ಚೇಷ್ಟೆ ಸಿನಿಮಾಗಳ ಚೇರ್‌ಮನ್‌ ವಿಜಯಪ್ರಸಾದ್‌: ಪೆಟ್ರೋಮ್ಯಾಕ್ಸ್‌ ಮತ್ತು ತೋತ್ತಾಪುರಿ ಸೀಕ್ರೆಟ್‌ ರಿವೀಲ್

By Kannadaprabha News  |  First Published Jul 15, 2022, 10:03 AM IST

ಪೋಲಿಯೋ ಫಿಲಾಸಫರೋ ಗೊತ್ತಾಗದಂತೆ ತಮಾಷೆ ಮಾಡುವ, ಡಬಲ್‌ಮೀನಿಂಗನ್ನೇ ನುಂಗಿ ನೀರು ಕುಡಿದ, ಮಹಾನ್‌ ತರಲೆ ನಿರ್ದೇಶಕ ವಿಜಯಪ್ರಸಾದ್‌ ನೀರ್‌ದೋಸೆ ಮುಗಿಸಿ, ಪೆಟ್ರೋಮ್ಯಾಕ್ಸ್‌ ಹಚ್ಚಿ ಕೂತಿದ್ದಾರೆ. ಅದು ಭರವಸೆಯ ಬೆಳಕು ಅಂತ ಬೇರೆ ಹೇಳುತ್ತಾರೆ.


1. ‘ಪೆಟ್ರೋಮ್ಯಾಕ್ಸ್‌’ ಅಂದರೇನು?

ಬದುಕು ಮತ್ತು ಬೆಳಕು. ಕತ್ತಲು ಅಂದುಕೊಂಡ ಒಂದಷ್ಟುವಿಷಯಗಳು ಬೆಳಕು ಎನ್ನಬಹುದು.

Latest Videos

undefined

2. ನೀವು ಪೋಲಿಯೋ ಫಿಲಾಸಫರ್ರೋ?

ಎರಡೂ..! ಜೊತೆಗೆ ಭಯಂಕರ ಚೇಷ್ಟೇ.

3. ಟ್ರೇಲರಿನಲ್ಲಿ ಬಿಪಿಎಲ…​- ಬೆಡ್‌ ಪ್ರೀಮಿಯರ್‌ ಲೀಗ್‌ ಶುರು ಮಾಡಿದ್ದೀರಲ್ಲ. ಬೆಟಿಂಗ್‌ ಹೇಗಿದೆ?

ದಂಧೆ - ಕಾಳದಂಧೆ ಎರಡೂ ಇಲ್ಲ..! ನಾಗಲೋಟದ ಆಟ - ಪ್ರಶಂಸೆಗಳ ಟಾಟಾ!

4. ತೋತಾಪುರಿಯೋ, ಪೆಟ್ರೋಮ್ಯಾಕ್ಸಾ?

ಅದು ತೊಟ್ಟು , ಇದು ಪಂಪು. ಅದು ಅಂದ, ಇದು ಚೆಂದ!

ಡೆಲಿವರಿ ಬಾಯ್‌ ಅಗಿ ಸತೀಶ್ ನೀನಾಸಂ; ಬಾಗಿಲು ತೆಗೆಯದೆ ಅವಿತುಕೊಂಡ ಹುಡುಗ!

5. ಕ್ರಿಕೆಟ್‌ ಭಾಷೇಲಿ ಪ್ರೇಮದ ಕಾಮೆಂಟರಿ ಕೊಡೋದು ಹೇಗೆ ಹೊಳೀತು?

ಶಾಲೆಯಲಿ ಇದ್ದಾಗ ಟೀಚರಿಗೇ ಕಾಮೆಂಟ್ರಿ ಹೇಳಿದ್ದು ಇಲ್ಲಿ ವರ್ಕ್ ಆಯ್ತು ! ಹ..ಹ..ಹ..

6. ಸೀರಿಯಸ್‌ ಸಿನಿಮಾ ಮಾಡೋ ಐಡಿಯಾ ಇದೆಯಾ?

ಮನೆದೇವ್ರಾಣೆಗೂ ಇದೆ. ದೇವ್ರ ಮೇಲೆ ನಂಬಿಕೆ ಇಲ್ಲಾಂದ್ರೆ ದೆವ್ವದಾಣೆಗೂ ನಿಜ!

7. ಉದ್ಯಮ ಹೇಗಿದೆ. ಓಟಿಟಿಯೇ ಜೀವನ ಅನಿಸ್ತಿದೆಯಾ?

ಖಂಡಿತವಾಗಿಯೂ ಇಲ್ಲ. ಚಿತ್ರಮಂದಿರ ಅಜರಾಮರ.

ಟೋಟಲ್‌ ನಾಗರಾಜ್‌ ಪಾತ್ರದಲ್ಲಿ ಮಿಮಿಕ್ರಿ ಗೋಪಿ; ಪೆಟ್ರೋಮ್ಯಾಕ್ಸ್ ಟ್ರೈಲರ್ ನೋಡಿ!

8. ಟೀವಿಗೆ ಸಿನಿಮಾ ಬಂದಿದೆ. ಇದು ಸಿನ್ಮಾದಲ್ಲಿ ದೃಶ್ಯಕ್ಕಿಂತ ಮಾತು ಮುಖ್ಯಅಂತ ಹೇಳಿದಂತಾಗಲಿಲ್ಲವೇ?

ಕಥೆ ಹೇಳುವ ಶೈಲಿ ಮತ್ತು ನಿರೂಪಣೆಯ ಮೇಲೆ ಎಲ್ಲವೂ ಅವಲಂಬಿತ.

9. ಮುಂದಿನ ದಾರಿ ಏನು?

ಬಯಲುದಾರಿ! ಹ..ಹ..ತಮಾಷೆ ಅಷ್ಟೇ. ಬೇರೆ ಬೇರೆ ಆಯಾಮಗಳಿರುವ ಸಿನಿಮಾಗಳನ್ನ ಮಾಡುವುದು.

10. ‘ಪೆಟ್ರೋಮ್ಯಾಕ್ಸ್‌’ ಪ್ರೇಕ್ಷಕರಿಗೆ ಸಂದೇಶ ಏನು?

ಇದು ಭರವಸೆಯ ಬೆಳಕು ಎಂದಷ್ಟೇ ಹೇಳಬಲ್ಲೇ.

click me!