖದ ಪರಿಚಯ ಆಗುತ್ತೆ ಎನ್ನುವ ಕಾರಣಕ್ಕೆ ದುಡ್ಡು ಕೊಡಿ ಅಂತ ಕೇಳಲಿಲ್ಲ. ಕೇಳೋದೂ ಇಲ್ಲ. ನನ್ನತ್ರನೇ ಸಾಕಷ್ಟುದುಡ್ಡಿದೆ. ಹಾಗೇ, ನನಗೆ ಯಾವ ಶರತ್ತುಗಳೂ ಇರಲಿಲ್ಲ. ನಂಗೆ ಸಿಗರೇಟು ಬೇಕು, ಊಟ ಕೂಡ ಹೊರಗಡೆ ಸೆಟ್‌ ಆಗಲ್ಲ.

BB7: ಮಾನವೀಯತೆ ಮರೆತ ಸ್ಪರ್ಧಿಗಳು; ಮನೆಯಲ್ಲೂ ವಿಲನ್ ಆಗ್ಬಿಟ್ರು ಸಿತಾರಾ!

ನೀವು ಕೆಲಸ ಮಾಡದೆ, ಓಡಾಡದೆ ಇರೋದಿಲ್ಲ. ಆದ್ರೂ ಅಲ್ಲಿ ಹೇಗಿದ್ರಿ ಅಂತ?

ಅಲ್ಲಿದ್ದವರೆಲ್ಲ ಫ್ರೆಂಡ್ಸ್‌ ಆದರು. ಅವರ ಜತೆಗೆಲ್ಲ ಕಾಲ ಕಳೆಯೋದೇ ಒಂಥರ ಮಜವಾಗಿತ್ತು. ನನ್ನ ಬಗ್ಗೆ ತಪ್ಪು ತಿಳಕೊಂಡವರೂ ಅಲ್ಲಿದ್ದರು. ದುನಿಯಾ ರಶ್ಮಿ ಒಂದ್‌ ಘಟನೆ ನೆನೆಪಿಸಿಕೊಂಡಳು. ಆಕೆ ಬಗ್ಗೆ ಹಾಯ್‌ ಬೆಂಗಳೂರ್‌ ನಲ್ಲಿ ಒಂದು ವರದಿ ಬಂದಿತ್ತು ಅಂದ್ರು. ಕೆಲವೊಮ್ಮೆ ಅದು ನನ್‌ ಗಮನಕ್ಕೆ ಬಂದಿರೋದಿಲ್ಲ, ಹಾಗೆಲ್ಲ ಆಗಿಬಿಡುತ್ತೆ ಅಂತ ಹೇಳಿದೆ. ಅರ್ಥಮಾಡಿಕೊಂಡಳು. ಇನ್ನು ಜೈ ಜಗದೀಶ್‌ ಕೂಡ ಅಷ್ಟೇ. ವಾಸುಕಿ ವೈಭವ್‌ ಅಂತ ಒಬ್ಬ ಹುಡುಗ ಇದ್ದಾನೆ.ಆತ ತುಂಬಾ ಒಳ್ಳೆಯ ಹುಡುಗ. ಮುಗ್ದ. ತುಂಬಾ ಹಚ್ಚಿಕೊಂಡು ಬಿಟ್ಟ. ಎಲ್ಲರೂ ಅಷ್ಟೇ. ನನ್ನ ಮಕ್ಕಳನ್ನ ಮಿಸ್‌ ಮಾಡ್ಕೊಂಡಷ್ಟೇ ಅವರೆನ್ನೆಲ್ಲ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.

ಬಿಗ್‌ಬಾಸ್‌ ಮನೆಯಲ್ಲಿ ನಡೆಯೋದೆಲ್ಲ ನಾಟಕೀಯ, ಸ್ಕಿ್ರಫ್ಟ್‌ಟೆಡ್‌ ಅನ್ನೋ ಮಾತಿದೆ....

ಒಂದ್‌ ಇನ್ಸಿಡೆಂಟ್‌ ನೋಡಿ ಅದೆಲ್ಲ ಸ್ಕಿ್ರಫ್ಟ್‌ ಅಂತಲೇ ಎನಿಸಿತು. ಮನೆ ತುಂಬಾ ಓಡಾಡುತ್ತಾ, ನಗಿಸುತ್ತಿದ್ದ ಕುರಿ ಒಂದ್ಸಲ ಕನ್ಪೇಷನ್‌ ರೂಂಗೆ ಹೋಗಿ ಬಂದ. ಅದೇನಾಯ್ತೋ ಅಲ್ಲಿಂದ ಬಂದ್ಮೇಲೆ ಮಾತು ನಿಲ್ಲಿಸಿಬಿಟ್ಟ. ತಾನಾಯ್ತು, ತನ್ನ ಕೆಲಸ ಆಯ್ತು ಅನ್ನೋ ಹಾಗಾಯ್ತು. ನನ್‌ ಜತೆಗೆ ತುಂಬಾ ಆ್ಯಕ್ಟಿವ್‌ ಆಗಿದ್ದ ಹುಡುಗ. ಇದ್ದಕ್ಕಿದ್ದಂತೆ ಆತ ಸೈಲೆಂಟ್‌ ಆಗಿಬಿಟ್ಟಅಂದ್ರೆ, ಅದೇನೋ ಸ್ಕಿ್ರಪ್ಟೆಡ್‌ ಅನ್ನಿಸಿತು.

ಬಿಗ್‌ಬಾಸ್‌ ಮನೆಯ ಕಂಟೆಸ್ಟೆಡ್‌ಗಳಲ್ಲಿ ನಾಟಕ ಮಾಡೋರು ಇದ್ದಾರಾ?

ನಾಟಕ ಮಾಡೋರೇ ಜಾಸ್ತಿ ಜನ ಇದ್ದಾರೆ. ಅದು ಟಾಸ್ಕ್‌ ಕೂಡ ಇರಬಹುದು.

ಮತ್ತೆ ಏನಾದ್ರು ವೈಲ್ಡ್‌ ಕಾರ್ಡ್‌ ಎಂಟ್ರಿ ಇದೀಯಾ?

ಹಂಗಂದ್ರೇನು? ಅದೆಲ್ಲ ನಂಗೇನು ಗೊತ್ತಿಲ್ಲ. ಹಾಗೇನಾದ್ರು ಇದ್ರೆ, ನಿಮ್ಮನ್ನು ಕರೆದುಕೊಂಡು ಹೋಗ್ತೀನಿ ಬಿಡಿ.

ನೀವು ನೋಡಿದ ಹಾಗೆ, ಅಲ್ಲಿದ್ದವರ ಪೈಕಿ ಗೆಲ್ಲಬಹುದಾದ ಕಂಟೆಸ್ಟೆಡ್‌ ಯಾರು ಅಂತ?

ಅದೇನು ಮಾನದಂಡವೋ ಗೊತ್ತಿಲ್ಲ. ನಂಗೆ ಅದು ಅರ್ಥ ಆಗೋದಿಲ್ಲ. ಒಂಥರ ಉಪೇಂದ್ರ ರಾಜಕೀಯ ಪಕ್ಷದ ಹಾಗೆ.

ಬಿಗ್‌ಬಾಸ್‌ ಮನೆಯಲ್ಲಿದ್ದಾಗ ತುಂಬಾ ಎಮೋಷನಲ್‌ ಆಗಿದ್ದು ಇತ್ತಾ?

ಇತ್ತು, ಹಾಗೊಂದು ಸಂದರ್ಭ ಅಲ್ಲಿ ಬಂತು. ಒಂದ್‌ ಟಾಸ್ಕ್‌ ಅದು. ಅಲ್ಲಿ ನಮ್ಮ ಪೋಷಕರ ಕುರಿತು ಮಾತನಾಡುವಾಗ ನಾನು ತುಂಬಾ ಭಾವುಕನಾದೆ.ಅದು ನನ್ನ ತಾಯಿ ಕಾರಣಕ್ಕೆ. ಅದು ಟಾಸ್ಕೋ, ಟಿಸ್ಕೋ ಗೊತ್ತಿಲ್ಲ. ಆದ್ರೆ, ಅಲ್ಲಿನ ಭಾವುಕತೆಯ ಮಾತುಗಳೆಲ್ಲ ನಿಜವಾದದ್ದೆ. ನನಗೆ ಆ ಅನುಭವ ಆಯ್ತು. ಯಾಕಂದ್ರೆ ನಾನು ಒನ್ಲೀ ತಾಯಿ ಮಡಿಲಲ್ಲಿ ಬೆಳೆದವನು.ವಿಚಿತ್ರವಾದ ಸಂದರ್ಭದಲ್ಲಿ ನಾನು ಅವರನ್ನು ಕಳೆದುಕೊಂಡೆ. ಆ ದಿನ ಅದ್ಯಾಕೋ ಅದು ನೆನಪಾಯಿತು. ಆ ದಿನಗಳನ್ನು ತೋಡಿ ಕೊಳ್ಳುವಾಗ ಎಮೋಷನಲ್‌ ಆದೆ. ಕಣ್ಣೀರು ತುಂಬಿ ಬಂತು.

ಬಿಗ್‌ಬಾಸ್‌ ಮನೆಗೆ ಹೋಗಿ ನೀವು ಕಳೆದುಕೊಂಡಿದ್ದೇನು, ಪಡೆದುಕೊಂಡಿದ್ದೇನು?

ಕಳೆದುಕೊಂಡಿದ್ದು ಅಂತೇನಿಲ್ಲ. ಪಡೆದುಕೊಂಡಿದ್ದು ಕಂಟೆಸ್ಟೆಂಟ್‌ ಅಭಿಮಾನ. ಅದರ ಬೇರೆಯದೇ ಆದ ರವಿ ಬೆಳಗೆರೆ ಅವರನ್ನು ತೋರಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಅಂತ.

ಇನ್ನು ಅಲ್ಲಿದ್ದಾಗ ಜೈ ಜಗದೀಶ್‌ ಜತೆಗೆ ಚೆನ್ನಾಗಿದ್ರೀ, ಹಾಗೆಯೇ ಅವರ ಬಗ್ಗೆ ಒಂದ್‌ ಪುಸ್ತಕ ತರ್ತೀನಿ ಅಂದ್ರಿ....

ಹೌದು, ಜೈ ಜಗದೀಶ್‌ ಕಮ್ಮಿ ಮನುಷ್ಯ ಅಲ್ಲ. 45 ವರ್ಷ ಸಿನಿಮಾ ರಂಗದಲ್ಲಿ ಇದ್ದವರು ಅವ್ರು. ಅಲ್ಲಿ ಆತನ ಬಗ್ಗೆ ಮಾತನಾಡುವಾಗ ಯಾಕೋ ತುಂಬಾ ಭಾವುಕನಾದೆ. ಒಂದ್‌ ಪುಸ್ತಕ ಬರೆಯೋಣ ಅಂದೆ. ಇನ್ನು ನನ್ನ ಗೆಳೆಯ ಅಂಬರೀಶ್‌ ಕುರಿತು ಒಂದ್‌ ಪುಸ್ತಕ ಬರಿಬೇಕು ಅಂತಿದ್ದೇನೆ. ಅಂಬರೀಶ್‌ ಮತ್ತು ನಾನು ಏಕವಚನದ ಗೆಳೆಯರು. ‘ಹಿಮಾಗ್ನಿ’ ಪುಸ್ತಕ ಬಿಡುಗಡೆಗೂ ಅಂಬರೀಶ್‌ ಬಂದಿದ್ದ. ನನ್ನ ಜೀವನದ ದೊಡ್ಡ ದುರಂತ ಅಂದ್ರೆ ನಾವಿಬ್ರು ಸೇರಿ ಬಾಡೂಟ ಮಾಡ್ಬೇಕು ಅನ್ಕೊಂಡಿದ್ವಿ. ಹಾಗೆ ಅನ್ಕೊಂಡ ಐದು ದಿನಗಳಲ್ಲಿ ಆತ ಇನ್ನಿಲ್ಲವಾದ. ಅದು ನನ್ನ ಲೈಫ್‌ನ ದೊಡ್ಡ ದುರಂತ.

 

click me!