Asianet Suvarna News Asianet Suvarna News

'ಮುತ್ತಣ್ಣ'ನ ಮಗನಾಗಲು ಹೊರಟೇಬಿಟ್ರು ಪ್ರಣಮ್; ಹರಸಿ ಕಳುಹಿಸಿದ ಕರುನಾಡ ಡೈನಾಮಿಕ್ ಸ್ಟಾರ್

ಪ್ರಣಂ ದೇವರಾಜ್ ನಾಯಕನಾಗಿ ನಟಿಸುತ್ತಿರುವ S/O ಮುತ್ತಣ್ಣ ಸಿನಿಮಾದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರ ತಾರಾಬಳಗವಿದೆ.

Pranam Devaraj lead movie S/O Muthanna starts shooting recently in bangalore srb
Author
First Published Jan 9, 2024, 4:07 PM IST

ಯಂಗ್ ಡೈನಾಮಿಕ್  ಪ್ರಣಮ್ ದೇವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಇಂಡಸ್ಟ್ರೀಗೆ ಕಾಲಿಟ್ಟಿರುವ ಪ್ರಣಮ್, ಈಗ ‘S/O ಮುತ್ತಣ್ಣ’ನಾಗಲು ಸಜ್ಜಾಗಿದ್ದಾರೆ. ರಿಯಲ್‌ನಲ್ಲಿ ಅವರಪ್ಪ ಡೈನಾಮಿಕ್ ಸ್ಟಾರ್ ದೇವರಾಜ್ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಮಗ ಯಂಗ್ ಡೈನಾಮಿಕ್ ಹೀರೋ ಈಗ ರೀಲ್‌ನಲ್ಲಿ 'ಮುತ್ತಣ್ಣನ ಮಗ'ನಾಗಲು ಹೊರಟಿದ್ದಾರೆ. ಹೊಸ ಸುದ್ದಿಯ ಮೇಲೊಮ್ಮೆ ಕಣ್ಣಾಡಿಸಿ, ಎಲ್ಲವೂ ಗೊತ್ತಾಗಲಿದೆ.

ಯಂಗ್ ಡೈನಾಮಿಕ್  ಪ್ರಣಂ ದೇವರಾಜ್ ಹೊಸ ಸಿನಿಮಾ S/O ಮುತ್ತಣ್ಣ (S/O Muthanna) ಸೆಟ್ಟೇರಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ 'S/O ಮುತ್ತಣ್ಣ' ಸಿನಿಮಾದ ಮುಹೂರ್ತ ನೆರವೇರಿದೆ. ನಟ ದೇವರಾಜ್ (Dynamic Star Devaraj)ದಂಪತಿ ಆಗಮಿಸಿ ಮಗನ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ. ಅಂದಹಾಗೇ S/O ಮುತ್ತಣ್ಣನಿಗೆ ಶ್ರೀಕಾಂತ್ ಹುಣ್ಸೂರ್ ಸಾರಥಿ. ಆರ್.ಚಂದ್ರು ಹಾಗೂ ಪ್ರೇಮ್ಸ್ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶ್ರೀಕಾಂತ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. 

ಪ್ರಣಂ ದೇವರಾಜ್ (Pranam Devaraj)ನಾಯಕನಾಗಿ ನಟಿಸುತ್ತಿರುವ S/O ಮುತ್ತಣ್ಣ ಸಿನಿಮಾದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರ ತಾರಾಬಳಗವಿದೆ. ಟೈಟಲ್ ಹೇಳುವಂತೆ ಇದೊಂದು ಅಪ್ಪ-ಮಗನ ಬಾಂಧವ್ಯದ ಕಥೆಯಾಗಿದ್ದು, ಪುರಾತನ ಫಿಲ್ಮಂಸ್ ಬ್ಯಾನರ್ ನಡಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. 

ಶಾಹಿದ್ ಕಪೂರ್‌ ಯಾರಿಗೆ ಡಾಕ್ಟರ್, ಯಾರಿಗೆ ಪದ್ಮಶ್ರೀ; ಗುಟ್ಟು ಬಿಚ್ಚಿಟ್ಟ ಹೆಂಡತಿ ಮೀರಾ ರಜಪೂತ್!

S/O ಮುತ್ತಣ್ಣ ಸಿನಿಮಾಗೆ ಸ್ಕೇಟ್ಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರತಂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ. ತೆಲುಗು ಸಿನಿಮಾ ಉದ್ಯಮದ ಜತೆ ಸ್ಯಾಂಡಲ್‌ವುಡ್‌ ಸಿನಿರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ನಟ ಪ್ರಣಮ್ ದೇವರಾಜ್. ಯಾವ ಚಿತ್ರರಂಗ ಅವರ ಪ್ರತಿಭೆ ಜತೆ ಅದೃಷ್ಟವನ್ನೂ ಸೇರಿಸಿಕೊಂಡು ಕೈ ಹಿಡಿದು ಮುಂದಕ್ಕೆ ನಡೆಸುತ್ತದೆ ಎಂಬುದನ್ನು ಕಾದು ನೋಡಬೇಕು. 

ಪರಮ ಭಕ್ತನ ಸಾತ್ ಪಡೆದ 'ಹನು-ಮಾನ್' ಸಿನಿಮಾ; ತೇಜ ಸಜ್ಜಾ ಮೀಟ್ಸ್ ಧ್ರುವ ಸರ್ಜಾ

ಅಂದಹಾಗೆ, ಪ್ರಣಮ್ ದೇವರಾಜ್ ಅಣ್ಣ, ಸ್ಯಾಂಡಲ್‌ವುಡ್ ನಟ, ಡೈನಾಮಿಕ್ ಪ್ರಿನ್ಸ್ ಖ್ಯಾತಿಯ ಪ್ರಜ್ವಲ್ ದೇವರಾಜ್ (Prajwal Devaraj).ಸದ್ಯ ನಟ ಪ್ರಜ್ವಲ್ ದೇವರಾಜ್ ಹೊಸ ಚಿತ್ರವೊಂದರ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್‌ ವಿಕ್ರಂ ಹಾಗೂ ಅರ್ಜುನ್ ಗೌಡ ಸಿನಿಮಾ ಬಳಿಕ ನಟ ಪ್ರಜ್ವಲ್ ದೇವರಾಜ್ ಹಲವಾರು ಹೊಸ ಕಥೆಗಳನ್ನು ಕೇಳಿ ಒಂದು ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios