ಆಪ್ತಮಿತ್ರದಂತಹ ಗಟ್ಟಿಯಾದ ಕತೆ 'ಸತ್ಯಂ'ನಲ್ಲಿದೆ: ರಂಜನಿ ರಾಘವನ್

By Kannadaprabha News  |  First Published Jan 15, 2024, 9:43 PM IST

ಮೂರು ಜನರೇಷನ್‌ನ ಕತೆ. ಭೂತಾರಾಧನೆ ತೋರಿಸಿರುವ ಕತೆ. ಒಂದು ಕುಟುಂಬಕ್ಕೆ ಸಂಬಂಧಿಸಿದ ಕತೆ. ಕೌಟುಂಬಿಕ ಕತೆಗಳು ಮರೆಯಾಗುತ್ತಿರುವ ಕಾಲದಲ್ಲಿ ಈ ಸಿನಿಮಾ ವಿಭಿನ್ನವಾಗಿದೆ. ಆಪ್ತಮಿತ್ರದಂತಹ ಗಟ್ಟಿಯಾದ ಕತೆ ಇದೆ. ಕತೆಯ ಪ್ಯಾಟರ್ನ್ ತುಂಬಾ ವಿಶಿಷ್ಟವಾಗಿದೆ.


ಕಿರುತೆರೆಯಲ್ಲಿ ಪಾರಮ್ಯ ಮೆರೆದಿದ್ದ ಪ್ರತಿಭಾವಂತ ನಟಿ ರಂಜನಿ ರಾಘವನ್ ‘ಸತ್ಯಂ’ ಸಿನಿಮಾದ ಮೂಲಕ ಮತ್ತೆ ಹಿರಿತೆರೆಗೆ ಬರುತ್ತಿದ್ದಾರೆ. ಅಶೋಕ್ ಕಡಬ ನಿರ್ದೇಶಿಸಿರುವ, ಮಹಾಂತೇಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಸಂತೋಷ್ ಮತ್ತು ರಂಜನಿ ರಾಘವನ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಆಗಲಿದ್ದು, ಈ ಸಂದರ್ಭದಲ್ಲಿ ಕತೆಗಾರ್ತಿ, ನಟಿ ರಂಜನಿ ರಾಘವನ್ ಆಡಿದ ಮಾತುಗಳು ಇಲ್ಲಿವೆ:

- ಈ ಸಿನಿಮಾ ಕತೆ ಕೇಳಲು ಹೋಗುವಾಗ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ಆಮೇಲೆ ಈ ಚಿತ್ರದ ಕತೆ ಮತ್ತು ಚಿತ್ರಕತೆಯಲ್ಲಿ ಹಿರಿಯ ನಿರ್ದೇಶಕ ಕೆವಿ ರಾಜು, ಖ್ಯಾತ ಗೀತ ರಚನಕಾರ ಕಿನ್ನಾಳ್ ರಾಜ್ ಪಾತ್ರ ಇದೆ ಅಂತ ತಿಳಿಯಿತು. ಕತೆ ಕೇಳಿದ ಮೇಲೆ ಈ ಒಳ್ಳೆಯ ತಂಡದ ಪ್ರಯತ್ನ ಸಾರ್ಥಕ ಅನ್ನಿಸಿತು. ಕತೆಗಾರ್ತಿಯಾಗಿ ನನಗೆ ಇಷ್ಟವಾದ ಕತೆ ಇದು.

Tap to resize

Latest Videos

undefined

ಯಶ್ ರಾವಣ ಟೆಸ್ಟ್ ಲುಕ್ ಫೋಟೋ ವೈರಲ್: ರಾಕಿಂಗ್ ಸ್ಟಾರ್ ರಾವಣ ಆಗೋದು ಕನ್ಫರ್ಮ್!

- ಮೂರು ಜನರೇಷನ್‌ನ ಕತೆ. ಭೂತಾರಾಧನೆ ತೋರಿಸಿರುವ ಕತೆ. ಒಂದು ಕುಟುಂಬಕ್ಕೆ ಸಂಬಂಧಿಸಿದ ಕತೆ. ಕೌಟುಂಬಿಕ ಕತೆಗಳು ಮರೆಯಾಗುತ್ತಿರುವ ಕಾಲದಲ್ಲಿ ಈ ಸಿನಿಮಾ ವಿಭಿನ್ನವಾಗಿದೆ. ಆಪ್ತಮಿತ್ರದಂತಹ ಗಟ್ಟಿಯಾದ ಕತೆ ಇದೆ. ಕತೆಯ ಪ್ಯಾಟರ್ನ್ ತುಂಬಾ ವಿಶಿಷ್ಟವಾಗಿದೆ.

- ಈ ಚಿತ್ರದಲ್ಲಿ ನನ್ನದು ಮಲೆನಾಡು ಹುಡುಗಿಯ ಪಾತ್ರ. ಸ್ವಲ್ಪ ಹಠ ಜಾಸ್ತಿ. ನಾನು ನಿಜ ಜೀವನದಲ್ಲಿ ಹಠ ಮಾಡುವವಳಲ್ಲ. ಆದರೆ ಈ ಚಿತ್ರದಲ್ಲಿ ಹಠದ ಹುಡುಗಿಯಾಗಿ ನಟಿಸಿದ್ದು ಖುಷಿ ಕೊಟ್ಟಿತು.

- ಕ್ಲೀಶೆ ಲವ್‌ಸ್ಟೋರಿಗಿಂತ ಇಲ್ಲಿನ ಪ್ರೇಮಕತೆ ವಿಭಿನ್ನವಾಗಿದೆ. ನಾನು ನಾಯಕ ಪಾತ್ರದ ಕ್ಲಾಸ್‌ಮೇಟ್‌ ಆಗಿರುತ್ತೇನೆ. ಮುದ್ದಾದ ಲವ್‌ಸ್ಟೋರಿ ಇದರಲ್ಲಿದೆ.

- ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಅದ್ಭುತ ತಾರಾಗಣವಿದೆ. ಸಂತೋಷ್ ಉತ್ತಮವಾಗಿ ನಟಿಸಿದ್ದಾರೆ. ಸಯ್ಯಾಜಿ ಶಿಂಧೆ, ಸುಮನ್‌ರಂತಹ ಹಿರಿಯ ಕಲಾವಿದರಿದ್ದಾರೆ. ರವಿ ಬಸ್ರೂರು ಸಂಗೀತವಿದೆ.

ಅಭಿಮನ್ಯು ಎದುರು ಭೀಮನ ಘರ್ಜನೆ: ನಿಖಿಲ್ ಚಿತ್ರಕ್ಕೆ ವಿಲನ್ ಆದ ದುನಿಯಾ ವಿಜಯ್!

- ಹೊಸ ರಿಲೀಸ್ ಆಗುವುದೇ ಒಂದು ಸಂಭ್ರಮ. ಜನ ಹೊಸತಾಗಿ ನಮ್ಮನ್ನು ಎದುರುಗೊಳ್ಳುತ್ತಾರೆ. ಈಗ ಹಳೆಯ ಪಾತ್ರದಿಂದ ಕಳಚಿಕೊಂಡು ಹೊಸ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಎಕ್ಸೈಟ್‌ಮೆಂಟ್‌ ಇದೆ.

click me!