ಅಣ್ಣ ತಂಗಿ ಸೆಂಟಿಮೆಂಟ್‌ ಪ್ರಧಾನ ಸಿನಿಮಾ ಬೆಂಕಿ: ಅನೀಶ್‌ ತೇಜೇಶ್ವರ್‌

By Kannadaprabha NewsFirst Published Jul 14, 2022, 8:55 AM IST
Highlights

ಮಾಸ್‌ ಹೀರೋ ಆಗಿ ಗುರುತಿಸಿಕೊಂಡಿದ್ದ ಅನೀಶ್‌ ತೇಜೇಶ್ವರ್‌ ಈ ಬಾರಿ ಅಣ್ಣ ತಂಗಿ ಸೆಂಟಿಮೆಂಟಿನ ‘ಬೆಂಕಿ’ ಸಿನಿಮಾದೊಂದಿಗೆ ಬಂದಿದ್ದಾರೆ. ಜು.15ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಎ ಆರ್‌ ಶ್ಯಾನ್‌ ನಿರ್ದೇಶನದ ಈ ಚಿತ್ರವನ್ನು ಅನೀಶ್‌ ಅವರೇ ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ಅನೀಶ್‌ ಮಾತು..

ಪ್ರಿಯಾ ಕೆರ್ವಾಶೆ

ಬೆಂಕಿ ಅಂದ್ರೆ ಹೀರೋ ಹೆಸರು ಮಾತ್ರನಾ? ಅಥವಾ ಇದು ಕಥೆಗೆ ಪೂರಕವಾಗಿರುವ ಟೈಟಲ್ಲಾ?

ಟೈಟಲ್‌ ನೋಡಿದ ಕೂಡಲೇ ಇದು ಮಾಸ್‌ ಚಿತ್ರ ಅನಿಸಬಹುದು. ಇದು ಹೀರೋ ಹೆಸರೂ ಹೌದು, ಐಡಿಯಾಲಜಿಯೂ ಹೌದು. ಇದು ಮಾಸ್‌ಗಷ್ಟೇ ಸೀಮಿತವಾದ ಸಿನಿಮಾ ಅಲ್ಲ. ಇಡೀ ಕುಟುಂಬ ಬಂದು ನೋಡುವಂಥಾ ಚಿತ್ರ. ಅಣ್ಣ ತಂಗಿ ಸೆಂಟಿಮೆಂಟ್‌ ಅನ್ನು ವಿಭಿನ್ನವಾಗಿ ತಂದಿದ್ದೇವೆ.

ಅಣ್ಣ ತಂಗಿ ಅಂದಕೂಡಲೇ ಶಿವಣ್ಣ ಅವರ ಚಿತ್ರ ನೆನಪಾಗುತ್ತೆ..

ಹೌದು. ಇದು ಅದಕ್ಕಿಂತ ಸಂಪೂರ್ಣ ಭಿನ್ನ. ಅಣ್ಣ ತಂಗಿ ಸಂಬಂಧವನ್ನು ಹೊಸ ಬಗೆಯಲ್ಲಿ ನಿರೂಪಿಸಿದ್ದೇವೆ. ತಂಗಿಗೆ ಮದುವೆ ಆದಮೇಲೆ ಬರುವ ಕಷ್ಟಗಳನ್ನು ಈ ಹಿಂದಿನ ಚಿತ್ರಗಳಲ್ಲಿ ತೋರಿಸಿದ್ದಾರೆ. ಇದು ಹಾಗಲ್ಲ, ಮುಗ್ಧ ತಂಗಿ, ಅವಳಿಗೆ ಪ್ರೊಟೆಕ್ಟಿವ್‌ ಆಗಿ ನಿಲ್ಲುವಂಥಾ ಅಣ್ಣ. ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಮಾಡಿದ್ದೀವಿ. ಏಕತಾನತೆ ಇರಲ್ಲ. ಕಾಮಿಡಿಗೆ ಬಹಳ ಒತ್ತು ಕೊಟ್ಟಿದ್ದೀವಿ. ಲವ್‌ ಬರುತ್ತೆ. ಜೊತೆಗೆ ಹಾರರ್‌ ಸಹ ಇದೆ.

ಮಂಡ್ಯ ಹಳ್ಳಿಗಾಡಿನ ಕತೆಯ ಮಾಸ್‌ ಸಿನಿಮಾ: ನಿರಂಜನ್‌ ಸುಧೀಂದ್ರ

ಹಾರರ್‌ ಅಂಶ ಕಾಮಿಡಿಗಾಗಿ ಬರುತ್ತಾ?

25 ನಿಮಿಷ ಲವ್‌ ಎಪಿಸೋಡ್‌ ಬರುತ್ತೆ. ಪ್ರೀತಿ ಬಗ್ಗೆ ಇರೋದಷ್ಟೂಹಾರರ್‌ ಎಪಿಸೋಡ್‌.

ಹೀರೋಯಿನ್‌ನ ಬೇರೆ ಗೆಟಪ್‌ನಲ್ಲಿ ನೋಡ್ಬೇಕಾ?

ಮುದ್ದಾಗಿರುವ ಬ್ಯೂಟಿಫುಲ್‌ ದೆವ್ವ.

ಚಿತ್ರವನ್ನು ಗೆಲ್ಲಿಸುವ ಅಂಶಗಳು?

ಕೊನೆಯ ನಲವತ್ತು ನಿಮಿಷಗಳನ್ನು ನಿರ್ದೇಶಕರು ತಗೊಂಡು ಹೋದ ರೀತಿ ಬಹಳ ಚೆನ್ನಾಗಿದೆ. ನನಗೆ ಈ ಚಿತ್ರ ನಿರ್ಮಿಸಬೇಕು ಅಂತ ಅನಿಸಿದ್ದೇ ಅದಕ್ಕೆ. ಕೊನೆಯ 20 ನಿಮಿಷ ಹೀರೋಗೆ ಒಂದು ಡೈಲಾಗೂ ಇರಲ್ಲ. ಕಲ್ಟ್‌ ಆಗಿರುವ ಕ್ಲೈಮ್ಯಾಕ್ಸ್‌. ಪ್ರೇಕ್ಷಕರನ್ನು ನಗಿಸ್ತೀವಿ, ಅಳಿಸ್ತೀವಿ, ಭಾರವಾದ ಎಮೋಶನ್‌ನೊಂದಿಗೆ ಆತ ಆಚೆ ಬರ್ತಾನೆ. ತಂಗಿ ಇರುವವರಿಗಂತೂ ನೆಕ್ಸ್ಟ್‌ಲೆವೆಲ್‌ಗೆ ಕನೆಕ್ಟ್ ಆಗುತ್ತೆ.

ಮಂಡ್ಯ ಹಳ್ಳಿಗಾಡಿನ ಕತೆಯ ಮಾಸ್‌ ಸಿನಿಮಾ: ನಿರಂಜನ್‌ ಸುಧೀಂದ್ರ

ನಿರ್ಮಾಪಕ, ನಟ ಎರಡೂ ಆಗಿರುವುದರ ಪಾಸಿಟಿವ್‌, ನೆಗೆಟಿವ್‌ಗಳು?

ನೆಗೆಟಿವ್‌ ಶೇ.100 ಏನೂ ಇಲ್ಲ. ಫುಲ್‌ ಕಾನ್ಫಿಡೆನ್ಸ್‌ ಇದೆ. ಅದಕ್ಕೇ ಸ್ನೀಕ್‌ ಪೀಕ್‌ ಅನ್ನೋ ಕಾಂಸೆಪ್‌್ಟನಲ್ಲಿ ಸಿನಿಮಾ ರಿಲೀಸ್‌ಗೂ ಮೊದಲೇ 10 ನಿಮಿಷದ ಸೀನ್‌ ಅನ್ನೇ ಬಿಟ್ಟಿದ್ದೀವಿ. ಜನಕ್ಕೆ ಅದು ಕನೆಕ್ಟ್ ಆಗುತ್ತೆ ಅನ್ನೋ ಧೈರ್ಯ ಇತ್ತು. ಅದು ನಿಜ ಆಗಿದೆ. ಪ್ರೇಮ್‌ ಹಾಡಿರುವ ಹಾಡನ್ನೂ ಜನ ಮೆಚ್ಚಿಕೊಂಡಿದ್ದಾರೆ. ಈಗಲೇ 700ಕ್ಕೂ ಹೆಚ್ಚು ಸೀಟ್‌ ಪ್ರೀ ಬುಕ್‌ ಆಗಿದೆ. 120ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಚಿತ್ರ ಬರ್ತಿದೆ.

click me!