‘ಚೇಸ್’ ಚಿತ್ರದಲ್ಲಿ ಅಂಧೆಯ ಪಾತ್ರದ ಮೂಲಕ ಗಮನ ಸೆಳೆವ ಅಭಿನಯ ನೀಡಿದ್ದು ರಾಧಿಕಾ ನಾರಾಯಣ್. ಈ ಚಿತ್ರಕ್ಕಾಗಿ ಅವರು ಮಾಡಿದ ಹೋಮ್‌ವರ್ಕ್, ಸಿನಿಮಾದಿಂದ ಸಿಕ್ಕ ಧನ್ಯತೆಯ ಬಗ್ಗೆ ಮಾತಾಡಿದ್ದಾರೆ.
ಚೇಸ್ ಸಿನಿಮಾ ನೋಡಿದವ್ರೆಲ್ಲ ನಿಮ್ಮ ಪಾತ್ರವನ್ನು ಹೊಗಳ್ತಿದ್ದಾರೆ?
ಒಬ್ಬ ಕಲಾವಿದೆಗೆ ಇಂಥಾ ಅವಕಾಶಗಳು ಪದೇ ಪದೇ ಬರೋದಿಲ್ಲ. ಹಾಗೆ ಬಂದ ಅವಕಾಶಕ್ಕೆ ನ್ಯಾಯ ಸಲ್ಲಿಸಿರೋದಕ್ಕೆ ತೃಪ್ತಿ ಇದೆ.
ಅಂಧೆಯ ಪಾತ್ರವನ್ನು ಅಷ್ಟುನಿಖರವಾಗಿ ಕಟ್ಟಿಕೊಟ್ಟಿದ್ದೀರಲ್ಲಾ, ಹೇಗಿತ್ತು ತಯಾರಿ?
ಈ ಚಿತ್ರಕ್ಕೆ ಬಹಳ ತಯಾರಿ ಬೇಕಿತ್ತು. ನಿರ್ದೇಶಕ ವಿಲೋಕ್ ಅವರಿಗೆ ಈ ಪಾತ್ರ ಹೇಗೆ ಬರಬೇಕು ಅನ್ನೋ ಬಗ್ಗೆ ಸ್ಪಷ್ಟತೆ ಇತ್ತು. ಯಾವುದೇ ಎಮೋಶನ್ ಇಲ್ಲದೇ ಕಮ್ಯೂನಿಕೇಟ್ ಮಾಡಬೇಕಿತ್ತು. ನನ್ನ ನೋಟ ಎಲ್ಲಿರಬೇಕು, ಸಣ್ಣ ಸದ್ದು, ಸ್ಪರ್ಶಕ್ಕೆ ಚಲನೆ ಹೇಗಿರಬೇಕು ಅನ್ನೋ ಬಗ್ಗೆ ವರ್ಕ್ಶಾಪ್‌ನಲ್ಲಿ ಒಂದಿಷ್ಟುತಯಾರಿ ನಡೆಯಿತು. ಅಂಧರ ಶಾಲೆಗೆ ಹೋಗಿ ಅವರ ಸೂಕ್ಷ್ಮ ಗೆಶ್ಚರ್‌ಗಳನ್ನು ಗಮನಿಸಿದೆ. ಅವರೆದುರು ಯಾರಾದ್ರೂ ನಿಂತರೆ ಅವರ ನೇರಕ್ಕೇ ತಿರುಗಿ ಮಾತಾಡ್ತಾರವರು. ಅಂಥಾ ಸೂಕ್ಷ್ಮ ಅವರಲ್ಲಿದೆ. ಅದನ್ನೆಲ್ಲ ಈ ಪಾತ್ರದಲ್ಲಿ ತರುವ ಪ್ರಯತ್ನ ಮಾಡಿದ್ದೇನೆ. ಇದಲ್ಲದೇ ನನಗೊಬ್ಬ ಮೆಂಟರ್ ಇದ್ದರು.
ಫೈಟ್ ಮಾಡಿದ ಅನುಭವ?
ಇದಕ್ಕೆ ಬಹಳ ಒಳ್ಳೆಯ ಟ್ರೈನಿಂಗ್ ಸಿಕ್ಕಿತು. ಚೇತನ್ ಡಿಸೋಜಾ ಅವರು ಕವ್‌ರ್ ಮಗಾ ಅಂತ ಒಂದು ಸೆಲ್‌್ಫ ಡಿಫೆನ್ಸ್ ಮಾರ್ಶಲ್ ಆರ್ಚ್‌ನಲ್ಲಿ ಟ್ರೈನಿಂಗ್ ಕೊಟ್ಟರು. ನನ್ನ ಫೈಟ್ ಪರಿಣಾಮಕಾರಿಯಾಗಿ ಮೂಡಿಬಂದಿರುವುದಕ್ಕೆ ಕಾರಣ ಈ ಕಲಿಕೆ.
ಬ್ರೂನೋ ಜೊತೆಗೆ ನಟಿಸಿದ್ದು?
ನನಗೆ ನಾಯಿ ಬಗ್ಗೆ ಮೊದಲಿಂದಲೂ ಭಯ. ಆದರೆ ಕ್ರಮೇಣ ಅಭ್ಯಾಸ ಆಯ್ತು. ಆ ನಾಯಿಯ ನಿಜವಾದ ಹೆಸರು ಮ್ಯಾಕ್ಸ್ ಅಂತ. ಅಮೃತ್ ಅಂತ ಒಬ್ರು ಡಾಗ್ ಗುರು ಇದ್ದಾರೆ. ಅವರಿಂದ ತರಬೇತಿ ಪಡೆದ ನಾಯಿ. ಸೆಟ್‌ನಲ್ಲಿದ್ದಾಗ ಅದೇ ಹೀರೋ. ಅದರ ನಿದ್ದೆ, ಮೂಡ್‌ಗೆ ಅನುಸಾರವಾಗಿ ನಾವು ಆ್ಯಕ್ಟ್ ಮಾಡಬೇಕಿತ್ತು.
ಚೇಸ್ ಟ್ರೈಲರ್‌ಗೆ ಫಿದಾ ಆದ ಸಿನಿಪ್ರಿಯರು!
ಒಂದು ಪಾತ್ರ ಒಪ್ಪಿಕೊಂಡ ಮೇಲೆ ನೀವು ಅದಾಗೋದಕ್ಕೆ ಎಷ್ಟುಸಮಯ ಬೇಕಾಗುತ್ತೆ?
ಅದು ಪಾತ್ರದ ಮೇಲೆ ಡಿಪೆಂಡ್ ಆಗುತ್ತೆ. ಈ ಸಿನಿಮಾದಲ್ಲಿ ಮೊದಲ ಸೀನ್ ಮಾಡುವಾಗ ಸ್ವಲ್ಪ ಟೆನ್ಶನ್ ಇತ್ತು. ಆ ಹೊತ್ತಿಗೆ ಪಾತ್ರಕ್ಕೆ ಕೊಂಚ ಟೆನ್ಶನ್ ಬೇಕಿತ್ತು. ಹೀಗಾಗಿ ಸರಿಹೋಯ್ತು, ಆದರೆ ಮಾಡ್ತಾ ಮಾಡ್ತಾ ಪಾತ್ರವೇ ಆಗಿ ಬಿಡುತ್ತಿದ್ದೆ. ಈ ಸಿನಿಮಾ ಮಾತ್ರ ಮರೆಯಲಾಗದ ಅನುಭವ ಕೊಟ್ಟಿದೆ.
ಯೋಗದ ಮೂಲಕ ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡಿದ ನಟಿ ರಾಧಿಕಾ ನಾರಾಯಣ್!
ಹೊಸ ಸಿನಿಮಾ?
ಶಿವಾಜಿ ಸುರತ್ಕಲ್, ವೀರ ಕಂಬಳ ಮೊದಲಾದ ಚಿತ್ರಗಳಲ್ಲಿ ಮಾಡ್ತಿದ್ದೇನೆ.