ಬೆಚ್ಚಿಬೀಳಿಸುವ ಅಂಗಾಗ ಮಾರಾಟದ ಕಥೆ ಮಾಫಿಯಾ ಚಿತ್ರದ್ದು: ಲೋಹಿತ್‌!

By Kannadaprabha NewsFirst Published Jan 23, 2024, 9:41 AM IST
Highlights

'ಮಮ್ಮಿ' ಖ್ಯಾತಿಯ ಲೋಹಿತ್.ಹೆಚ್‌ ನಿರ್ದೇಶನದ ಔಟ್‌ ಆಂಡ್ ಔಟ್‌ ಆಕ್ಷನ್ ಚಿತ್ರ ಮಾಫಿಯಾ, ಪ್ರಜ್ವಲ್ ದೇವರಾಜ್‌, ಅದಿತಿ ಪ್ರಭುದೇವ ನಟನೆಯ ಈ ಸಿನಿಮಾವನ್ನು ಕುಮಾರ್ ನಿರ್ಮಿಸಿದ್ದಾರೆ. ಬಿಡುಗಡೆಯ ಹಂತದಲ್ಲಿರುವ ಸಿನಿಮಾ ಬಗ್ಗೆ ಲೋಹಿತ್ ಮಾತನಾಡಿದ್ದಾರೆ. 

ಪ್ರಿಯಾ ಕೆರ್ವಾಶೆ

ಲೋಹಿತ್ ಅಂದ್ರೆ ಹಾರರ್ ಸಿನಿಮಾ ಎನ್ನುತ್ತಿದ್ದ ಹೊತ್ತಲ್ಲಿ ಆ್ಯಕ್ಷನ್ ಸಿನಿಮಾಕ್ಕೆ ಕೈ ಹಾಕಿದ್ರಿ. ಹೇಗಿತ್ತು ಅನುಭವ?

ಗ್ಯಾಂಗ್‌ಸ್ಟರ್‌ ಸಿನಿಮಾ ಮಾಡಬೇಕು ಅನ್ನೋ ಕನಸಲ್ಲಿ ಚಿತ್ರರಂಗಕ್ಕೆ ಕಾಲಿಟ್ಟವನು ನಾನು. ಆಕಸ್ಮಿಕವಾಗಿ ಹಾರರ್‌, ಥ್ರಿಲ್ಲರ್‌ ಸಿನಿಮಾ ಮಾಡಬೇಕಾಗಿ ಬಂತು. ಈಗ ಆ್ಯಕ್ಷನ್‌ ಸಿನಿಮಾ ಮಾಡುತ್ತಿದ್ದೇನೆ. ಮೊದಲ ಸಲ ಪ್ರಜ್ವಲ್‌ ಅವರಂಥಾ ಸ್ಟಾರ್‌ ನಟನಿಗೆ ನಿರ್ದೇಶನ ಮಾಡಿದ್ದು, ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರ ಮೂಡಿಸಿದ್ದು ಎಲ್ಲ ಸೊಗಸಾದ ಅನುಭವಗಳು.

ರೆಡ್‌ ಮಾರ್ಕೆಟ್‌ ಬಗ್ಗೆ ಸಿನಿಮಾ ಇದೆ ಅಂದಿದ್ದಿರಿ. ಅಂದರೆ ಅಂಗಾಗ ಮಾರಾಟದ ಮೇಲೆ ಕಥೆ ಇದೆಯಾ?

ಹೌದು. ಬ್ಲ್ಯಾಕ್‌ ಮಾರ್ಕೆಟ್‌, ವೈಟ್‌ ಮಾರ್ಕೆಟ್‌, ಗ್ರೇ ಮಾರ್ಕೆಟ್‌, ರೆಡ್‌ ಮಾರ್ಕೆಟ್‌ ಎನ್ನುವ ಸಾಮಾನ್ಯರಿಗೆ ಊಹೆಗೂ ನಿಲುಕದ ಭೂಗತ ಜಾಲವಿದೆ. ಇದರಲ್ಲಿ ರೆಡ್‌ ಮಾರ್ಕೆಟ್‌ ದಂಧೆಗೆ ಕರಾಳ ಹಿನ್ನೆಲೆ ಇದೆ. ಈ ಬಗ್ಗೆ ರೀಸರ್ಚ್‌ ಮಾಡುತ್ತಾ ಹೋದಾಗ ಬೆಚ್ಚಿಬೀಳಿಸುವ ಅನೇಕ ಸಂಗತಿಗಳು ತಿಳಿಯುತ್ತಾ ಹೋದವು. ತಮಿಳ್ನಾಡಲ್ಲಿ ಕಿಡ್ನಿ ವಾಕಂ ಎಂಬ ಊರೇ ಇದೆ. ಅಲ್ಲಿ ಆಗಷ್ಟೇ ಹುಟ್ಟಿದ ಮಕ್ಕಳನ್ನು ಬಿಟ್ಟರೆ ಮತ್ಯಾರಿಗೂ ಅಲ್ಲಿ ಕಿಡ್ನಿ ಇಲ್ಲ. ಕೊಲ್ಕತ್ತಾದ ಕೆಲವೆಡೆಯಂತೂ ಇದು ಫ್ಯಾಮಿಲಿ ಬ್ಯುಸಿನೆಸ್‌ ರೀತಿ ನಡೆಯುತ್ತಿದೆ.

'ಮುತ್ತಣ್ಣ'ನ ಮಗನಾಗಲು ಹೊರಟೇಬಿಟ್ರು ಪ್ರಣಮ್; ಹರಸಿ ಕಳುಹಿಸಿದ ಕರುನಾಡ ಡೈನಾಮಿಕ್ ಸ್ಟಾರ್

ನಿಮಗೆ ಇಂಥದ್ದೊಂದು ಸಬ್ಜೆಕ್ಟ್‌ ಕನೆಕ್ಟ್‌ ಆದದ್ದು ಹೇಗೆ?

ಪ್ರಜ್ವಲ್‌ ಅವರಿಗಾಗಿ ಸಾಹಸ ಹಿನ್ನೆಲೆಯ ಸ್ಟ್ರಾಂಗ್‌ ಕಂಟೆಂಟ್‌ನ ಹುಡುಕಾಟದಲ್ಲಿದ್ದಾಗ ಸಿಕ್ಕಿದ ಸಬ್ಜೆಕ್ಟ್‌ ಇದು. ಪ್ರಜ್ವಲ್‌ ಪಾತ್ರದ ಮೂಲಕ ಸಮಾಜಕ್ಕೆ ಈ ಕರಾಳ ದಂಧೆಯ ವಸ್ತುಸ್ಥಿತಿಯನ್ನು ತೋರಿಸಬಹುದು ಅನಿಸಿತು.

ನೈಜತೆ ಜೊತೆ ಕಮರ್ಷಿಯಲ್‌ ಅಂಶಗಳನ್ನು ಕ್ಲಬ್‌ ಮಾಡಿದ್ದೀರಾ?

ಹೌದು. ಈ ಸಿನಿಮಾದಲ್ಲಿ ಅಂಥದ್ದೊಂದು ಮ್ಯಾಜಿಕ್‌ ನಡೆದಿದೆ. ಸಿನಿಮಾ ರಿಯಲಿಸ್ಟಿಕ್‌ ಆಗಿ ಸಬ್ಜೆಕ್ಟ್‌ ಮೇಲೆ ಬಹಳ ಸೂಕ್ಷ್ಮವಾಗಿ ಹೋಗುವ ಜೊತೆಗೆ ಕಮರ್ಷಿಯಲ್‌ ಆಗಿಯೂ ಸೌಂಡ್‌ ಮಾಡುತ್ತದೆ. ಆಕ್ಷನ್ ಸಿನಿಮಾ ಈ ಕಾಲದ ಟ್ರೆಂಡ್‌. ಯುವ ಜನತೆ ಆ್ಯಕ್ಷನ್‌ ಸಿನಿಮಾ ಹಿಂದೆ ಬಿದ್ದಿದ್ದಾರೆ. ಅವರಿಗೆ ಖಂಡಿತಾ ಈ ಸ್ಟ್ರಾಂಗ್‌ ಕಂಟೆಂಟ್‌ ಇರುವ ಆ್ಯಕ್ಷನ್ ಸಿನಿಮಾ ಇಷ್ಟ ಆಗಿಯೇ ಆಗುತ್ತದೆ.

ರಾತ್ರಿ ಮೊಸರನ್ನ ತಿನ್ನಲ್ಲ ; 10 ವರ್ಷದಿಂದ 50 ಕೆಜಿ ಇರುವ ಪ್ರಜ್ವಲ್ ದೇವರಾಜ್‌ ಪತ್ನಿ ರಾಗಿಣಿ ಸೀಕ್ರೆಟ್ ರಿವೀಲ್!

ಸಿನಿಮಾದ ಹೈಲೈಟ್‌?

ಮೂರು ಲೇಯರ್‌ನಲ್ಲಿ ಕ್ಲೈಮ್ಯಾಕ್ಸ್‌ ಶೂಟ್‌ ಮಾಡಿದ್ದೇವೆ. ಕೊನೆಯ ಹದಿನೈದು ನಿಮಿಷಗಳ ಈ ದೃಶ್ಯಾವಳಿ ಪ್ರೇಕ್ಷಕನನ್ನು ಕುರ್ಚಿ ತುದಿಯಲ್ಲಿ ಕೂರಿಸೋದು ಗ್ಯಾರಂಟಿ. ಸಿಂಗಲ್‌ ಶಾಟ್‌ನಲ್ಲಿ ಆರಂಭವಾಗುವ ಸಾಹಸ ಸನ್ನಿವೇಶ ಮುಂದಿನ ಹಂತದಲ್ಲಿ ಕಮರ್ಷಿಯಲ್‌ ರೂಪ ಪಡೆಯುತ್ತದೆ. ರಿಯಲಿಸ್ಟಿಕ್‌ ಆಗಿ ಕೊನೆಗೊಳ್ಳುತ್ತದೆ. ಇದರಲ್ಲೊಂದು ಪ್ರಯೋಗಶೀಲತೆ ಇದೆ. ಈ ಹೊಸತನ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸವಿದೆ.

click me!